For Quick Alerts
ALLOW NOTIFICATIONS  
For Daily Alerts

ಮೃದುವಾದ ಹಸ್ತಗಳಿಗಾಗಿ ಪ್ರಯತ್ನಿಸಿ ಈ ಅದ್ಭುತ ಅಲೋವೆರಾ ಸ್ಕ್ರಬ್

|

ಮುಖಕ್ಕೆ ಹಚ್ಚಿಕೊಳ್ಳುವ ಪ್ರಸಾಧನಗಳ ವಿಷಯ ಬಂದಾಗ ನಾವೆಂದೂ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಿದ್ದಾಗ ನಮ್ಮ ದೇಹದ ಇತರ ಭಾಗಗಳಿಗೆ ಉಪಯೋಗಿಸುವ ಪ್ರಸಾಧನಗಳ ಬಗ್ಗೆ ನಮಗೆ ಅಸಡ್ಡೆ ಏಕೆ? ನಾವು ಮುಖಕ್ಕೆ ಉಪಯೋಗಿಸುವ ಪ್ರಸಾಧನಗಳ ವೈವಿಧ್ಯವೂ ಬಹಳವೇ ಇದೆ. ಫೇಸ್ ವಾಶ್, ಫೇಸ್ ಕ್ರೀಮ್, ತೇವಕಾರಕ ಹಾಗೂ ಸ್ಕ್ರಬ್ ಅಥವಾ ಸತ್ತ ಜೀವಕೋಶಗಳನ್ನು ಉಜ್ಜಿ ತೆಗೆಯಲು ಉಪಯೋಗಿಸಲ್ಪಡುವ ದ್ರವ ಮೊದಲಾದವು. ಆದರೆ ಹಸ್ತ ಮತ್ತು ಪಾದಗಳಿಗೂ ಇಷ್ಟೇ ಪ್ರಾಮುಖ್ಯತೆ ಹೊಂದಿರುವ ಉತ್ಪನ್ನಗಳನ್ನು ನಾವೇಕೆ ಬಳಸುವುದಿಲ್ಲ?

ಈ ಅಂಗಗಳು ಮುಖದಷ್ಟು ಮುಖ್ಯವಲ್ಲವೇ? ವಾಸ್ತವವಾಗಿ ಇವೂ ಸೌಂದರ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಮುಖದಷ್ಟೇ ಪ್ರಾಮುಖ್ಯತೆ ಪಡೆದಿವೆ. ಹಾಗಾಗಿ ಮುಖಕ್ಕೆ ವಹಿಸುವ ಕಾಳಜಿಯನ್ನೇ ದೇಹದ ಇತರ ಭಾಗಗಳಿಗೂ ಅನ್ವಯಿಸುವುದು ಪ್ರತಿ ಮಹಿಳೆಗೂ ಅಗತ್ಯವಾಗಿದೆ. ದೇಹದ ಆರೈಕೆಯ ವಿಷಯಕ್ಕೆ ಬಂದಾಗ ನೀವೆಂದಾದರೂ ನೈಸರ್ಗಿಕ ಪ್ರಸಾದನಗಳನ್ನು ಬಳಸಿದ್ದೀರಾ? ವಿಶೇಷವಾಗಿ ಹಸ್ತ ಮತ್ತು ಪಾದಗಳ ಚರ್ಮ ದಪ್ಪನಾಗಿದ್ದು ಶೀಘ್ರವೇ ಬೆಳೆಯುವ ಕಾರಣ ಇಲ್ಲಿನ ಚರ್ಮದ ಸತ್ತ ಜೀವಕೋಶಗಳನ್ನು ಕೆರೆದು ತೆಗೆದು ಮತ್ತೊಮ್ಮೆ ಮೃದುವಾಗಿಸಲು ಮನೆಯಲ್ಲಿಯೇ ತಯಾರಿಸಿದ ಪ್ರಸಾದನ ಬಳಸಿದ್ದೀರಾ?

Aloe Vera

ಒಂದು ವೇಳೆ ಇಲ್ಲ ಎಂದಾದರೆ ಇಂದಿನ ಲೇಖನದಲ್ಲಿ ವಿವರಿಸಿರುವ ವಿಧಾನವನ್ನೇಕೆ ನೀವು ಅನುಸರಿಸಬಾರದು? ಇವು ಸುರಕ್ಷಿತ, ನೈಸರ್ಗಿಕ ಹಾಗೂ ಸುಲಭವಾಗಿ ತಯಾರಿಸಬಹುದಾಗಿದ್ದು ಯಾವುದೇ ಅಪಾಯವಿಲ್ಲದೇ ಸೌಮ್ಯ, ಮೃದು ಹಾಗೂ ಆರೋಗ್ಯಕರ ಹಸ್ತ ಮತ್ತು ಪಾದಗಳನ್ನು ಪಡೆಯಲು ನೆರವಾಗುತ್ತವೆ. ಅಲ್ಲದೇ ಇದಕ್ಕಾಗಿ ಅಗತ್ಯವಿರುವ ಸಾಮಾಗ್ರಿಗಳೂ ನಿಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿವೆ. ಸ್ಕ್ರಬ್ ತಯಾರಿಸಲು ಅಗತ್ಯವಾದ ಒಂದು ಪ್ರಸಾದನ ತ್ವಚೆಗೆ ಅತ್ಯುತ್ತಮವಾಗಿದ್ದು ದೇಹದ ಇನ್ನೂ ಹಲವಾರು ತ್ವಚೆ ಮತ್ತು ಆರೋಗ್ಯ ಸಂಬಂಧಿತ ತೊಂದರೆಗಳಿಗೆ ಅತ್ಯಂತ ಸಮರ್ಥವಾದ ಮೂಲಿಕೆಯಾಗಿದೆ, ಅದೇ ನಿಮ್ಮ ನೆಚ್ಚಿನ ಲೋಳೆಸರ (ಅಥವಾ ಆಲೋವೆರಾ). ಲೋಳೆಸರ ಬಳಸಿ ನೀವೇ ಮನೆಯಲ್ಲಿ ತಯಾರಿಸಿದ ಈ ಸ್ಕ್ರಬ್ ನಿಮ್ಮ ತ್ವಚೆಗೆ ಯಾವ ಬಗೆಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದನ್ನು ನೋಡೋಣ.

Most Read: ಕೈಗಳ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯುವುದು ಹೇಗೆ?

ಲೋಳೆಸರ ಅಥವಾ ಅಲೋವೆರಾ ತ್ವಚೆಗೆ ಏಕಿಷ್ಟು ಪ್ರಯೋಜನಕಾರಿ?

ಲೋಳೆಸರದಲ್ಲಿರುವ ತೇವಕಾರಕ ಗುಣ ತ್ವಚೆಗೆ ಅಗತ್ಯವಾದ ತೇವವನ್ನು ಒದಗಿಸಿ ಆಳವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಇದೇ ತ್ವಚೆಯನ್ನು ಮೃದುಗೊಳಿಸಲು ಅಗತ್ಯವಾಗಿ ಬೇಕಾಗಿರುವ ಗುಣ. ವಿಶೇಷವಾಗಿ ಹಸ್ತ ಮತ್ತು ಪಾದಗಳ ಚರ್ಮ ದಪ್ಪನಾಗಿದ್ದು ಉಳಿದ ಪ್ರಸಾದನಗಳ ತೇವಕಾರಕ ಗುಣ ಇದರ ತಳವನ್ನು ತಲುಪಲು ಸಾಧ್ಯವಾಗುವುದಿಲ್ಲ. ಆದರೆ ಲೋಳೆಸರದ ತೇವಕಾರಕ ಗುಣ ಅತ್ಯುತ್ತಮವಾಗಿದ್ದು ತ್ವಚೆಗೆ ಪರಿಪೂರ್ಣ ಆರೈಕೆ ನೀಡುವ ಮೂಲಕ ತ್ವಚೆಯನ್ನು ಮೃದುವಾಗಿಸುವುದು ಮಾತ್ರವಲ್ಲ ಚರ್ಮದ ಉರಿ, ದೊರಗಾಗಿರುವ ತ್ವಚೆ ಮೊದಲಾದವನ್ನೂ ನಿವಾರಿಸುತ್ತದೆ. ಸುಟ್ಟ ಗಾಯಕ್ಕೆ ಲೋಳೆಸರವನ್ನು ನೇರವಾಗಿ ಹಚ್ಚಿಕೊಂಡರೆ ಶೀಘ್ರವೇ ಗುಣವಾಗುವ ಜೊತೆಗೇ ಕಲೆಯಿಲ್ಲದ ಹೊಸ ಚರ್ಮ ಬೆಳೆಯಲೂ ಸಾಧ್ಯವಾಗುತ್ತದೆ. ವಿಶೇಷವಾಗಿ ಎಣ್ಣೆಚರ್ಮ ಹೊಂದಿರುವ ವ್ಯಕ್ತಿಗಳ ಹಸ್ತಗಳು ಸದಾ ತೇವವಾಗಿದ್ದು ಹಿಡಿದುಕೊಂಡ ವಸ್ತುಗಳು ಜಾರುತ್ತಾ ಇರುವ ಅನುಭವವಾಗುತ್ತದೆ. ಲೋಳೆಸರದ ಆರೈಕೆಯಿಂದ ಈ ವ್ಯಕ್ತಿಗಳಿಗೆ ಹೆಚ್ಚಿನ ಪ್ರಯೋಜನವಿದೆ. ಅಲ್ಲದೇ ಚಿಕ್ಕ ಪುಟ್ಟ ಗಾಯ, ಕೀಟಗಳ ಕಡಿತ ಮೊದಲಾದವುಗಳಿಗೂ ನೇರವಾಗಿ ಹಚ್ಚಬಹುದು. ಲೋಳೆಸರ ಬಳಸಿ ಹಸ್ತ ಮತ್ತು ಪಾದಗಳನ್ನು ಮೃದುವಾಗಿಸಲು ಉಪಯುಕ್ತವಾದ ಸ್ಕ್ರಬ್ ಅನ್ನು ಹೇಗೆ ತಯಾರಿಸುವುದು ಎಂದು ಈಗ ನೋಡೋಣ...

ಲೋಳೆಸರ ಬಳಸಿ ಹಸ್ತ ಮತ್ತು ಪಾದಗಳಿಗೆ ಉಪಯುಕ್ತವಾದ ಸ್ಕ್ರಬ್ ಅನ್ನು ಮನೆಯಲ್ಲಿಯೇ ಹೇಗೆ ತಯಾರಿಸುವುದು ಹೇಗೆ?

ಅಗತ್ಯವಿರುವ ಸಾಮಾಗ್ರಿಗಳು:

  • ಎರಡು ದೊಡ್ಡಚಮಚ ತಾಜಾ ಲೋಳೆಸರದ ಕೋಡಿನಿಂದ ತೆಗೆದ ಅಪ್ಪಟ ತಿರುಳು
  • ಒಂದು ದೊಡ್ಡ ಚಮಚ ಜೇನು
  • ಎರಡು ದೊಡ್ಡಚಮಚ ಕಂದು ಸಕ್ಕರೆ
  • ಒಂದು ದೊಡ್ಡಚಮಚ ಆಲಿವ್ ಎಣ್ಣೆ (ತಣ್ಣನೆಯ ವಿಧಾನದಿಂದ ಹಿಂಡಿದ್ದು ಆದರೆ ಉತ್ತಮ)
  • ಎರಡು ದೊಡ್ಡಚಮಚ ಓಟ್ಸ್ ರವೆ

Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ತಯಾರಿಕಾ ವಿಧಾನ:

* ಒಂದು ಬೋಗುಣಿಯಲ್ಲಿ ಲೋಳೆಸರವನ್ನು ಹಾಕಿ ಇದಕ್ಕೆ ಜೇನನ್ನು ಬೆರೆಸಿ ಚೆನ್ನಾಗಿ ಕಲಸಿ
* ಬಳಿಕ ಆಲಿವ್ ಎಣ್ಣೆಯನ್ನು ಹಾಕಿ ಪೂರ್ಣವಾಗಿ ಬೆರೆಯುವವರೆಗೂ ಕಲೆಸಿ.
* ಗ್ರೈಂಡರಿನ ಚಿಕ್ಕ ಜಾರ್ ನಲ್ಲಿ ಓಟ್ಸ್ ರವೆಯನ್ನು ಹಾಕಿ ನುಣ್ಣಗೆ ಪುಡಿ ಮಾಡಿ (ನಡುನಡುವೆ ನಿಲ್ಲಿಸುತ್ತಾ ಪುಡಿಮಾಡಿ, ಇಲ್ಲದಿದ್ದರೆ ರವೆ ಸುಡುತ್ತದೆ).
* ಈ ನುಣ್ಣಗಾದ ಪುಡಿಯನ್ನು ದ್ರವಕ್ಕೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ
* ಅಂತಿಮವಾಗಿ ಕಂದು ಸಕ್ಕರೆಯನ್ನು ಹಾಕಿ ಚೆನ್ನಾಗಿ ಬೆರೆಸಿ.
ಮನೆಯಲ್ಲಿಯೇ ತಯಾರಿಸಿದ ಅತ್ಯುತ್ತಮವಾದ ಹಸ್ತ ಮತ್ತು ಪಾದಗಳ ಸ್ಕ್ರಬ್ ಈಗ ತಯಾರಾಗಿದೆ.

ಬಳಕೆಯ ವಿಧಾನ:

* ಮೊದಲು ನಿಮ್ಮ ಹಸ್ತ ಮತ್ತು ಪಾದಗಳನ್ನು ಕೇವಲ ತಣ್ಣೀರಿನಿಂದ ತೊಳೆದು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಂಡು ಒಣಗಿಸಿಕೊಳ್ಳಿ.
* ಹಸ್ತ ಮತ್ತು ಪಾದಗಳಿಗೆ ಕೊಂಚ ಧಾರಾಅಲವೇ ಎನಿಸುವಷ್ಟು ಪ್ರಮಾಣವನ್ನು ಮೊದಲು ಪಾದಗಳಿಂದ ಪ್ರಾರಂಭಿಸಿ ಬಳಿಕ ಹಸ್ತಗಳಿಗೆ ಹಚ್ಚಿಕೊಳ್ಳಿ. ಸುಮಾರು ಐದು ನಿಮಿಷಗಳವರೆಗೆ ಬೆರಳುಗಳ ತುದಿಯಿಂದ ಮಸಾಜ್ ಮಾಡಿಕೊಳ್ಳಿ. ದಪ್ಪ ಚರ್ಮ ಇರುವ ಭಾಗದಲ್ಲಿ ಹೆಚ್ಚಿನ ಮಸಾಜ್ ಒದಗಿಸಿ.
* ಬಳಿಕ ಸುಮಾರು ಐದು ಅಥವಾ ಹತ್ತು ನಿಮಿಷ ಹಾಗೇ ಬಿಟ್ಟು ದ್ರವವೆಲ್ಲಾ ಚರ್ಮದೊಳಕ್ಕೆ ಇಳಿಯುವಂತೆ ಮಾಡಿ. (ಪೂರ್ಣವಾಗಿ ಚರ್ಮ ಈ ದ್ರವವನ್ನು ಹೀರಿಕೊಂಡಾಗ ತೇವವಾಗಿದ್ದುದು ಒಣಗಿದಂತೆ ಕಂಡುಬರುತ್ತದೆ)
* ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
* ಈ ವಿಧಾನವನ್ನು ನಿತ್ಯವೂ ಅನುಸರಿಸುವ ಮೂಲಕ ಮೃದು ಮತ್ತು ಆರೋಗ್ಯಕರವಾದ ಹಸ್ತ ಮತ್ತು ಪಾದಗಳನ್ನು ಪಡೆಯಬಹುದು.

ಈ ಮನೆಮದ್ದನ್ನು ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿಟ್ಟುಕೊಂಡು ಬಾಟಲಿಯಲ್ಲಿ ಸಂಗ್ರಹಿಸಿ ನಿತ್ಯವೂ ಬಳಸುವ ಮೂಲಕ ಮೃದುವಾದ ಮತ್ತು ಆರೋಗ್ಯಕರ ಹಸ್ತ-ಪಾದಗಳನ್ನು ಕಾಪಾಡಿಕೊಳ್ಳಬಹುದು. ಅಷ್ಟಕ್ಕೂ, ಹಸ್ತ ಮತ್ತು ಪಾದಗಳು ಪ್ರತಿ ಮಹಿಳೆಯ ಆರೋಗ್ಯದ ಕೈಗನ್ನಡಿಯಾಗಿದ್ದು ಸೌಂದರ್ಯದ ಜೊತೆಗೇ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುವುದು ಖಚಿತ.

English summary

Aloe Vera Scrub For Soft Hands

Aloe vera nourishes and moisturises your skin, giving you soft hands. It soothes your skin, especially your hands. It possess healing properties which treats burns, soothes skin irritation, and makes the roughness from your hands disappear. Besides, aloe vera is a premium pick for those who often have to deal with oily hands.
Story first published: Friday, November 16, 2018, 16:08 [IST]
X
Desktop Bottom Promotion