Latest Updates
-
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್!
ಎಣ್ಣೆಯಂಶವಿರುವ ತ್ವಚೆಯ ಸಮಸ್ಯೆಗೆ, 'ಬಾದಾಮಿಯ ಫೇಸ್ ಮಾಸ್ಕ್'
ಮನುಷ್ಯರೆಲ್ಲರೂ ದೇಹವು ಒಂದೇ ರೀತಿಯಾಗಿ ಇರುವುದಿಲ್ಲ. ಒಬ್ಬೊಬ್ಬರ ದೇಹವು ಒಂದೊಂದು ರೀತಿಯಲ್ಲಿರುವುದು. ಇದು ಕೇವಲ ಅವರ ದೇಹವಿನ್ಯಾಸ ಮಾತ್ರವಲ್ಲದೆ, ತ್ವಚೆಯು ಕೂಡ ಭಿನ್ನ ಭಿನ್ನವಾಗಿರುವುದು. ಇದರಲ್ಲಿ ಕೆಲವರ ಚರ್ಮವು ತುಂಬಾ ಒಣ ಹಾಗೂ ಚರ್ಮ ಕಿತ್ತು ಬರುವಂತಹ ರೀತಿಯಲ್ಲಿದ್ದರೆ, ಇನ್ನು ಕೆಲವರ ಚರ್ಮವು ತುಂಬಾ ಎಣ್ಣೆಯಂಶ ಹಾಗೂ ಇನ್ನು ಹಲವರದ್ದು ಸೂಕ್ಷ್ಮ ಚರ್ಮವಾಗಿರುವುದು. ಆದರೆ ಎಣ್ಣೆಯಂಶದಿಂದ ಕೂಡಿರುವ ಚರ್ಮದ ಆರೈಕೆ ಮಾಡುವುದು ತುಂಬಾ ಕಠಿಣ ಕೆಲಸವಾಗಿರುವುದು. ಎಣ್ಣೆಯಂಶವಿರುವ ಚರ್ಮದ ನಿರ್ವಹಣೆ ಮಾಡಲು ನಿತ್ಯವು ಶ್ರಮ ವಹಿಸಬೇಕು.

ಯಾಕೆಂದರೆ ನೀವು ಮನೆಯಿಂದ ಹೊರಗಡೆ ಹೋರಬೇಕಾದರೆ ಟಿಶ್ಯೂ ಪೇಪರ್, ಮೇಕಪ್ ಸಾಮಗ್ರಿ, ಲೋಷನ್ ಮತ್ತು ಸೆರಮ್ ಗಳನ್ನು ಹಿಡಿದುಕೊಂಡು ಹೋಗಬೇಕಾಗುತ್ತದೆ. ಆದರೆ ನೀವು ಇದನ್ನು ಶಾಶ್ವತವಾಗಿ ನಿವಾರಣೆ ಮಾಡುವ ಬಗ್ಗೆ ಎಂದಾದರೂ ಆಲೋಚನೆ ಮಾಡಿದ್ದೀರಾ? ನಿಮ್ಮ ಚರ್ಮಕ್ಕೆ ಎಣ್ಣೆಯಂಶದಿಂದ ಮುಕ್ತಿ ನೀಡಿ, ಅದು ತುಂಬಾ ಒಳ್ಳೆಯ ರೀತಿಯಿಂದ ಉಸಿರಾಡಲು ಅವಕಾಶ ನೀಡಿದರೆ ಆಗ ಹೇಗಿರಬಹುದು? ಇದಕ್ಕಾಗಿ ನೀವು ಸರಳವಾಗಿರುವಂತಹ ಕೆಲವು ಮನೆಮದ್ದುಗಳನ್ನು ಬಳಸಿಕೊಳ್ಳಬೇಕು. ಇದರ ಫಲಿತಾಂಶ ಸ್ವಲ್ಪ ನಿಧಾನ ವಾದರೂ ಶಾಶ್ವತ ಪರಿಹಾರ ಒದಗಿಸುವುದು. ಈ ಲೇಖನದಲ್ಲಿ ಬಾದಾಮಿ ಬಳಸಿಕೊಂಡು ತ್ವಚೆಯ ಆರೈಕೆ ಹೇಗೆ ಎಂದು ತಿಳಿಯಿರಿ.

ತ್ವಚೆಗೆ ಬಾದಾಮಿಯ ಲಾಭಗಳು
ಆ್ಯಂಟಿಆಕ್ಸಿಡೆಂಟ್, ಕೊಬ್ಬಿನಾಮ್ಲ ಮತ್ತು ಕುಶಾಗ್ರಮತಿ ಗುಣ ಹೊಂದಿರುವಂತಹ ಬಾದಾಮಿಯು ಎಣ್ಣೆಯುಕ್ತ ಚರ್ಮದ ನಿವಾರಣೆಗೆ ಅತ್ಯುತ್ತಮ ಪರಿಹಾರವೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಚರ್ಮಕ್ಕೆ ಬಾದಾಮಿಯಿಂದ ಸಿಗಬಹುದಾದ ಕೆಲವೊಂದು ಲಾಭಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ
ಎಣ್ಣೆಯುಕ್ತ ಚರ್ಮದ ನಿವಾರಣೆ
ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮವನ್ನು ಕೋಶಗಳ ಹಾನಿಯಿಂದ ತಡೆಯುವುದು.
ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು.
ಚರ್ಮವು ಮೊಶ್ಚಿರೈಸ್, ಆರೋಗ್ಯ ಮತ್ತು ಕಾಂತಿಯುತ ಆಗಿರುವಂತೆ ನೋಡಿಕೊಳ್ಳುವುದು.

ಎಣ್ಣೆಯಕ್ತ ಚರ್ಮಕ್ಕೆ ಬಾದಾಮಿ ಫೇಸ್ ಪ್ಯಾಕ್ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
*5-6 ಬಾದಾಮಿ
*1 ಚಮಚ ಮುಲ್ತಾನಿ ಮಿಟ್ಟಿ
*1 ಚಮಚ ಜೇನುತುಪ್ಪ
*1 ಚಮಚ ಮೊಸರು
*1 ಚಮಚ ಹಸಿ ಹಾಲು
ತಯಾರಿಸುವ ವಿಧಾನ
*ರಾತ್ರಿ ಮಲಗುವ ಮೊದಲು ಬಾದಾಮಿಯನ್ನು ನೀರಿನಲ್ಲಿ ನೆನಸಲು ಹಾಕಿ. ಬೆಳಗ್ಗೆ ಎದ್ದ ಬಳಿಕ ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಅದನ್ನು ಬದಿಗಿಡಿ.
*ಈಗ ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಹೇಳಿದಷ್ಟು ಪ್ರಮಾಣದ ಮುಲ್ತಾನಿ ಮಿಟ್ಟಿ ಮತ್ತು ಜೇನುತುಪ್ಪ ಹಾಕಿ. ಎರಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇದರ ಬಳಿಕ ಮೊಸರು ಹಾಕಿಕೊಂಡು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಕೊನೆಯದಾಗಿ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿ.
*ಇದರ ಬಳಿಕ ಬಾದಾಮಿ ಪೇಸ್ಟ್ ತೆಗೆದುಕೊಂಡು ಅದನ್ನು ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಎಲ್ಲವನ್ನು ಮತ್ತೆ ಜತೆ ಮಾಡಿ ರುಬ್ಬಿಕೊಳ್ಳಿ.
*ಈ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಬ್ರಷ್ ಬಳಸಿಕೊಂಡು ಹಚ್ಚಿಕೊಳ್ಳಿ. ಕಣ್ಣು, ಕವಿ ಮತ್ತು ಬಾಯಿಗೆ ಇದನ್ನು ಹಚ್ಚಿಕೊಳ್ಳಬೇಡಿ.
*15-20 ನಿಮಿಷ ಕಾಲ ಪ್ಯಾಕ್ ಹಾಗೆ ಇರಲಿದೆ. ಇದರ ಬಳಿಕ ನೀವು ತೊಳೆಯಿರಿ.
ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಇದು ಹೇಗೆ ಕೆಲಸ ಮಾಡುವುದು?
*ನಿಯಮಿತವಾಗಿ ಬಾದಾಮಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವ ಕಾರಣ ತ್ವಚೆಯು ನಯವಾಗುವುದು. ಬಾದಾಮಿಯು ಪೋಷಣೆ ನೀಡುವುದು ಮತ್ತು ಚರ್ಮಕ್ಕೆ ಎಲ್ಲಾ ವಿಧದಿಂದ ತೇವಾಂಶ ನೀಡುವುದು.
*ಎಣ್ಣೆಯಂಶವಿರುವಂತಹ ತ್ವಚೆಯು ಧೂಳು ಹಾಗೂ ಕಲ್ಮಶವನ್ನು ಸೆಳೆಯುವುದು ಮತ್ತು ಇದರ ಪರಿಣಾಮವಾಗಿ ಮೊಡವೆ ಹಾಗೂ ಬೊಕ್ಕೆಗಳು ಉಂಟಾಗುವುದು. ಮುಲ್ತಾನಿ ಮಿಟ್ಟಿ ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯಂಶವನ್ನು ತೆಗೆಯುವುದು ಮತ್ತು ಚರ್ಮದ ಸಮಸ್ಯೆಗೆ ಅಂತ್ಯ ಹಾಡುವುದು.
*ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುವ ಜೇನುತುಪ್ಪವು *ತ್ವಚೆಯಲ್ಲಿರುವಂತಹ ಅತಿಯಾದ ಎಣ್ಣೆಯಂಶವನ್ನು ತೆಗೆಯುವುದು ಮತ್ತು ಚರ್ಮವು ಮೃಧುವಾಗಿರುವಂತೆ ಮಾಡುವುದು. ಇದು ನೈಸರ್ಗಿಕವಾಗಿ ಚರ್ಮಕ್ಕೆ ಮೊಶ್ಚಿರೈಸ್ ನೀಡಿ ಕಾಪಾಡುವುದು.
*ಮೊಸರಿನಲ್ಲಿ ಲ್ಯಾಕ್ಟಿಕ್ ಅಂಶವಿದೆ. ಇದು ಎಣ್ಣೆಯಂಶವಿರುವ ಚರ್ಮವನ್ನು ನಿವಾರಣೆ ಮಾಡುವುದು ಮತ್ತು *ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾದ ನಿವಾರಣೆ ಮಾಡುವುದು. ಇದು ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಕಾಪಾಡುವುದು.



Click it and Unblock the Notifications