ಬ್ಯೂಟಿ ಟಿಪ್ಸ್: ಎಳ್ಳೆಣ್ಣೆಯಲ್ಲಿ ಅಡಗಿದೆ ಸೌಂದರ್ಯ ರಹಸ್ಯಗಳು!

Posted By: Divya pandit Pandit
Subscribe to Boldsky

ಚರ್ಮದ ಆರೋಗ್ಯದ ವಿಚಾರದಲ್ಲಿ ಆದಷ್ಟು ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ದೇಹದ ಆರೋಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ ಸಾಧನ ಚರ್ಮ. ನಮ್ಮ ದೇಹಕ್ಕೆ ಶಕ್ತಿ ಹಾಗೂ ಆರೋಗ್ಯವನ್ನು ನೀಡುವಂತಹ ರಕ್ತದಲ್ಲಿ ಯಾವುದೇ ಬಗೆಯ ಅಶುದ್ಧತೆ ಅಥವಾ ನಂಜಿನಂಶದ ಸೇರ್ಪಡೆ ಆದರೆ ಅದರ ಪರಿಣಾಮ ಮೊದಲು ವ್ಯಕ್ತವಾಗುವುದು ಚರ್ಮದ ಮೇಲೆ. ಒಮ್ಮೆ ಚರ್ಮ ವ್ಯಾದಿ ಮತ್ತು ಇನ್ನಿತರ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾದ ಮೇಲೆ ಅವುಗಳನ್ನು ತಡೆಗಟ್ಟುವುದು ಬಹಳ ಕಷ್ಟ.

ಹಾಗಾಗಿ ಚರ್ಮ ಮತ್ತು ನಮ್ಮ ಆರೋಗ್ಯದ ರಕ್ಷಣೆಯನ್ನು ಪೂರ್ವ ಯೋಚಿತವಾಗಿ ಕೈಗೊಳ್ಳಬೇಕು. ಚರ್ಮದ ಆರೋಗ್ಯವನ್ನು ಕಾಪಾಡಲು ಅನುಕೂಲವಾಗುವ ಅಥವಾ ಸಹಾಯ ಮಾಡುವ ಅತ್ಯುತ್ತಮ ಎಣ್ಣೆ ಎಂದರೆ ಎಳ್ಳೆಣ್ಣೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಅನೇಕ ಚರ್ಮ ರೋಗಗಳನ್ನು ನಿವಾರಿಸುತ್ತದೆ.

ಎಣ್ಣೆಗಳ ರಾಣಿ 'ಎಳ್ಳೆಣ್ಣೆ'ಯ ಆರೋಗ್ಯಕರ ಪ್ರಯೋಜನಗಳು

ನಮ್ಮ ಸೌಂದರ್ಯ ಹಾಗೂ ಆರೋಗ್ಯಕ್ಕೆ ಕನ್ನಡಿ ಹಿಡಿಯುವುದು ಚರ್ಮವೇ. ಕೆಲವು ಅತ್ಯುತ್ತಮ ನೈಸರ್ಗಿಕ ಉತ್ಪನ್ನಗಳೊಂದಿಗೆ ಎಳ್ಳೆಣ್ಣೆಯನ್ನು ಸೇರಿಸಿದಾಗ ಎಳ್ಳೆಣ್ಣೆಯ ಶಕ್ತಿಯು ದ್ವಿಗುಣವಾಗಿ, ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು. ಆರೈಕೆಯ ವಿಧಾನ ಹಾಗೂ ಇನ್ನಷ್ಟು ಮಾಹಿತಿಗೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

1. ಎಳ್ಳೆಣ್ಣೆ ಮತ್ತು ವಿಟಮಿನ್ ಇ ಎಣ್ಣೆ:

1. ಎಳ್ಳೆಣ್ಣೆ ಮತ್ತು ವಿಟಮಿನ್ ಇ ಎಣ್ಣೆ:

- ವಿಟಮಿನ್ ಇ ಮಾತ್ರೆಯಿಂದ ಎಣ್ಣೆಯನ್ನು ತೆಗೆಯಿರಿ ಮತ್ತು 5-6 ಹನಿ ಎಳ್ಳೆಣ್ಣೆಯನ್ನು ಸೇರಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

- ವಿಟಮಿನ್ ಇ ಸಮೃದ್ಧವಾದ ಈ ಎರಡು ಘಟಕಾಂಶಗಳ ಸಂಯೋಜನೆಯನ್ನು ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಆರೋಗ್ಯವು ಕಾಂತಿಯಿಂದ ಕಂಗೊಳಿಸುತ್ತದೆ.

ಎಳ್ಳೆಣ್ಣೆ, ಆಲಿವ್ ಎಣ್ಣೆ ಮತ್ತು ಬ್ರೌನ್ ಸಕ್ಕರೆ

ಎಳ್ಳೆಣ್ಣೆ, ಆಲಿವ್ ಎಣ್ಣೆ ಮತ್ತು ಬ್ರೌನ್ ಸಕ್ಕರೆ

- ಎಳ್ಳೆಣ್ಣೆಗೆ 1 ಟೀ ಚಮಚ ಆಲಿವ್ ಎಣ್ಣೆ ಮತ್ತು 1 ಟೀ ಚಮಚ ಬ್ರೌನ್ ಸಕ್ಕರೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ, ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆಯ ಸಮಸ್ಯೆಯು ನಿವಾರಣೆಯಾಗುವುದು.

3. ಎಳ್ಳೆಣ್ಣೆ ಮತ್ತು ಬಾದಾಮಿ ಎಣ್ಣೆ

3. ಎಳ್ಳೆಣ್ಣೆ ಮತ್ತು ಬಾದಾಮಿ ಎಣ್ಣೆ

- 1/2 ಟೀ ಚಮಚ ಎಳ್ಳೆಣ್ಣೆಗೆ 1 ಟೀಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ ಮೃದುವಾಗಿ ಮಸಾಜ್ ಮಾಡಿ.

- 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಈ ವಿಧಾನದಿಂದ ಚರ್ಮವು ಮೃದುತ್ವವನ್ನು ಪಡೆದು ಪುನರ್ ಯೌವನ ಪಡೆದುಕೊಳ್ಳುವುದು.

4. ಎಳ್ಳೆಣ್ಣೆ ಮತ್ತು ರೋಸ್ಮರಿ ಎಸೆನ್ಸಿಯಲ್ ಎಣ್ಣೆ

4. ಎಳ್ಳೆಣ್ಣೆ ಮತ್ತು ರೋಸ್ಮರಿ ಎಸೆನ್ಸಿಯಲ್ ಎಣ್ಣೆ

- 1/2 ಟೀ ಚಮಚ ಎಳ್ಳೆಣ್ಣೆಗೆ 2-3 ಹನಿ ರೋಸ್ಮರಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ, 20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ ತೆಳುವಾಗಿ ಮಾಯಿಶ್ಚರೈಸ್ ಕ್ರೀಮ್‍ಅನ್ನು ಅನ್ವಯಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮದ ಮೇಲಿರುವ ಅನುಪಯುಕ್ತ ಕಪ್ಪು ಕೂದಲನ್ನು ನಿವಾರಿಸಬಹುದು.

5. ಎಳ್ಳೆಣ್ಣೆ ಮತ್ತು ಅಲೋವೆರಾ

5. ಎಳ್ಳೆಣ್ಣೆ ಮತ್ತು ಅಲೋವೆರಾ

- 1/2 ಟೀ ಚಮಚ ಎಳ್ಳೆಣ್ಣೆಗೆ 1/2 ಟೀ ಚಮಚ ಅಲೋವೆರಾ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ ತೆಳುವಾಗಿ ಮಾಯಿಶ್ಚರೈಸ್ ಕ್ರೀಮ್‍ನ್ನು ಅನ್ವಯಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಚರ್ಮದ ಮೇಲಿರುವ ಪಿಗ್ಮಂಟೇಶನ್ ಕಲೆಯನ್ನು ನಿವಾರಿಸುತ್ತದೆ. ಜೊತೆಗೆ ಚರ್ಮದ ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿರುವಂತೆ ಕಾಪಾಡುವುದು.

6. ಎಳ್ಳೆಣ್ಣೆ, ನಿಂಬೆ ರಸ ಮತ್ತು ಕಾಫಿ ಪುಡಿ

6. ಎಳ್ಳೆಣ್ಣೆ, ನಿಂಬೆ ರಸ ಮತ್ತು ಕಾಫಿ ಪುಡಿ

- 1 ಟೀ ಚಮಚ ಕಾಫಿ ಪುಡಿ, 1/2 ಟೀ ಚಮಚ ನಿಂಬೆ ರಸ ಮತ್ತು 3-4 ಹನಿ ಎಳ್ಳೆಣ್ಣೆಯನ್ನು ಸೆರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಚರ್ಮದ ಮೇಲೆ ಅನ್ವಯಿಸಿ, 5-10 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.

- ಈ ಕ್ರಮವನ್ನು ಅನ್ವಯಿಸುವುದರಿಂದ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವುದು ಮತ್ತು ಅಸಹಜವಾದ ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದು.

English summary

A Secret Oil For Spotless Skin

Acquired from the seeds of Sesamum indicum plant, sesame oil is hailed as a super-effective ingredient for all kinds of skin-related problems. A rich source of vitamin E, this oil can do wonders when applied topically for skin care purposes. However, for achieving optimum results, it is imperative to use this oil in the right way. And, today at Boldsky, we're letting you know about the most effective ways to use this oil for achieving a spotless and gorgeous skin.