For Quick Alerts
ALLOW NOTIFICATIONS  
For Daily Alerts

ಚರ್ಮ ಮತ್ತು ಕೂದಲಿಗೆ ಡ್ರ್ಯಾಗನ್ ಫ್ರೂಟ್ ನ 9 ಆಶ್ಚರ್ಯಕಾರಿ ಲಾಭಗಳು

By Sushma Charhra
|

ನಿಮಗೆ ಡ್ರ್ಯಾಗನ್ ಫ್ರೂಟ್ ನ ಪರಿಚಯವಿದೆಯಾ? ಇದನ್ನು ಪಿಟಾಯ ಎಂದು ಕೂಡ ಕರೆಯಲಾಗುತ್ತೆ ಮತ್ತು ಇದು ನಿಮ್ಮ ಸೌಂದರ್ ವರ್ಧಕ ಚಟುವಟಿಕೆಗಳಿಗೆ ಬಹಳವಾಗಿ ನೆರವು ನೀಡುತ್ತದೆ. ಈ ರುಚಿಕರವಾದ ಉಷ್ಣವಲಯದ ಹಣ್ಣು ನಿಮ್ಮ ಚರ್ಮವನ್ನು ಮತ್ತು ಕೂದಲನ್ನು ನೈಸರ್ಗಿಕವಾಗಿ ಸುಂದರಗೊಳಿಸುವ ಕೆಲವು ಸೌಂದರ್ಯ ವರ್ಧಕ ಗುಣಗಳನ್ನು ಅಧಿಕವಾಗಿ ಹೊಂದಿದೆ.

ಹಲವಾರು ವರ್ಷಗಳಿಂದ ಅನೇಕ ಮಹಿಳೆಯರು ಈ ಹಣ್ಣನ್ನು ಕೇವಲ ತಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಬದಲಾಗಿ ಅವರ ಸಂಪೂರ್ಣ ಚರ್ಮ ಮತ್ತು ಕೂದಲಿಗೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಳಕೆ ಮಾಡುತ್ತಿದ್ದಾರೆ. ಇದು ಕೇವಲ ನೋಟವನ್ನು ಮಾತ್ರ ಸುಂದರಗೊಳಿಸುವುದಿಲ್ಲ ಬದಲಾಗಿ ಆರೋಗ್ಯವನ್ನು ಹೆಚ್ಚಿಸುತ್ತದೆ.

ಈ ಹಣ್ಣು ಆಂಟಿ ಆಕ್ಸಿಡೆಂಟ್ ಗಳ ಕಣಜವಾಗಿದೆ ಮತ್ತು ವಿಟಮಿನ್ಸ್, ನ್ಯೂಟ್ರಿಯಂಟ್ಸ್ ಗಳು ಇದರಲ್ಲಿ ಹೆಚ್ಚಾಗಿ ಇದ್ದು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಾದ ಸ್ಪ್ಲಿಟ್ ಎಂಡ್ಸ್ ಹಾಗೂ ಇತರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು.

Dragon Fruit

ಇದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಡ್ರ್ಯಾಗನ್ ಫ್ರೂಟ್ ನ ಲಾಭಗಳಾಗಿವೆ ಮತ್ತು ಇದನ್ನು ಹೊರತು ಪಡಿಸಿ ಚರ್ಮ ಹಾಗು ಕೂದಲಿಗೆ ಡ್ರ್ಯಾಗನ್ ಫ್ರೂಟ್ ಉತ್ತಮವಾದುದ್ದಾಗಿದೆ. ಹಾಗಾಗಿ ಇವತ್ತು ಬೋಲ್ಡ್ ಸ್ಕೈ ನಿಮಗೆ ಡ್ರ್ಯಾಗನ್ ಫ್ರೂಟ್ ನ 9 ಆಶ್ಚರ್ಯಕರವಾಗಿರುವ ಲಾಭಗಳ ಬಗ್ಗೆ ತಿಳಿಸಿಕೊಡುತ್ತಿದೆ. ಇದನ್ನು ಓದಿದ ನಂತರ ಖಂಡಿತ ನೀವು ಡ್ರ್ಯಾಗನ್ ಫ್ರೂಟ್ ನ್ನು ನಿಮ್ಮ ಸೌಂದರ್ಯ ವರ್ಧಕ ವಸ್ತುವಾಗಿ ಬಳಕೆ ಮಾಡಲು ಶುರು ಮಾಡುತ್ತೀರಿ ಎಂಬ ನಂಬಿಕೆ ಇದೆ.

ಕೂದಲು ಮತ್ತು ಚರ್ಮದ ಆರೋಗ್ಯ ಹೆಚ್ಚಿಸಲು ಡ್ರ್ಯಾಗನ್ ಫ್ರೂಟ್ ನ್ನು ಬೇರೆಬೇರೆ ವಿಧದಲ್ಲಿ ಬಳಕೆ ಮಾಡಬಹುದಾಗಿದೆ.ನೇರವಾಗಿ ಕೂಡ ಅಪ್ಲೈ ಮಾಡಬಹುದು ಅಥವಾ ಇತರೆ ಆರೋಗ್ಯಕಾರಿ ಪದಾರ್ಥಗಳೊಂದಿಗೆ ಬೆರಿಸಿ ಚರ್ಮಕ್ಕೆ ಮತ್ತು ಕೂದಲಿಗೆ ಮಾಸ್ಕ್ ನಂತೆ ಕೂಡ ಬಳಕೆ ಮಾಡಬಹುದು. ಕಮರ್ಷಿಯಲ್ ಸೌಂದರ್ಯ ವರ್ಧಕಗಳಿಗೆ ಹೋಲಿಕೆ ಮಾಡಿದಾಗ ಈ ಹಣ್ಣು ಕಡಿಮೆ ಬೆಲೆಯುಳ್ಳದ್ದೇ ಆಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುರಕ್ಷಿತವಾಗಿ ಕೂಡ ಬಳಕೆ ಮಾಡಬಹುದಾಗಿದೆ. ಹಾಗಾದರೆ ಡ್ರ್ಯಾಗನ್ ಫ್ರೂಟ್ ನ ಅತ್ಯದ್ಭುತವಾದ ಲಾಭಗಳನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.
ಚರ್ಮಕ್ಕೆ ಡ್ರ್ಯಾಗನ್ ಫ್ರೂಟ್ ನ ಲಾಭಗಳು

1. ಫ್ರೀ ರ್ಯಾಡಿಕಲ್ ಗಳಿಂದಾಗುವ ತೊಂದರೆಯನ್ನು ತಡೆಯುತ್ತದೆ

ಫ್ರೀ ರ್ಯಾಡಿಕಲ್ ಗಳು ನಿಮಗೆ ಭಾರೀ ತೊಂದರೆಯನ್ನು ಚರ್ಮದ ಡಿಎನ್ ಎ ಗೆ ಉಂಟು ಮಾಡುವ ಸಾಧ್ಯತೆ ಇದೆ ಮತ್ತು ಇವುಗಳು ಚರ್ಮವನ್ನು ನಿರ್ಜಲೀಕರಣಗೊಳಿಸಿ, ಕಳಾಹೀನವಾಗಿಸಲು ಕೂಡ ಕಾರಣವಾಗಿ ಬಿಡುತ್ತವೆ. ಅಷ್ಟೇ ಅಲ್ಲ, ಕೆಲವು ಸಂದರ್ಬಗಳಲ್ಲಿ ಇದು ಬೇಗನೆ ವಯಸ್ಸಾಗುವಿಕಯ ಲಕ್ಷಣಗಳಿಗೂ ಕಾರಣವಾಗಿ ಬಿಡುತ್ತದೆ.ಆದರೆ, ಡ್ರ್ಯಾಗನ್ ಫ್ರೂಟ್ ನಲ್ಲಿ ಹಲವು ಗುಣಲಕ್ಷಣಗಳಿಂದಾಗಿ ಇದು ಫ್ರೀ ರ್ಯಾಡಿಕಲ್ ಗಳಿಂದ ಚರ್ಮಕ್ಕೆ ಆಗುವ ತೊಂದರೆಯನ್ನು ತಡೆಯಲು ನೆರವಾಗುತ್ತದೆ.

2. ಸೂರ್ಯನ ಶಾಖದಿಂದ ಚರ್ಮಕ್ಕಾಗುವ ತೊಂದರೆಯನ್ನು ಸರಿಪಡಿಸುತ್ತೆ

ಡ್ರ್ಯಾಗನ್ ಫ್ರೂಟ್ ನಲ್ಲಿ ವಿಟಮಿನ್ ಬಿ3 ಅಂಶವು ಅಧಿಕವಾಗಿದೆ ಮತ್ತು ಇದು ಸೂರ್ಯನ ನೇರಳಾತೀತ ಕಿರಣಗಳಿಂದ ನಿಮ್ಮ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಿ ಚರ್ಮವನ್ನು ಮೊದಲಿನ ಸ್ಥಿತಿಗೆ ಅಂದರೆ ಸಹಜ ಸ್ಥಿತಿಗೆ ಮರುಕಳಿಸುವ ಸಾಮರ್ಥ್ಯವನ್ನು ಹೊಂದಿದೆ. ಸೂರ್ಯನ ಕಿರಣಗಳಿಂದ ಚರ್ಮ ಸುಟ್ಟಂತಾಗಿ, ನಿಮಗೆ ಉರಿಯೂತ ಸಮಸ್ಯೆ ಕಂಡುಬಂದಿದ್ದಲ್ಲಿ ಡ್ರ್ಯಾಗನ್ ಫ್ರೂಟನ್ನು ಬಳಕೆ ಮಾಡಿ. ಇದು ನಿಮಗೆ ಸೂರ್ಯನ ಕಿರಣಗಳಿಂದಾದ ಯಾವುದೇ ರೀತಿಯ ಸಮಸ್ಯೆಯನ್ನೂ ಕೂಡ ನಿವಾರಿಸುವ ಸಾಮರ್ಥ್ಯ ಹೊಂದಿದೆ.

3. ಬೇಗನೆ ವಯಸ್ಸಾಗುವಿಕೆಯ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ

ಹಲವಾರು ವಿಚಾರಗಳಿಂದಾಗಿ ಉದಾಹರಣೆಗೆ ಸೂರ್ಯನ ಶಾಖದಿಂದ, ಫ್ರೀ ರ್ಯಾಡಿಕಲ್ ಗಳ ಡ್ಯಾಮೇಜ್, ಅತಿಯಾದ ಚರ್ಮದ ಕಾಳಜಿ ಇತ್ಯಾದಿಗಳಿಂದಾಗಿ ನಿಮ್ಮ ಚರ್ಮವು ಬೇಗನೆ ವಯಸ್ಸಾಗಿರುವಂತೆ ಗೋಚರಿಸುತ್ತಿರಬಹುದು. ಅಂದರೆ ವಯಸ್ಸಲ್ಲದ ವಯಸ್ಸಿಗೆ ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಂಡಿರಬಹುದು, ಗೆರೆಗಳು ಮೂಡಿರಬಹುದು. ಒಂದು ವೇಳೆ ಹೀಗಾಗಿದ್ದಲ್ಲಿ ಕೂಡಲೇ ಡ್ರ್ಯಾಗನ್ ಫ್ರೂಟ್ ಬಳಕೆ ಮಾಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಈ ಸಮಸ್ಯೆಯ ವಿರುದ್ಧ ಸೆಣಸಾಡಿ ನಿಮ್ಮ ತ್ವಚೆಯನ್ನು ಯಂಗ್ ಆಗಿ ಮತ್ತು ಉತ್ತಮವಾಗಿ ಕಾಣುವಂತೆ ಮಾಡುತ್ತದೆ.

4. ಆಕ್ನೆ ಸಮಸ್ಯೆಯನ್ನು ಪರಿಹರಿಸುತ್ತೆ

ಚರ್ಮದಲ್ಲಿ ಆಕ್ನೆಯಿಂದಾಗಿ ನೀವು ಬಳಲುತ್ತಿದ್ದರೆ ಖಡಿತ ಈ ಉಷ್ಣವಲಯದ ಹಣ್ಣನ್ನು ಬಳಕೆ ಮಾಡಲೇಬೇಕು. ಈಗಂತೂ ಎಲ್ಲಾ ಮಾರುಕಟ್ಟೆಗಳಲ್ಲೂ ಈ ಹಣ್ಣು ಲಭ್ಯವಿದೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ ಅಂಶವಿರುವುದರಿಂದಾಗಿ ಆಕ್ನೆಯ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ ಮತ್ತು ಚರ್ಮವು ಪದೇ ಪದೇ ಹಾಳಾಗುವುದನ್ನು ಇದು ತಡೆಯುತ್ತದೆ.

5. ಚರ್ಮಕ್ಕೆ ಹೊಳಪು ನೀಡುತ್ತೆ

ಡ್ರ್ಯಾಗನ್ ಫ್ರೂಟ್ ನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಕಳೆಗುಂದುವಿಕೆಯ ವಿರುದ್ಧ ಸೆಣಸುತ್ತೆ ಮತ್ತು ನಿಮ್ಮ ಚರ್ಮವು ತಾಜಾವಾಗಿ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕಮರ್ಷಿಯಲ್ ಬ್ಯೂಟಿ ಪ್ರೊಡಕ್ಟ್ ಗಳಾದ ಸಿರಮ್ ಮತ್ತು ಕ್ರೀಮ್ ಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತೆ.

ಕೂದಲಿಗೆ ಡ್ರ್ಯಾಗನ್ ಫ್ರೂಟ್ ನ ಉಪಯೋಗಗಳು

6. ಡ್ಯಾಮೇಜ್ ಆಗಿರುವ ಕೂದಲನ್ನು ಸರಿಪಡಿಸುತ್ತದೆ

ಹಲವಾರು ವಿಚಾರಗಳಿಂದಾಗಿ ಅಂದರೆ ಅತಿಯಾದ ಕೆಮಿಕಲ್ ಪದಾರ್ಥಗಳನ್ನು ಕೂದಲಿಗೆ ಬಳಕೆ ಮಾಡುವುದು, ಕೂದಲನ್ನು ಬಿಸಿಗೊಳಿಸಿ ಸೆಟ್ ಮಾಡುವ ಹೇರ್ ಸ್ಟೈಲ್ ಟೂಲ್ ಗಳ ಬಳಕೆ, ಕೆಟ್ಟ ಜೀವನಶೈಲಿ ಇತ್ಯಾದಿಗಳ ಕಾರಣದಿಂದಾಗಿ ನೈಸರ್ಗಿಕವಾಗಿರುವ ಉತ್ತಮ ಕೂದಲು ಕಳೆದುಹೋಗಿ ಹಾಳಾಗಿರುವ ಕಳೆಗುಂದಿದ ಕೂದಲು ನಿಮ್ಮದಾಗಿರಬಹುದು. ಆದರೆ ಅದನ್ನು ಸರಿಪಡಿಸಲು ಸಾಧ್ಯವಿದೆ. ಡ್ರ್ಯಾಗನ್ ಫ್ರೂಟನಲ್ಲಿರುವ ಪೋಷಕಾಂಶಗಳು ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ಕೂದಲು ಕಳಾಹೀನವಾಗಿದ್ದರೆ ಅದನ್ನು ಸರಿಪಡಿಸುವ ತಾಕತ್ತನ್ನು ಹೊಂದಿದೆ.

7. ಕೂದಲಿಗೆ ಹೊಳಪು ನೀಡುತ್ತದೆ

ಡ್ರ್ಯಾಗನ್ ಹಣ್ಣಿನಲ್ಲಿರುವ ಅಧಿಕ ಮಟ್ಟದ ವಿಟಮಿನ್ ಸಿ ಅಂಶದಿಂದಾಗಿ ಕೂದಲಿಗೆ ಹೊಳಪು ಇದು ಸೇರಿಸುತ್ತದೆ.ಅಷ್ಟೇ ಅಲ್ಲ,ಈ ಡ್ರ್ಯಾಗನ್ ಫ್ರೂಟ್ ನಲ್ಲಿ ಎಝೈಮ್ಸ್ ಗಳು ಇರುವುದರಿಂದಾಗಿ ಒರಟಾದ ಕೂದಲಿನ ನಿವಾರಣೆಗೆ ಇದೊಂದು ಅಧ್ಬುತ ಪದಾರ್ಥವಾಗಿ ಗುರುತಿಸಿಕೊಂಡಿದೆ.ಯಾರಿಗೆ ಒರಟಾದ ಮತ್ತು ಕಳೆಗುಂದಿದ ಕೂದಲು ಇದಿಯೋ ಅಂತವರು ಆಗಾಗ ಡ್ರ್ಯಾಗನ್ ಫ್ರೂಟ್ ಬಳಕೆ ಮಾಡಿ ತಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

8. ಕೂದಲು ತುಂಡಾಗುವುದನ್ನು ತಡೆಯುತ್ತದೆ

ಕೂದಲಿನ ಫಾಲಿಕಲ್ಸ್ ಗಳನ್ನು ಬಲಿಷ್ಟಗೊಳಿಸಲು ಈ ಅಧ್ಬುತ ಹಣ್ಣನ್ನು ಬಳಕೆ ಮಾಡಬಹುದು. ಯಾವಾಗ ಕೂದಲಿನ ಫಾಲಿಕಲ್ ಗಳು ಬಲಿಷ್ಟವಾಗಿರುತ್ತವೋ ಆಗ ಕೂದಲು ತುಂಡಾಗುವಿಕೆ ನಿಯಂತ್ರಣದಲ್ಲಿರುತ್ತದೆ. ಡ್ರ್ಯಾಗನ್ ಫ್ರೂಟನ್ನು ನಿರಂತರವಾಗಿ ನಿಮ್ಮ ಕೂದಲಿಗೆ ಬಳಕೆ ಮಾಡುವುದರಿಂದಾಗಿ ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಕಾಣಬಹುದಾಗಿದೆ.

9. ಸ್ಪ್ಲಿಟ್ ಎಂಡ್ ಆಗುವುದನ್ನು ತಡೆಯುತ್ತದೆ

ಸ್ಪ್ಲಿಟ್ ಎಂಡ್ಸ್ ಗಳು ಸಾಮಾನ್ಯವಾಗಿ ಫ್ರೀ ರ್ಯಾಡಿಕಲ್ ಗಳಿಂದಾಗಿ ಆಗುತ್ತದೆ ಮತ್ತು ಇದು ವಿಶ್ವದಾದ್ಯಂತ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದೆನಿಸಿದೆ. ಆದರೆ ಒಂದು ಒಳ್ಳೆಯ ಸುದ್ದಿ ಏನೆಂದರೆ ಡ್ರ್ಯಾಗನ್ ಫ್ರೂಟ್ ನ ಸಹಾಯದಿಂದ ಸ್ಪ್ಲಿಟ್ ಎಂಡ್ಸ್ ಆಗದಂತೆ ತಡೆಯಲು ಸಾಧ್ಯವಿದೆ. ಇದು ಯಾಕೆಂದರೆ ಡ್ರ್ಯಾಗನ್ ಫ್ರೂಟ್ ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶವಿದೆ ಮತ್ತು ಇದು ಕೂದಲಿನಲ್ಲಿ ಫ್ರೀ ರ್ಯಾಡಿಕಲ್ಸ್ ಗಳಿಂದ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಈಗ ನೀವು ಡ್ರ್ಯಾಗನ್ ಫ್ರೂಟ್ ಹತ್ತು ಹಲವು ಪ್ರಯೋಜನಗಳನ್ನು ತಿಳಿದಿದ್ದೀರಿ ಮತ್ತು ಅದು ಚರ್ಮ, ಕೂದಲಿಗೆ ಹೇಗೆ ಉಪಯೋಗಕಾರಿ ಎಂಬ ಸಂಪೂರ್ಣ ವಿವರವನ್ನು ಪಡೆದಿದ್ದೀರಿ. ಹಾಗಾಗಿ ಇನ್ನು ಬಾಕಿ ಉಳಿದಿರುವುದು ನೀವು ಇದರ ಪ್ರಯತ್ನ ನಡೆಸುವುದಷ್ಟೇ. ಆದರೆ ಚರ್ಮಕ್ಕೆ ಪ್ರಯೋಗ ಮಾಡುವ ಮುನ್ನ ಇದು ನಿಮ್ಮ ಚರ್ಮದ ವಿಧಕ್ಕೆ ಹೊಂದಿಕೆಯಾಗುತ್ತದೆಯಾ ಎಂಬುದನ್ನು ಒಮ್ಮೆ ಖಾತ್ರಿ ಮಾಡಿಕೊಳ್ಳಿ.

English summary

Amazing Benefits Of Dragon Fruit For Skin And Hair

Did you know that dragon fruit, also known as Pitaya can prove to be a vital ingredient in your beauty routine? This delicious tropical fruit boasts a host of beauty promoting goodness that can help you get naturally beautiful skin and hair. Read on to know the wonderful benefits of dragon fruit here:
X
Desktop Bottom Promotion