ಮುಖದ ಸೌಂದರ್ಯಕ್ಕೆ ಮೊಸರಿನ ಫೇಸ್ ಪ್ಯಾಕ್

Posted By: Hemanth
Subscribe to Boldsky

ಹಾಲು ಹಾಗೂ ಹಾಲಿನ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವಂತದ್ದಾಗಿದೆ. ಅದರಲ್ಲೂ ಮೊಸರು ಸೇವಿಸಿದರೆ ಅದು ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ ಎಂದು ಹೇಳಲಾಗುತ್ತದೆ. ಅದೇ ಮೊಸರಿನಿಂದ ತ್ವಚೆಯ ಆರೋಗ್ಯ ಕೂಡ ಕಾಪಾಡಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಇದು ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ ಮತ್ತು ಮೊಸರಿನಲ್ಲಿ ಹಲವಾರು ರೀತಿಯ ಚರ್ಮಕ್ಕೆ ಆರೈಕೆ ನೀಡುವ ಗುಣಗಳು ಇವೆ.

ಮೊಸರನ್ನು ಬಿಸಿಲಿನಿಂದ ಆಗಿರುವ ಕಲೆಗಳು ಮತ್ತು ಸುಟ್ಟ ಗಾಯ. ಕಪ್ಪು ಕಲೆಗಳ ನಿವಾರಣೆ ಹಾಗೂ ಚರ್ಮವನ್ನು ಬಿಳಿಗೊಳಿಸಲು ಇದು ಪರಿಣಾಮಕಾರಿ. ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡಿ ಚರ್ಮದ ಸತ್ತಕೋಶಗಳನ್ನು ತೆಗೆದು, ಚರ್ಮವು ಆರೋಗ್ಯಕಾರಿ ಮತ್ತು ಶುದ್ಧವಾಗಿರುವಂತೆ ನೋಡಿಕೊಳ್ಳುವುದು.

ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆಗಳು ಏಳಬಹುದು. ಇದನ್ನು ನೀವು ಮನೆಯಲ್ಲೇ ಇದ್ದುಕೊಂಡು ಮಾಸ್ಕ್ ಅಥವಾ ಪ್ಯಾಕ್ ರೂಪದಲ್ಲಿ ಬಳಸಿಕೊಳ್ಳಬಹುದು. ಮೊಸರಿನಿಂದ ಆಗುವಂತಹ ಕೆಲವೊಂದು ಸೌಂದರ್ಯ ಲಾಭಗಳನ್ನು ಈ ಲೇಖನದಿಂದ ತಿಳಿಯಿರಿ.

ಚರ್ಮದ ಕಾಂತಿ ಸುಧಾರಿಸಲು

ಚರ್ಮದ ಕಾಂತಿ ಸುಧಾರಿಸಲು

ಮೊಸರಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವುದು. ಇದರಿಂದ ನೀವು ಬಿಳಿಯ ಚರ್ಮ ಪಡೆಯಬಹುದು.

ಒಂದು ಚಮಚ ಮೊಸರು ಮತ್ತು ಒಂದು ಚಿಟಿಕೆ ಅರಶಿನ ಹಾಕಿಕೊಂಡು ಮಿಶ್ರಣ ಮಾಡಿದ ಬಳಿಕ ಮುಖ ಹಾಗೂ ಕುತ್ತಿಗೆಗೆ ಅದನ್ನು ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ಮಸಾಜ್ ಮಾಡುತ್ತಾ ಇದನ್ನು ತಣ್ಣೀರಿನಿಂದ ತೊಳೆಯಿರಿ. ಪ್ರತಿನಿತ್ಯ ಈ ಮನೆಮದ್ದನ್ನು ಎರಡು ವಾರಗಳ ಕಾಲ ಬಳಸಿದರೆ ಫಲಿತಾಂಶ ಪಡೆಯಬಹುದು.

ಕಪ್ಪು ಕಲೆ ತೆಗೆಯಲು

ಕಪ್ಪು ಕಲೆ ತೆಗೆಯಲು

ಮೊಸರಿನಲ್ಲಿ ತೆಗೆದುಹಾಕುವಂತಹ ಗುಣಗಳು ಇವೆ ಮತ್ತು ಇದರಿಂದ ಕಪ್ಪು ಕಲೆಗಳು ಹಾಗು ಗುರುತುಗಳನ್ನು ಇದು ಬಿಳಿಯಾಗಿಸುವುದು.

*ಒಂದು ಪಿಂಗಾಣಿಗೆ ಎರಡು ಚಮಚ ಕಿತ್ತಳೆ ಸಿಪ್ಪೆಯ ಹುಡಿ ಮತ್ತು ಅದಕ್ಕೆ ಬೇಕಾದಷ್ಟು ಮೊಸರು ಹಾಕಿ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

*ಚರ್ಮದಲ್ಲಿರುವ ಕಪ್ಪು ಕಲೆಗಳನ್ನು ತೆಗೆಯಲು ಮತ್ತೊಂದು ಪರಿಣಾಮಕಾರಿ ವಿಧಾನವಾಗಿದೆ. ಒಂದು ಹತ್ತಿ ಉಂಡೆಯನ್ನು ಮೊಸರಿನಲ್ಲಿ ಅದ್ದಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿ. 10-15 ನಿಮಿಷ ಕಾಲ ಹಾಗೆ ಬಿಡಿ. ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಪ್ರತಿನಿತ್ಯ ಎರಡು ಅಥವಾ ಮೂರು ಸಲ ಹೀಗೆ ಮಾಡಿ.

ಬಿಸಿಲಿನಿಂದಾದ ಕಲೆ ನಿವಾರಣೆ

ಬಿಸಿಲಿನಿಂದಾದ ಕಲೆ ನಿವಾರಣೆ

ತಾಜಾ ಮೊಸರನ್ನು ಹಚ್ಚಿಕೊಂಡು ಇದನ್ನು ನಿವಾರಿಸಬಹುದು. ಆದರೆ ಇತರ ಸಾಮಗ್ರಿ ಹಾಕಿಕೊಂಡರೆ ಅದರಿಂದ ಪರಿಣಾಮಕಾರಿ ಫಲಿತಾಂಶ ಪಡೆಯಬಹುದು.

*1/4 ಕಪ್ ಮೊಸರು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಟೊಮೆಟೋ ಹಾಕಿಕೊಂಡು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಇದನ್ನು ಬಿಸಿಲಿನಿಂದ ಆದ ಕಲೆ ನಿವಾರಿಸಲು ಬೇಕಾದಾಗ ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

*ಮತ್ತೊಂದು ಪರ್ಯಾಯ ಮಾಸ್ಕ್ ಎಂದರೆ ಜೇನುತುಪ್ಪ ಮತ್ತು ಮೊಸರು. ಎರಡು ಚಮಚ ಮೊಸರು ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಐದು ನಿಮಿಷ ಮುಖಕ್ಕೆ ಮಸಾಜ್ ಮಾಡಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಹೀಗೆ ಮಾಡಿ.

ಒಣ ಚರ್ಮಕ್ಕಾಗಿ

ಒಣ ಚರ್ಮಕ್ಕಾಗಿ

ಒಣ ಹಾಗೂ ಚರ್ಮ ಕಿತ್ತುಬರುವಂತಹ ಸಮಸ್ಯೆಗೆ ಇದು ತುಂಬಾ ಪರಿಣಾಮಕಾರಿ.

ಎರಡು ತುಂಡು ಬಾಳೆಹಣ್ಣು ತೆಗೆದುಕೊಂಡು ಅದನ್ನು ಸರಿಯಾಗಿ ಹಿಚುಕಿ. ಇದಕ್ಕೆ ಒಂದು ಚಮಚ ಮೊಸರು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಎಲ್ಲವೂ ಸರಿಯಾಗಿ ಮಿಶ್ರಣವಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮಕ್ಕೆ ಕಾಂತಿ ನೀಡುವುದು.

ಶುದ್ಧೀಕರಿಸಲು

ಶುದ್ಧೀಕರಿಸಲು

ಮೊಸರು ಬ್ಯಾಕ್ಟೀರಿಯಾವನ್ನು ಕೊಂದು ಹಾಕಿ ಸತ್ತ ಚರ್ಮದ ಕೋಶ ತೆಗೆದುಹಾಕುವ ಮೂಲಕ ಕಲ್ಮಷವನ್ನು ಹೊರಹಾಕುವುದು. ಇದರಿಂದ ಚರ್ಮವು ತುಂಬಾ ಶುದ್ಧ ಹಾಗೂ ಆರೋಗ್ಯಕಾರಿಯಾಗಿರುವುದು.

ಬಳಸುವ ವಿಧಾನ

ಪಿಂಗಾಣಿಗೆ ಮೂರು ಚಮಚ ಮೊಸರು ಹಾಕಿ. ಇದಕ್ಕೆ ಒಂದು ಚಮಚ ಆಲಿವ್ ತೈಲ, ಬಾದಾಮಿ ತೈಲ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಹತ್ತಿ ಉಂಡೆ ಅದ್ದಿಕೊಂಡು ಮುಖಪೂರ್ತಿ ಹಚ್ಚಿಕೊಳ್ಳೀ. ಇದು ಚರ್ಮದಲ್ಲಿರುವ ಅತಿಯಾದ ಧೂಳು ತೆಗೆಯುವುದು. 15 ನಿಮಿಷ ಕಾಲ ಮುಖದಲ್ಲಿ ಈ ಮಿಶ್ರಣ ಹಾಗೆ ಇಟ್ಟುಕೊಂಡು ಬಳಿಕ ತಣ್ಣೀರಿನಿಂದ ತೊಳೆಯಿರಿ. ಬಳಲಿಕೊಂಡು ಮನೆಗೆ ಬಂದ ಬಳಿಕ ಈ ಮನೆಮದ್ದನ್ನು ಬಳಸಿಕೊಳ್ಳಿ.

English summary

5 Amazing DIY Yogurt Remedies For Skin Care

Yogurt can be used in the form of masks or packs for the skin, which you can try sitting back at home. Yogurt acts as one solution for improving skin tone, as a cleanser, removing tan, keeping the skin moisturized, etc. Some of the packs that can be used with yogurt for skin care are honey, banana, olive oil, etc.