For Quick Alerts
ALLOW NOTIFICATIONS  
For Daily Alerts

  ವಯಸ್ಸಾಗುವಿಕೆಯನ್ನು ನಿಯಂತ್ರಣದಲ್ಲಿಡುವ ಮನೆಮದ್ದುಗಳು

  By Jaya Subramanya
  |

  ನಳನಳಿಸುವ ತ್ವಚೆ ಮತ್ತು ಸೌಂದರ್ಯವನ್ನು ಪಡೆದುಕೊಳ್ಳುವುದು ಪ್ರತಿಯೊಂದು ಹೆಣ್ಣಿನ ಕನಸಾಗಿರುತ್ತದೆ. ಹಾಗಿದ್ದರೆ ಈ ಸೌಂದರ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇಂದಿನ ಕಾಲದಲ್ಲಿ ಬಿಡುವಿಲ್ಲದೆ ಹೆಣ್ಣು ದುಡಿಯುತ್ತಿರುವುದರಿಂದ ಆಕೆಗೆ ಕ್ಷಣ ಹೊತ್ತು ಪುರುಸೊತ್ತು ಎಂಬುದಿಲ್ಲ ಇದರಿಂದ ಅವರು ತಮ್ಮ ಸೌಂದರ್ಯದ ಕಡೆಗೆ ಕಡಿಮೆ ಗಮನ ನೀಡುತ್ತಿದ್ದಾರೆ. ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಕೂಡ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಅವರು ಶೀಘ್ರ ದಣಿವಿಗೆ ಒಳಗಾಗುತ್ತಾರೆ ಮತ್ತು ನಿದ್ದೆ ಮಾಡಿದರೆ ಸಾಕು ಎಂಬುದು ಅವರ ಮನದಲ್ಲಿರುತ್ತದೆ. ಆದರೆ ನೀವು ಇಷ್ಟು ನಿರ್ಲಕ್ಷ್ಯವನ್ನು ವಹಿಸಿದಲ್ಲಿ ಬೇಗನೇ ವಯಸ್ಸಾಗಿರಬಹುದಾದ ಲಕ್ಷಣಗಳು ನಿಮ್ಮ ಮುಖದಲ್ಲಿ ಗೋಚರಿಸಬಹುದು.

  ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಾರದು ಎಂದಾದಲ್ಲಿ ನೀವು ತುಸು ಕಾಳಜಿಯನ್ನು ನಿಮ್ಮ ತ್ವಚೆಯ ಬಗ್ಗೆ ತೆಗೆದುಕೊಳ್ಳಬೇಕಾಗುತ್ತದೆ. ಮುಖದ ಸುಕ್ಕು, ನೆರಿಗೆ, ಕಪ್ಪು ವರ್ತುಲಗಳು ಹೀಗೆ ತ್ವಚೆಯ ಬೇರೆ ಬೇರೆ ಸಮಸ್ಯೆಗಳನ್ನು ಹೋಗಲಾಡಿಸುವ ಹಲವಾರು ಮನೆಮದ್ದುಗಳಿದ್ದು ಇವುಗಳು ಸುಲಭವಾಗಿ ನಿಮ್ಮ ಮನೆಯ ಅಡುಗೆಮನೆಯಲ್ಲೇ ದೊರೆಯುವಂತಹದ್ದಾಗಿದೆ. ಬನ್ನಿ ಈ ಮನೆಮದ್ದುಗಳನ್ನು ಬಳಸಿಕೊಂಡು ಹೊಳೆಯುವ ಕಾಂತಿಯುಕ್ತ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

  1. ಜೇನು

  1. ಜೇನು

  ವಯಸ್ಸು-ವಿರೋಧಿ ಅಂಶವನ್ನು ಹೊಂದಿರುವ ಜೇನು ಪ್ರಕೃತಿ ರಹಸ್ಯ ಉಡುಗೊರೆಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ನೈಸರ್ಗಿಕ ಆರ್ದ್ರಕಾರಿಗಳಲ್ಲಿ ಒಂದಾಗಿದೆ ಮತ್ತು ವಿರೋಧಿ ಆಕ್ಸಿಡೆಂಟ್ಗಳು ಅಥವಾ ವಯಸ್ಸಾದ ನೈಸರ್ಗಿಕ ರಾಸಾಯನಿಕಗಳನ್ನು ಸಮೃದ್ಧವಾಗಿದೆ. ಹೌದು, ನೀವು ಜೇನುತುಪ್ಪವನ್ನು ಶತಮಾನಗಳಿಂದ ಕಂಟೇನರ್ನಲ್ಲಿ ಇಟ್ಟುಕೊಳ್ಳಬಹುದು ಮತ್ತು ಅದು ಕೊಳೆತು ಹೋಗದು ಅಥವಾ ಕೆಟ್ಟದಾಗಿ ಹೋಗುವುದಿಲ್ಲ. ವಾಸ್ತವವಾಗಿ, ಇದು ವಯಸ್ಸನ್ನು ಮರೆಮಾಚುವ ಅಂಶವನ್ನು ಹೊಂದಿದೆ. ನೀವು ಜೇನುತುಪ್ಪವನ್ನು ವಯಸ್ಸನ್ನು ಮರೆಮಾಚುವ ಔಷಧವನ್ನಾಗಿ ಬಳಸಿಕೊಳ್ಳಬಹುದಾಗಿದೆ

  ಸಾಮಾಗ್ರಿಗಳು

  1/2 ಚಮಚ ಜೇನು

  ವಿಧಾನ

  ನಿಮ್ಮ ಮುಖ ಮತ್ತು ಕತ್ತಿಗೆ ಜೇನು ತುಪ್ಪವನ್ನು ಹಚ್ಚಿಕೊಳ್ಳಿ ಮತ್ತು ವೃತ್ತಾಕಾರವನ್ನು ಮಸಾಜ್ ಮಾಡಿ

  ಇದನ್ನು ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ಎರಡು ದಿನಗಳಿಗೊಮ್ಮೆ

  ರೋಸ್ ವಾಟರ್ ಪ್ಯಾಕ್

  ರೋಸ್ ವಾಟರ್ ಪ್ಯಾಕ್

  ನಿಮ್ಮ ತ್ವಚೆಯು ಹೆಚ್ಚು ಸಮಯದಿಂದ ತಡೆಹಿಡಿಯಲ್ಪಟ್ಟಿದ್ದರೆ ಚರ್ಮವು ಅದರ ಹೊಳಪು ಮತ್ತು ಪುನರುತ್ಪಾದಕ ಗುಣಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ರೋಸ್ ವಾಟರ್, ಸೌಮ್ಯವಾದ ಸಂಕೋಚಕವಾಗಿದ್ದು, ಮುಚ್ಚಿಹೋಗಿರುವ ರಂಧ್ರಗಳಿಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಇದು ತಂಪಿನ ಮತ್ತು ಹಿತಕರವಾದ ಪರಿಣಾಮವನ್ನು ಹೊಂದಿದೆ ಮತ್ತು ಕಣ್ಣುಗಳ ಕೆಳಗಿರುವ ಊದುವಿಕೆಯನ್ನು ಕಡಿಮೆಗೊಳಿಸುತ್ತದೆ. ವಯಸ್ಸಾದವರಿಗೆ ರೋಸ್ ವಾಟರ್ ಬಳಸುವುದು ಹೇಗೆ ಎಂಬುದು ಇಲ್ಲಿದೆ

  ಸಾಮಾಗ್ರಿಗಳು

  2 ಚಮಚ ರೋಸ್ ವಾಟರ್

  1/2 ಚಮಚ ಲಿಂಬೆ ರಸ

  3-4 ಚಮಚ ಗ್ಲಿಸರಿನ್

  1 ಹತ್ತಿಯ ಉಂಡೆ

  ವಿಧಾನ

  ಎಲ್ಲಾ ಸಾಮಾಗ್ರಿಗಳನ್ನು ಬೌಲ್‌ನಲ್ಲಿ ಹಾಕಿ ಮಿಶ್ರ ಮಾಡಿಕೊಳ್ಳಿ

  ಈ ಮಿಶ್ರಣದಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿಕೊಳ್ಳಿ. ನಿಮ್ಮ ಮುಖವನ್ನು ಕೂಡಲೇ ತೊಳೆದುಕೊಳ್ಳದಿರಿ.

  ಬಳಸುವಿಕೆ

  ದಿನಬಿಟ್ಟು ದಿನ ರಾತ್ರಿ ವೇಳೆ

  ಆಲೂಗಡ್ಡೆ ಜ್ಯೂಸ್

  ಆಲೂಗಡ್ಡೆ ಜ್ಯೂಸ್

  ಇದು ಗ್ಲಿಸಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು, ಹಸಿ ಆಲೂಗಡ್ಡೆ ವಿಟಮಿನ್ ಸಿ ಮತ್ತು ಪ್ರೊಟೀನ್ ಅಂಶಗಳನ್ನು ಒಳಗೊಂಡಿದೆ. ಇದು ಕೊಲೆಗನ್ ಅನ್ನು ಪುನರ್‌ ಉತ್ಪಾದಿಸುವಲ್ಲಿ ಸಹಕಾರಿಯಾಗಲಿದೆ. ನೆರಿಗೆಗಳನ್ನು ನಿವಾರಿಸುತ್ತದೆ ಈ ಜ್ಯೂಸ್ ಬಳಸುವುದು ಹೇಗೆ ಎಂಬುದನ್ನು ನೋಡೋಣ

  ಸಾಮಾಗ್ರಿಗಳು

  1 ಸಣ್ಣ ಆಲೂಗಡ್ಡೆ

  2. ಹತ್ತಿಯ ಉಂಡೆ

  ಒಂದು ಪಾತ್ರೆಯಲ್ಲಿ ರಸವನ್ನು ಪಡೆದುಕೊಂಡು ಅದರಲ್ಲಿ ಹತ್ತಿಯನ್ನು ಅದ್ದಿಕೊಳ್ಳಿ. ಉಂಡೆಯನ್ನು ಹಿಂಡಿಕೊಂಡು ನಿಮ್ಮ ಮುಖ ಮತ್ತು ಕತ್ತಿಗೆ ರಸವನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೆ ಎರಡು ಬಾರಿ ಬಳಸಿ

  ಬಾಳೆಹಣ್ಣು

  ಬಾಳೆಹಣ್ಣು

  ಇದು ವಿಟಮಿನ್ ಎ, ಬಿ ಮತ್ತು ಇ ಅಂಶವನ್ನು ಒಳಗೊಂಡಿದೆ. ವಯಸ್ಸಿನ ನಿರ್ಬಂಧಕ ಗುಣವನ್ನು ಹೊಂದಿದೆ. ಪೊಟಾಶಿಯಂ ಮತ್ತು ಜಿಂಕ್ ಅಂಶವನ್ನು ಒಳಗೊಂಡಿದೆ. ಇದು ನಿಮ್ಮ ತ್ವಚೆಗೆ ಹೊಳಪನ್ನು ನೀಡುತ್ತದೆ.

  ಸಾಮಾಗ್ರಿಗಳು

  1 ಬಾಳೆಹಣ್ಣು

  1 ಚಮಚ ರೋಸ್ ವಾಟರ್

  1 ಚಮಚ ಜೇನು

  1 ಚಮಚ ಯೋಗರ್ಟ್

  ವಿಧಾನ

  1. ಒಂದು ಬೌಲ್‌ನಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಜೇನು ಮತ್ತು ರೋಸ್ ವಾಟರ್ ಅನ್ನು ಸೇರಿಸಿ ಹಾಗೂ ಚೆನ್ನಾಗಿ ಮಿಶ್ರ ಮಾಡಿ

  2. ಇನ್ನಷ್ಟು ಮೃದುವಾದ ಪೇಸ್ಟ್ ತಯಾರಿಸಲು ಕೊನೆಗೆ ಯೋಗರ್ಟ್ ಅನ್ನು ಸೇರಿಸಿ

  3. ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಲು ಬ್ರಶ್ ಬಳಕೆ ಮಾಡಿ

  4. 2 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೆ ಎರಡು ಬಾರಿ ಬಳಸಿ

  ಕ್ಯಾರೆಟ್ ಮತ್ತು ಆಲೂಗಡ್ಡೆ

  ಕ್ಯಾರೆಟ್ ಮತ್ತು ಆಲೂಗಡ್ಡೆ

  ವಿಟಮಿನ್ ಎ ಅನ್ನು ಒಳಗೊಂಡಿದ್ದು ಇದು ನೆರಿಗೆಗಳನ್ನು ಕಡಿಮೆ ಮಾಡುತ್ತದೆ. ಆಲೂಗಡ್ಡೆಯು ವಿಟಮಿನ್ ಸಿ ಅಂಶವನ್ನು ಹೊಂದಿದ್ದು ಇವೆರಡನ್ನೂ ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಹಚ್ಚುವುದು ಇದು ಮುಖದ ಕಾಂತಿಯನ್ನು ವೃದ್ಧಿಸುತ್ತದೆ

  ಸಾಮಾಗ್ರಿಗಳು

  1 ಸಣ್ಣ ಕ್ಯಾರೆಟ್

  2. ಸಣ್ಣ ಆಲೂಗಡ್ಡೆ

  3. ಚಿಟಿಕೆ ಅರಶಿನ

  4. ಚಿಟಿಕೆ ಬೇಕಿಂಗ್ ಸೋಡಾ

  ನೀರು

  ವಿಧಾನ

  1. ಆಲೂಗಡ್ಡೆ ಮತ್ತು ಕ್ಯಾರೆಟ್ ಅನ್ನು ಬೇಯಿಸಿಕೊಳ್ಳಿ ಮತ್ತು ಮಿಕ್ಸಿಯಲ್ಲಿ ನುಣ್ಣನೆ ಪೇಸ್ಟ್‌ನಂತೆ ತಯಾರಿಸಿ

  2. ಇದಕ್ಕೆ ಚಿಟಿಕೆ ಅರಶಿನ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ ಬೇಕಾದಷ್ಟು ನೀರು ಸೇರಿಸಿಕೊಂಡು ನುಣ್ಣನೆ ಪೇಸ್ಟ್ ಮಾಡಿಕೊಳ್ಳಿ

  3. ನಿಮ್ಮ ಮುಖ ಮತ್ತು ಕತ್ತಿಗೆ ಪೇಸ್ಟ್ ಹಚ್ಚಿಕೊಳ್ಳಲು ಬ್ರಶ್ ಬಳಕೆ ಮಾಡಿ

  4. ಇದನ್ನು ಇಪ್ಪತ್ತು ನಿಮಿಷ ಹಾಗೆಯೆ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ಉತ್ತಮ ಫಲಿತಾಂಶಕ್ಕಾಗಿ ಇದನ್ನು ವಾರಕ್ಕೆ ಎರಡು ಬಾರಿ ಬಳಸಿ

  ತೆಂಗಿನ ಹಾಲು

  ತೆಂಗಿನ ಹಾಲು

  ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು ತ್ವಚೆಯನ್ನು ಯವ್ವೌನಪೂರ್ಣಗೊಳಿಸುತ್ತದೆ ಮತ್ತು ಮೃದುಗೊಳಿಸುತ್ತದೆ

  ಸಾಮಾಗ್ರಿಗಳು

  3 ಚಮಚ ತೆಂಗಿನ ಹಾಲು

  1 ಹತ್ತಿಯ ಉಂಡೆ

  ವಿಧಾನ

  1. ಹತ್ತಿಯ ಉಂಡೆಯನ್ನು ಹಾಲಿನಲ್ಲಿ ಅದ್ದಿಕೊಂಡು ನಿಮ್ಮ ಮುಖದ ತುಂಬೆಲ್ಲಾ ಹಚ್ಚಿಕೊಳ್ಳಿ

  2. ಇದನ್ನು ಹಾಗೆಯೇ 15 ನಿಮಿಷಗಳ ಕಾಲ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೆ ಮೂರು ಬಾರಿ ಬಳಸಿ

  ಬಾದಾಮಿ, ಶ್ರೀಗಂಧ ಮತ್ತು ರೋಸ್‌ವುಡ್ ಎಣ್ಣೆ

  ಬಾದಾಮಿ, ಶ್ರೀಗಂಧ ಮತ್ತು ರೋಸ್‌ವುಡ್ ಎಣ್ಣೆ

  ಈ ಮೂರು ವಸ್ತುಗಳು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಮುಖದಲ್ಲಿರುವ ನೆರಿಗೆ ಹಾಗೂ ಸುಕ್ಕಿನ ಅಂಶಗಳನ್ನು ಹೋಗಲಾಡಿಸುತ್ತದೆ.

  ಸಾಮಾಗ್ರಿಗಳು

  1 ಚಮಚ ಬಾದಾಮಿ ಎಣ್ಣೆ

  2/3 ಹನಿಗಳಷ್ಟು ರೋಸ್‌ವುಡ್ ಎಣ್ಣೆ

  3-4 ಹನಿಗಳಷ್ಟು ಶ್ರೀಗಂಧದ ಎಣ್ಣೆ

  ವಿಧಾನ

  1. ನಿಮಗೆ ನುಣ್ಣಗಿನ ಮಿಶ್ರಣ ದೊರೆಯುವವರೆಗೆ ಈ ಮೂರು ವಸ್ತುಗಳನ್ನು ಮಿಶ್ರ ಮಾಡಿಕೊಳ್ಳಿ

  2. ನಿಮ್ಮ ಮುಖವನ್ನು ಸ್ವಚ್ಛಮಾಡಿ ಮತ್ತು ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿ ಮೂರು ನಿಮಿಷ ಮಸಾಜ್ ಮಾಡಿ

  3. ಇದನ್ನು ಅರ್ಧಗಂಟೆ ಹಾಗೆಯೇ ಬಿಡಿ ಇಲ್ಲದಿದ್ದರೆ ರಾತ್ರಿ ಪೂರ್ತಿ ಹಾಗೆಯೇ ಬಿಡಿ

  ಬಳಸುವಿಕೆ

  ಪ್ರತಿ ರಾತ್ರಿ ಇದನ್ನು ಹಚ್ಚಿರಿ

  ಪಪ್ಪಾಯ

  ಪಪ್ಪಾಯ

  ಉತ್ಕರ್ಷಣ ನಿರೋಧಿ ಅಂಶಗಳನ್ನು ಪಪ್ಪಾಯ ಒಳಗೊಂಡಿದ್ದು ಇದನ್ನು ಸೌಂದರ್ಯವೃದ್ಧಿಯಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ. ಇದು ಎಂಜೀಮ್ ಅನ್ನು ಒಳಗೊಂಡಿದ್ದು ರಂಧ್ರಗಳನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ.

  ಸಾಮಾಗ್ರಿಗಳು

  5/7 ತುಂಡುಗಳಷ್ಟು ಪಪ್ಪಾಯ

  ವಿಧಾನ

  ಪಪ್ಪಾಯವನ್ನು ಮಿಕ್ಸಿಯಲ್ಲಿ ನುಣ್ಣನೆ ಅರೆದುಕೊಳ್ಳಿ

  ನಿಮ್ಮ ಮುಖ ಮತ್ತು ಕತ್ತಿಗೆ ಈ ಮಿಶ್ರಣವನ್ನು ಹಚ್ಚಿ

  ಇಪ್ಪತ್ತು ನಿಮಿಷ ಹಾಗೆಯೇ ಬಿಡಿ ನಂತರ ನೀರಿನಿಂದ ತೊಳೆದುಕೊಳ್ಳಿ

  ಬಳಸುವಿಕೆ

  ಉತ್ತಮ ಫಲಿತಾಂಶಕ್ಕಾಗಿ ಇದನ್ನು ವಾರಕ್ಕೆ ಎರಡು ಬಾರಿ ಬಳಸಿ

  ಮೊಸರು

  ಮೊಸರು

  ನೈಸಗಿಕ ಮೊಸರು ಲ್ಯಾಕ್ಟಿಕ್ ಆಸಿಡ್ ಅನ್ನು ಹೊಂದಿದೆ. ಇದು ರಂಧ್ರಗಳನ್ನು ತೆರೆಯುವಂತೆ ಮಾಡಿ ತ್ವಚೆಯನ್ನು ಬಿಗಿಗೊಳಿಸುತ್ತದೆ. ಇದು ತ್ವಚೆಗೆ ಕಾಂತಿ ಮತ್ತು ನೀರಿನ ಅಂಶವನ್ನು ಒದಗಿಸುತ್ತದೆ.

  ಸಾಮಾಗ್ರಿಗಳು

  2 ಚಮಚ ಮೊಸರು

  1 ಚಮಚ ಜೇನು

  1 ಚಮಚ ಲಿಂಬೆ ರಸ

  1 ವಿಟಮಿನ್ ಇ ಕ್ಯಾಪ್ಸುಲ್

  1 ಚಿಟಿಕೆ ಅರಶಿನ

  ವಿಧಾನ

  1. ಲಿಂಬೆ ರಸ, ಮೊಸರು, ಜೇನು ಮತ್ತು ಅರಶಿನವನ್ನು ಪೇಸ್ಟ್ ರೂಪದಲ್ಲಿ ಸಿದ್ಧಪಡಿಸಿ

  2. ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತುಂಡರಿಸಿಕೊಂಡು ಅದರಲ್ಲಿರುವ ಆಯಿಲ್ ಅನ್ನು ಪ್ಯಾಕ್‌ಗೆ ಸೇರಿಸಿಕೊಳ್ಳಿ ಇದನ್ನು ಚೆನ್ನಾಗಿ ಕಲಸಿಕೊಳ್ಳಿ

  3. ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ

  4. ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

  5. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಾದಾಮಿ ಮತ್ತು ಹಾಲು

  ಬಾದಾಮಿ ಮತ್ತು ಹಾಲು

  ಬಾದಾಮಿ ವಿಟಮಿನ್ ಇ ಅಂಶವನ್ನು ಹೊಂದಿದ್ದು ಇದು ತ್ವಚೆಯನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತದೆ.

  ಸಾಮಾಗ್ರಿಗಳು

  8/10 ಬಾದಾಮಿ

  ನೆನೆಸಲು ಹಾಲು

  ವಿಧಾನ

  ರಾತ್ರಿ ಪೂರ್ತಿ ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ

  ಹಾಲು ಮತ್ತು ಬಾದಾಮಿಯನ್ನು ಒಟ್ಟಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ

  30 ನಿಮಿಷ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ

  ಸ್ಟ್ರಾಬೆರ್ರಿಗಳು

  ಸ್ಟ್ರಾಬೆರ್ರಿಗಳು

  ಇದು ತಿನ್ನಲು ರುಚಿಕರವಾಗಿರುವ ಹಣ್ಣು ಮಾತ್ರವಲ್ಲದೆ ವಿಟಮಿನ್ ಸಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತನ್ನಲ್ಲಿ ಒಳಗೊಂಡಿದೆ. ಇದು ನೆರಿಗೆಯನ್ನು ನಿವಾರಿಸುವಲ್ಲಿ ಎತ್ತಿದ ಕೈ ಎಂದೆನಿಸಿದೆ.

  ಸಾಮಾಗ್ರಿಗಳು

  3-4 ಸ್ಟ್ರಾಬೆರ್ರಿಗಳು

  ಮೊದಲಿಗೆ ನೀವು ಸ್ಟ್ರಾಬೆರ್ರಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು

  ಇದನ್ನು ನಿಮ್ಮ ಮುಖಕ್ಕೆ ಮತ್ತು ಕತ್ತಿಗೆ ಹಚ್ಚಿಕೊಳ್ಳಿ

  ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೆ ಎರಡು ಬಾರಿ

  ಅವೊಕಾಡೊ

  ಅವೊಕಾಡೊ

  ವಿಟಮಿನ್ ಇ ಅಂಶವು ಅವೊಕಾಡೊದಲ್ಲಿದ್ದು ಇದು ತ್ವಚೆಯನ್ನು ಹೊಳೆಯಿಸುತ್ತದೆ ಮತ್ತು ಕೊಲಜನ್ ಅನ್ನು ಪುನರುತ್ಪಾದಿಸುತ್ತದೆ.

  ಸಾಮಾಗ್ರಿಗಳು

  ಅವೊಕಾಡೊ

  ವಿಧಾನ

  1. ಅವೊಕಾಡೊವನ್ನು ನುಣ್ಣಗೆ ರುಬ್ಬಿಕೊಳ್ಳಿ

  2. ನಿಮ್ಮ ಮುಖಕ್ಕೆ ಬ್ರಶ್ ಬಳಸಿಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ

  3. 15 ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ

  ಹೂವಿನ ಮಾಸ್ಕ್

  ಹೂವಿನ ಮಾಸ್ಕ್

  ಚೆಂಡುಹೂವಿನ ಮಾಸ್ಕ್ ನಿಮ್ಮ ತ್ವಚೆಗೆ ಅತ್ಯಂತ ಪರಿಣಾಮಕಾರಿ ಎಂದೆನಿಸಲಿದೆ. ಇದು ತ್ವಚೆಗೆ ಕಾಂತಿಯನ್ನು ನೀಡುತ್ತದೆ ಮತ್ತು ರಂಧ್ರಗಳನ್ನು ಶುಚಿಗೊಳಿಸುತ್ತದೆ.

  ಸಾಮಾಗ್ರಿಗಳು

  ಆಲೀವ್ ಆಯಿಲ್

  1 ಮುಷ್ಟಿ ಚೆಂಡು ಹೂವು

  1 ಮುಷ್ಟಿ ಗುಲಾಬಿ ಎಸಳು

  1 ಮುಷ್ಟಿ ಚಮೊಯಿಲ್ ಎಸಳು

  ವಿಧಾನ

  1. ಮೊದಲಿಗೆ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ನುಣ್ಣನೆಯ ಪೇಸ್ಟ್ ಸಿದ್ಧಪಡಿಸಿ. ಬೇಕಾದಷ್ಟು ನೀರು ಬಳಸಿಕೊಂಡು ಪೇಸ್ಟ್ ಸಿದ್ಧಮಾಡಿ.

  2. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಲು ಬ್ರಶ್ ಬಳಸಿ

  3. ಇದನ್ನು ಇಪ್ಪತ್ತು ನಿಮಿಷ ಹಾಗೆಯೇ ಇರಿಸಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  4. ನಿಮ್ಮ ನಿತ್ಯದ ಟೋನರ್ ಮತ್ತು ಮಾಯಿಶ್ಚರೈಸರ್ ಅನ್ನು ಬಳಸಿ

  ಬಳಸುವಿಕೆ

  ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಬಳಸಿ

  ಲಿಂಬೆ ರಸ

  ಲಿಂಬೆ ರಸ

  ಇದು ನೈಸರ್ಗಿಕವಾಗಿದ್ದು ನಿಮ್ಮ ತ್ವಚೆಯನ್ನು ಉತ್ತಮಗೊಳಿಸುತ್ತದೆ ಮತ್ತು ಕಪ್ಪು ವರ್ತುಲಗಳನ್ನು ದೂರಮಾಡುತ್ತದೆ.

  ಸಾಮಾಗ್ರಿಗಳು

  ಒಂದು ತಾಜಾ ಲಿಂಬೆ ಹಣ್ಣು

  ವಿಧಾನ

  1. ನಿಮ್ಮ ಮುಖದಲ್ಲಿರುವ ಕಪ್ಪು ವರ್ತುಲ, ನೆರಿಗೆ, ಸುಕ್ಕುಗಳಿಗೆ ಲಿಂಬೆ ರಸವನ್ನು ಹಚ್ಚಿಕೊಳ್ಳಿ.

  2. ಇದನ್ನು ಹದಿನೈದು ನಿಮಿಷ ಬಿಟ್ಟು ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಪೈನಾಪಲ್

  ಪೈನಾಪಲ್

  ಪೈನಾಪಲ್ ಕೂಡ ಮುಖದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸುವ ಪವರ್‌ಫುಲ್ ಮದ್ದಾಗಿದೆ. ನಿಮ್ಮ ವಯಸ್ಸಾಗುವಿಕೆಯನ್ನು ತಡೆಯುವಲ್ಲಿ ಇದು ಸಿದ್ಧಹಸ್ತ ಎಂದೆನಿಸಿದೆ.

  ಸಾಮಾಗ್ರಿಗಳು

  1 ತುಂಡು ಪೈನಾಪಲ್

  ವಿಧಾನ

  ನಿಮ್ಮ ಮುಖಕ್ಕೆ ಪೈನಾಪಲ್ ತುಂಡನ್ನು ಕತ್ತರಿಸಿ ಉಜ್ಜಿಕೊಳ್ಳಿ

  ನಿಮ್ಮ ಮುಖದಲ್ಲಿ ಈ ರಸವನ್ನು ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೆ ಮೂರು ಬಾರಿ ಇದನ್ನು ಬಳಸಿ

  ಎಸನ್ಶಿಯಲ್ ಆಯಿಲ್

  ಎಸನ್ಶಿಯಲ್ ಆಯಿಲ್

  ತ್ವಚೆಯನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಒಣಗುವಿಕೆಯನ್ನು ತಡೆಯುತ್ತದೆ.

  ಸಾಮಾಗ್ರಿಗಳು

  5 ಹನಿಗಳಷ್ಟು ಸ್ಯಾಂಡಲ್‌ವುಡ್ ಎಣ್ಣೆ

  5 ಹನಿಗಳಷ್ಟು ಜರೇನಿಯಂ ಎಣ್ಣೆ

  5 ಹನಿಗಳಷ್ಟು ಜಾಸ್ಮಿನ್ ಎಣ್ಣೆ

  5 ಹನಿಗಳಷ್ಟು ನೆರೊಯಿಲ್ ಎಣ್ಣೆ (ಆಯ್ಕೆಯದ್ದು)

  5 ಹನಿಗಳಷ್ಟು ಫ್ರಾಂಕ್ಸಿನ್ಸಿನ್ ಎಣ್ಣೆ (ಆಯ್ಕೆಯದ್ದು)

  ವಿಧಾನ'

  ಒಂದು ಸ್ವಚ್ಛ ಬೌಲ್‌ನಲ್ಲಿ ಎಲ್ಲಾ ಎಣ್ಣೆಯನ್ನು ಮಿಶ್ರ ಮಾಡಿ

  ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ

  ಬಳಸುವಿಕೆ

  ರಾತ್ರಿ ಹಚ್ಚಿಕೊಳ್ಳಿ

  ಕಬ್ಬಿನ ರಸ

  ಕಬ್ಬಿನ ರಸ

  ಗ್ಲಿಕೊಲಿಕ್ ಆಸಿಡ್, ಮತ್ತು ನೈಸರ್ಗಿಕ ಮೃದು ಆಸಿಡ್ ಅನ್ನು ಕಬ್ಬಿನ ರಸ ಒಳಗೊಂಡಿದ್ದು ಇದು ಮೃತಕೋಶಗಳನ್ನು ನಿವಾರಿಸುತ್ತದೆ ಹಾಗೂ ಕೊಲಜನ್ ಉತ್ಪಾದನೆಗೆ ನೆರವಾಗಿದೆ.

  ಸಾಮಾಗ್ರಿಗಳು

  2-3 ಹನಿ ಕಬ್ಬಿನ ರಸ

  1 ಚಿಟಿಕೆ ಅರಶಿನ

  ವಿಧಾನ

  1. ಅರಶಿನವನ್ನು ಕಬ್ಬಿನ ಹಾಲಿನೊಂದಿಗೆ ಮಿಶ್ರ ಮಾಡಿ

  2. ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿ.

  3. ಹತ್ತು ನಿಮಿಷ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ

  ಬಳಸುವಿಕೆ

  ಇದನ್ನು ವಾರಕ್ಕೆ ಎರಡು ಬಾರಿ ಬಳಸಿ

  ಮೊಟ್ಟೆಯ ಬಿಳಿ ಭಾಗ

  ಮೊಟ್ಟೆಯ ಬಿಳಿ ಭಾಗ

  ಉತ್ಕರ್ಷಣ ಅಂಶಗಳನ್ನು ಹೊಂದಿದ್ದು ಒಮೆಗಾ 3 ಆಸಿಡ್ ಇದರಲ್ಲಿದೆ. ಕೊಲಜನ್ ಉತ್ಪಾದನೆಯಲ್ಲಿ ಮೊಟ್ಟೆ ನೆರವನ್ನೀಯುತ್ತದೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತದೆ.

  ಸಾಮಾಗ್ರಿಗಳು

  1. ಮೊಟ್ಟೆಯ ಬಿಳಿ ಭಾಗ

  2. 1/2 ಚಮಚ ಮಿಲ್ಕಿ ಕ್ರೀಮ್

  3. 1 ಚಮಚ ಲಿಂಬೆ ರಸ

  ವಿಧಾನ

  1. ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ

  2. ಇದನ್ನು ಹದಿನೈದು ನಿಮಿಷ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

  ಬಳಸುವಿಕೆ

  ಮೂರು ದಿನಗಳಿಗೊಮ್ಮೆ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ

  ಆಮ್ಲ ಪೌಡರ್

  ಆಮ್ಲ ಪೌಡರ್

  ನಿಮ್ಮ ಕೂದಲಿಗೆ ಹೇಗೆ ಇದು ಪ್ರಯೋಜನಕಾರಿಯೋ ಅಂತೆಯೇ ನಿಮ್ಮ ತ್ವಚೆಯ ಮೇಲೂ ಮ್ಯಾಜಿಕ್ ಅನ್ನು ಉಂಟುಮಾಡುತ್ತದೆ. ವಿಟಮಿನ್ ಸಿ ಇದರಲ್ಲಿದ್ದು, ದೇಹದಲ್ಲಿ ಕೊಲಜನ್ ಉತ್ಪಾದನೆಗೆ ನೆರವನ್ನು ನೀಡುತ್ತದೆ.

  ಸಾಮಾಗ್ರಿಗಳು

  2 ಚಮಚ ಆಮ್ಲ ಪೌಡರ್

  1 ಚಮಚ ಜೇನು

  1 ಚಮಚ ಯೋಗರ್ಟ್

  ಬಿಸಿ ನೀರು

  ವಿಧಾನ

  1. ನಿಮಗೆ ಉತ್ತಮ ಮೃದು ಅಂಶ ದೊರೆಯುವವರೆಗೆ ಜೇನು ಮತ್ತು ಯೋಗರ್ಟ್ ಅನ್ನು ಮಿಶ್ರ ಮಾಡಿಕೊಳ್ಳಿ

  2. ಇದಕ್ಕೆ ಆಮ್ಲ ಹುಡಿಯನ್ನು ಸೇರಿಸಿ ಮತ್ತು ಬೇಕಿದ್ದರೆ ಬಿಸಿ ನೀರು ಸೇರಿಸಿ

  3. ನಿಮ್ಮ ಮುಖ ಮತ್ತು ಕತ್ತಿಗೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ

  4. ಇದನ್ನು ಹದಿನೈದು ನಿಮಿಷ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ

  ಬಳಸುವಿಕೆ

  ವಾರಕ್ಕೊಮ್ಮೆ

  ಹರಳೆಣ್ಣೆ

  ಹರಳೆಣ್ಣೆ

  ಇದು ಕೂಡ ತ್ವಚೆಯನ್ನು ಮೃದುವಾಗಿಸುವ ಅಂಶವನ್ನು ತನ್ನಲ್ಲಿ ಒಳಗೊಂಡಿದ್ದು ನೆರಿಗೆಯನ್ನು ನಿವಾರಿಸುತ್ತದೆ. ಒಣ ತ್ವಚೆಗೆ ಇದು ಪರಿಣಾಮಕಾರಿ ಮನೆಮದ್ದಾಗಿದೆ.

  ಸಾಮಾಗ್ರಿಗಳು

  3-4 ಹರಳೆಣ್ಣೆ

  ವಿಧಾನ

  1. ನಿಮ್ಮ ಕೈಯಲ್ಲಿ 3-4 ಹನಿ ಹರಳೆಣ್ಣೆಯನ್ನು ತೆಗೆದುಕೊಂಡು ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿಕೊಳ್ಳಿ.

  2. ರಾತ್ರಿ ಪೂರ್ತಿ ಹಾಗೆಯೇ ಬಿಟ್ಟು ನಂತರ ಮರುದಿನ ತೊಳೆದುಕೊಳ್ಳಿ

  ಬಳಸುವಿಕೆ

  ದಿನ ಬಿಟ್ಟು ದಿನ ಎಣ್ಣೆಯನ್ನು ಬಳಸಿ

  English summary

  Simple Home Remedies For A Youthful Glow

  Ageing is not just a beauty concern; it is a health issue too. A healthy skin is one that delays age, has a natural glow and makes us look younger. So let us understand why ageing happens and what causes it. As we are aware, respiration is the process that allows our body to take in oxygen, which in turn turns the food we eat into energy. It is this process that is called metabolism. Metabolism, however releases oxidants or free radicals, which, when they begin to accumulate, cause the body to age
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more