For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಗ್ರೀನ್ ಟೀ ಫೇಸ್ ಪ್ಯಾಕ್!

By Jaya Subramanya
|

ಸೌಂದರ್ಯವನ್ನು ನಳನಳಿಸುವಂತೆ ಮಾಡುವ ಅದೆಷ್ಟೋ ನೈಸರ್ಗಿಕ ಉತ್ಪನ್ನಗಳಲ್ಲಿ ಗ್ರೀನ್ ಟೀ ಕೂಡ ಒಂದು. ದೇಹದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಇದು ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತದೆಯೋ ಅಂತೆಯೇ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಇದು ಸಿದ್ಧಹಸ್ತ ಎಂದೆನಿಸಿದೆ. ನಿಮ್ಮ ಸಂಪೂರ್ಣ ತ್ವಚೆಯ ಕಾಳಜಿಯನ್ನು ಮಾಡುವ ಗ್ರೀನ್ ಟೀ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ಇದು ಮಿನರಲ್‌ಗಳನ್ನು ಒಳಗೊಂಡಿದೆ. ಅಂತೆಯೇ ವಯಸ್ಸಾಗುವಿಕೆಯನ್ನು ಇದು ತಡೆಯುತ್ತದೆ. ನಿಮ್ಮ ಮುಖಕ್ಕೆ ನೈಸರ್ಗಿ ಕಾಂತಿಯನ್ನು ತಂದುಕೊಡುವಲ್ಲಿ ಗ್ರೀನ್ ಟೀ ಪ್ರಮುಖ ಕಾರ್ಯವನ್ನು ವಹಿಸುತ್ತಿದ್ದು ಮುಖಕ್ಕೆ ತ್ವಚೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಮ್ಮ ಕಣ್ಣುಗಳ ಸುತ್ತಲಿರುವ ಕಪ್ಪು ವರ್ತುಲವನ್ನು ಗ್ರೀನ್ ಟೀ ನಿವಾರಿಸಿ ಕೊಲಜನ್ ಪೂರೈಕೆಯನ್ನು ಮಾಡುತ್ತದೆ ಇದು ಅರೋಗ್ಯವಂತ ತ್ವಚೆಗೆ ಅತಿ ಪ್ರಮುಖದ್ದಾಗಿದೆ.

Green Tea Face Packs

ಇಂದಿನ ಲೇಖನದಲ್ಲಿ ನಿಮ್ಮ ಮೆಚ್ಚಿನ ಗ್ರೀನ್ ಟೀ ಯಿಂದ ಮಾಡಬಹುದಾದ ಫೇಸ್ ಪ್ಯಾಕ್‌ಗಳ ವಿವರಗಳನ್ನು ನಾವು ತಿಳಿಸುತ್ತಿದ್ದೇವೆ. ನಿಮ್ಮ ತ್ವಚೆಗೆನುಸಾರವಾಗಿ ನೂರಾರು ಗ್ರೀನ್ ಟೀ ಫೇಸ್ ಪ್ಯಾಕ್‌ಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ರಂಧ್ರಗಳನ್ನು ಸ್ವಚ್ಛಗೊಳಿಸಿ ಅದನ್ನು ಬಿಗಿಗೊಳಿಸಿ ಮೊಡವೆಗಳನ್ನು ನಿವಾರಿಸುತ್ತದೆ. ತ್ವಚೆಗೆ ಕಾಂತಿಯನ್ನು ಒದಗಿಸುತ್ತದೆ ಮತ್ತು ನೈಸರ್ಗಿಕ ಹೊಳವನ್ನು ಮರಳಿಸುತ್ತದೆ.ನಿಮ್ಮ ತ್ವಚೆಯ ಪ್ರಕಾರಕ್ಕನುಗುಣವಾಗಿರುವ ಗ್ರೀನ್ ಟೀ ಫೇಸ್‌ ಪ್ಯಾಕ್‌ಗಳ ಬಗೆಗಿನ ವಿವರಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಸಾಮಾನ್ಯ ತ್ವಚೆಗಾಗಿ ಗ್ರೀನ್ ಟೀ ಫೇಸ್ ಪ್ಯಾಕ್

1.ಅರಿಶಿನ ಗ್ರೀನ್ ಟೀ ಫೇಸ್ ಪ್ಯಾಕ್

1.ಅರಿಶಿನ ಗ್ರೀನ್ ಟೀ ಫೇಸ್ ಪ್ಯಾಕ್

ಅರಿಶಿನ ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ಒಳಗೊಂಡಿದ್ದು ಇದು ಉತ್ಕರ್ಷಣ ನಿರೋಧಿ ಅಂಶಗಳನ್ನು ಹೆಚ್ಚು ಪ್ರಮಾಣದಲ್ಲಿ ಒಳಗೊಂಡಿದೆ. ಗ್ರೀನ್ ಟೀ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆಯಂತಹ ಹಾರ್ಮೋನು ಸಮಸ್ಯೆಗಳನ್ನು ನಿವಾರಿಸುತ್ತದೆ.

ಸಾಮಾಗ್ರಿಗಳು:

  • 1 ಚಮಚ ಕಡಲೆ ಹಿಟ್ಟು
  • 1 ಚಮಚ ಗ್ರೀನ್ ಟೀ
  • 1 ಚಮಚ ಅರಶಿನ
  • ಮಾಡುವ ವಿಧಾನ

    * ಸಣ್ಣ ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಂಡು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.

    * ನಿಮ್ಮ ಕುತ್ತಿಗೆ, ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ

    * 20 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

    ಈ ಫೇಸ್ ಪ್ಯಾಕ್ ಅನ್ನು ನೀವು ಆಗಾಗ್ಗೆ ಬಳಸಿಕೊಳ್ಳಬಹುದಾಗಿದೆ.

    2.ಕಿತ್ತಳೆ ಸಿಪ್ಪೆ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಸಾಮಾನ್ಯ ತ್ವಚೆಗೆ

    2.ಕಿತ್ತಳೆ ಸಿಪ್ಪೆ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಸಾಮಾನ್ಯ ತ್ವಚೆಗೆ

    ಕಿತ್ತಳೆ ಸಿಪ್ಪೆಯು ಪ್ರಬಲ ಮೃತಕೋಶಗಳನ್ನು ನಿವಾರಿಸುವ ಅಂಶವನ್ನು ಹೊಂದಿದ್ದು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಇದರ ಜೊತೆಗೆ ಜೇನು ಬಳಸುವುದರಿಂದ ನಿಮ್ಮ ತ್ವಚೆಯು ಇನ್ನಷ್ಟು ಮೃದುವಾಗುತ್ತದೆ.

    ಸಾಮಾಗ್ರಿಗಳು

    • 1 ಚಮಚ ಗ್ರೀನ್ ಟೀ
    • 1 ಚಮಚ ಕಿತ್ತಳೆ ಸಿಪ್ಪೆ ಹುಡಿ
    • 1/2 ಚಮಚ ಜೇನು
    • ಮಾಡುವ ವಿಧಾನ

      * ಒಂದು ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬಳಸಿಕೊಂಡು ಮಿಶ್ರ ಮಾಡಿಕೊಳ್ಳಿ

      * ನಿಮ್ಮ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ಸ್ಕ್ರಬ್‌ನಂತೆ ಮಸಾಜ್ ಮಾಡಿ

      * ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

      ವಾರಕ್ಕೆ ಮೂರು ಬಾರಿ ಬಳಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಿ

      3. ಪುದೀನಾ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಸಾಮಾನ್ಯ ತ್ವಚೆಗಾಗಿ

      3. ಪುದೀನಾ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಸಾಮಾನ್ಯ ತ್ವಚೆಗಾಗಿ

      ಪುದೀನಾವು ತ್ವಚೆಯಲ್ಲಿರುವ ಯಾವುದೇ ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದ್ದು, ಇದು ತ್ವಚೆಯನ್ನು ತಾಜಾಗೊಳಿಸುವಲ್ಲಿ ನೆರವಾಗಲಿದೆ. ಈ ಫೇಸ್ ಪ್ಯಾಕ್‌ಗೆ ಜೇನನ್ನು ಬಳಸಬಹುದಾಗಿದೆ ಇದರಿಂದ ನಿಮ್ಮ ತ್ವಚೆ ಇನ್ನಷ್ಟು ಕಾಂತಿಯುಕ್ತವಾಗುತ್ತದೆ. ಜೊತೆಗೆ ಮೃದುವಾಗಿರಿಸುತ್ತದೆ.

      ಸಾಮಾಗ್ರಿಗಳು

      • * 3 ಚಮಚ ಗ್ರೀನ್ ಟೀ ಎಲೆಗಳು
      • * 2 ಚಮಚ ಪುದೀನಾ ಎಲೆಗಳು
      • 1 ಚಮಚ ಜೇನು
      • ಮಾಡುವ ವಿಧಾನ

        * ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಗೆ ಹಾಕಿಕೊಂಡು ಮೃದುವಾದ ಪೇಸ್ಟ್ ತಯಾರಿಸಿ

        * ನಿಮ್ಮ ಮುಖ, ಕತ್ತಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಮಸಾಜ್ ಮಾಡಿಕೊಳ್ಳಿ

        * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

        ವಾರದಲ್ಲಿ ಎರಡು ಬಾರಿ ಬಳಸಿ

        ಒಣ ತ್ವಚೆಗಾಗಿ ಗ್ರೀನ್ ಟೀ ಫೇಸ್‌ ಪ್ಯಾಕ್

        1. ಕ್ರೀಮ್ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಒಣ ತ್ವಚೆಗಾಗಿ

        1. ಕ್ರೀಮ್ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಒಣ ತ್ವಚೆಗಾಗಿ

        ಮುಚ್ಚಿಹೋಗಿರುವ ರಂಧ್ರಗಳನ್ನು ಸ್ವಚ್ಛಗೊಳಿಸುವುದು ಅವುಗಳನ್ನು ಬಿಗಿಗೊಳಿಸಿ ತ್ವಚೆಗೆ ಹೇಗೆ ಮೃದುತ್ವವವನ್ನು ಗ್ರೀನ್ ಟೀ ನೀಡುತ್ತದೆಯೋ ಇದರೊಂದಿಗೆ ಕೆನೆಯ ಅಂಶಗಳನ್ನು ಬಳಸುವುದರಿಂದ ನೈಸರ್ಗಿಕ ತೇವಾಂಶವನ್ನು ತ್ವಚೆಗೆ ಒದಗಿಸುತ್ತದೆ. ಇದರಲ್ಲಿ ಸಕ್ಕರೆಯನ್ನು ಬಳಸುವುದರಿಂದ ಮೃತ ಕೋಶಗಳನ್ನು ಸುಲಿದು ಹೋಗುವಂತೆ ಮಾಡಬಹುದಾಗಿದೆ. ಒಣ ತ್ವಚೆಯನ್ನು ಹೊಂದಿರುವವರಿಗೆ ಇದು ಅತಿ ಪ್ರಮುಖ ಸಮಸ್ಯೆಯಾಗಿದೆ.

        ಸಾಮಾಗ್ರಿಗಳು

        • 2 ಚಮಚ ಗ್ರೀನ್ ಟೀ
        • 1 ಚಮಚ ಕ್ರೀಮ್
        • 1 ಚಮಚ ಸಕ್ಕರೆ
        • ಮಾಡುವ ವಿಧಾನ

          * ಈ ಎಲ್ಲಾ ಸಾಮಾಗ್ರಿಗಳನ್ನು ಬಳಸಿಕೊಂಡು ಪೇಸ್ಟ್ ತಯಾರಿಸಿ

          * ನಿಮ್ಮ ಮುಖಕ್ಕೆ ಈ ಮಿಶ್ರಣ ಹಚ್ಚಿಕೊಳ್ಳಿ ಹಾಗೆಯೇ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ

          * ಹದಿನೈದು ನಿಮಿಷ ಈ ಪ್ಯಾಕ್ ನಿಮ್ಮ ಮುಖದಲ್ಲಿರಲಿ ನಂತರ ಮುಖವನ್ನು ತೊಳೆದುಕೊಳ್ಳಿ.

          ವಾರದಲ್ಲಿ ಮೂರು ಬಾರಿ ಈ ಪ್ಯಾಕ್ ಬಳಸಿ.

          2. ಜೇನು ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

          2. ಜೇನು ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

          ನೈಸರ್ಗಿಕ ತೇವಾಂಶವನ್ನು ಜೇನು ಒಳಗೊಂಡಿದ್ದು ಮುಖ ಮತ್ತು ತುಟೀ ಗೆ ಇದನ್ನು ಬಳಸುವಂತೆ ಆಯುರ್ವೇದದಲ್ಲಿ ಕೂಡ ತಿಳಿಸಲಾಗಿದೆ. ಒಣ ತ್ವಚೆ ಇರುವವರಿಗೆ ಇದನ್ನು ಹೆಚ್ಚು ಬಳಸುವಂತೆ ಶಿಫಾರಸು ಕೂಡ ಮಾಡಲಾಗಿದೆ. ಇದು ಮೃದುವಾದ ಅಂಶವನ್ನು ತನ್ನಲ್ಲಿ ಒಳಗೊಂಡಿದ್ದು, ಕಪ್ಪು ವರ್ತುಲಗಳನ್ನು ನಿವಾರಿಸಲು ಸಹಕಾರಿಯಾಗಿದೆ.

          ಸಾಮಾಗ್ರಿಗಳು

          • 1 ಚಮಚ ಗ್ರೀನ್ ಟೀ
          • 2 ಚಮಚ ಜೇನು
          • ಮಾಡುವ ವಿಧಾನ

            * ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ

            * ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿ

            * 20 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

            ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಇದನ್ನು ಬಳಸಿ

            3. ಅವೊಕಾಡೊ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಒಣತ್ವಚೆಗಾಗಿ

            3. ಅವೊಕಾಡೊ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಒಣತ್ವಚೆಗಾಗಿ

            ಅವೊಕಾಡೊ ಮತ್ತೊಂದು ಸೂಪರ್ ಫುಡ್ ಆಗಿದ್ದು, ಇದು ತ್ವಚೆಗೆ ಬೇಕಾದ ನ್ಯೂಟ್ರಿನ್‌ಗಳನ್ನು ಒಳಗೊಂಡಿದೆ. ಒಮೆಗಾ - 3 ಫ್ಯಾಟೀ ಆಸಿಡ್ ಅನ್ನು ಇದು ಹೊಂದಿದ್ದು, ಬಿ ವಿಟಮಿನ್‌ಗಳನ್ನು ಒಳಗೊಂಡಿದೆ. ಇದು ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸುತ್ತಿದ್ದು, ತ್ವಚೆಗೆ ಬೇಕಾದ ಪೋಷಣೆಯನ್ನು ಮಾಡುತ್ತದೆ.

            ಸಾಮಾಗ್ರಿಗಳು

            • 1 ಅವೊಕಾಡೊ
            • 2 ಚಮಚ ಗ್ರೀನ್ ಟೀ
            • ಮಾಡುವ ವಿಧಾನ

              * ಎಲ್ಲಾ ಮಿಶ್ರಣಗಳನ್ನು ಜೊತೆಯಾಗಿ ಬೆರೆಸಿಕೊಂಡು ಮೃದುವಾದ ಪೇಸ್ಟ್ ತಯಾರಿಸಿ

              * ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ

              * ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

              ವಾರಕ್ಕೆ ಎರಡು ಬಾರಿ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

              ಒಣ ತ್ವಚೆಗಾಗಿ ಗ್ರೀನ್ ಟೀ ಫೇಸ್ ಪ್ಯಾಕ್

              1. ಮುಲ್ತಾನಿ ಮಿಟ್ಟಿ, ಗ್ರೀನ್ ಟೀ ಫೇಸ್ ಪ್ಯಾಕ್ ಒಣ ತ್ವಚೆಗಾಗಿ

              1. ಮುಲ್ತಾನಿ ಮಿಟ್ಟಿ, ಗ್ರೀನ್ ಟೀ ಫೇಸ್ ಪ್ಯಾಕ್ ಒಣ ತ್ವಚೆಗಾಗಿ

              ವಯಸ್ಸಾಗುವಿಕೆಯನ್ನು ಮರೆಮಾಚುವ ಮುಲ್ತಾನಿ ಮಿಟ್ಟೀ ಉತ್ತಮ ಪೋಷಕಾಂಶಗಳ ಆಗರವಾಗಿದೆ. ಇದು ಮೃದುವಾದ ಪೋಷಣೆಯನ್ನು ತ್ವಚೆಗೆ ಮಾಡಿ ತ್ವಚೆಯಲ್ಲಿರುವ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

              ಸಾಮಾಗ್ರಿಗಳು

              • 1 ಚಮಚ ಮುಲ್ತಾನಿ ಮಿಟ್ಟೀ
              • 1 ಚಮಚ ಗ್ರೀನ್ ಟೀ
              • ಮಾಡುವ ವಿಧಾನ

                * ಮೊದಲಿಗೆ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಮೃದು ಪೇಸ್ಟ್ ತಯಾರಿಸಿಕೊಳ್ಳಿ.

                * ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ

                * ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ ಸಂಪೂರ್ಣ ಒಣಗಲು ಬಿಡಿ.

                * ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ.

                2. ಲಿಂಬೆ ರಸ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಎಣ್ಣೆ ತ್ವಚೆಗಾಗಿ

                2. ಲಿಂಬೆ ರಸ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್ ಎಣ್ಣೆ ತ್ವಚೆಗಾಗಿ

                ಮೊಡವೆಯನ್ನು ತುಂಡಾಗಿಸಲು ಕಾರಣವಾಗಿರುವ ಸೇಬಮ್ ಉತ್ಪಾದನೆಯನ್ನು ಲಿಂಬೆ ರಸ ತಡೆಯುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಸಿ ಇದರಲ್ಲಿದ್ದು ಕೊಲಜನ್ ಉತ್ಪಾದನೆಯನ್ನು ಇದು ಕಡಿಮೆ ಮಾಡುತ್ತದೆ ಹಾಗೂ ನಿತ್ಯದ ಬಳಕೆಯಿಂದ ಇದು ತ್ವಚೆಗೆ ಕಾಂತಿಯನ್ನುಂಟು ಮಾಡುತ್ತದೆ.

                ಸಾಮಾಗ್ರಿಗಳು

                • 1 ಚಮಚ ಗ್ರೀನ್ ಟೀ ಎಲೆಗಳು
                • 1 ಚಮಚ ಲಿಂಬೆ ರಸ
                • ಮಾಡುವ ವಿಧಾನ

                  * ಎಲ್ಲಾ ಸಾಮಾಗ್ರಿಗಳನ್ನು ಮೃದುವಾದ ಪೇಸ್ಟ್ ಮಾಡಿಕೊಳ್ಳಿ

                  * ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿ, ಮಸಾಜ್ ಮಾಡಿಕೊಳ್ಳಿ

                  * ಹತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                  ವಾರಕ್ಕೊಮ್ಮೆ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

                  3. ಅಕ್ಕಿ ಹುಡಿ, ಗ್ರೀನ್ ಟೀ ಫೇಸ್ ಪ್ಯಾಕ್ ಜಿಡ್ಡಿನ ತ್ವಚೆಗಾಗಿ

                  3. ಅಕ್ಕಿ ಹುಡಿ, ಗ್ರೀನ್ ಟೀ ಫೇಸ್ ಪ್ಯಾಕ್ ಜಿಡ್ಡಿನ ತ್ವಚೆಗಾಗಿ

                  ತ್ವಚೆಯಲ್ಲಿರುವ ಎಣ್ಣೆಯ ಅಂಶವನ್ನು ಹೀರಿಕೊಳ್ಳಲು ಅಕ್ಕಿ ಹುಡಿ ಸೂಕ್ತವಾಗಿದೆ. ಮತ್ತು ಇದು ತ್ವಚೆಯ ಮಸಾಜ್ ಅನ್ನು ಮಾಡುತ್ತದೆ. ಇದರೊಂದಿಗೆ ಲಿಂಬೆ ರಸವನ್ನು ಬಳಸಿಕೊಂಡು ನಿಮ್ಮ ಫೇಸ್ ಪ್ಯಾಕ್‌ಗೆ ಇನ್ನಷ್ಟು ಪೋಷಕಾಂಶಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಕಪ್ಪು ವರ್ತುಲಗಳನ್ನು ಈ ಫೇಸ್ ಪ್ಯಾಕ್ ನಿವಾರಿಸುತ್ತದೆ.

                  ಸಾಮಾಗ್ರಿಗಳು

                  • 2 ಚಮಚ ಅಕ್ಕಿ ಹುಡಿ
                  • 1 ಚಮಚ ಗ್ರೀನ್ ಟೀ
                  • 1 ಚಮಚ ಲಿಂಬೆ ರಸ
                  • ಮಾಡುವ ವಿಧಾನ

                    * ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಮೃದು ಪೇಸ್ಟ್ ತಯಾರಿಸಿಕೊಳ್ಳಿ

                    * ನಿಮ್ಮ ಮುಖ, ಕತ್ತಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ

                    * ಹದಿನೈದು ನಿಮಿಷ ಹಾಗೆಯೆ ಬಿಟ್ಟು ಒಣಗಿದ ನಂತರ ಮುಖವನ್ನು ತೊಳೆದುಕೊಳ್ಳಿ.

                    ವಾರದಲ್ಲಿ ಎರಡು ಬಾರಿ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

                    ಎಲ್ಲಾ ತ್ವಚೆಯ ಪ್ರಕಾರಗಳಿಗಾಗಿ ಗ್ರೀನ್ ಟೀ ಫೇಸ್ ಪ್ಯಾಕ್

                    1. ಯೋಗರ್ಟ್, ಗ್ರೀನ್ ಟೀ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗಳಿಗಾಗಿ

                    1. ಯೋಗರ್ಟ್, ಗ್ರೀನ್ ಟೀ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗಳಿಗಾಗಿ

                    ಸೂರ್ಯನಿಂದ ಹಾನಿಗೊಳಗಾದ ನಿಮ್ಮ ತ್ವಚೆಗೆ ಸಂರಕ್ಷಣೆಯನ್ನು ನೀಡಿ ಮುಖವನ್ನು ತಾಜಾಗೊಳಿಸುವಲ್ಲಿ ಯೋಗರ್ಟ್ ಅತ್ಯುತ್ತಮವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ತನ್ನಲ್ಲಿ ಹೊಂದಿದ್ದು, ಇದರೊಂದಿಗೆ ಲಿಂಬೆ ರಸವನ್ನು ಬಳಸಿಕೊಳ್ಳುವುದರಿಂದ ನಿಮ್ಮ ತ್ವಚೆಗೆ ದುಪ್ಪಟ್ಟು ಲಾಭವಿದೆ. ಸೂಕ್ಷ್ಮ ತ್ವಚೆಗಾಗಿ ಇದು ಹೇಳಿಮಾಡಿಸಿದ ಫೇಸ್ ಪ್ಯಾಕ್ ಆಗಿದೆ.

                    ಸಾಮಾಗ್ರಿಗಳು

                    • 1 ಚಮಚ ಮೊಸರು
                    • 1 ಚಮಚ ಲಿಂಬೆ ರಸ
                    • 1 ಚಮಚ ಗ್ರೀನ್ ಟೀ
                    • ಮಾಡುವ ವಿಧಾನ

                      * ಮೃದುವಾದ ಮಿಶ್ರಣ ದೊರೆಯುವವರೆಗೆ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ

                      * ನಿಮ್ಮ ಮುಖ ಕುತ್ತಿಗೆಗೆ ಈ ಪ್ಯಾಕ್ ಹಚ್ಚಿಕೊಳ್ಳಿ

                      * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                      ವಾರಕ್ಕೆ ಎರಡು ಬಾರಿ ಹಚ್ಚಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

                      2. ಬಾಳೆಹಣ್ಣು, ಗ್ರೀನ್ ಟೀ ಫೇಸ್ ಪ್ಯಾಕ್

                      2. ಬಾಳೆಹಣ್ಣು, ಗ್ರೀನ್ ಟೀ ಫೇಸ್ ಪ್ಯಾಕ್

                      ಪೊಟಾಶಿಯಮ್ ಬಿ ವಿಟಮಿನ್‌ಗಳನ್ನು ಇದು ಒಳಗೊಂಡಿದ್ದು, ತ್ವಚೆಯ ಮೃದುತ್ವವನ್ನು ಉತ್ತಮಗೊಳಿಸುತ್ತದೆ. ಹಾಗೂ ಹೈಡ್ರೇಟ್ ಮಾಡುತ್ತದೆ. ಬಾಳೆಹಣ್ಣು ಗ್ರೀನ್ ಟೀ ಯ ಫೇಸ್ ಪ್ಯಾಕ್ ತ್ವಚೆಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮೃತ ಕೋಶವನ್ನು ನಿವಾರಿಸುತ್ತದೆ.

                      ಸಾಮಾಗ್ರಿಗಳು

                      • 1 ಬಾಳೆಹಣ್ಣು, ಹಿಸುಕೊಳ್ಳಿ
                      • 2 ಚಮಚ ಗ್ರೀನ್ ಟೀ
                      • ಮಾಡುವ ವಿಧಾನ

                        * ಮೊದಲಿಗೆ ಬಾಳೆಹಣ್ಣು, ಗ್ರೀನ್ ಟೀ ಯ ಮಿಶ್ರಣ ಮಾಡಿಕೊಳ್ಳಿ

                        * ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿ

                        * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                        ವಾರದಲ್ಲಿ ಎರಡು ಬಾರಿ ಬಳಸಿ ಉತ್ತಮ ಫಲಿತಾಂಶ ಪಡೆದುಕೊಳ್ಳಿ.

                        3. ಕಡಲೆ ಹಿಟ್ಟು, ಗ್ರೀನ್ ಟೀ ಫೇಸ್ ಪ್ಯಾಕ್

                        3. ಕಡಲೆ ಹಿಟ್ಟು, ಗ್ರೀನ್ ಟೀ ಫೇಸ್ ಪ್ಯಾಕ್

                        ಕಡಲೆ ಹಿಟ್ಟು ಮೃದುವಾದ ಮಸಾಜ್ ಅನ್ನು ತ್ವಚೆಗೆ ಮಾಡಲಿದ್ದು ತ್ವಚೆಯಲ್ಲಿರುವ ಎಣ್ಣೆಯನ್ನು ಹೊರಹಾಕುತ್ತದೆ ಜೊತೆಗೆ ತ್ವಚೆಯನ್ನು ಕಾಂತಿಯುಕ್ತವಾಗಿಸುತ್ತದೆ. ಕಡಲೆ ಹಿಟ್ಟಿಗೆ ಲಿಂಬೆ ರಸವನ್ನು ಬೆರೆಸುವುದು ಕಪ್ಪು ವರ್ತುಲಗಳನ್ನು ದೂರ ಮಾಡುತ್ತದೆ.

                        ಸಾಮಾಗ್ರಿಗಳು

                        • 1 ಚಮಚ ಗ್ರೀನ್ ಟೀ
                        • 1 ಚಮಚ ಲಿಂಬೆ ರಸ
                        • 1 ಚಮಚ ಕಡಲೆ ಹಿಟ್ಟು
                        • ಮಾಡುವ ವಿಧಾನ

                          * ನಿಮಗೆ ಮೃದು ಪೇಸ್ಟ್ ದೊರಕುವವರೆಗೆ ಇವುಗಳನ್ನು ಕಲಸಿಕೊಳ್ಳಿ

                          * ನಿಮ್ಮ ಮುಖ ಹಾಗೂ ಕತ್ತಿಗೆ ಇದನ್ನು ಹಚ್ಚಿ

                          * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                          ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ.

                          ಸೌತೆಕಾಯಿ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                          ಸೌತೆಕಾಯಿ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                          ನಿಮ್ಮ ಕಣ್ಣಿನ ಕಪ್ಪು ವರ್ತುಲಗಳನ್ನು ನಿವಾರಿಸಲು, ಕಣ್ಣು ಉರಿಯುವುದನ್ನು ಕಡಿಮೆ ಮಾಡಲು ಮುಳ್ಳು ಸೌತೆಯ ಉಪಯೋಗವನ್ನು ಹೆಚ್ಚಿನವರು ಮಾಡಿರುತ್ತೀರಿ. ಇದು ನಿಮ್ಮ ತ್ವಚೆಗೂ ಕಮಾಲಿನದ್ದಾಗಿದೆ. ಸೇಬಮ್ ಉತ್ಪಾದನೆಯನ್ನು ಇದು ಕಡಿಮೆ ಮಾಡುತ್ತದೆ.

                          ಸಾಮಾಗ್ರಿಗಳು

                          • 2 ಚಮಚ ಗ್ರೀನ್ ಟೀ
                          • 2 ಚಮಚ ಸೌತೆಕಾಯಿ ರಸ
                          • ಮಾಡುವ ವಿಧಾನ

                            ಎರಡನ್ನೂ ಬೆರೆಸಿ ಮಿಶ್ರ ಮಾಡಿಕೊಳ್ಳಿ

                            ತ್ವಚೆಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ

                            ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

                            ಪ್ರತೀ ರಾತ್ರಿ ಬಳಸಿ

                            5. ಓಟ್ಸ್, ಹಾಲು ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                            5. ಓಟ್ಸ್, ಹಾಲು ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                            ನಿಮ್ಮದು ಒಣ ತ್ವಚೆಯಾಗಿದಲ್ಲಿ ಈ ಫೇಸ್ ಪ್ಯಾಕ್ ಹೇಳಿಮಾಡಿಸಿದ್ದಾಗಿದೆ. ಓಟ್ಸ್ ತ್ವಚೆಗೆ ಮೃದುವಾದ ಅಂಶವನ್ನು ಪೂರೈಕೆ ಮಾಡಲಿದ್ದು, ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ಮೃತಕೋಶಗಳನ್ನು ನಿವಾರಿಸುತ್ತದೆ.

                            ಸಾಮಾಗ್ರಿಗಳು

                            • 1 ಚಮಚ ಗ್ರೀನ್ ಟೀ ಎಲೆಗಳು
                            • 3 ಚಮಚ ಹಾಲು
                            • 1/2 ಚಮಚ ಓಟ್ಸ್
                            • ಮಾಡುವ ವಿಧಾನ

                              * ಗ್ರೀನ್ ಟೀ ಎಲೆಗಳು ಮತ್ತು ಓಟ್ಸ್ ಅನ್ನು ಹಾಲಿನಲ್ಲಿ ನೆನೆಸಿ

                              * ಓಟ್ಸ್ ಮೃದುವಾದ ಕೂಡಲೇ ಅದನ್ನು ಹಿಸುಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

                              * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ಮುಖ ತೊಳೆದುಕೊಳ್ಳಿ.

                              ವಾರಕ್ಕೆ ಎರಡು ಬಾರಿ ಬಳಸಿ ನೋಡಿ

                              6. ಮೊಟ್ಟೆಯ ಬಿಳಿ ಭಾಗ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                              6. ಮೊಟ್ಟೆಯ ಬಿಳಿ ಭಾಗ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್

                              ಪ್ರೊಟೀನ್ ಅನ್ನು ಹೆಚ್ಚು ಹೊಂದಿರುವ ಮೊಟ್ಟೆ, ಕೊಲೆಜನ್ ನಿವಾರಿಸಿ ತ್ವಚೆಯನ್ನು ಬಿಗಿಗೊಳಿಸುತ್ತದೆ. ಈ ಗ್ರೀನ್ ಟೀ ಫೇಸ್ ಪ್ಯಾಕ್ ನೆರಿಗೆಗೆ ಉತ್ತಮ ಔಷಧವಾಗಿದೆ. ಮುಖದ ಕಪ್ಪು ಕಲೆಗಳು, ಮೊಡವೆ, ತುರಿಕೆಯನ್ನು ನಿವಾರಿಸುತ್ತದೆ.

                              ಸಾಮಾಗ್ರಿಗಳು

                              • 1 ಚಮಚ ಮೊಟ್ಟೆಯ ಬಿಳಿಭಾಗ
                              • 1 ಚಮಚ ಗ್ರೀನ್ ಟೀ ಎಲೆಗಳು
                              • ಮಾಡುವ ವಿಧಾನ

                                * ಗ್ರೀನ್ ಟೀ ಎಲೆಗಳನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಬೆರೆಸಿ ಮಿಶ್ರ ಮಾಡಿಕೊಳ್ಳಿ

                                * ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿ

                                * ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

                                ವಾರದಲ್ಲಿ ಎರಡು ಬಾರಿ ಈ ಫೇಸ್ ಪ್ಯಾಕ್ ಬಳಸಿ

English summary

Green Tea Face Packs For Various Skin Types

Green teas are rich in antioxidants and minerals that slow down the ageing process, bring out the natural glow of our skin and are anti-inflammatory. They reduce puffiness and dark circles around our eyes and boost the supply of collagen, which is essential for a healthy skin. Listed below are a few green tea face packs for glowing skin, according to one's skin type.
X
Desktop Bottom Promotion