ಮುಖ ತೊಳೆಯುವಾಗ ಇಂತಹ 10 ತಪ್ಪುಗಳನ್ನು ಮಾಡಲೇಬೇಡಿ!

Posted By: Hemanth Amin
Subscribe to Boldsky

ಸೌಂದರ್ಯವಿರುವುದು ಮುಖದಲ್ಲಿ ಎನ್ನುವುದು ಎಷ್ಟು ನಿಜವೋ. ಆ ಮುಖದ ಕಾಂತಿಗೆ ಕಾರಣವಾಗಿರುವ ಚರ್ಮದ ಆರೈಕೆ ಕೂಡ ಅತೀ ಅಗತ್ಯ. ಮುಖದ ಮೇಲೆ ಧೂಳು, ಹೊರಗಿನ ಕಲ್ಮಶ ಇತ್ಯಾದಿ ತುಂಬಿಕೊಳ್ಳುತ್ತದೆ. ಇದರಿಂದ ಹೆಚ್ಚಿನವರು ಪದೇ ಪದೇ ಕ್ಲೆನ್ಸರ್, ಸ್ಕ್ರಬ್, ಫೇಸ್ ವಾಶ್ ಮೂಲಕ ಮುಖ ತೊಳೆಯುತ್ತಾರೆ. ಇದು ತುಂಬಾ ಸುಲಭವೆಂದು ನಿಮಗನಿಸಬಹುದು. ಆದರೆ ಇದನ್ನು ಸರಿಯಾಗಿ ಮಾಡದೆ ಇದ್ದರೆ ಅದು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು.

ಮುಖದ ಸರಿಯಾಗಿ ತೊಳೆಯದೇ ಹೋದರೆ ಆಗ ಮೊಡವೆಗಳು ಕಾಣಿಸಿಕೊಳ್ಳುವುದು ಮಾತ್ರವಲ್ಲದೆ, ಇತರ ಹಲವಾರು ಸಮಸ್ಯೆಗಳು ಉಂಟು ಮಾಡಬಹುದು. ಹೆಚ್ಚಿನವರು ಚರ್ಮದ ಆರೋಗ್ಯಕ್ಕೆ ಹಾನಿಯಾಗುವಂತಹ ಮುಖ ತೊಳೆಯುವ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ನಿಮಗೆ ತಿಳಿಯದೆ ಇರುವಂತೆ ಆ ತಪ್ಪುಗಳು ನಡೆಯುತ್ತಿರಬಹುದು. ಅದು ಯಾವುದೆಂದು ತಿಳಿಯಲು ನಿಮಗೆ ಹೆಚ್ಚು ಕುತೂಹಲವಾಗುತ್ತಾ ಇದ್ದರೆ ಬೋಲ್ಡ್ ಸ್ಕೈ ಈ ಲೇಖನ ಮೂಲಕ ಅದನ್ನು ನಿಮಗೆ ತಿಳಿಸಿಕೊಡಲಿದೆ. ಮುಖ ತೊಳೆಯುವಾಗ ನೀವು ಮಾಡುವಂತಹ ತಪ್ಪುಗಳನ್ನು ತಿಳಿದುಕೊಂಡು ಅದನ್ನು ತಿದ್ದಿಕೊಳ್ಳಿ...  

ಬಿಸಿ ನೀರು ಬಳಸುವುದು

ಬಿಸಿ ನೀರು ಬಳಸುವುದು

ಬಿಸಿ ನೀರು ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯಂಶವನ್ನು ತೆಗೆದು ಹಾಕುವುದು. ಇದರಿಂದ ಚರ್ಮವು ಒಣ ಹಾಗೂ ನಿರ್ಜಲೀಕರಣ ಉಂಟಾಗುವುದು. ಹೆಚ್ಚಿನ ಮಹಿಳೆಯರು ಮುಖ ತೊಳೆಯಲು ಬಿಸಿ ನೀರು ಬಳಸುವರು. ಆದರೆ ಇದಕ್ಕೆ ಬದಲಿಗೆ ಉಗುರು ಬೆಚ್ಚಗಿನ ನೀರು ಬಳಸಿದರೆ ಹಾನಿ ತಡೆಯಬಹುದು.

ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?

ಚರ್ಮಕ್ಕೆ ಅನುಗುಣವಾಗಿ ಕ್ಲೆನ್ಸರ್ ಬಳಸದೆ ಇರುವುದು

ಚರ್ಮಕ್ಕೆ ಅನುಗುಣವಾಗಿ ಕ್ಲೆನ್ಸರ್ ಬಳಸದೆ ಇರುವುದು

ಪ್ರತಿಯೊಬ್ಬರ ಚರ್ಮವು ಒಂದೊಂದು ರೀತಿಯಾಗಿರುವುದು. ಅದಕ್ಕೆ ಅನುಗುಣವಾಗಿ ಚರ್ಮದ ಆರೈಕೆಯ ಉತ್ಪನ್ನಗಳನ್ನು ಬಳಸುವುದು ಅತೀ ಅಗತ್ಯ. ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಫೇಶಿಯಲ್ ವಾಶ್, ಕ್ಲೆನ್ಸರ್ ಮತ್ತು ಸ್ಕ್ರಬ್ ಬಳಸಿ. ಹೀಗೆ ಮಾಡದೆ ಇದ್ದರೆ ಅದರಿಂದ ಚರ್ಮದ ವಿನ್ಯಾಸದ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಸಮಸ್ಯೆಗೆ ಕಾರಣವಾಗಬಹುದು.

ಕೊಳಕು ಕೈಗಳನ್ನು ಬಳಸುವುದು

ಕೊಳಕು ಕೈಗಳನ್ನು ಬಳಸುವುದು

ಫೇಶಿಯಲ್ ವಾಶ್ ನ್ನು ಹಾಕಿಕೊಳ್ಳಲು ಕೊಳಕು ಕೈಗಳನ್ನು ಬಳಸಿ ಕೊಳ್ಳುವುದರಿಂದಲೂ ಅದು ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಕೈಯು ತುಂಬಾ ಕಲ್ಮಶಗಳನ್ನು ಮುಟ್ಟಿರುವ ಕಾರಣದಿಂದಾಗಿ ನೀವು ಚರ್ಮವನ್ನು ತೊಳೆಯುವ ಮೊದಲು ಕೈ ತೊಳೆಯಿರಿ. ಮುಖ ತೊಳೆಯುವಾಗ ನಿಮ್ಮ ಚರ್ಮಕ್ಕೆ ಹಾನಿಯಾಗುವಂತಹ ತಪ್ಪನ್ನು ಮಾಡಲು ಹೋಗಬೇಡಿ.

 ಕ್ಲೆನ್ಸರ್ ಅನ್ನು ಸರಿಯಾಗಿ ಹಚ್ಚದೆ ಇರುವುದು

ಕ್ಲೆನ್ಸರ್ ಅನ್ನು ಸರಿಯಾಗಿ ಹಚ್ಚದೆ ಇರುವುದು

ಕ್ಲೆನ್ಸರ್ ನ್ನು ಹೆಚ್ಚಿನವರು ತುಂಬಾ ಕಠಿಣವಾಗಿ ಹಚ್ಚಿಕೊಳ್ಳುವರು. ಇದು ಚರ್ಮಕ್ಕೆ ತುಂಬಾ ಹಾನಿ ಉಂಟು ಮಾಡಲಿದೆ. ತುಂಬಾ ಗಡುಸಾಗಿ ಕ್ಲೆನ್ಸರ್ ಅನ್ನು ಹಚ್ಚಿಕೊಳ್ಳುವ ಬದಲು ನಿಮ್ಮ ಚರ್ಮಕ್ಕೆ ಹಾನಿಯಾಗದಂತೆ ನಯವಾಗಿ ಹಚ್ಚಿ.

ಪದೇ ಪದೇ ಮುಖ ತೊಳೆಯುವುದು

ಪದೇ ಪದೇ ಮುಖ ತೊಳೆಯುವುದು

ದಿನದಲ್ಲಿ ಎರಡು ಸಲ ಮಾತ್ರ ಮುಖ ತೊಳೆಯುವುದು ಒಳ್ಳೆಯದು. ಆದರೆ ಕೆಲವರು ತುಂಬಾ ಸಲ ಮುಖ ತೊಳೆದುಕೊಳ್ಳುವರು. ಇದರಿಂದ ಚರ್ಮದ ನೈಸರ್ಗಿಕ ಎಣ್ಣೆಯು ಕಿತ್ತುಹೋಗಿ, ಒಣ ಹಾಗೂ ಪದರಗಳು ಏಳುವ ಚರ್ಮ ಉಂಟಾಗುವುದು. ಇದನ್ನು ತಡೆಯಲು ದಿನದಲ್ಲಿ ಎರಡು ಸಲ ಮಾತ್ರ ಮುಖ ತೊಳೆಯಿರಿ. ಒಂದು ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು.

ಒಂದೇ ಕ್ಲೆನ್ಸರ್ ಅನ್ನು ತಿಂಗಳುಗಟ್ಟಲೆ ಬಳಸುವುದು

ಒಂದೇ ಕ್ಲೆನ್ಸರ್ ಅನ್ನು ತಿಂಗಳುಗಟ್ಟಲೆ ಬಳಸುವುದು

ಚರ್ಮದ ತಜ್ಞರ ಪ್ರಕಾರ ತಿಂಗಳಿಗೊಮ್ಮೆಯಾದರೂ ಕ್ಲೆನ್ಸರ್ ನ್ನು ಬದಲಾಯಿಸಬೇಕಂತೆ. ಯಾಕೆಂದರೆ ಒಂದೇ ಕ್ಲೆನ್ಸರ್ ಬಳಸಿದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗುವುದು ಮತ್ತು ಅದು ಚರ್ಮಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದು ಮಾಡುವುದು. 2-3 ತಿಂಗಳಿಗೆ ಒಮ್ಮೆಯಾದರೂ ಕ್ಲೆನ್ಸರ್ ಬದಲಾಯಿಸಿ.

ಅತಿಯಾಗಿ ಸುಲಿತ

ಅತಿಯಾಗಿ ಸುಲಿತ

ಸುಲಿತವು ತುಂಬಾ ಮುಖ್ಯ. ಆದರೆ ಇದನ್ನು ಅತಿಯಾಗಿ ಮಾಡುವುದರಿಂದ ಅದು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಸುಲಿತವು ಸತ್ತ ಚರ್ಮದ ಕೋಶ ಮತ್ತು ವಿಷವನ್ನು ಹೊರಹಾಕುವುದು. ಆದರೆ ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ಹೀಗೆ ಮಾಡಿದರೆ ಇದು ವ್ಯತಿರಿಕ್ತ ಪರಿಣಾಮ ಬೀರುವುದು ಮತ್ತು ಮೊಡವೆ ಉಂಟು ಮಾಡಬಹುದು.

ಸರಿಯಾಗಿ ತೊಳೆಯದೆ ಇರುವುದು

ಸರಿಯಾಗಿ ತೊಳೆಯದೆ ಇರುವುದು

ಕ್ಲೆನ್ಸರ್ ನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ಅದನ್ನು ಸರಿಯಾಗಿ ತೊಳೆಯುವುದು ಕೂಡ ಅತೀ ಅಗತ್ಯ. ರಾಸಾಯನಿಕಗಳನ್ನು ಒಳಗೊಂಡಿರುವ ಕ್ಲೆನ್ಸರ್ ನ್ನು ಸರಿಯಾಗಿ ತೊಳೆಯದೆ ಇದ್ದರೆ ಅದರಿಂದ ಪದರ ನಿರ್ಮಾಣವಾಗಿ ಮುಖದ ಕಾಂತಿ ಕಳೆದುಹೋಗಬಹುದು.

 ಒಣ ಚರ್ಮ ಉಜ್ಜಿಕೊಳ್ಳುವುದು

ಒಣ ಚರ್ಮ ಉಜ್ಜಿಕೊಳ್ಳುವುದು

ಕ್ಲೆನ್ಸರ್ ಹಾಕಿ ತೊಳೆದ ಬಳಿಕ ಒಣ ಚರ್ಮವನ್ನು ಉಜ್ಜಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಈಗಲೇ ನಿಲ್ಲಿಸಿಬಿಡಿ. ಒಣ ಚರ್ಮವನ್ನು ಉಜ್ಜುವುದರಿಂದ ಅದು ಚರ್ಮದ ಆರೋಗ್ಯ ಮತ್ತು ಕಾಂತಿಯ ಮೇಲೆ ಪರಿಣಾಮ ಬೀರಬಹುದು. ಉಜ್ಜುವ ಬದಲು ನಯವಾದ ಟವೆಲ್ ಬಳಸಿ ಮುಖವನ್ನು ಒರೆಸಿಕೊಳ್ಳಿ.

ಮಾಯಿಶ್ಚರೈಸರ್ ಹಚ್ಚುವ ಮೊದಲು ದೀರ್ಘ ಸಮಯ ತೆಗೆದುಕೊಳ್ಳುತ್ತೀರಾ

ಮಾಯಿಶ್ಚರೈಸರ್ ಹಚ್ಚುವ ಮೊದಲು ದೀರ್ಘ ಸಮಯ ತೆಗೆದುಕೊಳ್ಳುತ್ತೀರಾ

ಮುಖ ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡರೆ ಅದರಿಂದ ತುಂಬಾ ಹಾನಿಯಾಗುವುದು. ಮುಖವನ್ನು ಸರಿಯಾಗಿ ತೊಳೆದ ಬಳಿಕ ಚರ್ಮದ ರಂಧ್ರಗಳು ತೆಗೆದುಕೊಳ್ಳುವುದು. ಈ ವೇಳೆ ಧೂಳು ಹಾಗೂ ಕಲ್ಮಷ ಅದರೊಳಗೆ ಹೋಗದಂತೆ ತಡೆಯಲು ಮಾಯಿಶ್ಚರೈಸರ್ ನ್ನು ಬೇಗನೆ ಹಚ್ಚಿಕೊಳ್ಳಿ.

English summary

10 Face-washing Mistakes That Could Be Damaging Your Skin

ashing your face may seem like the easiest part of the skincare routine. You just have to apply the cleanser, scrub and rinse, right? However, it is not as simple as it seems and not doing it correctly can cause a damage to your skin.From unappealing breakouts to flakiness, there are tons of terrible things that can happen to your face if you do not wash it properly. Read on to know more about the common face-washing mistakes here....