ಬ್ಯೂಟಿ ಟಿಪ್ಸ್: ಮುಖದ ಹಾಗೂ ಕೂದಲಿನ ಆರೈಕೆಗೆ 'ಆಲೂಗಡ್ಡೆ ಜ್ಯೂಸ್'

By: Hemanth
Subscribe to Boldsky

ತರಕಾರಿಗಳಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ಮಾತ್ರ ಲಾಭ ನೀಡುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಪ್ರತಿಯೊಂದು ತರಕಾರಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ನಮ್ಮ ತ್ವಚೆ ಹಾಗೂ ಕೂದಲಿಗೆ ತುಂಬಾ ಉಪಯೋಗಕಾರಿ. ಇದರ ಬಗ್ಗೆ ಕೆಲವರಿಗೆ ತಿಳಿದಿದ್ದರೂ ಇದನ್ನು ಬಳಸುವುದು ಹೇಗೆ ಎನ್ನುವ ಪ್ರಶ್ನೆ ಅವರಲ್ಲಿ ಕಾಡುತ್ತಾ ಇರುತ್ತದೆ.

ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿ ಆರೋಗ್ಯದೊಂದಿಗೆ ತ್ವಚೆ ಹಾಗೂ ಕೂದಲಿಗೆ ಲಾಭ ನೀಡುವ ಬಟಾಟೆಯ ಜ್ಯೂಸ್ ಅನ್ನು ಬಳಸಿಕೊಳ್ಳುವ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಿಕೊಡಲಿದೆ. ಹಲವಾರು ಖಾದ್ಯಗಳನ್ನು ಮಾಡುವಂತಹ ಆಲೂಗಡ್ಡೆಯಲ್ಲಿ ತ್ವಚೆ ಹಾಗೂ ಕೂದಲಿಗೆ ಹೇಗಪ್ಪಾ ಬಳಸಿಕೊಳ್ಳುವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರದು.

ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸಿಕೊಡುವ ಆಲೂಗಡ್ಡೆಯಲ್ಲಿ ಕೂದಲು ಹಾಗೂ ತ್ವಚೆಗೆ ಬೇಕಾಗಿರುವಂತಹ ಪೋಷಕಾಂಶಗಳು ಕೂಡ ಇದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅದರ ಲಾಭ ಪಡೆಯಬಹುದು. ಬನ್ನಿ ಆಲೂಗಡ್ಡೆ ಜ್ಯೂಸ್‌ನಿಂದ ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯ ಲಾಭವಾಗಲಿದ ಎಂದು ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.....

ಮುಖದದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ

ಮುಖದದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ

ಒಂದು ಆಲುಗಡ್ಡೆಯನ್ನು ಬೇಯಿಸಿ ಇದನ್ನು ಕಿವುಚಿ ಮತ್ತೆ ನೀರಿಗೆ ಬೆರೆಸಿ ಚೆನ್ನಾಗಿ ಕಲಕಿ ಮತ್ತೊಮ್ಮೆ ಕುದಿಸಿ. ಈ ನೀರು ತಣಿದ ಬಳಿಕ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಸಮಪ್ರಮಾಣದಲ್ಲಿ ಹಸಿ ಹಾಲನ್ನು ಬೆರೆಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಲ್ಲಿ ಹತ್ತಿಯುಂಡೆಯನ್ನು ಅದ್ದಿ ಮುಖದ ಚರ್ಮಕ್ಕೆ ನವಿರಾಗಿ ಹಚ್ಚಿ ಹತ್ತು ಅಥವಾ ಹದಿನೈದು ನಿಮಿಶ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಕಡಿಮೆ ವಯಸ್ಸಿನಲ್ಲಿಯೇ ಎದುರಾದ ನೆರಿಗೆಗಳನ್ನು ನಿವಾರಿಸಬಹುದು.

ಕಲೆಗಳ ನಿವಾರಣೆ

ಕಲೆಗಳ ನಿವಾರಣೆ

ಟಿವಿ ಜಾಹೀರಾತುಗಳಲ್ಲಿ ಬರುವಂತಹ ಕ್ರೀಮ್ ಗಳನ್ನು ಬಳಸಿ ಕಲೆ ನಿವಾರಣೆ ಮಾಡುವ ನಿಮ್ಮ ಕನಸು ನನಸಾಗದೆ ಇರಬಹುದು. ಆದರೆ ಅಡುಗೆ ಮನೆಯಲ್ಲಿ ಸಿಗುವ ಸಾಮಗ್ರಿಯನ್ನು ಬಳಸಿ ತುಂಬಾ ಪರಿಣಾಮಕಾರಿಯಾಗಿ ಕಲೆ ನಿವಾರಣೆ ಮಾಡಬಹುದು. ಆಲೂಗಡ್ಡೆ ಜ್ಯೂಸ್ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡಲಿದೆ. ಇದಕ್ಕಾಗಿ ತಾಜಾ ಆಲೂಗಡ್ಡೆಯ ಜ್ಯೂಸ್ ತೆಗೆದು ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ ಎರಡು ಸಲ ತಂಪಾಗಿರುವ ಈ ಜ್ಯೂಸ್ ಅನ್ನು ಭಾದಿತ ಪ್ರದೇಶಕ್ಕೆ ಹಚ್ಚಿ.

ಎಣ್ಣೆತ್ವಚೆಯ ಸಮಸ್ಯೆಯಿದ್ದರೆ

ಎಣ್ಣೆತ್ವಚೆಯ ಸಮಸ್ಯೆಯಿದ್ದರೆ

ಒಂದು ವೇಳೆ ನಿಮ್ಮ ತ್ವಚೆ ಎಣ್ಣೆತ್ವಚೆಯಾಗಿದ್ದರೆ ಹಸಿ ಆಲುಗಡ್ಡೆ (ಸಿಪ್ಪೆ ಸಹಿತ) ಯಿಂದ ಸಂಗ್ರಹಿಸಿದ ಕಾಲುಕಪ್ ರಸ ಮತ್ತು ಕಾಲು ಕಪ್ ಟೊಮೇಟೊ ತಿರುಳನ್ನು ಅರೆದು ತೆಗೆದ ರಸವನ್ನು ಸೇರಿಸಿ ಮಿಶ್ರಣ ಮಾಡಿ ಈ ರಸವನ್ನು ಬಾಟಲಿಯಲ್ಲಿ ಸಂಗ್ರಹಿಸಿ.ಹತ್ತಿಯುಂಡೆಯೊಂದನ್ನು ಈ ದ್ರವದಲ್ಲಿ ಮುಳುಗಿಸಿ ಎಣ್ಣೆಪಸೆ ಇರುವಲ್ಲಿ ಕೊಂಚ ಒತ್ತಡದಿಂದ ಒರೆಸಿಕೊಳ್ಳಿ. ಎಣ್ಣೆ ಪಸೆ ಸುಲಭವಾಗಿ ಹತ್ತಿಯುಂಡೆಗೆ ಅಂಟಿಕೊಂಡು ಬರುತ್ತದೆ. ಪ್ರತಿದಿನ ಎರಡರಿಂದ ಮೂರು ಬಾರಿ ಬಳಸುವ ಮೂಲಕ ಇಡಿಯ ದಿನ ಎಣ್ಣೆಪಸೆಯಿಂದ ಮುಕ್ತರಾಗಬಹುದು.

ಅಕಾಲಿಕ ವಯಸ್ಸಾಗುವುದು

ಅಕಾಲಿಕ ವಯಸ್ಸಾಗುವುದು

ಆಲೂಗಡ್ಡೆಯನ್ನು ನಿಯಮಿತವಾಗಿ ಬಳಸಿದರೆ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಯೌವನಭರಿತ ಚರ್ಮವನ್ನು ನೀಡಲಿದೆ. ತಾಜಾ ಆಲೂಗಡ್ಡೆಯ ರಸವನ್ನು ತೆಗೆದು ಅದನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಂಡು ಬೆರಳಿನಿಂದ ಮಸಾಜ್ ಮಾಡಿಕೊಳ್ಳಿ. 15 ನಿಮಿಷ ಬಿಟ್ಟು ಚರ್ಮವನ್ನು ತೊಳೆಯಿರಿ. ಒಂದು ಆಲೂಗಡ್ಡೆಯ ರಸ ಮತ್ತು ಒಂದು ಚಮಚ ತಾಜಾ ಮೊಸರು ನಿಮಗೆ ಯೌವನಯುಕ್ತ ತ್ವಚೆ ನೀಡುವುದು.

ನೆರಿಗೆ

ನೆರಿಗೆ

ವಯಸ್ಸಾಗುವ ವೇಳೆ ಚರ್ಮದಲ್ಲಿ ಬೀಳುವ ಗೆರೆಗಳು ಹಾಗೂ ನೆರಿಗೆಯನ್ನು ಹೋಗಲಾಡಿಸಬೇಕಾದರೆ ತಾಜಾ ಆಲೂಗಡ್ಡೆಯ ನಾಲ್ಕು ಚಮಚ ರಸ, ಒಂದು ಚಮಚ ಆಲಿವ್ ತೈಲ ಜತೆಯಾಗಿ ಮಿಶ್ರಣ ಮಾಡಿಕೊಂಡು ತ್ವಚೆಗೆ ಹಚ್ಚಿಕೊಳ್ಳಿ. ಪ್ರತೀದಿನ ಆಲೂಗಡ್ಡೆಯ ರಸವನ್ನು ತ್ವಚೆಗೆ ಹಚ್ಚಿಕೊಂಡರೂ ಇದೇ ರೀತಿಯ ಫಲಿತಾಂಶ ಪಡೆಯಬಹುದು.

ಕೂದಲ ಬೆಳವಣಿಗೆ

ಕೂದಲ ಬೆಳವಣಿಗೆ

ಕೂದಲ ಬೆಳವಣಿಗೆ ಹಾಗೂ ಅದು ದಪ್ಪವಾಗಲು ಒಂದು ಆಲೂಗಡ್ಡೆಯ ಜ್ಯೂಸ್, ಒಂದು ಮೊಟ್ಟೆಯ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂಡಲು ಹಾಗೂ ತಲೆಬುರುಡೆಗೆ ಹಚ್ಚಿಕೊಂಡು 1.5-2 ಗಂಟೆ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಹಾಕಿ ತೊಳೆಯಿರಿ. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ ಕೂದಲನ್ನು ದಪ್ಪ ಮಾಡುವುದು.

ಕೂದಲಿನ ಸಮೃದ್ಧ ಪೋಷಣೆಗೆ ಆಲೂಗಡ್ಡೆ ಜ್ಯೂಸ್

ಒಣ, ತುರಿಕೆಯ ತಲೆಬುರುಡೆ ಮತ್ತು ತಲೆಹೊಟ್ಟಿಗಾಗಿ

ಒಣ, ತುರಿಕೆಯ ತಲೆಬುರುಡೆ ಮತ್ತು ತಲೆಹೊಟ್ಟಿಗಾಗಿ

ತಲೆಬುರುಡೆಯು ಒಣ ಹಾಗೂ ತುರಿಕೆ ಉಂಟು ಮಾಡುತ್ತಾ ಇದ್ದರೆ ಆಗ ತಲೆಹೊಟ್ಟು ನಿರ್ಮಾಣವಾಗುತ್ತದೆ. ಒಂದು ದೊಡ್ಡ ಆಲೂಗಡ್ಡೆಯ ಜ್ಯೂಸ್ ತೆಗೆಯಿರಿ ಮತ್ತು ಇದಕ್ಕೆ ಎರಡು ಚಮಚ ತಾಜಾ ಅಲೋವೆರಾ ಹಾಕಿ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ತಲೆಬುರುಡೆಯ ತೇವಾಂಶ ಮತ್ತು ನೈಸರ್ಗಿಕ ಪಿಎಚ್ ಮಟ್ಟವನ್ನು ಇದು ಕಾಯ್ದುಕೊಳ್ಳುತ್ತದೆ. ಆಲೂಗಡ್ಡೆಯ ಜ್ಯೂಸ್ ಮತ್ತು ತಾಜಾ ನಿಂಬೆಯ ರಸದ ಮಿಶ್ರಣವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಬಿಳಿ ಕೂದಲು

ಬಿಳಿ ಕೂದಲು

ಕೂದಲಿಗೆ ಶಾಂಪೂ ಹಾಕಿ ತೊಳೆಯುವ ವೇಳೆ ನೀವು ಬಿಸಿ ಅಥವಾ ತಣ್ಣೀರನ್ನು ಬಳಸುತ್ತಿರಬಹುದು. ಅದರ ಬದಲಿಗೆ ನೀವು ಆಲೂಗಡ್ಡೆ ಜ್ಯೂಸ್ ಬಳಸಿಕೊಳ್ಳಿ. ಇದರಿಂದ ಕೂದಲು ಕಪ್ಪಾಗುವುದು ಮತ್ತು ಕೂದಲಿಗೆ ಒಳ್ಳೆಯ ಹೊಳಪು ನೀಡುವುದು.

ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'

English summary

Why Should You Embrace Raw Potato Juice For Your Skin And Hair?

So you think that potatoes are meant only for cooking? Wrong! The nutrient-rich underground stem has tons of beauty uses too. If used regularly, the raw juice of the humble potato can help you eliminate quite a few skin and hair issues completely. Want to know more about why should you embrace raw potato juice for your skin and hair? Read on below...
Subscribe Newsletter