For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಚ್ಚಿಸುವ 'ಕುಂಬಳಕಾಯಿ ಫೇಸ್ ಪ್ಯಾಕ್'

ಕುಂಬಳಕಾಯಿಯ ಫೇಸ್ ಪ್ಯಾಕ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಹಾಗಾದರೆ ಇಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ...ಯಾವುದೇ ಅಡ್ಡ ಪರಿಣಾಮವಿಲ್ಲದ ಈ ಫೇಸ್ ಪ್ಯಾಕ್ ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ....

By Arshad
|

ಶ್ರೀಮಂತರು ಧರಿಸಿದ್ದೆಲ್ಲಾ ಬಂಗಾರ, ಬಡವರು ಧರಿಸಿದ್ದು ಕಾಗೆ ಬಂಗಾರ ಎಂದೇ ನಾವೆಲ್ಲಾ ನಂಬಿದ್ದೇವೆ. ಬಡವರು ಬಂಗಾರ ಧರಿಸಿದರೂ ಶ್ರೀಮಂತರು ಕಾಗೆಬಂಗಾರ ಧರಿಸಿದರೂ ಸುಲಭವಾಗಿ ನಾವು ಒಪ್ಪುವುದಿಲ್ಲ. ಅಂತೆಯೇ ಚಿನ್ನದ ಬಣ್ಣದ ಕುಂಬಳ ಕಾಯಿಗೂ ನಾವು ತೋರುವುದು ಅಸಡ್ಡೆಯೇ. ಸಿಹಿ ಕುಂಬಳ ಕಾಯಿ ಪಾಯಸ

ಏಕೆಂದರೆ ಇದು ಸುಲಭದರದಲ್ಲಿ ಮತ್ತು ವರ್ಷದ ಬಹುತೇಕ ದಿನಗಳಲ್ಲಿ ಎಲ್ಲಾ ಕಡೆ ಸಿಗುವುದರಿಂದ ಇದನ್ನು ಬಡವರ ತರಕಾರಿ ಎಂದೇ ತಿಳಿದುಬಿಟ್ಟಿದ್ದೇವೆ. ಆದರೆ ಇದೊಂದು ಉತ್ತಮ ತರಕಾರಿಯಾಗಿದ್ದು ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಕೂಡ ಹಲವು ರೀತಿಯಲ್ಲಿ ಉತ್ತಮವಾಗಿದೆ. ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ನಮಗೆಲ್ಲಾ ಗೊತ್ತಿರುವ ಹಾಗೆ ಮಾರುಕಟ್ಟೆಯಲ್ಲಿ ಅರಿಶಿನ, ಜೇನು ಅಥವಾ ಲಿಂಬೆ ಹೀಗೆ ಹಲವು ವಿಧವಾದ ಫೇಸ್ ಪ್ಯಾಕ್‌ಗಳು ಲಭ್ಯವಿದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಹಾಗಾದರೆ ಇಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ...ಯಾವುದೇ ಅಡ್ಡ ಪರಿಣಾಮವಿಲ್ಲದ ಈ ಫೇಸ್ ಪ್ಯಾಕ್ ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ....


ಫೇಸ್ ಪ್ಯಾಕ್ ತಯಾರಿಸುವ ವಿಧಾನ

ಫೇಸ್ ಪ್ಯಾಕ್ ತಯಾರಿಸುವ ವಿಧಾನ

ಅರ್ಧ ಕಪ್ ಕುಂಬಳ ಕಾಯಿಯ ತಿರುಳಿನ ತುರಿಗೆ ಒಂದು ಚಿಕ್ಕ ಚಮಚ ಏಕಹೂವಿನ ಜೇನು (manuka honey) ಮತ್ತು ಅರ್ಧ ಚಿಕ್ಕಚಮಚ ಅರಿಶಿನ ಪುಡಿ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖದ ಮೇಲೆ ತೆಳುವಾಗಿ ಹಚ್ಚಿ ಸುಮಾರು ಐದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಕಲೆಗಳನ್ನು ತಿಳಿಯಾಗಿಸುತ್ತದೆ.

ಶರೀರದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಶರೀರದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಒಂದು ಕಪ್ ಕುಂಬಳದ ತಿರುಳಿನ ತುರಿಗೆ ಕಾಲು ಕಪ್ ಜೊಜೊಬಾ ಎಣ್ಣೆ (jojoba oil), ಕಾಲು ಕಪ್ ಕಾಫಿಬೀಜವನ್ನು ಕುಟ್ಟಿ ಮಾಡಿದ ಪುಡಿ, ಕಾಲು ಕಪ್ ಹಿಮಾಲಯದ ಉಪ್ಪು ಅಥವಾ ಕೆಂಪು ಕಲ್ಲುಪ್ಪು (Himalayan salt) ಇಷ್ಟನ್ನು ಬೆರೆಸಿ ಚೆನ್ನಾಗಿ ಪುಡಿಮಾಡಿ ಮಿಶ್ರಣ ತಯಾರಿಸಿ.

ಶರೀರದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಶರೀರದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಈ ಲೇಪವನ್ನು ಮೈಗೆ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ಸೌಮ್ಯ ಬ್ರಶ್ ಬಳಸಿ ಉಜ್ಜಿಕೊಂಡು ಸ್ನಾನ ಮಾಡುವ ಮೂಲಕ ಚರ್ಮಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳೆಲ್ಲಾ ಮಾಯವಾಗಿ ಚರ್ಮ ಸಹಜಕಳೆಯನ್ನು ಪಡೆಯುತ್ತದೆ.

ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಕಾಲು ಕಪ್ ಕುಂಬಳ ತಿರುಳಿನ ತುರಿ, ಕಾಲು ಕಪ್ ಬೆಂಟೋನೈಟ್ ಜೇಡಿ (bentonite clay), ಕಾಲು ಕಪ್ ಕ್ಯಾಮೋಮೈಲ್ ಟೀ ಮತ್ತು ಕಾಲು ಕಪ್ ಅಗಸೆ ಬೀಜದ ಪುಡಿಯನ್ನು ಬೆರೆಸಿ ನಯವಾದ ಲೇಪನ ತಯಾರಿಸಿ.

ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಈ ಲೇಪನವನ್ನು ಈಗ ತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ ಸುಮಾರು ಒಂದು ನಿಮಿಷ ಬಿಟ್ಟು ಬಳಿಕ ಹೆಚ್ಚಿನ ಒತ್ತಡವಿಲ್ಲದೇ ಬೆರಳುಗಳಿಂದ ಮುಖದ ಚರ್ಮವನ್ನು ಮಸಾಜ್ ಮಾಡಿ. ಈ ಲೇಪನ ಚರ್ಮದ ಹೊರಭಾಗದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ತಲೆಗೂದಲ ಲೇಪನ

ತಲೆಗೂದಲ ಲೇಪನ

ಒಂದು ದೊಡ್ಡಚಮಚ ಕುಂಬಳದ ಬೀಜದ ಎಣ್ಣೆ, ಒಂದು ಕಪ್‌ನ ಮೂರರಲ್ಲೊಂದು ಭಾಗ ಕೊಬ್ಬರಿ ಎಣ್ಣೆ, ಒಂದು ಕಪ್ ನ ಮೂರರಲ್ಲೊಂದು ಭಾಗ ಹೊಹೋಬಾ ಎಣ್ಣೆ, ಐದು ಹನಿ ನೀಲಗಿರಿ ತೈಲ, ಐದು ಹನಿ ಲ್ಯಾವೆಂಡರ್ ತೈಲವನ್ನು ಬೆರೆಸಿ ನಯವಾದ ಲೇಪನ ತಯಾರಿಸಿ.

ತಲೆಗೂದಲ ಲೇಪನ

ತಲೆಗೂದಲ ಲೇಪನ

ಇನ್ನು ಈ ಲೇಪನವನ್ನು ತೇವಗೊಳಿಸಿ ಒರೆಸಿಕೊಂಡ ಕೂದಲಿಗೆ ಹಚ್ಚಿ ಕನಿಷ್ಠ ಐದು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ಪ್ರಚೋದನೆ ದೊರೆತು ಕೂದಲ ಬೆಳವಣಿಗೆ ಹೆಚ್ಚಲು ಹಾಗೂ ಕೂದಲ ಬುಡ ದೃಢಗೊಳ್ಳುವ ಮೂಲಕ ಕೂದಲು ಉದುರುವುದು ಸಹಾ ಕಡಿಮೆಯಾಗುತ್ತದೆ.

English summary

Ways you can use pumpkin to enhance your beauty

Did you try adding pumpkin to your beauty regime? If not, here’s why you should give the pumpkin a go! Pumpkin contains alpha hydroxy acids and enzymes that can help smooth and brighten your skin and the vitamin A and C can prevent free-radical damage.
X
Desktop Bottom Promotion