For Quick Alerts
ALLOW NOTIFICATIONS  
For Daily Alerts

ಗುಲಾಬಿಯಂತಹ ಸೌಂದರ್ಯದ ತ್ವಚೆಗೆ ಪ್ರಯತ್ನಿಸಿ-'ರೋಸ್ ವಾಟರ್'

ಈ ಗುಲಾಬಿಯು ನಿನಗಾಗಿ...ಅದು ಚೆಲ್ಲುವ ಪರಿಮಳ ನಿನಗಾಗಿ ಎನ್ನುವ ಹಾಡನ್ನು ಕೇಳಿರುತ್ತೇವೆ. ಗುಲಾಬಿಯ ಬಗ್ಗೆ ಹಲವಾರು ರೀತಿಯ ವರ್ಣನೆಗಳು ಇವೆ. ಇಂತಹ ಗುಲಾಬಿಯ ಎಸಳಿನಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ...

By Jaya subramanya
|

ಸೌಂದರ್ಯವನ್ನು ಅತ್ಯುತ್ತಮಗೊಳಿಸಲು ಹಿಂದಿನವರು ಹಲವಾರು ಸಲಹೆಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ.ಆಯುರ್ವೇದ ಅಂತೆಯೇ ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ತ್ವಚೆಯನ್ನು ಅತ್ಯುತ್ತಮಗೊಳಿಸುವ ವಿಧಾನಗಳನ್ನು ಇವರುಗಳು ಪಾಲಿಸಿಕೊಂಡು ಬರುತ್ತಿದ್ದು ಅದರಲ್ಲಿ ಸಂಪೂರ್ಣ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಅಂತಹುದೇ ನೈಸರ್ಗಿಕ ಉತ್ಪನ್ನ ಎಂಬುದಾಗಿ ಹೆಸರು ಗಳಿಸಿರುವುದು ರೋಸ್ ವಾಟರ್. ರೋಸ್ ವಾಟರ್ ಅನ್ನು ನಿಮ್ಮ ತ್ವಚೆಗೆ ನೀವು ಹಾಗೆಯೇ ಬಳಸಬಹುದು ಇಲ್ಲವೇ ಇತರ ಸಾಮಾಗ್ರಿಗಳೊಂದಿಗೆ ಮಿಶ್ರ ಮಾಡಿ ಕೂಡ ನಿಮ್ಮ ತ್ವಚೆಯ ಕಾಂತಿಯನ್ನು ವರ್ಧಿಸಲು ಉಪಯೋಗಿಸಬಹುದಾಗಿದೆ.

ರೋಸ್ ವಾಟರ್ (ಗುಲಾಬಿ ನೀರು) ಅನ್ನು ನೀವು ಮನೆಯಲ್ಲಿಯೇ ಸಿದ್ಧಪಡಿಸಿಕೊಂಡು ಬೇಕಾದಾಗ ಬೇಕಾದ ರೀತಿಯಲ್ಲಿ ಬಳಸಬಹುದಾಗಿದೆ. ಇದನ್ನು ತಯಾರಿಸಲು ನಿಮಗೆ ಬೇಕಾಗಿರುವುದು ಗುಲಾಬಿ ದಳಗಳು ಮತ್ತು ಸ್ವಲ್ಪ ನೀರು. ನೀರನ್ನು ಚೆನ್ನಾಗಿ ಕುದಿಸಿಕೊಂಡು, ಸ್ವಲ್ಪ ತಣ್ಣಗಾಗಲು ಬಿಡಿ.. ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕಾಗಿ 'ರೋಸ್ ವಾಟರ್'!

ಇನ್ನು ಪಾತ್ರೆಗೆ ಗುಲಾಬಿ ದಳವನ್ನು ಸೇರಿಸಿ ನಂತರ ಪಾತ್ರೆಗೆ ಮುಚ್ಚಳವನ್ನು ಮುಚ್ಚಿ. ಒಮ್ಮೆ ಈ ನೀರು ಕೊಠಡಿಯ ತಾಪಮಾನಕ್ಕೆ ತಗ್ಗಿದಾಗ ಅದನ್ನು ಫ್ರಿಡ್ಜ್‌ನಲ್ಲಿರಿಸಿಕೊಂಡು ಬಳಸಿ. ಹಾಗಿದ್ದರೆ ರೋಸ್ ವಾಟರ್ ತಯಾರಿ ಮಾಡುವ ವಿಧಾನವನ್ನು ನೀವು ಅರಿತುಕೊಂಡಾಯಿತು ಇನ್ನು ಇದನ್ನು ಮಿಶ್ರ ಮಾಡಿಕೊಂಡು ಬೇರೆ ಬೇರೆ ರೀತಿಯಲ್ಲಿ ಫೇಸ್ ಪ್ಯಾಕ್ ಸಿದ್ಧ ಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಳ್ಳೋಣ....

ಫೇಸ್ ಕ್ಲೆನ್ಸರ್

ಫೇಸ್ ಕ್ಲೆನ್ಸರ್

ಮೊದಲು ಮುಖವನ್ನು ಚೆನ್ನಾಗಿ ನೈಸರ್ಗಿಕ ಫೇಸ್ ವಾಶ್‌ನಿಂದ ತೊಳೆದುಕೊಳ್ಳಿ. ಅರ್ಧ ಚಮಚ ರೋಸ್ ವಾಟರ್‌ನೊಂದಿಗೆ ಸ್ವಲ್ಪ ಹನಿ ಗ್ಲಿಸರಿನ್ ಅನ್ನು ಬೆರೆಸಿಕೊಂಡು ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ಈ ವಿಧಾನವನ್ನು ಅನುಸರಿಸಿ.

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ಒಂದು ಚಮಚ ಲಿಂಬೆ ರಸವನ್ನು ತೆಗೆದುಕೊಂಡು ಅದಕ್ಕೆ ಚಮಚದಷ್ಟು ರೋಸ್ ವಾಟರ್ ಅನ್ನು ಮಿಶ್ರ ಮಾಡಿ ನಂತರ ಚೆನ್ನಾಗಿ ಮಿಶ್ರ ಮಾಡಿ. ಮೊಡವೆ ಇರುವ ಸ್ಥಳದಲ್ಲಿ ಇದನ್ನು ಹಚ್ಚಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ಮೊಡವೆಯ ಮಿತಿಯನ್ನು ಕುಗ್ಗಿಸಿ ಜಿಡ್ಡನ್ನು ತೊಲಗಿಸುತ್ತದೆ. ಥಟ್ಟನೆ ಮೊಡವೆಗಳ ನಿವಾರಣೆಗೆ ಪನ್ನೀರಿನ ಚಿಕಿತ್ಸೆ

ಮುಲ್ತಾನಿ ಮಿಟ್ಟಿ ರೋಸ್ ವಾಟರ್ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ರೋಸ್ ವಾಟರ್ ಫೇಸ್ ಪ್ಯಾಕ್

ನೀವು ನೀರಿನ ಬದಲಿಗೆ ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಂಡು ಅದಕ್ಕೆ ರೋಸ್ ವಾಟರ್ ಅನ್ನು ಬೆರೆಸಿ ಫೇಸ್ ಪ್ಯಾಕ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಮುಖದಲ್ಲಿ ಈ ಫೇಸ್ ಪ್ಯಾಕ್ 8-10 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ಇದು ರಂಧ್ರಗಳನ್ನು ಶುದ್ಧ ಮಾಡಿ ಮೊಡವೆಯನ್ನು ನಿವಾರಣೆ ಮಾಡುತ್ತದೆ.

ಕೂದಲಿನ ಕಂಡೀಶನರ್

ಕೂದಲಿನ ಕಂಡೀಶನರ್

ದೈನಂದಿನ ಶಾಂಪೂ ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ ಮತ್ತು ಕೊನೆಯಲ್ಲಿ ತೊಳೆಯಲು ಒಂದು ಕಪ್ ರೋಸ್ ವಾಟರ್ ಅನ್ನು ಬಳಸಿ ಆಗ ನೀರು ಬಳಸಬೇಕಾಗಿಲ್ಲ. ಇದು ಕೂದಲನ್ನು ಆಳವಾಗಿ ಕಂಡೀಶನ್ ಮಾಡಿ ಹೊಳಪನ್ನು ತರುತ್ತದೆ.

ಕಣ್ಣಿನ ಆರೈಕೆಗೆ

ಕಣ್ಣಿನ ಆರೈಕೆಗೆ

ಎರಡು ಹತ್ತಿಯ ಪ್ಯಾಡ್ ಅನ್ನು ರೋಸ್ ವಾಟರ್‌ನಲ್ಲಿ ಮುಳುಗಿಸಿ ನಂತರ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಡಿ. 5 ನಿಮಿಷಗಳ ನಂತರ ತೆಗೆಯಿರಿ. ಇದು ತ್ವರಿತ ಶಮನವನ್ನು ನಿಮ್ಮ ಕಣ್ಣುಗಳಿಗೆ ನೀಡಲಿದೆ ಮತ್ತು ಕಣ್ಣುಗಳ ಊತವನ್ನು ಹೋಗಲಾಡಿಸುತ್ತದೆ.

ಸೆಟ್ಟಿಂಗ್ ಸ್ಪ್ರೇ

ಸೆಟ್ಟಿಂಗ್ ಸ್ಪ್ರೇ

100 ಎಮ್‌ಎಲ್‌ನಷ್ಟು ರೋಸ್ ವಾಟರ್ ಅನ್ನು ಸ್ಪ್ರೇ ಬಾಟಲಿನಲ್ಲಿ ಸ್ಟೋರ್ ಮಾಡಿಕೊಳ್ಳಿ ಮೇಕಪ್ ಅನ್ನು ಹಚ್ಚಿಕೊಂಡ ನಂತರ ನಿಮ್ಮ ಮುಖಕ್ಕೆ ಸ್ಪ್ರೇ ಮಾಡಿ. ಇದು ನಿಮಗೆ ರಿಫ್ರೆಶ್ ಉಂಟುಮಾಡುವುದು ಮಾತ್ರವಲ್ಲದೆ ದೀರ್ಘ ಸಮಯದವರೆಗೆ ಮೇಕಪ್ ಅನ್ನು ಹಾಗೆಯೇ ಇರಿಸುತ್ತದೆ.

English summary

Ways To Use Rose Water In Your Beauty Regimen

Rose water has traditional roots in the Indian culture. Rose water was first used as a part of skin care regimen by the Egyptians. Cleopatra used it every day. You must be careful while buying rose water. It should be without any chemicals and should have that nice fragrance of fresh roses. It is really difficult to find rose water of such high quality in the market nowadays.
X
Desktop Bottom Promotion