ಬ್ಯೂಟಿ ಟಿಪ್ಸ್: ಡಾರ್ಕ್ ಸರ್ಕಲ್ ಮಾಯ ಮಾಡುವ 'ಹರಳೆಣ್ಣೆ'ಯ ಚಿಕಿತ್ಸೆ

Posted By: Hemanth
Subscribe to Boldsky

ದೇಹದ ಕೆಲವೊಂದು ಭಾಗಗಳ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇರುವುದಿಲ್ಲ. ಯಾಕೆಂದರೆ ಇದರ ಬಗ್ಗೆ ನಾವು ತುಂಬಾ ಅಸಡ್ಡೆ ವಹಿಸಿರುತ್ತೇವೆ. ಆದರೆ ಇಂತಹ ಭಾಗಗಳನ್ನು ಯಾವಾಗಲೂ ಕಡೆಗಣಿಸುತ್ತಾ ಇದ್ದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಬಹುದು. ಇಂತಹವುಗಳಲ್ಲಿ ಪ್ರಮುಖವಾಗಿ ಕಣ್ಣಿನ ಕೆಳಭಾಗವು ಒಂದಾಗಿದೆ. ಕಣ್ಣಿನ ಕೆಳಭಾಗದಲ್ಲಿ ಹಲವಾರು ರೀತಿಯ ನರಗಳು ಹಾದುಹೋಗುತ್ತದೆ. ಇಲ್ಲಿ ಯಾವುದೇ ಸಮಸ್ಯೆಯಾದರೂ ಅದರ ಕಡೆ ತಕ್ಷಣ ಗಮನಹರಿಸಬೇಕು.

ಕಣ್ಣಿನ ಕೆಳಭಾಗದಲ್ಲಿ ಮೂಡುವಂತಹ ಕಪ್ಪು ಕಲೆಗಳು (ಡಾರ್ಕ್ ಸರ್ಕಲ್) ಮುಖದ ಸೌಂದರ್ಯವನ್ನೇ ಕೆಡಿಸುವುದು. ಇಂತಹ ಕಲೆಗಳನ್ನು ಹೋಗಲಾಡಿಸಲು ಹಲವಾರು ರೀತಿಯ ಕ್ರೀಮ್ ಗಳು ಲಭ್ಯವಿದ್ದರೂ ಸಹ ಅದು ಅಡ್ಡ ಪರಿಣಾಮ ಕೂಡ ಉಂಟು ಮಾಡಬಹುದು. ಇಂತಹ ಸಂದರ್ಭದಲ್ಲಿ ಸಿಗುವಂತಹ ಕೆಲವು ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು. ಹರಳೆಣ್ಣೆಯು ಕಪ್ಪು ಕಲೆಗಳನ್ನು (ಡಾರ್ಕ್ ಸರ್ಕಲ್) ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಮೆಗಾ-3 ಹೊಂದಿರುವಂತಹ ಹರಳೆಣ್ಣೆಯು ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ನಿವಾರಣೆ ಮಾಡುವಲ್ಲಿ ತುಂಬಾ ಸಹಕಾರಿಯಾಗಲಿದೆ.

ಹರಳೆಣ್ಣೆಯಿಂದ ಸಾಕಷ್ಟು ಲಾಭಗಳಿವೆ, ಇದನ್ನು ನಿರ್ಲಕ್ಷಿಸಬೇಡಿ

ಹರಳೆಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಕೆಲವರು ಇದನ್ನು ಬಳಸಿದರೂ ಅದರ ಪರಿಣಾಮ ಕಾಣದೆ ಬೇರೆ ಕ್ರೀಮ್ ಗಳನ್ನು ಬಳಸಲು ಪ್ರಯತ್ನಿಸಿದ್ದಾರೆ. ಆದರೆ ಕೇವಲ ಹರಳೆಣ್ಣೆ ಬಳಸುವುದರಿಂದ ಹೆಚ್ಚಿನ ಲಾಭ ಆಗಲಿಕ್ಕಿಲ್ಲ. ಇದರೊಂದಿಗೆ ಕೆಲವು ಬೇರೆ ಸಾಮಗ್ರಿಗಳನ್ನು ಹಾಕಿಕೊಂಡು ಬಳಸಿದೆರ ಹರಳೆಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಹರಳೆಣ್ಣೆಯಿಂದ ಕಪ್ಪು ಕಲೆಗಳನ್ನು ನಿವಾರಣೆ ಮಾಡುವ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ಹೇಳಿಕೊಡಲಿದೆ.....

ಹರಳೆಣ್ಣೆ ಮತ್ತು ತೆಂಗಿನೆಣ್ಣೆ

ಹರಳೆಣ್ಣೆ ಮತ್ತು ತೆಂಗಿನೆಣ್ಣೆ

ಹರಳೆಣ್ಣೆ ಮತ್ತು ತೆಂಗಿನೆಣ್ಣೆಯನ್ನು 1:1 ರ ಪ್ರಮಾಣದಲ್ಲಿ ಹಾಕಿಕೊಳ್ಳಿ. ಹರಳೆಣ್ಣೆ ಮತ್ತು ತೆಂಗಿನೆಣ್ಣೆಯ ಮಿಶ್ರಣವನ್ನು ಹಾಗೆ ಇಟ್ಟುಕೊಂಡು ಬಳಸಬಹುದು. ದಿನದಲ್ಲಿ ಎರಡು ಸಲ ಅಥವಾ ಅದಕ್ಕಿಂತ ಹೆಚ್ಚು ಸಲ ಇದನ್ನು ಬಳಸಬೇಕು. ಕಪ್ಪು ಕಲೆಗಳಿಗೆ ಮಸಾಜ್ ಮಾಡುವಾಗ ಕಿವಿಗಳ ಬದಿಯಿಂದ ಮೂಗಿನ ಬದಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹೋಗಿ.

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆ

ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಬಳಸಿಕೊಳ್ಳುವಾಗ ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಯಾಕೆಂದರೆ ಸಾಸಿವೆ ಎಣ್ಣೆಯು ಪ್ರತಿಕ್ರಿಯೆ ನೀಡಿ ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಎರಡು ಚಮಚ ಹರಳೆಣ್ಣೆ, ¼ ಸಾಸಿವೆ ಎಣ್ಣೆ ಅಥವಾ ಅದಕ್ಕಿಂತಲೂ ಕಡಿಮೆ ಬಳಸಿ. ಈ ಎಣ್ಣೆಯ ಮಿಶ್ರಣವನ್ನು ಮಸಾಜ್ ಮಾಡಿದರೆ ಸುಟ್ಟ ಅನುಭವವಾಗಬಹುದು ಮತ್ತು ಕಣ್ಣಿನಿಂದ ನೀರು ಬರಬಹುದು. ಮಲಗುವ ಮೊದಲು ಕಪ್ಪು ಕಲೆಗಳಿಗೆ ಇದನ್ನು ಹಚ್ಚಿಬಿಡಿ.

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆ

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆ

ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಚ್ಚಲ ಬಿಗಿಯಾಗಿರುವ ಬಾಟಲಿಯಲ್ಲಿ ಹಾಕಿಡಿ. ಈ ಎಣ್ಣೆಯನ್ನು ಕಣ್ಣಿನ ಕೆಳಗಡೆ ಮಸಾಜ್ ಮಾಡಿಕೊಳ್ಳಿ. ಕಣ್ಣಿನ ಕೆಳಭಾಗ ಮತ್ತು ಕಪ್ಪು ಕಲೆಗಳು ಇರುವ ಜಾಗ ಸ್ವಚ್ಛವಾಗಿದೆಯಾ ಎಂದು ಮೊದಲು ನೋಡಿಕೊಳ್ಳಿ. ಇದರ ಬಳಿಕ ಎಣ್ಣೆ ಹಚ್ಚಿ. ಸ್ವಲ್ಪ ಹೊತ್ತು ಇದಕ್ಕೆ ಮಸಾಜ್ ಮಾಡಿಕೊಳ್ಳಿ.

ಹರಳೆಣ್ಣೆ ಮತ್ತು ತಾಜಾ ಹಾಲಿನ ಕೆನೆ

ಹರಳೆಣ್ಣೆ ಮತ್ತು ತಾಜಾ ಹಾಲಿನ ಕೆನೆ

ಕಪ್ಪು ಕಲೆಗಳ ಸಮಸ್ಯೆ ನಿವಾರಣೆ ಮಾಡಲು ಹರಳೆಣ್ಣೆಯ ಜತೆಗೆ ತಾಜಾ ಹಾಲಿನ ಕೆನೆ ಬಳಸಿಕೊಳ್ಳಿ. ಹಾಲಿನ ಕೆನೆಯನ್ನೇ ಹರಳೆಣ್ಣೆ ಜತೆಗೆ ಬಳಸಿಕೊಳ್ಳಿ. ಒಂದು ಚಮಚ ತಾಜಾ ಹಾಲಿನ ಕೆನೆಗೆ ಹತ್ತು ಹನಿ ಹರಳೆಣ್ಣೆ ಹಾಕಿಕೊಳ್ಳಿ. ಇದನ್ನು ಹಚ್ಚಿಕೊಳ್ಳುವ ಮೊದಲು ಹಾಲಿನ ಕೆನೆ ಮತ್ತು ಹರಳೆಣ್ಣೆ ಸರಿಯಾಗಿ ಮಿಶ್ರಣ ಮಾಡಿ. ಕಪ್ಪು ಕಲೆಗಳು ಇರುವ ಜಾಗಕ್ಕೆ ಇದನ್ನು ಮಸಾಜ್ ಮಾಡಿ ಮತ್ತು ಬಳಿಕ ತೊಳೆಯಿರಿ.

ಹರಳೆಣ್ಣೆ ಮತ್ತು ತಾಜಾ ಹಾಲು

ಹರಳೆಣ್ಣೆ ಮತ್ತು ತಾಜಾ ಹಾಲು

ಹರಳೆಣ್ಣೆ ಮತ್ತು ತಾಜಾ ಹಾಲಿನ ಕೆನೆ ಕಪ್ಪು ಕಲೆ ಕೆಲಸ ಮಾಡಿದಂತೆ ಹರಳೆಣ್ಣೆ ಮತ್ತು ಹಸಿ ಹಾಲಿನ ಮಿಶ್ರಣವು ಕೆಲಸ ಮಾಡುವುದು. ಹರಳೆಣ್ಣೆ ಮತ್ತು ಮತ್ತು ಹಸಿ ಹಾಲನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಹಾಲಿನ ಮೇಲೆ ಎಣ್ಣೆಯು ನಿಲ್ಲುವುದು ನಿಂತುಹೋಗಬೇಕು. ಹತ್ತಿಯ ಉಂಡೆಯನ್ನು ತೆಗೆದುಕೊಂಡು ಕಪ್ಪು ಕಲೆಗಳಿಗೆ ಈ ಮಿಶ್ರಣ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಟಿಶ್ಯೂ ಪೇಪರ್ ನ್ನು ಹರಳೆಣ್ಣೆ ಮತ್ತು ಹಾಲಿನ ಮಿಶ್ರಣದಲ್ಲಿ ಮುಳುಗಿಸಿ ಕಣ್ಣಿನ ಮೇಲಿಡಿ.

For Quick Alerts
ALLOW NOTIFICATIONS
For Daily Alerts

    English summary

    Ways To Use Castor Oil To Treat Your Dark Circles

    Considered as the thinnest skin of the body, the skin under the eyes is very delicate and sensitive. So many blood vessels and veins pass through this area and one mistake in treating this under-eye area can create big problems. The most common skin problem at the thinnest skin part of the body is dark circles. Common in men and women of all ages, there are so many ways to treat dark circles.
    Story first published: Tuesday, August 1, 2017, 23:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more