For Quick Alerts
ALLOW NOTIFICATIONS  
For Daily Alerts

  ಬ್ಯೂಟಿ ಟಿಪ್ಸ್: ಮೊಡವೆಗಳ ಸಮಸ್ಯೆಯೇ? 'ಬಾಳೆಹಣ್ಣಿನ ಸಿಪ್ಪೆ' ಬಳಸಿ...

  By Arshad
  |

  ಮೊಡವೆಗಳು ಹದಿಹರೆಯದಲ್ಲಿ ಸಾಮಾನ್ಯವಾದರೂ ಇತರ ವಯಸ್ಸಿನವರಿಗೂ ಕಾಡದೇ ಇರಲಾರದು. ಮೊಡವೆಗೆ ಪ್ರಮುಖ ಕಾರಣವೆಂದರೆ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿಕೊಳ್ಳುವುದು. ನಮ್ಮ ಚರ್ಮದ ಹೊರಪದರದ ಜೀವಕೋಶಗಳು ಸತತತಾಗಿ ಸಾಯುತ್ತವೆ ಹಾಗೂ ಹೊಸ ಜೀವಕೋಶಗಳು ಹುಟ್ಟುತ್ತವೆ. ಸತ್ತ ಜೀವಕೋಶಗಳು ಒಣಗಿ ಪುಡಿಯ ರೂಪದಲ್ಲಿದ್ದು ಇದು ಬೆವರಿನಿಂದ ತೋಯ್ದ ಬಳಿಕ ಗಟ್ಟಿಯಾಗಿ ಸೂಕ್ಷ್ಮರಂಧ್ರಗಳನ್ನು ಮುಚ್ಚಿಬಿಡುತ್ತವೆ. ಈ ರಂಧ್ರಗಳು ಮುಚ್ಚಿರುವ ಕಾರಣ ಚರ್ಮದ ಅಡಿಯಲ್ಲಿ ಉತ್ಪತ್ತಿಯಾಗುವ ತೈಲ ಹೊರಬರಲಾಗದೇ ಗಂಟುಕಟ್ಟಿಕೊಳ್ಳುತ್ತದೆ. ಇದೇ ಮೊಡವೆ ಮೂಡಲು ಪ್ರಮುಖ ಕಾರಣವಾಗಿದೆ. ಮೊಡವೆ ಮೂಡಲು ಇದಕ್ಕೂ ಹೊರತಾದ ಕಾರಣಗಳು ಇನ್ನೂ ಹಲವಾರಿವೆ. ಕಾರಣವೇನೇ ಇರಲಿ ಮೊಡವೆ ಮೂಡಿದ ಬಳಿಕ ಇವನ್ನು ಗುಣಪಡಿಸುವುದು ಮಾತ್ರ ಜಟಿಲವಾಗಿದೆ.

  ಬಾಳೆಹಣ್ಣಿನ ಸಿಪ್ಪೆ ಎಸೆಯಬೇಡಿ! ಇದರಿಂದ ಬಹಳಷ್ಟು ಪ್ರಯೋಜನಗಳಿವೆ...

  ಮೊಡವೆಗಳನ್ನು ನಿವಾರಣೆ ಮಾಡುತ್ತದೆ ಎಂಬ ಮಾಹಿತಿಯನ್ನು ಅಬ್ಬರದ ಪ್ರಚಾರದ ಮೂಲಕ ಮಾರುಕಟ್ಟೆಗೆ ಸಾವಿರಾರು ಪ್ರಸಾಧನಗಳು ಲಗ್ಗೆಯಿಟ್ಟಿವೆ. ಆದರೆ ಇವುಗಳಲ್ಲಿ ಬಹುತೇಕ ಮೊಡವೆಗಳನ್ನು ಪೂರ್ಣವಾಗಿ ನಿವಾರಿಸಲು ಅಸಮರ್ಥವಾಗಿವೆ. ಇದೇ ಕಾರಣಕ್ಕೆ ಈಗ ಹೆಚ್ಚಿನ ಮಹಿಳೆಯರು ರಾಸಾಯನಿಕ ಆಧಾರಿತ ಪ್ರಸಾದನಗಳನ್ನು ಬಿಟ್ಟು ನೈಸರ್ಗಿಕ ಪ್ರಸಾಧನಗಳತ್ತ ಒಲವು ತೋರುತ್ತಿದ್ದಾರೆ.

  ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ 'ತಲೆನೋವು' ಮಂಗಮಾಯ!

  ಇದಕ್ಕೆ ಪ್ರಮುಖ ಕಾರಣ ನೈಸರ್ಗಿಕ ಪರಿಕರಗಳು ಸುರಕ್ಷಿತ ಹಾಗೂ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಅಲ್ಲದೇ ಇವು ಅಗ್ಗವೂ, ಸುಲಭವಾಗಿ ಲಭಿಸುವಂತಹವೂ ಹೆಚ್ಚು ಪ್ರಭಾವಶಾಲಿಯೂ ಆಗಿವೆ. ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಋಣಾತ್ಮಕ ಅಂಶವನ್ನು ಬಿಟ್ಟರೆ ನೈಸರ್ಗಿಕ ಪ್ರಸಾಧನಗಳನ್ನು ಬಳಸದಿರಲು ಯಾವುದೇ ಕಾರಣ ಉಳಿಯುವುದಿಲ್ಲ.

  ಮೊಡವೆಗಳನ್ನು ಮೂಲದಿಂದ ನಿವಾರಿಸಲು ಕೆಲವಾರು ನೈಸರ್ಗಿಕ ಪರಿಕರಗಳಿವೆ. ಆದರೆ ಮೊಡವೆಗಳನ್ನು ಪೂರ್ಣವಾಗಿ ನಿವಾರಿಸಲು ಅತ್ಯಂತ ಸೂಕ್ತವಾದ ನೈಸರ್ಗಿಕ ಪ್ರಸಾದನವೊಂದು ಈಗ ಪತ್ತೆಯಾಗಿದ್ದು ಸೌಂದರ್ಯವಲಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಇದೇನೂ ನಮಗೆ ಹೊಸದಲ್ಲ, ಬದಲಿಗೆ ನಾವೆಲ್ಲರೂ ಸಾಮಾನ್ಯವಾಗಿ ಎಸೆಯುವ ಬಾಳೆಹಣ್ಣಿನ ಸಿಪ್ಪೆಯಾಗಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳೂ ಹಾಗೂ ಇತರ ಪೋಷಕಾಂಶಗಳು ಮೊಡವೆಯಿಂದ ತುಂಬಿರುವ ಚರ್ಮಕ್ಕೆ ಸೂಕ್ತ ಆರೈಕೆ ಒದಗಿಸುವ ಮೂಲಕ ತ್ವಚೆಯನ್ನು ಮೂಲ ಆಕಾರಕ್ಕೆ ಮರಳಿಸುತ್ತದೆ. ವಿಶೇಷವಾಗಿ ಬಾಳೆಸಿಪ್ಪೆಯನ್ನು ಇತರ ನೈಸರ್ಗಿಕ ಪರಿಕರಗಳೊಂದಿಗೆ ಬಳಸಿದಾಗ ಈ ಗುಣ ಇನ್ನಷ್ಟು ಉತ್ತಮಗೊಳ್ಳುತ್ತದೆ. ಬಾಳೆಸಿಪ್ಪೆಯನ್ನು ಮೊಡವೆಗಳನ್ನು ಗುಣಪಡಿಸಲು ಹೇಗೆ ಬಳಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

  ನೇರವಾಗಿ ಮೊಡವೆಗಳ ಮೇಲೆ ಉಜ್ಜಿಕೊಳ್ಳಿ

  ನೇರವಾಗಿ ಮೊಡವೆಗಳ ಮೇಲೆ ಉಜ್ಜಿಕೊಳ್ಳಿ

  ಸುಲಭ ವಿಧಾನವೆಂದರೆ ಚೆನನಗಿ ಕಳಿತ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಮೊಡವೆಗಳ ಮೇಲೆ ನೇರವಾಗಿ ನಯವಾದ ಮಸಾಜ್ ನೊಂದಿಗೆ ಉಜ್ಜಿಕೊಳ್ಳಿ. ಹೀಗೇ ಉಜ್ಜಿಕೊಳ್ಳುತ್ತಿದ್ದಂತೆ ಸಿಪ್ಪೆ ನಿಧಾನವಾಗಿ ಕಪ್ಪಗಾಗುತ್ತದೆ. ಕಪ್ಪಗಾದ ಮೇಲೆ ಇದನ್ನು ಬಳಸದಿರಿ, ಸಿಪ್ಪೆಯ ಇನ್ನೊಂದು ಭಾಗ ಅಥವಾ ಇನ್ನೊಂದು ಸಿಪ್ಪೆಯನ್ನು ಬಳಸಿ. ಉಜ್ಜಿಕೊಂಡ ಬಳಿಕ ಸುಮಾರು ಹದಿನೈದು ನಿಮಿಷಗಳಾದರೂ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ಪ್ರತಿದಿನವೂ ಒಂದೇ ಸಮಯದಲ್ಲಿ ಅನುಸರಿಸಿ.

  ಜೇನಿನೊಂದಿಗೆ

  ಜೇನಿನೊಂದಿಗೆ

  ಚುಕ್ಕೆ ಬಂದು ಈ ಚುಕ್ಕೆಗಳು ಸಾಕಷ್ಟು ಅಗಲವಾಗಿರುವ ಒಂದು ಬಾಳೆಹಣ್ಣಿನ ಸಿಪ್ಪೆಯನ್ನು ಮುಳ್ಳುಚಮಚದಿಂದ ಚೆನ್ನಾಗಿ ಹಿಚುಕಿ ನಯವಾದ ಲೇಪನ ತಯಾರಿಸಿ. ಇದಕ್ಕೆ ಒಂದು ಚಿಕ್ಕ ಚಮಚ ನೈಸರ್ಗಿಕ ಜೇನನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮೊಡವೆಗಳ ಮೇಲೆ ದಪ್ಪನಾಗಿ ಲೇಪಿಸಿ ಸುಮಾರು ಹದಿನೈದು ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರದಲ್ಲಿ ಮೂರದಿಂದ ನಾಲ್ಕು ದಿನ ಅನುಸರಿಸಿದರೆ ಕೆಲವೇ ವಾರಗಳಲ್ಲಿ ಮೊಡವೆರಹಿತ ತ್ವಚೆ ನಿಮ್ಮದಾಗುತ್ತದೆ.

  ಲಿಂಬೆರಸದೊಂದಿಗೆ

  ಲಿಂಬೆರಸದೊಂದಿಗೆ

  ಮಿಕ್ಸಿಯ ಬ್ಲೆಂಡರಿನಲ್ಲಿ ಎರಡು ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳ ಸಿಪ್ಪೆಯನ್ನು ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ಚಿಕ್ಕ ಚಮಚ ಲಿಂಬೆರಸವನ್ನು ಹಿಂಡಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಲೇಪಿಸಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ನಾಲ್ಕರಿಂದ ಐದು ಬಾರಿ ಪುನರಾವರ್ತಿಸಿ. ಕೆಲವೇ ವಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

  ಲೋಳೆಸರದೊಂದಿಗೆ

  ಲೋಳೆಸರದೊಂದಿಗೆ

  ಮೊದಲು ಒಂದು ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಈಗತಾನೇ ತೊಳೆದುಕೊಂಡ ಮುಖದ ಮೇಲೆ ಮೊಡವೆಗಳನ್ನು ಆವರಿಸುವಂತೆ ಚೆನ್ನಾಗಿ ಉಜ್ಜಿಕೊಳ್ಳಿ. ಬಳಿಕ ಲೋಳೆಸರದ ಒಂದು ಕೋಡನ್ನು ಮುರಿದು ಹಿಂಡಿ ತೆಗೆದ ರಸವನ್ನು ಈ ಲೇಪನದ ಮೇಲೆ ಹರಡಿ. ಈ ಲೇಪನವನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ಪ್ರತಿದಿನವೂ ಒಂದೇ ಸಮಯದಲ್ಲಿ ಅನುಸರಿಸಿ.

  ಓಟ್ಸ್ ರವೆಯೊಂದಿಗೆ

  ಓಟ್ಸ್ ರವೆಯೊಂದಿಗೆ

  ಒಂದು ಬಾಳೆಹಣ್ಣಿನ ಸಿಪ್ಪೆಯನ್ನು ಮುಳ್ಳುಚಮಚದಿಂದ ಚೆನ್ನಾಗಿ ಕಿವುಚಿಕೊಳ್ಳಿ.

  ಇದಕ್ಕೆ ಒಂದು ದೊಡ್ಡ ಚಮಚದಷ್ಟು ಚೆನ್ನಾಗಿ ಬೇಯಿಸಿದ ಓಟ್ಸ್ ರವೆಯನ್ನು ಬೆರೆಸಿ. ತಣ್ಣಗಾಗ ಬಳಿಕ ಈ ಲೇಪನವನ್ನು ಇಡಿಯ ಮುಖಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಬಳಿಕ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಹಾಗೂ ಸೌಮ್ಯ ಫೇಸ್ ವಾಶ್ ಬಳಸಿ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ.

  ಮೊಟ್ಟೆಯ ಬಿಳಿ ಭಾಗದೊಂದಿಗೆ

  ಮೊಟ್ಟೆಯ ಬಿಳಿ ಭಾಗದೊಂದಿಗೆ

  ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಒಂದು ದೊಡ್ಡಚಮಚ ಬಾಳೆಸಿಪ್ಪೆಯನ್ನು ಅರೆದು ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನವನ್ನು ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸುವ ಮೂಲಕ ಮೊಡವೆಗಳಿಲ್ಲದ ತ್ವಚೆ ನಿಮ್ಮದಾಗುತ್ತದೆ.

  ಬೇಕಿಂಗ್ ಪುಡಿಯೊಂದಿಗೆ

  ಬೇಕಿಂಗ್ ಪುಡಿಯೊಂದಿಗೆ

  ಒಂದು ಬಾಳೆಹಣ್ಣಿನ ಸಿಪ್ಪೆಯನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ಚಿಟಿಕೆ ಬೇಕಿಂಗ್ ಪೌಡರ್ ಬೆರೆಸಿ. ಈ ಮಿಶ್ರಣವನ್ನು ದಪ್ಪನಾಗಿ ಮುಖದ ಮೇಲೆ ಹಚ್ಚಿ ಸುಮಾರು ಹತ್ತು ನಿಮಿಷ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ್ವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಮೊಡವೆಗಳಿಂದ ಮುಕ್ತಿ ಪಡೆಯಬಹುದು.

  ಹಸಿ ಹಾಲಿನೊಂದಿಗೆ

  ಹಸಿ ಹಾಲಿನೊಂದಿಗೆ

  ಒಂದು ದೊಡ್ಡಚಮಚ ಬಾಳೆಹಣ್ಣಿನ ಸಿಪ್ಪೆಯನ್ನು ಅರೆದು ಇದಕ್ಕೆ ಸುಮಾರು ಎರಡು ಚಿಕ್ಕ ಚಮಚ ಹಸಿ ಹಾಲನ್ನು ಬೆರೆಸಿ. ಈ ಮಿಶ್ರಣವನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ಮೊಡವೆಗಳಿಲ್ಲದ ತ್ವಚೆಯನ್ನು ಪಡೆಯಬಹುದು.

  ಗುಲಾಬಿ ನೀರಿನೊಂದಿಗೆ

  ಗುಲಾಬಿ ನೀರಿನೊಂದಿಗೆ

  ಒಂದು ದೊಡ್ಡಚಮಚ ಬಾಳೆಹಣ್ಣಿನ ಸಿಪ್ಪೆಯನ್ನು ಅರೆದು ಇದಕ್ಕೆ ಸುಮಾರು ಎರಡು ಚಿಕ್ಕ ಚಮಚ ಗುಲಾಬಿ ನೀರನ್ನು ಬೆರೆಸಿ. ಈ ಮಿಶ್ರಣವನ್ನು ಮೊಡವೆಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಪ್ರತಿದಿನವೂ ಅನುಸರಿಸುವ ಮೂಲಕ ಮೊಡವೆಗಳಿಲ್ಲದ ಸುಂದರ ತ್ವಚೆಯನ್ನು ಪಡೆಯಬಹುದು.

  ಅರಿಶಿನ ಪುಡಿಯೊಂದಿಗೆ

  ಅರಿಶಿನ ಪುಡಿಯೊಂದಿಗೆ

  ಒಂದು ದೊಡ್ಡಚಮಚ ಬಾಳೆಹಣ್ಣಿನ ಸಿಪ್ಪೆಯನ್ನು ಅರೆದು ಇದಕ್ಕೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಳುವಾಗಿ ಇಡಿಯ ಮುಖಕ್ಕೆಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸುವ ಮೂಲಕ ಮೊಡವೆಗಳಿಲ್ಲದ ತ್ವಚೆಯನ್ನು ಪಡೆಯಬಹುದು.

  English summary

  Ways To Use Banana Peels To Get Rid Of Acne

  Acne is an unsightly, inflammatory skin condition that can pop up at any age. It usually occurs because of clogged pores. Build-up of dead skin cells and oil can block your pores and, in turn, cause acne. Other than that, there are several other factors as well that can trigger acne breakouts on your face. And there is no denying of the fact that dealing with acne can be a daunting task.
  Story first published: Friday, October 20, 2017, 14:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more