ಚಳಿಗಾಲದ ತ್ವಚೆಯ ಆರೈಕೆಗೆ ಬಾದಾಮಿ ಎಣ್ಣೆಯ ಪೋಷಣೆ

Posted By: Divya Pandith
Subscribe to Boldsky

ಚಳಿಗಾಲದಲ್ಲಿ ಸಾಮಾನ್ಯವಾದ ಸಮಸ್ಯೆಯೆಂದರೆ ಚರ್ಮದ ಅನಾರೋಗ್ಯ. ಒಡೆಯುವುದು, ಉರಿಯೂತ, ಜೀವಕೋಶಗಳು ಶಕ್ತಿಯನ್ನು ಕಳೆದುಕೊಳ್ಳುವುದು, ಮೈಯೆಲ್ಲಾ ಹೊಟ್ಟಿನಂತೆ ಕೂಡಿರುವುದು, ತೇವಾಂಶವಿಲ್ಲದೆ ಒರಟಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಕೆಲವು ಸೌಂದರ್ಯ ವರ್ಧಕ ಉತ್ಪನ್ನಗಳು ಅಥವಾ ಚಳಿಗಾಲದ ವಿಶೇಷವಾದ ಬಾಡಿ ಲೋಷನ್‍ಗಳನ್ನು ಬಳಸಿದರೂ ಕೆಲ ಸಮಯದ ತನಕ ಮಾತ್ರ ತ್ವಚೆಯು ಆರೋಗ್ಯದಿಂದ ಕೂಡಿರುವಂತೆ ಕಾಣುವುದು ಅಷ್ಟೆ.

ಸೂಕ್ಷ್ಮತೆಗೆ ಒಳಗಾದ ಚರ್ಮಕ್ಕೆ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡ ಉತ್ಪನ್ನಗಳನ್ನು ಬಳಸಿದರೆ ತ್ವಚೆಯು ಇನ್ನಷ್ಟು ಆರೋಗ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ನೈಸರ್ಗಿಕ ತೈಲಗಳನ್ನು ಬಳಸುವುದು ಸೂಕ್ತ. ನೈಸರ್ಗಿಕ ತೈಲೋತ್ಪನ್ನಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಬಾದಾಮಿ ಎಣ್ಣೆ ಚರ್ಮದ ಆರೈಕೆಯಲ್ಲಿ ಉತ್ತಮವಾದ ಕಾರ್ಯ ನಿರ್ವಹಿಸುತ್ತದೆ. 

ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ ಮತ್ತು ಇ ಸಮೃದ್ಧವಾಗಿವೆ. ಅತ್ಯುತ್ತಮ ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿರುವ ಇದರೊಂದಿಗೆ ಇತರ ನೈಸರ್ಗಿಕ ಉತ್ಪನ್ನಗಳನ್ನು ಸೇರಿಸಿ ಆರೈಕೆ ಮಾಡಿದರೆ ಪೋಷಣೆಯ ಫಲಿತಾಂಶವು ದ್ವಿಗುಣಗೊಳ್ಳುತ್ತದೆ. ಚರ್ಮದಲ್ಲಿರುವ ರೋಗವನ್ನುತ್ಪತ್ತಿಮಾಡುವ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನ ಮಾಡುತ್ತದೆ. ಚರ್ಮದ ಬಿಗಿತವನ್ನು ಹೆಚ್ಚಿಸಿ ರಂಧ್ರಗಳ ಮುಚ್ಚುವಿಕೆಗೆ ಸಹಾಯ ಮಾಡುವುದು. ಚಳಿಗಾಲದಲ್ಲಿ ಅತ್ಯುತ್ತಮ ಔಷಧದಂತೆ ಸಹಾಯ ಮಾಡಬಲ್ಲದು. ಹಾಗಾದರೆ ಇದರ ಬಳಕೆ ಹಾಗೂ ವಿಧಾನಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಲು ಮುಂದಿರುವ ವಿವರಣೆಯನ್ನು ಓದಿ...

ಬಾದಾಮಿ ಎಣ್ಣೆ + ಜೇನುತುಪ್ಪ

ಬಾದಾಮಿ ಎಣ್ಣೆ + ಜೇನುತುಪ್ಪ

ಅರ್ಧ ಟೀ ಚಮಚ ಬಾದಾಮಿ ಎಣ್ಣೆಗೆ ಅರ್ಧ ಟೀ ಚಮಚ ಜೇನುತುಪ್ಪವನ್ನು ಸೇರಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ರಾತ್ರಿಯಿಡೀ ಹಾಗೆಯೇ ಬಿಡಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಸುಂದರವಾದ ಕಾಂತಿಯುತ ತ್ವಚೆಗಾಗಿ ವಾರದಲ್ಲಿ 2-3 ಬಾರಿ ಈ ಕ್ರಮವನ್ನು ಅನುಸರಿಸಿ

ಬಾದಾಮಿ ಎಣ್ಣೆ + ಅಲೋವೆರಾ ಜೆಲ್

ಬಾದಾಮಿ ಎಣ್ಣೆ + ಅಲೋವೆರಾ ಜೆಲ್

ಒಂದು ಟೀ ಚಮಚ ಅಲೋವೆರಾ ಜೆಲ್‍ಗೆ ಅರ್ಧ ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5-10 ನಿಮಿಷಗಳ ಕಾಲ ಮಸಾಜ್ ಮಾಡಿ.

ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಉತ್ತಮ ಪರಿಣಾಮಕ್ಕಾಗಿ ವಾರದಲ್ಲಿ 2-3 ಬಾರಿ ಈ ಮಿಶ್ರಣವನ್ನು ಅನ್ವಯಿಸಿ.

ಬಾದಾಮಿ ಎಣ್ಣೆ+ ಗುಲಾಬಿ ನೀರು

ಬಾದಾಮಿ ಎಣ್ಣೆ+ ಗುಲಾಬಿ ನೀರು

ಅರ್ಧ ಟೀ ಚಮಚ ಬಾದಾಮಿ ಎಣ್ಣೆಗೆ 1 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ರಾತ್ರಿಯಿಡೀ ಹಾಗೆಯೇ ಬಿಡಿ.

ಮುಂಜಾನೆ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಸುಂದರವಾದ ಕಾಂತಿಯುತ ತ್ವಚೆಗಾಗಿ ವಾರದಲ್ಲಿ 3-4 ಬಾರಿ ಈ ಕ್ರಮವನ್ನು ಅನುಸರಿಸಿ.

ಬಾದಾಮಿ ಎಣ್ಣೆ +ಹಾಲು

ಬಾದಾಮಿ ಎಣ್ಣೆ +ಹಾಲು

ಅರ್ಧ ಟೀ ಚಮಚ ಬಾದಾಮಿ ಎಣ್ಣೆಗೆ 2 ಟೀ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

ಇದನ್ನು ನಿಮ್ಮ ಮುಖದ ಕ್ಲೀನ್ಸರ್ ಆಗಿ ಬಳಸಿ. ಮುಖಕ್ಕೆ ಅನ್ವಯಿಸಿದ ನಂತರ ನಿಧಾನವಾಗಿ ಸ್ವಚ್ಛಗೊಳಿಸಿ.

ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಸುಂದರವಾದ ಕಾಂತಿಯುತ ತ್ವಚೆಗಾಗಿ ವಾರದಲ್ಲಿ 2 ಬಾರಿ ಈ ಕ್ರಮವನ್ನು ಅನುಸರಿಸಿ.

ಬಾದಾಮಿ ಎಣ್ಣೆ+ ಬ್ರೌನ್ ಶುಗರ್

ಬಾದಾಮಿ ಎಣ್ಣೆ+ ಬ್ರೌನ್ ಶುಗರ್

1 ಟೀ ಚಮಚ ಬಾದಾಮಿ ಎಣ್ಣೆಗೆ 1 ಟೀ ಚಮಚ ಬ್ರೌನ್ ಶುಗರ್ ಸೇರಿಸಿ, ಮಿಶ್ರಗೊಳಿಸಿ.

ಮುಖದ ಮೇಲೆ ಅನ್ವಯಿಸಿ, ನಿಧಾನವಾಗಿ ಮಸಾಜ್ ಮಾಡಿ.

ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ತ್ವಚೆಯ ಆರೋಗ್ಯಕ್ಕೆ ಹಾಗೂ ಉತ್ತಮ ಆಕರ್ಷಣೆಗಾಗಿ ವಾರದಲ್ಲಿ ಒಮ್ಮೆ ಈ ಮಿಶ್ರಣವನ್ನು ಅನ್ವಯಿಸಬಹುದು.

ಬಾದಾಮಿ ಎಣ್ಣೆ + ಆಲಮ್ ಪುಡಿ

ಬಾದಾಮಿ ಎಣ್ಣೆ + ಆಲಮ್ ಪುಡಿ

1 ಟೀ ಚಮಚ ಬಾದಾಮಿ ಎಣ್ಣೆಗೆ 1/3ನೇ ಭಾಗದಷ್ಟು ಟೀ ಚಮಚ ಆಲಮ್ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.

ಮುಖದ ಮೇಲೆ ಅನ್ವಯಿಸಿ, ನಿಧಾನವಾಗಿ ಮಸಾಜ್ ಮಾಡಿ.

ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ತ್ವಚೆಯ ಆರೋಗ್ಯಕ್ಕೆ ಹಾಗೂ ಉತ್ತಮ ಆಕರ್ಷಣೆಗಾಗಿ ತಿಂಗಳಿಗೆ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಬಹುದು.

ಬಾದಾಮಿ ಎಣ್ಣೆ + ಗ್ರೀನ್ ಟೀ

ಬಾದಾಮಿ ಎಣ್ಣೆ + ಗ್ರೀನ್ ಟೀ

1/2 ಟೀ ಚಮಚ ಬಾದಾಮಿ ಎಣ್ಣೆಗೆ 1 ಟೀ ಚಮಚ ಗ್ರೀನ್ ಟೀ ಸೇರಿಸಿ, ಮಿಶ್ರಗೊಳಿಸಿ.

ಮುಖಕ್ಕೆ ಇದನ್ನು ಅನ್ವಯಿಸಿ, ತಕ್ಷಣವೇ ಮೃದುವಾಗಿ ಮಸಾಜ್ ಮಾಡಿ.

ನಂತರ ಸ್ವಲ್ಪ ಕ್ಲೀನ್ಸರ್ ಬಳಸಿ ತ್ವಚೆಯನ್ನು ಸ್ವಚ್ಛಗೊಳಿಸಿ

ತೇವಾಂಶ ಹಾಗೂ ಆಕರ್ಷಕ ತ್ವಚೆಯನ್ನು ಪಡೆಯಲು ವಾರಕ್ಕೊಮ್ಮೆ ಈ ಮಿಶ್ರಣವನ್ನು ಅನ್ವಯಿಸಿ.

ಬಾದಾಮಿ ಎಣ್ಣೆ + ರೋಸಿಪ್ ಎಣ್ಣೆ

ಬಾದಾಮಿ ಎಣ್ಣೆ + ರೋಸಿಪ್ ಎಣ್ಣೆ

ಒಂದು ಬೌಲ್‍ನಲ್ಲಿ 1/2 ಟೀ ಚಮಚ ಬಾದಾಮಿ ಎಣ್ಣೆ ಹಾಗೂ 2-3 ಹನಿ ರೋಸಿಪ್ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ.

5-10 ನಿಮಿಷಗಳ ಬಳಿಕ, ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿ.

ಬಾದಾಮಿ ಎಣ್ಣೆ+ ಸೌತೆಕಾಯಿ

ಬಾದಾಮಿ ಎಣ್ಣೆ+ ಸೌತೆಕಾಯಿ

ಕೆಲವು ಸೌತೆಕಾಯಿ ಸ್ಲೈಸ್‍ಗಳನ್ನು ಪೇಸ್ಟ್ ಮಾಡಿ, ನಂತರ 1 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ.

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳ ಕಾಲ ಆರಲು ಬಿಡಿ.

ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಅತ್ಯುತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2 ಬಾರಿ ಈ ಮಿಶ್ರಣವನ್ನು ಅನ್ವಯಿಸಿ.

ಬಾದಾಮಿ ಎಣ್ಣೆ + ನಿಂಬೆ ರಸ

ಬಾದಾಮಿ ಎಣ್ಣೆ + ನಿಂಬೆ ರಸ

1/2 ಟೀ ಚಮಚ ಬಾದಾಮಿ ಎಣ್ಣೆಗೆ 1 ಟೀ ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಉತ್ತಮ ಗುಣಮಟ್ಟದ ತ್ವಚೆಯನ್ನು ಪಡೆದುಕೊಳ್ಳಲು ವಾರದಲ್ಲಿ 2-3 ಬಾರಿ ಅನ್ವಯಿಸಿ.

English summary

Ways To Use Almond Oil To Get Radiant And Dewy Skin

Lately, the trend of dewy and radiant complexion is at an all-time high. Women are splurging big money on cosmetic treatments and pricey sheet masks and scrubs to achieve this type of a complexion. But if you feel hesitant to use chemical-infused products, then today's post is ideal for you. As today at Boldsky, we're letting you know about certain ways in which you can use a natural oil to attain dewy and radiant glow on your face. Take a look at the ways in which you can use this oil to attain naturally dewy and radiant skin.