Just In
Don't Miss
- Movies
ದರ್ಶನ್, ರಾಕ್ಲೈನ್ ಬಿಟ್ಟು 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮನೆಯಲ್ಲೇ ಮಾಡಿ ನೋಡಿ, ನೈಸರ್ಗಿಕ ಶೇವಿಂಗ್ ಕ್ರೀಮ್!
ಫ್ಯಾಷನ್ ಲೋಕದಿಂದಾಗಿ ಪ್ರತಿಯೊಬ್ಬ ಪುರುಷನು ಗಡ್ಡ ಮತ್ತು ಮೀಸೆಯನ್ನು ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡಿರುತ್ತಾನೆ. ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರಂತೆ ಪ್ರತಿಯೊಬ್ಬರು ಒಂದೊಂದು ರೀತಿಯಲ್ಲಿ ಗಡ್ಡ ಮೀಸೆ ವಿನ್ಯಾಸ ಮಾಡುತ್ತಾರೆ. ಅದರಲ್ಲೂ ಕೆಲವರು ಪ್ರತೀ ದಿನ ಗಡ್ಡ ತೆಗೆಯುತ್ತಾರೆ.
ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!
ಆದರೆ ಗಡ್ಡ ತೆಗೆಯುವ ಕ್ರೀಮ್ ನಲ್ಲಿ ಒಂದೊಂದು ರೀತಿಯ ಸುವಾಸನೆ ಹಾಗೂ ತಂಪು ಇರುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್‌ಗಳಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿಕೊಳ್ಳುತ್ತಾರೆ. ಇದಕ್ಕಾಗಿ ಶೇವಿಂಗ್ ಕ್ರೀಮ್ ಅನ್ನು ಮಾರುಕಟ್ಟೆಯಿಂದ ತರುವ ಬದಲು ಮನೆಯಲ್ಲೇ ತಯಾರಿಸಬಹುದು.
ಶೇವಿಂಗ್ ಬಳಿಕ ಬಳಸಬಹುದಾದ ಫೇಸ್ ಪ್ಯಾಕ್
ಇದರಿಂದ ತ್ವಚೆಗೂ ಯಾವುದೇ ರೀತಿಯ ಅಡ್ಡಪರಿಣಾಮವಾಗಲ್ಲ. ನೀವೇ ತಯಾರಿಸಬಹುದಾದ ಕೆಲವು ಶೇವಿಂಗ್ ಕ್ರೀಮ್ ಅನ್ನು ನೀವು ಬಳಸಬಹುದು. ಇದು ನಿಮಗೆ ಖಂಡಿತವಾಗಿಯೂ ಒಳ್ಳೆಯ ಸುವಾಸನೆ ಹಾಗೂ ತಂಪು ನೀಡುವುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರಲ್ಲ....

ಸಿಟ್ರಸ್ ಬ್ಲಾಸ್ಟ್
ಬೇಕಾಗುವ ಸಾಮಗ್ರಿಗಳು
*ಒಂದು ಕಪ್ ಶಿಯಾ ಬೆಣ್ಣೆ,
*ಎರಡು ವಿಟಮಿನ್ ಇ ಕ್ಯಾಪ್ಸೂಲ್
*ಒಂದು ಕಪ್ ಆಲಿವ್ ತೈಲ
*ಎರಡು ಚಮಚ ಅಡುಗೆ ಸೋಡಾ
*ಕೆಲವು ಹನಿ ಸಿಟ್ರೊನೆಲ್ಲಾ ಸಾರಭೂತ ತೈಲ
*ಕೆಲವು ಹನಿ ಕಿತ್ತಳೆ ಸಾರಭೂತ ತೈಲ

ತಯಾರಿಸುವ ವಿಧಾನ
ಶಿಯಾ ಬೆಣ್ಣೆ ಮತ್ತು ಆಲಿವ್ ತೈಲವನ್ನು ಸರಿಯಾಗಿ ಮಿಶ್ರಣ ಮಾಡಿ ಕರಗಿಸಿಕೊಳ್ಳಿ. ಬೆಂಕಿಯಿಂದ ಈ ಮಿಶ್ರಣವನ್ನು ಹೊರಗಿಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಇದಕ್ಕೆ ವಿಟಮಿನ್ ಇ ಮತ್ತು ಸಾರಭೂತ ತೈಲ ಮಿಶ್ರಣ ಮಾಡಿ. ಇದಕ್ಕೆ ನಿಧಾನವಾಗಿ ಅಡುಗೆ ಸೋಡಾವನ್ನು ನಿಧಾನವಾಗಿ ಹಾಕಿ ಕ್ರೀಮ್ ಆಗುವ ತನಕ ಮಿಶ್ರಣ ಮಾಡಿ. ಇದನ್ನು ಬಾಟಲಿಗೆ ಹಾಕಿ ಫ್ರಿಡ್ಜ್ ನಲ್ಲಿಡಿ.

ಗುಟ್ಸ್ ಮತ್ತು ಜಿನ್ಸೆಂಗ್
ಬೇಕಾಗುವ ಸಾಮಗ್ರಿಗಳು
*ಒಂದು ಕಪ್ ಶಿಯಾ ಬೆಣ್ಣೆ
*ಎರಡು ವಿಟಮಿನ್ ಇ ಕ್ಯಾಪ್ಸೂಲ್ಸ್
*ಒಂದು ಕಪ್ ಸಿಹಿ ಬಾದಾಮಿ ಎಣ್ಣೆ
*ಒಂದು ಚಮಚ ಸರಿಯಾಗಿ ಕತ್ತರಿಸಿರುವ ಜಿನ್ಸೆಂಗ್
*ಎರಡು ಚಮಚ ಅಡುಗೆ ಸೋಡಾ

ತಯಾರಿಸುವ ವಿಧಾನ
ಶಿಯಾ ಬೆಣ್ಣೆ ಮತ್ತು ಸಿಹಿ ಬಾದಾಮಿ ಎಣ್ಣೆಯನ್ನು ಕರಗಿಸಿ. ಇದನ್ನು ಸರಿಯಾಗಿ ಮಿಶ್ರಣ ಮಾಡುತ್ತಾ ಇರಿ. ಮಿಶ್ರಣವು ತಣ್ಣಗಾದ ಬಳಿಕ ಅದಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಮಿಶ್ರಣ ಮಾಡಿ. ಅಡುಗೆ ಸೋಡಾವನ್ನು ಹಾಕಿ ಮಿಶ್ರಣ ಮಾಡಿದಾಗ ನೊರೆ ಬರುವುದು. ಈ ಕ್ರೀಮ್ ನ್ನು ಬಾಟಲಿಗೆ ಹಾಕಿ ಫ್ರಿಡ್ಜ್ ನಲ್ಲಿಡಿ.

ಲೋಳೆಸರ ಜೆಲ್
*ಅಗತ್ಯವಿರುವ ಸಾಮಾಗ್ರಿಗಳು:
*ಲೋಳೆಸರ ಅಥವಾ ಆಲೋವೆರಾ ಜೆಲ್ - ¼ ಕಪ್
*ವೆಜಿಟೆಬಲ್ ಗ್ಲಿಸರಿನ್ - ಎರಡು ದೊಡ್ಡಚಮಚ
*ಟೀ ಟ್ರೀ ಅವಶ್ಯಕ ತೈಲ (tea tree essential oil) - ಎಂಟು ಹನಿಗಳು
*ಉಪ್ಪು : ಒಂದು ಚಿಕ್ಕ ಚಮಚ
*liquid castile soap - 1/2 ಕಪ್
*ಕೊಬ್ಬರಿ ಎಣ್ಣೆ: 1/2 ಕಪ್
*ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲ - ಹತ್ತು ಹನಿಗಳು
*ವಿಟಮಿನ್ ಇ ಕ್ಯಾಪ್ಯೂಲುಗಳು - ಐದು (ಒಳಗಿನ ಪುಡಿ)
ವಿಧಾನ
1) ಕೊಂಚ ಬಿಸಿನೀರಿನಲ್ಲಿ ಉಪ್ಪು ಹಾಕಿ ಕರಗಿಸಿ ಇದಕ್ಕೆ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ನಯವಾದ ಮಿಶ್ರಣ ಮಾಡಿ.
2) ಇದನ್ನು ಒಂದು ಬಾಟಲಿಗೆ ವರ್ಗಾಯಿಸಿ ಮುಚ್ಚಳ ಗಟ್ಟಿಯಾಗಿ ಮುಚ್ಚಿ ಚೆನ್ನಾಗಿ ಅಲುಗಾಡಿಸಿ.
3) ಇದನ್ನು ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿ.