For Quick Alerts
ALLOW NOTIFICATIONS  
For Daily Alerts

ಈ ಹಣ್ಣುಗಳ ಸಿಪ್ಪೆಯು ಚರ್ಮದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ

ಯಾವುದೇ ಹಣ್ಣಾಗಲಿ ಅದರ ಸಿಪ್ಪೆಯ ಬಗ್ಗೆ ನಾವು ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಹಣ್ಣುಗಳ ಸಿಪ್ಪೆಯಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇದೆ ಎಂದು ಹಲವಾರು ಅಧ್ಯಯನಗಳು ಪತ್ತೆ ಮಾಡಿವೆ.

By Hemanth
|

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ಮಾತಿದೆ. ಹಣ್ಣುಗಳಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಈ ಒಂದು ವಾಕ್ಯದಿಂದ ನಮಗೆ ತಿಳಿದುಬರುತ್ತದೆ. ಸೇಬಿನಂತೆ ಇತರ ಹಣ್ಣುಗಳು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿ ಇರುವಂತಹ ಪೋಷಕಾಂಶಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯದ ಕೀಲಿ ಕೈ

ಯಾವುದೇ ಹಣ್ಣಾಗಲಿ ಅದರ ಸಿಪ್ಪೆಯ ಬಗ್ಗೆ ನಾವು ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಹಣ್ಣುಗಳ ಸಿಪ್ಪೆಯಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇದೆ ಎಂದು ಹಲವಾರು ಅಧ್ಯಯನಗಳು ಪತ್ತೆ ಮಾಡಿವೆ. ಕೆಲವೊಂದು ಹಣ್ಣುಗಳ ಸಿಪ್ಪೆಯು ಚರ್ಮದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಇದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

 ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯು ಚರ್ಮದ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಮತ್ತು ಪ್ರೋಟೀನ್ ಚರ್ಮದ ಬಣ್ಣ ಮತ್ತು ಹಲವಾರು ರೀತಿಯ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡುವುದು. ಬಾಳೆಹಣ್ಣಿನ ಸಿಪ್ಪೆಯನ್ನು ದಿನದಲ್ಲಿ ಎರಡು ಸಲ ಚರ್ಮಕ್ಕೆ ಉಜ್ಜಿಕೊಂಡರೆ ಕಾಂತಿಯುತ ಹಾಗೂ ಹೊಳೆಯುವ ಚರ್ಮವು ನಿಮ್ಮದಾಗುವುದು. ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಹುಡಿ ಮಾಡಿ ಮೊಸರಿನೊಂದಿಗೆ ಬೆರೆಸಿ ಫೇಸ್ ಮಾಸ್ಕ್ ಮಾಡಿಕೊಂಡರೆ ಕೆಲವೇ ವಾರದಲ್ಲಿ ಪರಿಣಾಮ ನಿಮ್ಮ ಮುಂದಿರುವುದು. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಅದರ ಹುಡಿ ಮಾಡಿಕೊಳ್ಳಿ. ಎರಡು ಚಮಚ ಮೊಸರಿಗೆ ಒಂದು ಚಮಚ ದಾಳಿಂಬೆ ಹುಡಿ ಮತ್ತು ಒಂದು ಚಮಚ ಲಿಂಬೆರಸ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸೇವಿಸಿದರೆ ಅದರಿಂದ ಹಲವಾರು ಕಾಯಿಲೆಗಳು ಬರದಂತೆ ತಡೆಯಬಹುದು. ಅದೇ ರೀತಿ ಅದರ ಸಿಪ್ಪೆಯಿಂದ ಹಲವಾರು ಲಾಭಗಳು ಇವೆ. ಪಪ್ಪಾಯಿ ಸಿಪ್ಪೆಯನ್ನು ಬಳಸಿದರೆ ಕಾಲಜನ್ ಬಿಡುಗಡೆ ಹೆಚ್ಚುವುದು. ಇದರಿಂದ ಆರೋಗ್ಯಕರ ಹಾಗೂ ಕಾಂತಿಯುತ ಚರ್ಮವು ನಿಮ್ಮದಾಗುವುದು.

ಪಪ್ಪಾಯಿ ಸಿಪ್ಪೆ

ಪಪ್ಪಾಯಿ ಸಿಪ್ಪೆ

ಸ್ವಲ್ಪ ಪಪ್ಪಾಯಿ ಸಿಪ್ಪೆ ತೆಗೆದುಕೊಂಡು ಅದನ್ನು ಮುಖಕ್ಕೆ ಸ್ಕ್ರಬ್ ಮಾಡಿ. ಒಣ ಹಾಗೂ ನಿಸ್ತೇಜ ಚರ್ಮವನ್ನು ಪುನರ್ಯೌವನಗೊಳಿಸುವುದು. ಪಪ್ಪಾಯಿ ಸಿಪ್ಪೆ ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಪಪ್ಪಾಯಿ ಸಿಪ್ಪೆಯ ಪೇಸ್ಟ್ ಗೆ ಅಲೋವೆರಾದ ಜೆಲ್ ಹಾಕಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆಯಲ್ಲಿ ನೈಸರ್ಗಿಕದತ್ತವಾದ ಬ್ಲೀಚಿಂಗ್ ಗುಣಗಳು ಇರುವ ಕಾರಣದಿಂದಾಗಿ ಇದು ಚರ್ಮವನ್ನು ಹೊಳೆಯುವಂತೆ ಹಾಗೂ ಕಾಂತಿಯುತವಾಗಿ ಇಡುವುದು. ಸ್ವಲ್ಪ ಸೇಬಿನ ಸಿಪ್ಪೆ ತೆಗೆದುಕೊಳ್ಳಿ ಮತ್ತು ಇದನ್ನು ನೀರಿಗೆ ಹಾಕಿ ಕುದಿಸಿ.

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆ

ಈ ನೀರನ್ನು ತೆಗೆದು ಚರ್ಮದ ಟೋನರ್ ಆಗಿ ಬಳಸಿ. ಸೇಬಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಸೂರ್ಯನಿಂದ ಚರ್ಮದ ಮೇಲಾಗುವ ಕಲೆಗಳನ್ನು ನಿವಾರಣೆ ಮಾಡುತ್ತದೆ. ಸ್ವಲ್ಪ ಸೇಬಿನ ಸಿಪ್ಪೆಯ ಹುಡಿ ಮಾಡಿಕೊಳ್ಳಿ ಮತ್ತು ಇದಕ್ಕೆ ಓಟ್ಸ್ ಮತ್ತು ಮೊಸರನ್ನು ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಮಸಾಜ್ ಮಾಡಿ. ಬಳಿಕ ನೀರಿನಿಂದ ತೊಳೆಯಿರಿ.

ಕಿತ್ತಳೆ ಸಿಪ್ಪೆ ಫೇಸ್ ಪ್ಯಾಕ್

ಕಿತ್ತಳೆ ಸಿಪ್ಪೆ ಫೇಸ್ ಪ್ಯಾಕ್

ಎರಡು ಚಮಚದಷ್ಟು ಕಿತ್ತಳೆ ಸಿಪ್ಪೆ ಹುಡಿಯನ್ನು ತೆಗೆದುಕೊಂಡು ಸ್ವಲ್ಪ ಹಾಲು ಅಥವಾ ಹಾಲಿನ ಕ್ರೀಮ್‌ನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಒಂದು ಚಮಚದಷ್ಟು ತೆಂಗಿನೆಣ್ಣೆಯನ್ನು ಹಾಕಿ ಮತ್ತು ಈ ಮಿಶ್ರಣದೊಂದಿಗೆ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ. ನಿಮ್ಮ ಮುಖದಲ್ಲಿ 15 ನಿಮಿಷಗಳ ಕಾಲ ಈ ಮಿಶ್ರಣ ಹಾಗೆಯೇ ಇರಲಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Types Of Fruit Peels And Their Masks For Skin

Fruit peel is a source of proteins and vitamins that benefit your skin in several ways. It helps to give you a radiant as well as glowing complexion easily. With fruit peels being so beneficial, you could also use the same in preparing different fruit peel masks for skin. Due to a lot of nutrients available in the fruit peels, these can help to give long-lasting positive benefits on the skin.
X
Desktop Bottom Promotion