ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸಿ, ಮುಖದ ಸೌಂದರ್ಯ ಹೆಚ್ಚುತ್ತದೆ

By: Divya pandith
Subscribe to Boldsky

ಅನೇಕರು ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುವುದಿಲ್ಲ. ಅದರಲ್ಲೂ 30 ವರ್ಷ ದಾಟಿದ ಮೇಲೆ ಮನೆ ಕೆಲಸ, ಮಕ್ಕಳ ಆರೈಕೆ ಹಾಗೂ ಇನ್ನಿತರ ಜವಾಬ್ದಾರಿ ಕೆಲಸದಲ್ಲಿಯೇ ಮುಳುಗಿ ಹೋಗುತ್ತಾರೆ. ಹಾಗಾಗಿ ಅವರಿಗೆ ವಯಸ್ಸಾಗದಿದ್ದರೂ ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಬಹು ಬೇಗ ಮುಖದಲ್ಲಿ ಸುಕ್ಕುಗಟ್ಟುವುದು, ತ್ವಚೆ ಹೊಳಪನ್ನು ಕಳೆದುಕೊಳ್ಳುವುದನ್ನು ಗಮನಿಸಬಹುದು.

ಚರ್ಮದ ಆರೋಗ್ಯ ಮತ್ತು ಹೊಳಪನ್ನು ಹೆಚ್ಚಿಸಬೇಕೆಂದರೆ ತಿಂಗಳಿಗೊಮ್ಮೆ ಫೇಶಿಯಲ್ ಮಾಡಿಸಬೇಕು. ಕೆಲವು ಅಂಕಿ ಅಂಶದ ಪ್ರಕಾರ 18-30 ವರ್ಷದ ಒಳಗಿನ ಮಹಿಳೆಯರು ಮಾತ್ರ ಸೌಂದರ್ಯ ಚಿಕಿತ್ಸೆ ಹಾಗೂ ಫೇಶಿಯಲ್ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ಅಲ್ಲದೆ ಅವುಗಳ ಉಪಯೋಗವನ್ನು ಪಡೆದುಕೊಳ್ಳುತ್ತಾರೆ. ಅದೇ 30 ವರ್ಷದ ನಂತರದ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಅಥವಾ ತ್ವಚೆಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವುದಿಲ್ಲ ಎನ್ನಲಾಗುತ್ತದೆ.

ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್‌

ಫೇಶಿಯಲ್ ಮಾಡಿಸುವುದರಿಂದ ತ್ವಚೆಯ ಆರೋಗ್ಯ ಬಹು ಬೇಗ ಹಾಳಾಗುತ್ತದೆ ಎನ್ನುವ ತಪ್ಪು ಕಲ್ಪನೆಗಳೂ ಇರುತ್ತವೆ. ರಾಸಾಯನಿಕ ಪದಾರ್ಥಗಳಿಂದ ಮುಕ್ತವಾಗಿರುವ ಹಲವಾರು ಬಗೆಯ ಫೇಶಿಯಲ್‍ಗಳಿವೆ. ಅವುಗಳನ್ನು ತಿಂಗಳಿಗೊಮ್ಮೆ ಅನ್ವಯಿಸಿಕೊಂಡರೆ ತ್ವಚೆಯು ಆರೋಗ್ಯ ಪೂರ್ಣವಾಗಿ ಕಂಗೊಳಿಸುವುದು. ವಿವಿಧ ಬಗೆಯ ತ್ವಚೆಗಳಿಗೆ ಹೊಂದಿಕೊಳ್ಳುವ ಫೇಶಿಯಲ್‍ನ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ. ಇದನ್ನು ಓದಿ, ನಂತರ ನೀವು ಇದನ್ನು ಪ್ರಯೂಗಿಸಿ ನೋಡಿ... 

ಎಲ್ಲಾ ತ್ವಚೆಗಾಗಿ ಹಣ್ಣುಗಳ ಫೇಶಿಯಲ್

ಎಲ್ಲಾ ತ್ವಚೆಗಾಗಿ ಹಣ್ಣುಗಳ ಫೇಶಿಯಲ್

ಹೆಸರೇ ಹೇಳುವಂತೆ ವಿವಿಧ ಬಗೆಯ ಹಣ್ಣಿನಿಂದ ಮಾಡುವ ಫೇಶಿಯಲ್‍ಅನ್ನು ಎಣ್ಣೆ ತ್ವಚೆ, ಶುಷ್ಕ ತ್ವಚೆ ಹಾಗೂ ಸಾಮಾನ್ಯ ತ್ವಚೆಯವರು ಸಹ ಮಾಡಿಕೊಳ್ಳಬಹುದು. ಫೇಶಿಯಲ್ ಮಾಡಿಕೊಳ್ಳುವ ಮೊದಲು ಯಾವ ಹಣ್ಣು ಎನ್ನುವ ಆಯ್ಕೆ ಮಾಡಿಕೊಳ್ಳಬೇಕಾಗುವುದು. ಹಣ್ಣಿನಲ್ಲಿ ಮಲ್ಟಿ ಆಸಿಡ್, ಸಿಟ್ರಿಕ್ ಆಸಿಡ್, ಟಾರ್ಟಾರಿಕ್ ಸೇರಿದಂತೆ ಇನ್ನಿತರ ಆಮ್ಲೀಯ ಗುಣಗಳಿರಬೇಕು. ಆಗ ಫೇಶಿಯಲ್ ಮಾಡಿಕೊಳ್ಳುವುದರ ಪರಿಣಾಮವೂ ಉತ್ತಮವಾಗಿರುತ್ತದೆ.

ಎಣ್ಣೆ ತ್ವಚೆಗೆ ಸೂಕ್ತವಾದ ಫೇಶಿಯಲ್

ಎಣ್ಣೆ ತ್ವಚೆಗೆ ಸೂಕ್ತವಾದ ಫೇಶಿಯಲ್

ಎಣ್ಣೆ ತ್ವಚೆ ಹೊಂದಿರುವವರಿಗೆ ಫೇಶಿಯಲ್‍ನ ಆಯ್ಕೆ ಕೊಂಚ ಕಷ್ಟವಾಗುವುದು. ಏಕೆಂದರೆ ಸಾಮಾನ್ಯವಾಗಿ ಎಣ್ಣೆ ತ್ವಚೆಯವರಿಗೆ ಮೊಡವೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಅಂತಹವರು ಆದಷ್ಟು ಮೊಡವೆ ನಿರ್ಮೂಲನೆಗೆ ಹಾಗೂ ಮೊಡವೆಯ ಕೆರಳುವಿಕೆ ಹೆಚ್ಚಾಗದಂತಹ ಫೇಶಿಯಲ್‍ನ ಆಯ್ಕೆ ಮಾಡಿಕೊಳ್ಳಬೇಕು. ಆದಷ್ಟು ಕೆನೆ, ಮೊಸರು ಹಾಗೂ ಹಾಲಿನ ಮಿಶ್ರಣ ಹೊಂದಿರುವಂತಹ ಫೇಶಿಯಲ್‍ನ ಮೊರೆ ಹೋಗುವುದು ಉತ್ತಮ. ಇವು ಮೊಡವೆಯ ನೋವನ್ನು ಹೆಚ್ಚಿಸದು. ಬದಲಿಗೆ ತ್ವಚೆಯಲ್ಲಿ ಕಾಂತಿ ಮೂಡುವಂತೆ ಮಾಡುವವು.

ಒಣ ತ್ವಚೆಗಾಗಿ ಫೇಶಿಯಲ್

ಒಣ ತ್ವಚೆಗಾಗಿ ಫೇಶಿಯಲ್

ಶುಷ್ಕ ತ್ವಚೆಯ ಚರ್ಮವು ಸದಾ ಒಣಗಿರುವಂತೆ ಹಾಗೂ ಕಾಂತಿ ಕಳೆದುಕೊಂಡಿರುವಂತೆ ಕಾಣುತ್ತದೆ. ಸತ್ತ ಜೀವಕೋಶಗಳು ತ್ವಚೆಯ ಮೇಲೆ ಹಾಗೆ ಉಳಿದುಕೊಂಡಿರುವಂತೆ ಕಾಣುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಅಂತಹವರು ಆದಷ್ಟು ತ್ವಚೆಯು ತೇವಾಂಶದಿಂದ ಕೂಡಿರುವಂತೆ ಮಾಡುವ ಫೇಶಿಯಲ್‍ನ ಮೊರೆ ಹೋಗಬೇಕು. ಇಂತಹ ತ್ವಚೆಯವರಿಗಾಗಿ ಗಾಲ್ವಾನಿಕ್ ಫೇಶಿಯಲ್ ಎನ್ನುವುದಿದೆ. ಇದು ಸ್ವಲ್ಪ ದುಬಾರಿಯಾರಿರಬಹುದು. ಆದರೆ ಇದರ ಆರೈಕೆಯಿಂದ ತ್ವಚೆಯು ಸದಾ ತೇವಾಂಶದಿಂದ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಒರಟು ತ್ವಚೆಗೆ ಸಿಲ್ವರ್ ಫೇಶಿಯಲ್

ಒರಟು ತ್ವಚೆಗೆ ಸಿಲ್ವರ್ ಫೇಶಿಯಲ್

ಚರ್ಮದ ಮೇಲ್ಭಾಗದಲ್ಲಿ ಜೀವಾಣುಗಳ ಸಂಗ್ರಹವಾಗುವುದರಿಂದ ತ್ವಚೆಯು ಹೆಚ್ಚು ಒರಟಾಗುವುದು. ಹಾಗಾಗಿ ಇಂತಹವರು ಪ್ರತಿ ಬಾರಿಯೂ ನಿರ್ವಿಷಗೊಳಿಸುತ್ತಿರಬೇಕಾಗುತ್ತದೆ. ಹಾಗೆ ಮಾಡುವ ಬದಲು ತಿಂಗಳಿಗೊಮ್ಮೆ ಸಿಲ್ವರ್ ಫೇಶಿಯಲ್ ಮಾಡಿಸಿದರೆ ಸಾಕು. ಅದು ತ್ವಚೆಯನ್ನು ಮೃದು ಹಾಗೂ ಕೋಮಲವಾಗಿರುವಂತೆ ಮಾಡುತ್ತದೆ. ತ್ವಚೆಯಲ್ಲಿ ಸಂಗ್ರಹವಾಗಿರುವ ಕೊಳಕು ಜೀವಾಣುಗಳ ಸಂಗ್ರಹ ಹಾಗೂ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಆಗ ತ್ವಚೆಯು ತಾಜಾತನದಿಂದ ಕೂಡಿರುವಂತೆ ಶೋಭಿತವಾಗುತ್ತದೆ.

ಜೋತು ಬಿದ್ದ ತ್ವಚೆಗೆ ಕಾಲೇಜನ್ ಫೇಶಿಯಲ್

ಜೋತು ಬಿದ್ದ ತ್ವಚೆಗೆ ಕಾಲೇಜನ್ ಫೇಶಿಯಲ್

ತ್ವಚೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಅನೇಕ ಮಹಿಳೆಯರ ತ್ವಚೆಯು ಬಹು ಬೇಗ ಜೋತು ಬಿದ್ದಂತೆ ಕಾಣುತ್ತದೆ. ಜೊತೆಗೆ ವಯಸ್ಸಾದಂತೆ ಶೋಭಿತವಾಗುತ್ತದೆ. ಚರ್ಮದಲ್ಲಿ ಕಾಲೇಜನ್ ಮತ್ತು ಎಲಾಸ್ಟಿನ್ ಗುಣವು ಕಡಿಮೆಯಾದಾಗ ಅಥವಾ ಕಳೆದುಕೊಂಡಾಗ ತ್ವಚೆಯು ಜೋತು ಬಿದ್ದಂತೆ

ಆಗುತ್ತದೆ. ಅಂತಹವರು ಕಾಲೇಜನ್ ಫೇಶಿಯಲ್ ಆರೈಕೆ ಮಾಡಿಕೊಳ್ಳುವುದು ಸೂಕ್ತ. ಈಫೇಶಿಯಲ್‍ನಿಂದ ಕಾಲೇಜನ್ ಗುಣವು ತ್ವಚೆಯಲ್ಲಿ ಹೆಚ್ಚುವಂತೆ ಉತ್ತೇಜಿಸುತ್ತದೆ. ಜೊತೆಗೆ ತ್ವಚೆಯ ಬಿಗಿತ ಹೆಚ್ಚಾಗಿ ಸುಂದರವಾಗಿ ಕಾಣಬಹುದು.

ಮಂಕಾದ ತ್ವಚೆಗೆ ಗೋಲ್ಡನ್ ಫೇಶಿಯಲ್

ಮಂಕಾದ ತ್ವಚೆಗೆ ಗೋಲ್ಡನ್ ಫೇಶಿಯಲ್

ಧೂಳು ಮಿಶ್ರಿತ ಗಾಳಿ, ಸತ್ತ ಚರ್ಮಕೋಶಗಳ ನಿರ್ಮಾಣ ಹಾಗೂ ತ್ವಚೆಯ ಆರೈಕೆಯ ಕೊರತೆ ಉಂಟಾದಾಗ ತ್ವಚೆಯು ಮಂಕಾಗಿ ಕಾಣುವುದು ಸಹಜ. ಈ ರೀತಿಯ ಸಮಸ್ಯೆಗಳಿಂದ ನಿಮ್ಮ ತ್ವಚೆಯು ಮಂಕಾಗಿ ಕಾಣಿಸಿಕೊಳ್ಳುತ್ತಿದ್ದರೆ ಗೋಲ್ಡನ್ ಫೇಶಿಯಲ್‍ಅನ್ನು ಮಾಡಿಸಿ. ತಿಂಗಳಿಗೊಮ್ಮೆ ಈ ಆರೈಕೆಯನ್ನು ಮಾಡಿಸಿದರೆ ಮುಖದಲ್ಲಿ ಕಾಂತಿಯು ವರ್ಧಿಸುವುದು ಹಾಗೂ ಮೃದು ಮತ್ತು ಕೋಮಲ ತ್ವಚೆಯಂತೆ ಕಂಗೊಳಿಸುವುದು.

ವಯಸ್ಸಾದ ತ್ವಚೆಗೆ ವೈನ್ ಫೇಶಿಯಲ್

ವಯಸ್ಸಾದ ತ್ವಚೆಗೆ ವೈನ್ ಫೇಶಿಯಲ್

ನಿಮಗೂ ವಯಸ್ಸಾಗಿದೆ ಅಥವಾ ತ್ವಚೆಯು ವಯಸ್ಸಾದ ಕಳೆಯಿಂದ ಕೂಡಿದೆ ಎಂದಾದರೆ ಮೊದಲು ವೈನ್ ಫೇಶಿಯಲ್ ಮಾಡಿಸುವುದು ಸೂಕ್ತ. ಈ ಫೇಶಿಯಲ್ ಮಾಡುವಾಗ ಪಾಲಿಫಿನೋಲ್ ಎಣ್ಣೆ ಬಳಕೆಯನ್ನು ಮಾಡುವುದರಿಂದ ತ್ವಚೆಯಲ್ಲಿ ಕಾಣಿಸುವ ಸುಕ್ಕುಗಳ ಕಲೆ, ವಯಸ್ಸಾದ ತ್ವಚೆಯನ್ನು ನಿವಾರಿಸಿ ಪುನಃ ಜೀವ ತುಂಬುವಂತೆ ಮಾಡುತ್ತದೆ. ಮುಖದ ಮೇಲೆ ಅಸಹ್ಯ ಎನಿಸುವ ಚಿಹ್ನೆಗಳನ್ನು ನಿವಾರಿಸಿ ಹೆಚ್ಚು ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ.

ಸುಟ್ಟ ಮುಖಕ್ಕೆ ಡಿ-ಟಾನ್ ಫೇಶಿಯಲ್

ಸುಟ್ಟ ಮುಖಕ್ಕೆ ಡಿ-ಟಾನ್ ಫೇಶಿಯಲ್

ಸೂರ್ಯನ ಕಿರಣ ಅಥವಾ ಯುವಿ ಕಿರಣಗಳಿಂದ ಉಂಟಾಗುವ ಸುಟ್ಟ ಕಲೆಗೆ ಡಿ-ಟಾನ್ ಫೇಶಿಯಲ್ ಹೆಚ್ಚು ಪರಿಣಾಮ ಬೀರುವುದು. ತಿಂಗಳಿಗೊಮ್ಮೆ ಈ ಫೇಶಿಯಲ್ ಮಾಡಿಸುವುದರಿಂದ ತ್ವಚೆಯ ಮೇಲಿರುವ ಸೂರ್ಯನ ಕಿರಣದ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಸೂರ್ಯನ ಕಿರಣದಿಂದ ಉಂಟಾದ ಬಣ್ಣದ ಬದಲಾವಣೆಯನ್ನು ತೆಗೆಯುವುದರ ಜೊತೆಗೆ ತ್ವಚೆಯು ಹೆಚ್ಚು ಹೊಳಪು ಹಾಗೂ ಕಾಂತಿಯಿಂದ ಕಂಗೊಳಿಸುವುದು.

ಸೂಕ್ಷ್ಮ ತ್ವಚೆಗೆ ಆಕ್ಸಿಜನ್ ಫೇಶಿಯಲ್

ಸೂಕ್ಷ್ಮ ತ್ವಚೆಗೆ ಆಕ್ಸಿಜನ್ ಫೇಶಿಯಲ್

ಸೂಕ್ಷ್ಮ ತ್ವಚೆಯನ್ನು ಹೊಂದಿದವರು ಬಹು ಬೇಗ ಹಾಗೂ ಬಲು ಸುಲಭವಾಗಿ ಹಾನಿಗೊಳಗಾಗುತ್ತವೆ. ಕೆಲವು ಚಿಕ್ಕ ಪುಟ್ಟ ಕಾರಣಗಳಿಗೂ ತ್ವಚೆಯು ಕೆಂಪಾಗುವುದು ಅಥವಾ ಅಲರ್ಜಿಯಂತಹ ಗುಳ್ಳೆಗಳು ಕಾಣಿಸಿಕೊಳ್ಳುವವು. ಇಂತಹ ತ್ವಚೆಗೆ ಸೂಕ್ತವಾದ ಫೇಶಿಯಲ್ ಎಂದರೆ ಆಕ್ಸಿಜನ್ ಫೇಶಿಯಲ್. ಈ ಫೇಶಿಯಲ್ ಕ್ರಿಯೆಯಲ್ಲಿ ಬಳಸುವ ಕ್ರೀಮ್‍ಗಳು ಹಾಗೂ ಇನ್ನಿತರ ಉತ್ಪನ್ನಗಳ ಬಳಕೆಯಿಂದ ತ್ವಚೆಯು ಶಾಂತವಾಗಿ ವರ್ತಿಸುವುದು. ಜೊತೆಗೆ ತೇವಾಂಶದಿಂದ ಕೂಡಿದ್ದು, ತ್ವಚೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಶೋಭಿತವಾಗುವುದು.

ಹಾನಿಗೊಳಗಾದ ತ್ವಚೆಗೆ ಡೈಮಂಡ್ ಫೇಶಿಯಲ್

ಹಾನಿಗೊಳಗಾದ ತ್ವಚೆಗೆ ಡೈಮಂಡ್ ಫೇಶಿಯಲ್

ಅನೇಕ ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದ ತ್ವಚೆಯು ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ. ಈ ರೀತಿಯ ಪರಿಣಾಮದಿಂದ ಚರ್ಮದ ಮೇಲೆ ನಿರ್ಜೀವ ಮತ್ತು ಗಾಢವಾದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅಂತಹವರು ಡೈಮಂಡ್ ಫೇಶಿಯಲ್ ಅನ್ವಯಿಸಿಕೊಳ್ಳುವುದು ಸೂಕ್ತ. ಇದು ನೈಸರ್ಗಿಕವಾದ ಬಣ್ಣ ಹಾಗೂ ಹೊಳಪು ಹಿಂತಿರುಗುವಂತೆ ಮಾಡುತ್ತದೆ. ಅಲ್ಲದೆ ತ್ವಚೆಯು ಹೆಚ್ಚು ತಾಜಾತನದಿಂದ ಕೂಡಿರುವಂತೆ ಕಾಣುತ್ತದೆ.

ಗಮನಿಸಿ

ಗಮನಿಸಿ

ನೀವು ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಗಂಭೀರವಾದ ಚರ್ಮ ಕಾಯಿಲೆಯಿದ್ದರೆ ಹೊಸ ಹೊಸ ಫೇಶಿಯಲ್ ಅಥವಾ ತ್ವಚೆಯ ಆರೈಕೆಯನ್ನು ಪಡೆಯುವ ಮೊದಲು ಚರ್ಮಶಾಸ್ತ್ರಜ್ಞರ ಸಲಹೆ ಪಡೆದುಕೊಳ್ಳಲು ಮರೆಯದಿರಿ.

English summary

Types Of Facial According To Your Skin Type And Concern

Facial is an essential monthly beauty ritual that can transform the appearance and feel of your skin. Since ages, women have been getting facials done to rejuvenate their skin and promote its overall wellness. Mostly, a facial should be done on a monthly basis, as overdoing it can cause more harm than good. So, read on to learn about the various facials and the type of skin they're best suitable for.
Subscribe Newsletter