ತ್ವಚೆಯ ಆರೋಗ್ಯಕ್ಕೆ ಅರಿಶಿನದ ಮೊರೆ ಹೋಗಬೇಕು

By: Divya
Subscribe to Boldsky

ಕೆಮ್ಮು ಮತ್ತು ಶೀತಗಳನ್ನು ಕಡಿಮೆ ಮಾಡಬಲ್ಲ ಉಪಯುಕ್ತ ಗಿಡಮೂಲಿಕೆಗಳಲ್ಲಿ ಅರಿಶಿನದ ಪಾತ್ರ ಬಹಳ ಪ್ರಮುಖವಾದದ್ದು. ಭಾರತದಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಗಿಡಮೂಲಿಕೆ ತ್ವಚೆಯ ಸೌಂದರ್ಯ ಕಾಪಾಡುವುದರಲ್ಲೂ ಮಹತ್ತರದ ಪಾತ್ರವಹಿಸುತ್ತದೆ. ನಂಜು ನಿರೋಧಕ ಶಕ್ತಿಯನ್ನು ಹೊಂದಿರುವ ಅರಿಶಿನ ಸೂಕ್ಷ್ಮಾಣುಗಳ ವಿರುದ್ಧ ಹೋರಾಡಿ, ತ್ವಚೆಯ ಮೇಲಿರುವ ಕಲೆ, ಸೋಂಕುಗಳನ್ನು ನಿವಾರಿಸುತ್ತದೆ. ಜೊತೆಗೆ ಚರ್ಮವು ಹೆಚ್ಚು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಅಪರಿಮಿತ ಲಾಭಾಂಶವಿರುವ ಈ ಉತ್ಪನ್ನವನ್ನು ಆಹಾರಗಳ ತಯಾರಿಕೆಯಲ್ಲಿ ಆರೋಗ್ಯಕಾರಕ ಅಂಶಗಳಿಗಾಗಿ ಉಪಯೋಗಿಸಲಾಗುತ್ತದೆ. ಮನೆಯಲ್ಲಿಯೇ ಸಿಗುವ ಈ ಉತ್ಪನ್ನವನ್ನು ಬಳಸಿಕೊಂಡು ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಕಾಂತಿಯುತ ತ್ವಚೆಯ ಮೊರೆ ಹೋಗಲು ಅರಿಶಿನ ಸಹಾಯಮಾಡುವುದು. ಅದು ಹೇಗೆ? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿದರೆ, ಮುಂದೆ ವಿವರಿಸಲಾದ ವಿವರಣೆಯನ್ನು ಓದಿ...   

ಕಡ್ಲೆ ಹಿಟ್ಟು ಮತ್ತು ಅರಿಶಿನ

ಕಡ್ಲೆ ಹಿಟ್ಟು ಮತ್ತು ಅರಿಶಿನ

ಒಂದು ಚಮಚ ಕಡ್ಲೆ ಹಿಟ್ಟು, 1 ಚಮಚ ಮೊಸರು, ಎರಡು ಚಿಟಿಕೆ ಅರಿಶಿನ ಪುಡಿ. ಈ ಮೂರನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಅಗತ್ಯ ಬಿದ್ದರೆ ಸ್ವಲ್ಪ ನೀರನ್ನು ಸೇರಿಸಬಹುದು. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಬೇಕು. ನಂತರ ಸ್ವಚ್ಛಗೊಳಿಸಿ. ತ್ವಚೆಯ ಮೇಲೆ ಎಣ್ಣೆ ಉಗುಳುವುದನ್ನು ಕಡ್ಲೆ ಹಿಟ್ಟು ನಿವಾರಿಸಿದರೆ, ಮೊಸರು ತ್ವಚೆಯ ಮೇಲೆ ತೇವಾಂಶ ಇರುವಂತೆ ಮಾಡುತ್ತದೆ. ಅರಿಶಿನ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ - ಅರಿಶಿನ ಹಾಕಿ ಕುದಿಸಿದ ನೀರು ಕುಡಿದರೆ, ಲಿವರ್-ಮೆದುಳಿಗೆ ಬಹಳ ಒಳ್ಳೆಯದು

ಶ್ರೀಗಂಧ ಮತ್ತು ಅರಿಶಿನ

ಶ್ರೀಗಂಧ ಮತ್ತು ಅರಿಶಿನ

ಒಂದು ಚಮಚ ಗಂಧದ ಪುಡಿ, ಕತ್ತರಿಸಿದ ಅರ್ಧ ಲಿಂಬೆ ಹಣ್ಣಿನ ರಸ, 1 ಚಮಚ ಹಾಲು, ಒಂದು ಚಿಟಕೆ ಅರಿಶಿನ. ಇವುಗಳ ಮಿಶ್ರಣವನ್ನು ಮುಖಕ್ಕೆ ಬಳಿದುಕೊಂಡು 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಮೊಟ್ಟೆ ಮತ್ತು ಅರಿಶಿನ

ಮೊಟ್ಟೆ ಮತ್ತು ಅರಿಶಿನ

ಮೊಟ್ಟೆಯಲ್ಲಿರುವ ಬಿಳಿಯ ಭಾಗ, ಅರ್ಧ ಚಮಚ ಅರಿಶಿನ ಪುಡಿ, ಸ್ವಲ್ಪ ಗುಲಾಬಿ ಹೂವಿನ ನೀರು. ಇವುಗಳ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯಲ್ಲಿ ತೇವಾಂಶ ಹೆಚ್ಚುತ್ತದೆ. ಒಣತ್ವಚೆಯ ಸಮಸ್ಯೆಯಿಂದ ದೂರವಾಗಬಹುದು.

ಅರಿಶಿನ ಮತ್ತು ಹಾಲಿನ ಕೆನೆ

ಅರಿಶಿನ ಮತ್ತು ಹಾಲಿನ ಕೆನೆ

ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ಈ ಫೇಸ್ ಪ್ಯಾಕ್ ಬಳಸಬಹುದು. 1 ಚಮಚ ಗಟ್ಟಿಯಾದ ಹಾಲಿನ ಕೆನೆ, ಅರ್ಧ ಚಮಚ ಗುಲಾಬಿ ಹೂವಿನ ನೀರು ಮತ್ತು ಒಂದು ಚಿಟಕಿ ಅರಿಶಿನ. ಈ ಮಿಶ್ರಣವನ್ನು ತ್ವಚೆಯಮೇಲೆ ಸವರಿ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು.

ಅರಿಶಿನ ಮತ್ತು ನೀರು

ಅರಿಶಿನ ಮತ್ತು ನೀರು

ಮುಖದಲ್ಲಿ ಹೆಚ್ಚು ಮೊಡವೆಗಳು ಕಾಣಿಸಿಕೊಳ್ಳುತ್ತಿದ್ದರೆ ಈ ಉಪಾಯ ಒಳ್ಳೆಯದು. 1 ಚಮಚ ಅರಿಶಿನಕ್ಕೆ ಅರ್ಥಚಮಚ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಬೇಕು. ನಂತರ ಆ ಫೇಸ್ ಪ್ಯಾಕ್ ಅನ್ನು ಚಿಕ್ಕ ಉಂಡೆಯನ್ನಾಗಿ ಮಾಡಿ ಹತ್ತಿ ಬಟ್ಟೆಯಲ್ಲಿ ಕಟ್ಟಬೇಕು. ಆ ಉಂಡೆಯನ್ನು ಮೊಡವೆಯ ಮೇಲೆ ಒತ್ತುತ್ತಾ ಬಂದರೆ ಮೊಡವೆ ಗುಣಮುಖವಾಗುವುದು.

ಅರಿಶಿನ ಮತ್ತು ಅಕ್ಕಿ ಹಿಟ್ಟು

ಅರಿಶಿನ ಮತ್ತು ಅಕ್ಕಿ ಹಿಟ್ಟು

1 ಚಮಚ ಅಕ್ಕಿ ಹಿಟ್ಟು, ಅರ್ಧ ಚಮಚ ಅರಿಶಿನ ಪುಡಿ, 1 ಚಮಚ ಹಾಲು ಮತ್ತು ಸ್ವಲ್ಪ ಜೇನು ತುಪ್ಪ. ಈ ಮಿಶ್ರಣವನ್ನು ಪ್ರತಿದಿನ ಮುಖಕ್ಕೆ ಹಚ್ಚುತ್ತಾ ಬಂದರೆ ತ್ವಚೆಯು ಸುಕ್ಕುಗಟ್ಟುವುದನ್ನು ನಿಯಂತ್ರಿಸಬಹುದು.

ಲಿಂಬೆ ಹಣ್ಣು ಮತ್ತು ಅರಿಶಿನ

ಲಿಂಬೆ ಹಣ್ಣು ಮತ್ತು ಅರಿಶಿನ

ಒಂದು ನಿಂಬೆಹಣ್ಣನ್ನು ಸಮನಾಗಿ ಎರಡು ಭಾಗ ಮಾಡಿ. ಒಂದು ಭಾಗದ ಮೇಲೆ ಸ್ವಲ್ಪ ಅರಿಶಿನವನ್ನು ಉದುರಿಸಿ. ನಂತರ ಆ ನಿಂಬೆ ಹಣ್ಣಿನ ಭಾಗವನ್ನು ಮುಖದ ಮೇಲೆ ಉಜ್ಜಿ. ಹೀಗೆ ಮಾಡುವುದರಿಂದ ಸೂರ್ಯನ ಕಿರಣಕ್ಕೆ ಸುಟ್ಟ ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ. ಜೊತೆಗೆ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಜೇನು ತುಪ್ಪ ಮತ್ತು ಅರಿಶಿನ

ಜೇನು ತುಪ್ಪ ಮತ್ತು ಅರಿಶಿನ

ಒಂದು ಚಮಚ ಜೇನುತುಪ್ಪ, ಒಂದು ಚಮಚ ಗುಲಾಬಿ ನೀರು ಮತ್ತು ಅರ್ಧ ಚಮಚ ಅರಿಶಿನ. ಇದರ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ, 5 ನಿಮಿಷ ಬಿಡಬೇಕು. ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯು ಸದಾ ಮೃದುವಾಗಿ ಇರುವುದು.

ಬೇವಿನ ಎಲೆ ಮತ್ತು ಅರಿಶಿನ

ಬೇವಿನ ಎಲೆ ಮತ್ತು ಅರಿಶಿನ

4-5 ಬೇವಿನ ಎಲೆ ಮತ್ತು ತುಳುಸಿ ಎಲೆಯ ಪೇಸ್ಟ್, 1 ಚಮಚ ಶ್ರೀಗಂಧದ ಪುಡಿ, ಅರ್ಧ ಚಮಚ ಅರಿಶಿನ, ಸ್ವಲ್ಪ ಮೊಸರು. ಈ ಮಿಶ್ರಣವನ್ನು ಪ್ರತಿದಿನ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯ ಅನೇಕ ಸಮಸ್ಯೆಗಳು ಗುಣವಾಗಿ, ತಾಜಾತನದ ಅನುಭವ ನೀಡುವುದು.

ಮೊಡವೆಗಳ ನಿವಾರಣೆ

ಮೊಡವೆಗಳ ನಿವಾರಣೆ

ಒಂದು ನಿಂಬೆ ಹಣ್ಣಿನ ರಸಕ್ಕೆ ಅರ್ಧ ಚಮಚ ಅರಿಶಿನವನ್ನು ಬೆರೆಸಿ, ಮುಖದ ಮೇಲಿರುವ ಮೊಡವೆಗಳಿಗೆ ಅನ್ವಯಿಸಬೇಕು. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಬಳಿಕ ಮಾಯಿಶ್ಚುರೈಸಿಂಗ್ ಕ್ರೀಮ್ ಹಚ್ಚಿದರೆ ಮೊಡವೆ ನಿವಾರಣೆಯಾಗುವುದು.

ಇದನ್ನೂ ಓದಿ -ಚರ್ಮದ ಕಾಂತಿಗೆ ಬೆಂದ ಅನ್ನ+ಅರಿಶಿನದ ಮಾಸ್ಕ್

English summary

Turmeric Face Packs For An Even Skin Tone

Turmeric is highly popular in India. You might come from any part of this beautiful country, but turmeric will always have prime importance. It is a favourite Indian herb, used to cure cough and cold, acts as an antiseptic, helps in coagulation of blood, fights germs and makes the skin glow.
Story first published: Tuesday, May 16, 2017, 8:07 [IST]
Subscribe Newsletter