Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಯೌವ್ವನದಿಂದ ಕಂಗೊಳಿಸಬೇಕೇ? ಮಾಡಿ ನೋಡಿ ಈ ಫಟಾಫಟ್ ಫೇಶಿಯಲ್!
'ಮೆರೆ ಸಪನೊಂಕಿ ರಾಣಿ ಕಬ್ ಆಯೇಗೀತು...' ಪ್ರಸಿದ್ಧ ಹಿಂದಿ ಚಲನಚಿತ್ರದ ಗೀತೆ ಕೇಳಿದ್ದೀರಾ? ಎಲ್ಲ ಹೆಂಗಳೆಯರಿಗೂ ಅವರ ಯಜಮಾನರ ಅಥವ ಬಾಯ್‌ಫ್ರೆಂಡ್‌ನ ಸಪನೊಂಕಿ ರಾಣಿ ಆಗಬೇಕೆನ್ನುವದೇ ಕನಸು, ಅಲ್ಲವೆ? ಯೌವ್ವನ ಕಾಯ್ದುಕೊಳ್ಳಲು ತಿಂಗಳಿಗೊಮ್ಮೆಯಾದರೂ ಮುಖದ ತ್ವಚೆಯ ಮಸಾಜ್ ಮತ್ತು ಫೇಶಿಯಲ್ ಮಾಡಿಸಿಕೊಳ್ಳಬೇಕು, ಆಗ ಮುಖವು ಕಾಂತಿಯುತವಾಗಿ ಹೊಳೆಯುತ್ತದೆ. ಫೇಶಿಯಲ್ ಎಂದಕೂಡಲೆ ನಾವು ಮೊರೆಹೋಗುವದು ಬ್ಯೂಟಿ ಪಾರ್ಲರ್‌ಗಳಿಗೆ. ಈಗೀಗ ನಾಯಿಕೊಡೆಯಂತೆ ಎಲ್ಲಿ ನೋಡಿದರಲ್ಲಿ ಬ್ಯೂಟಿ ಪಾರ್ಲರ್‌ಗಳು ತಲೆಯೆತ್ತಿನಿಂತಿವೆ.
ಆದರೆ ಈ ಗಡಿಬಿಡಿಯ ಧಾವಂತದ ಜೀವನದಲ್ಲಿ ಗಂಟೆಗಟ್ಟಲೆ ಪಾರ್ಲರ್‌ಗೆ ಹೋಗಿ ಕೂಡುವ ಪುರಸೊತ್ತಾರಿಗಿದೆ ಹೇಳಿ? ಅಷ್ಟೇ ಅಲ್ಲದೆ ಅಲ್ಲಿ ಉಪಯೋಗಿಸುವ ತರಹೇವಾರಿ ಉತ್ಪನ್ನಗಳಿಂದ ಯಾವ ರಿಯಾಕ್ಷನ್ ಆಗುತ್ತದೆಯೆಂದು ಹೇಳುವದಸಾಧ್ಯ. ಅದಿರಲಿ, ನಿಮಗೆ ಮನೆಯಲ್ಲೇ ಪುರುಸೊತ್ತಿದ್ದಾಗ ಆರಮಾಗಿ ಫೇಶಿಯಲ್ ಮಾಡಿಕೊಳ್ಳಬಹುದೆಂದು ಗೊತ್ತಿದೆಯೆ? ಐದು ಹಂತಗಳಲ್ಲಿ ಮಾಡುವ ಅತ್ಯಂತ ಸರಳವಾದ ವಿಧಾನದ ಬಗ್ಗೆ ಓದಿ ನೋಡಿ. ಒಂದೇ ಒಂದು ದಿನದಲ್ಲಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಈ ಕೆಳಗಿನ ಸಾಮಗ್ರಿಗಳನ್ನು ಜೋಡಿಸಿಕೊಳ್ಳಿ:
1. ಕೊಬ್ಬರಿ ಎಣ್ಣೆ
2. ಫೇಸ್ ಸ್ಕ್ರಬ್
3. ಜೇನುತುಪ್ಪ
4. ಸ್ಟೀಮ್ ತೆಗೆದುಕೊಳ್ಳಲು ಒಂದು ಪಾತ್ರೆಯಷ್ಟು ನೀರು.
5. ಬ್ಲ್ಯಾಕ್ ಹೆಡ್ ತೆಗೆಯಲು ಟ್ವೀಸರ್
6. ಫೇಸ್ ಮಾಸ್ಕ್
7. ರೋಸ್ ವಾಟರ್
ವಿಧಾನ:
ಕ್ಲೆನ್ಸಿಂಗ್/ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವದು. ಮುಖದ ಮೇಲೆ ಮೇಕಪ್ ಇದ್ದರೆ ಮೊದಲು ಅದನ್ನು ಸ್ವಚ್ಛಗೊಳಿಸಬೇಕು. ಅದಕ್ಕೆ ಅತ್ಯಂತ ಒಳ್ಳೆಯ ಕ್ಲೆನ್ಸರ್ ಎಂದರೆ ಕೊಬ್ಬರಿ ಎಣ್ಣೆ, ತೆಂಗಿನ ನೀರು ಅಥವ ಜೇನುತುಪ್ಪ. ಇವುಗಳಲ್ಲಿ ಯಾವುದಾದರು ಒಂದನ್ನು ಹಸ್ತಗಳಲ್ಲಿ ತೆಗೆದುಕೊಂಡು ಚೆನ್ನಾಗಿ ಉಜ್ಜಿ. ನಂತರ ವೃತ್ತಾಕಾರವಾಗಿ ಕೆನ್ನೆಗಳ ಮೆಲೆ ಸವರಿ. ಹತ್ತು ನಿಮಿಷಗಳವರೆಗೆ ಒಣಗಲು ಬಿಟ್ಟು, ಸ್ವಚ್ಛವಾದ ಟವಲ್ ಅಥವ ಟಿಶ್ಶು ತೆಗೆದುಕೊಂಡು ಒರೆಸಿಕೊಳ್ಳಿ.
ಎಕ್ಸ್‌ಫೋಲಿಯೇಟ್(ಸತ್ತ ಒಣ ಚರ್ಮವನ್ನು ತೆಗೆಯುವದು) ಮಾಡಿಕೊಳ್ಳುವದು
ಇದಕ್ಕೆ ಬೇಕಾದ ಫೇಸ್ ಸ್ಕ್ರಬ್ಬನ್ನು ನೀವೇ ತಯಾರಿಸಿಕೊಳ್ಳಿ ಅಥವ ಯಾವುದಾದರು ಒಳ್ಳೆಯ ಬ್ರಾಂಡಿನ ಸ್ಕ್ರಬ್ ಖರೀದಿಸಿಕೊಳ್ಳಿ.ಧಾರಾಳವಾಗಿ ಸ್ಕ್ರಬ್ಬನ್ನು ಕೈಯಲ್ಲಿ ಹಾಕಿಕೊಂಡು ನಿಧಾನವಾಗಿ ಮುಖದ ಮೇಲೆ ವೃತ್ತಾಕಾರವಾಗಿ ಸ್ಕ್ರಬ್ ಮಾಡಿ. ತ್ವಚೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ. ಮೂಗಿನ ಸಂದಿ ಮತ್ತು ತುಟಿಯ ಮೇಲ್ಭಾಗದಲ್ಲಿ ಸರಿಯಾಗಿ ಸ್ಕ್ರಬ್ ಮಾಡಿ. ೮-೧೦ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ.
ಬಿಸಿನೀರಿನ ಹಬೆ(ಸ್ಟೀಮ್) ತೆಗೆದುಕೊಳ್ಳುವದು
ಸ್ಟೀಮ್ ತೆಗೆದುಕೊಳ್ಳುವದು ಅತ್ಯಂತ ಪ್ರಮುಖವಾದ ಹಂತ.ಇದರಿಂದ ತ್ವಚೆಯು ಮೃದುವಾಗುವದಲ್ಲದೆ, ತ್ವಚೆಯ ಎಲ್ಲ ರಂಧ್ರಗಳು ತೆರೆದುಕೊಂಡು ತಾಜಾತನದಿಂದ ಕಂಗೊಳಿಸುವದು. ನೀರನ್ನು ಹಬೆ ಬರುವವರೆಗೆ ಚೆನ್ನಾಗಿ ಕುದಿಸಬೇಕು. ಒಂದು ದಪ್ಪನಾದ ಟಾವೆಲಿನಿಂದ ತಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವಂತೆ ಮುಚ್ಚಿಕೊಳ್ಳಿ, ನಿಧಾನಕ್ಕೆ ಹಬೆಯನ್ನು ಮೂಗಿನ ಒಳಕ್ಕೆ ಎಳೆದುಕೊಳ್ಳಿ. ಇಲ್ಲಿ ನಿಮಗೆ ಎರಡು ಲಾಭಗಳಿವೆ, ಮೊದಲನೆಯದಾಗಿ ತ್ವಚೆ ಮೃದುವಾಗುವದು ಹಾಗು ನಿಮಗೆ ಸೈನಸ್ ತೊಂದರೆ ಇದ್ದರೆ ಅದರಿಂದ ಕೂಡ ಪರಿಹಾರ ದೊರೆಯುತ್ತದೆ.
ಸ್ಕಿನ್ ಟೋನಿಂಗ್
ಟ್ವೀಸರಿನಿಂದ ಮುಖದ ಮೇಲಿರುವ ಬ್ಲಾಕ್ ಹೆಡ್ ಮತ್ತು ವ್ಹೈಟ್ ಹೆಡ್‌ಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಮೊಡವೆಗಳಿಗೆ ಯಾವದೇ ಹಾನಿ ಉಂಟುಮಾಡಬೇಡಿ, ಇದರಿಂದ ಕಲೆಉಳಿದುಕೊಳ್ಳುತ್ತದೆ. ಮೆತ್ತಗಿನ ಬಿಳಿಯ ಟಾವೆಲ್ ತೆಗೆದುಕೊಂಡು ಮುಖವನ್ನು ಒರೆಸಿಕೊಳ್ಳಿ. ನಂತರ ನಿಮ್ಮ ತ್ವಚೆಗೆ ಸರಿಹೊಂದುವ ಹಣ್ಣಿನ ಟೋನರ್‌ನ್ನು ಮುಖಕ್ಕೆ ಲೇಪಿಸಿಕೊಂಡು ಸ್ವಲ್ಪಹೊತ್ತಿನ ಮೇಲೆ ಸ್ವಚ್ಛಗೊಳಿಸಿಕೊಳ್ಳಿ.
ಕೊನೆಯದಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವದು
ನಿಮಗಿಷ್ಟವಾದ ಬ್ರಾಂಡಿನ ಫೇಸ್ ಮಾಸ್ಕ್ ಅಥವ ಚೆನ್ನಾಗಿ ತಿರುಳಿರುವ ಪಪ್ಪಾಯ ತರಹದ ಯಾವುದಾದರು ಹಣ್ಣಿನ ತಿರುಳು ತೆಗೆದು ಮುಖಕ್ಕೆ ನಿಧಾನಕ್ಕೆ ಲೇಪಿಸಿಕೊಳ್ಳಬೇಕು. ಆರಾಮಾಗಿ ಒಳ್ಳೆಯ ಹಾಡು ಕೇಳಿಕೊಂಡು ೨೦ ನಿಮಿಷಗಳವರೆಗೆ ವಿಶ್ರಾಂತಿ ಪಡೆಯಿರಿ. ಮಾಸ್ಕ್ ಪೂರ್ತಿ ಒಣಗಿದ ಮೇಲೆ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ. ಸ್ವಲ್ಪ ರೋಸ್ ವಾಟರ್‌ನ್ನು ಮುಖದ ಮೇಲೆ ಸಿಂಪಡಿಸಿಕೊಳ್ಳಿ. ಮರುದಿನ ನಿಮ್ಮ ಯಜಮಾನರು 'ಮೆರೆ ಸಪನೋಂಕಿ ರಾಣಿ..' ಎಂದು ನಿಮ್ಮನ್ನುದ್ದೇಶಿಸಿ ಹಾಡದಿದ್ದರೆ ಕೇಳಿ...
ಇನ್ನಷ್ಟು ಫೇಶಿಯಲ್ ಟಿಪ್ಸ್
ಮಾಯಿಶ್ಚರೈಸರ್ ಅಥವಾ ಲೋಶನ್ ಬಳಸಿ
ಮಾಯಿಶ್ಚರೈಸರ್ ಅಥವಾ ಲೋಶನ್ ಗಳನ್ನು ಹಚ್ಚುವುದರಿಂದ ತ್ವಚೆ ಬಿರುಕುಬಿಡುವುದು ಕಡಿಮೆಯಾಗುತ್ತದೆ. ಹೆಚ್ಚು ಶುಷ್ಕ ತ್ವಚೆ ನಿಮ್ಮದಾಗಿದ್ದರೆ ಆಲೀವ್ ಎಣ್ಣೆಯಂತಹ ಶುದ್ಧ ತರಕಾರಿ ಎಣ್ಣೆಯನ್ನು ಹಚ್ಚುವುದು ಉತ್ತಮ. ಇದು ಬೇರೆಲ್ಲ ಕ್ರೀಮ್ ಗಳಿಗಿಂತ ತ್ವಚೆಗೆ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ತ್ವಚೆ ಎಣ್ಣೆಯುಕ್ತವಾಗಿದ್ದರೂ ಚರ್ಮ ಬಿರುಕು ಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಹೆಚ್ಚು ಅಪರ್ಯಾಪ್ತ ಕೊಬ್ಬಿನಂಶ (polyunsaturated fats)ಇರುವ ಎಣ್ಣೆಯನ್ನು ಬಳಸಿ.
ಪಪ್ಪಾಯ ಹಣ್ಣಿನ ಫೇಶಿಯಲ್
1. ಚೆನ್ನಾಗಿ ಕಳಿತ ಪರಂಗಿ ಹಣ್ಣನ್ನು ಚೆನ್ನಾಗಿ ಹಿಸುಕಿ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ತ್ವಚೆಯನ್ನು ಮೃದುಗೊಳಿಸುತ್ತದೆ.
2. ಮುಖ ವಯಸ್ಸಾದಂತೆ ಕಾಣುತ್ತಿದ್ದರೆ ಪಪ್ಪಾಯದಿಂದ ಫೇಸ್ ಮಾಸ್ಕ್ ಮಾಡಿಕೊಳ್ಳಬೇಕು. ಪಪ್ಪಾಯವನ್ನು ಚೆನ್ನಾಗಿ ಹಿಸುಕಿ ಜೇನು ಮತ್ತು ಅಕ್ಕಿ ಹಿಟ್ಟನ್ನು ಕಲೆಸಿ ಹಚ್ಚಿಕೊಂಡು 15-20 ನಿಮಿಷ ಬಿಡಬೇಕು. ಈ ರೀತಿ ವಾರಕ್ಕೆ ಮೂರು ಬಾರಿ ಮಾಡಿದರೆ ತ್ವಚೆ ಬಿಗಿಯಾಗುತ್ತದೆ.
3. ಪಪ್ಪಾಯದೊಂದಿಗೆ ಜೇನು ಮತ್ತು ಆಲಿವ್ ಎಣ್ಣೆ ಬೆರೆಸಿ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಚರ್ಮದ ರಂಧ್ರಗಳು ತೆರೆದುಕೊಂಡು ಚರ್ಮ ಹೊಳೆಯುವಂತಾಗುತ್ತದೆ.
4. ಪಪ್ಪಾಯವನ್ನು ಮುಲ್ತಾನಿಮಿಟ್ಟಿ ಮತ್ತು 1 ಚಮಚ ಲೋಳೆಸರ ಬೆರೆಸಿ ಹಚ್ಚಿಕೊಂಡರೆ ತ್ವಚೆ ಶುದ್ಧಗೊಳ್ಳುತ್ತದೆ. ಇದನ್ನು 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
5. ಪಪ್ಪಾಯವನ್ನು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಕೆಲವೇ ವಾರಗಳಲ್ಲಿ ಮುಖದ ಕಾಂತಿ ಹೆಚ್ಚುತ್ತದೆ. ಇದು ಬೇಗನೆ ಫಲಿತಾಂಶ ಕೊಡುವುದಿಲ್ಲ. ಆದರೆ ಫಲಿತಾಂಶ ಗ್ಯಾರಂಟಿ.
ಜೇನು, ನಿಂಬೆ ಬ್ಲೀಚ್ ಮಾಡಿಸಿಕೊಳ್ಳಿ
1. ಒಂದು ಚಮಚ ಜೇನು
2. ಅರ್ಧ ಚಮಚ ಹಾಲಿನ ಕೆನೆ
3. ಒಂದು ಚಮಚ ನಿಂಬೆ ರಸ
ಇವುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.