ಪೌಡರ್, ಕ್ರೀಮ್ ಪಕ್ಕಕ್ಕಿಡಿ- ಹೂವಿನ ಫೇಸ್ ಪ್ಯಾಕ್ ಬಳಸಿ ನೋಡಿ!

By: Divya
Subscribe to Boldsky

ತ್ವಚೆಯ ಆರೈಕೆ ಎಂದರೆ ನಾವು ಮೊದಲು ಯೋಚಿಸುವುದು ಗುಲಾಬಿ ನೀರಿನ ಬಗ್ಗೆ. ಗುಲಾಬಿ ನೀರಿನಿಂದ ಬೇಕಾದ ಫೇಸ್ ಪ್ಯಾಕ್ತ ಯರಿಸಿ, ಲೇಪಿಸಿಕೊಳ್ಳುತ್ತೇವೆ. ಈ ಗುಲಾಬಿ ನೀರನ್ನು ಬಿಟ್ಟರೆ ಬೇರಾವ ಹೂವಿನ ಬಳಕೆಯನ್ನು ಅರಿತಿಲ್ಲ. ಆದರೆ ನಿಸರ್ಗದಲ್ಲಿ ಸಿಗುವ ತಾಜಾ ಹೂವಿನ ಬಳಕೆಯಿಂದಲೂ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಈ ಹೂಗಳು ಅದ್ಭುತ ಸುವಾಸನೆಯನ್ನು ನೀಡುತ್ತವೆ. ಇವುಗಳನ್ನು ನಮ್ಮ ತ್ವಚೆಯ ಮೇಲೆ ಲೇಪಿಸಿಕೊಂಡರೆ ತ್ವರಿತ ಬದಲಾವಣೆ ಉಂಟಾಗುವುದನ್ನು ಕಾಣಬಹುದು.

ಮುಖದ ಕಾಂತಿ ಹೆಚ್ಚಿಸುವ ಹೂವಿನ ಫೇಸ್‌ ಪ್ಯಾಕ್...

ಈ ತಾಜಾ ಹೂಗಳ ಫೇಸ್ ಪ್ಯಾಕ್ ತಯಾರಿಸಲು ಸ್ವಲ್ಪ ಸಮಯ ಬೇಕಾಗುವುದು. ಹಾಗಾಗಿ ರಜಾ ದಿನಗಳಲ್ಲಿ ಅಥವಾ ವಾರಾಂತ್ಯದ ರಜೆಯಲ್ಲಿ ಅನ್ವಯಿಸಿಕೊಂಡರೆ, ಮರುದಿನದ ಆಫೀಸ್ ಕೆಲಸಗಳಿಗೆ ಇನ್ನಷ್ಟು ಉತ್ಸಾಹದಿಂದ ಹೋಗಬಹುದು. ನೈಸರ್ಗಿಕವಾಗಿ ಸಿಗುವ ಐದು ಹೂವಿನಿಂದ ಫೇಸ್ ಪ್ಯಾಕ್ ಧರಿಸಬಹುದು. ಅವು ನಿಮ್ಮ ಮುಖದ ಕಾಳಜಿಯನ್ನು ವಹಿಸುತ್ತವೆ. ಹಾಗಿದ್ದರೆ ಬನ್ನಿ... ತಯಾರಿಸುವ ವಿಧಾನವನ್ನು ಅರಿಯೋಣ... 

ದಾಸವಾಳ ಹೂವಿನ ಫೇಸ್ ಪ್ಯಾಕ್

ದಾಸವಾಳ ಹೂವಿನ ಫೇಸ್ ಪ್ಯಾಕ್

* ಒಂದು ಚಮಚ ದಾಸವಾಳ ಹೂವಿನ ಪುಡಿ

* 1/4 ಕಪ್ ಕಂದು ಅಕ್ಕಿ ಹಿಟ್ಟು (ಬ್ರೌನ್ ರೈಸ್ ಪೌಡರ್)

* ಒಂದು ಚಮಚ ಮೊಸರು

* ಒಂದು ಚಮಚ ಅಲೋವೆರಾ ಜೆಲ್

* ಒಂದು ಬೌಲ್

ವಿಧಾನ:

ವಿಧಾನ:

* ದಾಸವಾಳ ಹೂವನ್ನು ಬಿಸಿಲಲ್ಲಿ ಇಟ್ಟು ಒಣಗಿಸ ಬೇಕು. ಈ ಕ್ರಿಯೆಯೂ ಸುಮಾರು ಏಳು ದಿನಗಳ ವರೆಗೆ ಮುಂದುವರಿಸಬೇಕು. ಹೀಗೆ ಮಾಡುವುದರಿಂದ ಹೂವು ಚೆನ್ನಾಗಿ ಒಣಗಿ, ಪುಡಿ ಮಾಡಲು ಅನುಕೂಲವಾಗುವುದು. ವಾರದ ಕೊನೆಯಲ್ಲಿ ಒಣಗಿಸಿದ ಹೂವನ್ನು ಪುಡಿಮಾಡಿಕೊಳ್ಳಬೇಕು.

* ಹೂವಿನ ಪುಡಿ ಮತ್ತು ಅಕ್ಕಿ ಹಿಟ್ಟನ್ನು ಚೆನ್ನಾಗಿ ಬೆರೆಸಬೇಕು. ಈ ಮಿಶ್ರಣವನ್ನು ಹಾಗೇ ಶೇಖರಿಸಿಟ್ಟುಕೊಳ್ಳಬಹುದು.

* ಎರಡು ಚಮಚ ದಾಸವಾಳ ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ, ಮೊಸರು, ಅಲೋವೆರಾ ಜೆಲ್ ಎಲ್ಲವನ್ನು ಸೇರಿಸಿ ಕಲುಕಬೇಕು.

* ನಂತರ ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ಸ್ವಲ್ಪ ಕಾಲ ಆರಲು ಬಿಡಿ.

ಗುಲಾಬಿ, ಜೇನು ತುಪ್ಪಾ ಮತ್ತು ಮೊಸರು

ಗುಲಾಬಿ, ಜೇನು ತುಪ್ಪಾ ಮತ್ತು ಮೊಸರು

* ಒಂದು ತಾಜಾ ಗುಲಾಬಿ ಹೂವಿನ ಎಸಳುಗಳು

* 1 ಚಮಚ ಜೇನುತುಪ್ಪ

* 1 ಚಮಚ ಮೊಸರು

ವಿಧಾನ

ವಿಧಾನ

* ಗುಲಾಬಿ ಹೂವಿನ ಎಸಳನ್ನು ನೀರಿನಲ್ಲಿ ಒಂದು ತಾಸು ಮುಂಚೆ ನೆನೆಯಿಡಬೇಕು.

* ನಂತರ ಹೂವಿನ ಎಸಳನ್ನು ರುಬ್ಬಿಕೊಳ್ಳಬೇಕು.

* ಒಂದು ಬೌಲ್ ನಲ್ಲಿ ಗುಲಾಬಿ ಎಸಳಿನ ಪೇಸ್ಟ್, ಜೇನುತುಪ್ಪ, ಮೊಸರನ್ನು ಹಾಕಿ ಚನ್ನಾಗಿ ಕಲುಕಿ.

* ನಂತರ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಬೇಕು.

ಚೆಂಡು ಹೂವು /ಗೊಂಡೆ ಹೂವು ಪೇಸ್ ಪ್ಯಾಕ್

ಚೆಂಡು ಹೂವು /ಗೊಂಡೆ ಹೂವು ಪೇಸ್ ಪ್ಯಾಕ್

* ಒಂದು ಸಣ್ಣ ಕಪ್ ಚಂಡು ಹೂವಿನ ಎಸಳು

* 1/2 ಚಮಚ ಮೊಸರು

* 1/2 ಚಮಚ ಶ್ರೀಗಂಧದ ಪುಡಿ ಅಥವಾ ಪೇಸ್ಟ್

* ಒಂದು ಬೌಲ್

ವಿಧಾನ

* ಚೆಂಡು ಹೂವಿನ ಎಸಳನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ.

* ನಂತರ ಚಂಡು ಹೂವಿನ ಪೇಸ್ಟ್, ಮೊಸರು, ಶ್ರೀಗಂಧದ ಪುಡಿ/ಪೇಸ್ಟ್ ಸೇರಿಸಿ.

* ಈ ಎಲ್ಲಾ ಸಲಕರಣೆಯನ್ನು ಒಂದೇ ಬೌಲ್‍ನಲ್ಲಿ ಸೇರಿಸಿ ಮಿಶ್ರ ಗೊಳಿಸಿ.

* ಹಾಗೊಮ್ಮೆ ಇದು ಬಹಳ ಒಣಗಿರುವ ಮಿಶ್ರಣದಂತಾದರೆ ರೋಸ್ ವಾಟರ್ ಸೇರಿಸಿ.

* ಮಿಶ್ರಣ ಸರಿ ಹೊಂದಿದ ಮೇಲೆ ಮುಖಕ್ಕೆ ಅನ್ವಯಿಸಿ. ಆರಲು ಬಿಡಿ.

ಮಲ್ಲಿಗೆ ಹೂವಿನ ಫೇಸ್ ಪ್ಯಾಕ್

ಮಲ್ಲಿಗೆ ಹೂವಿನ ಫೇಸ್ ಪ್ಯಾಕ್

* 20-25 ತಾಜಾ ಮಲ್ಲಿಗೆ ಹೂವು

* 1 ಚಮಚ ಜೇನುತುಪ್ಪ

* ಮಿಕ್ಸರ್ ಮತ್ತು ಬೌಲ್

ವಿಧಾನ

ವಿಧಾನ

* ಮಿಕ್ಸ್‌ರ್ ನಲ್ಲಿ ಮಲ್ಲಿಗೆ ಹೂವು, ಸ್ವಲ್ಪ ನೀರನ್ನು ಬೆರೆಸಿ ದಪ್ಪದಾದ ಮಲ್ಲಿಗೆ ಹೂವಿನ ಪೇಸ್ಟ್ ಮಾಡಿಕೊಳ್ಳಿ.

* ನಂತರ ಈ ಪೇಸ್ಟ್ ಜೊತೆ ಜೇನುತುಪ್ಪವನ್ನು ಬೆರೆಸಿ. ಸೌಂದರ್ಯ ತಜ್ಞರ ಪ್ರಕಾರ ಮಲ್ಲಿಗೆ ಹೂವಿನ ಪೇಸ್ಟ್ ಒಂದನ್ನೇ ಮುಖಕ್ಕೆ ಹಚ್ಚಬಹುದು.

* ಈ ಮಿಶ್ರಣವನ್ನು ಸೂಕ್ಷ್ಮ ತ್ವಚೆಯವರು, ಒಣ ತ್ವಚೆಯವರು ಸಹ ಬಳಸಬಹುದು.

ಕಮಲದ ಹೂವಿನ ಫೇಸ್ ಪ್ಯಾಕ್

ಕಮಲದ ಹೂವಿನ ಫೇಸ್ ಪ್ಯಾಕ್

* 10 ಕಮಲದ ಹೂವಿನ ಎಸಳು

* 1/2 ಕಪ್ ಗಟ್ಟಿ ಹಾಲು

* ಸ್ವಲ್ ಬಾದಾಮಿ ಎಣ್ಣೆ

* ಮಿಕ್ಸರ್ ಮತ್ತು ಬೌಲ್

ವಿಧಾನ

* ಕಮಲದ ಹೂವಿನ ಎಸಳನ್ನು ಕತ್ತರಿಸಿ, ಮಿಕ್ಸರ್‍ನಲ್ಲಿ ಹಾಕಿ. ಇದರೊಟ್ಟಿಗೆ ಹಾಲನ್ನು ಬೆರೆಸಿ ನುಣ್ಣನೆಯ ಪೇಸ್ಟ್ ತಯಾರಿಸಿ.

* ಇದು ತುಂಬಾ ತೆಳುವಾದ ಪೇಸ್ಟ್ ಆದರೆ ಇನ್ನಷ್ಟು ಕಮಲದ ಹೂವನ್ನು ಸೇರಿಸಿ.

* ಈ ಪೇಸ್ಟ್‌ಗೆ ಸ್ವಲ್ಪ ಬಾದಾಮಿ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಸ್ವಲ್ಪ ಹೊತ್ತು ಆರಲು ಬಿಡಿ.

English summary

Try These Flower Face Pack Recipes At Home This Weekend

Have you ever thought of adding flowers to your skin care routine? Yes, the most common and easy way to add flowers in skin care routine is by using rose water. Well, we are talking about using fresh flowers in the skin care routine, as they create a big difference!
Subscribe Newsletter