ಫೇಶಿಯಲ್ ಚಿಕಿತ್ಸೆಯ ನಂತರ ಈ ಮುಖ್ಯ ಸಂಗತಿಗಳಿಂದ ದೂರವಿರಿ

Posted By: Akshatha K B
Subscribe to Boldsky

ತ್ವಚೆಯ ಲಾಲನೆಯ ಹಲವು ರೀತಿಗಳಲ್ಲಿ ಫೇಶಿಯಲ್ ಮಾಡಿಸಿಕೊಳ್ಳುವುದು ಒಂದು ಉತ್ತಮ ವಿಧಾನ. ಇದು ನಿಮ್ಮ ಮನಸ್ಸಿನ ಕನ್ನಡಿ ಅಂದರೆ ಮುಖದ ರೂಪ ಮತ್ತು ಆರೋಗ್ಯವನ್ನು ಎದ್ದುಕಾಣುವಂತೆ ಮಾಡುವ ಮಾಸಿಕ ರೂಢಿ. ವಿವಿಧ ಚರ್ಮಪ್ರಕಾರ ಮತ್ತು ವಯಸ್ಸಿನ ವರ್ಗಗಳ ಮಹಿಳೆಯರು ನಿಯಮಿತವಾಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಈ ಸೌಂದರ್ಯ ಚಿಕಿತ್ಸೆಯನ್ನು ತ್ವಚೆಯ ಆರೋಗ್ಯವೃದ್ಧಕ ಎಂದು ಉಲ್ಲೇಖಿಸಲಾಗಿದೆ.

ಫೇಶಿಯಲ್ ಮಾಡಿಸಿಕೊಳ್ಳುವುದರಿಂದ ತ್ವಚೆಯಲ್ಲಿನ ಕೊಳಕು ಮತ್ತು ಕಲ್ಮಶವು ತೊಲಗಿ ಕಾಂತಿಯುತ ಹೊಳಪು ನಿಮ್ಮದಾಗುತ್ತದೆ. ಆದರೂ, ಈ ಚಿಕಿತ್ಸೆಯ ನಂತರ ಸರಿಯಾಗಿ ಕಾಳಜಿ ವಹಿಸದಿದ್ದರೆ ಲಾಭಕ್ಕಿಂತ ತ್ವಚೆಗೆ ಹಾನಿಯ ಹೆಚ್ಚು. ಫೇಶಿಯಲ್ ಚಿಕಿತ್ಸೆಯ ನಂತರ ಉಂಟಾಗಬಹುದಾದ ಮೊಡವೆ, ಚರ್ಮದ ಕೆಂಪು ಹಾಗೂ ಸೋಂಕುಗಳನ್ನು ತಡೆಗಟ್ಟಲು ಗಮನವಿಡಬೇಕಾದ ಕೆಲವು ಮುಖ್ಯ ಅಂಶಗಳ ಬಗ್ಗೆ ನಾವಿಂದು ಬೋಲ್ಡ್ ಸ್ಕೈನಲ್ಲಿ ತಿಳಿದುಕೊಳ್ಳೋಣ. ಐಷಾರಾಮಿ ಫೇಶಿಯಲ್ ಚಿಕಿತ್ಸೆಯ ಉತ್ತಮ ಲಾಭವನ್ನು ಪಡೆಯಲು ಮತ್ತು ಸರಿಯಾದ ರೀತಿಯಲ್ಲಿ ತ್ವಚೆಯ ಕಾಳಜಿ ವಹಿಸಲು, ಈ ಕೆಳಗಿನ ಅಂಶಗಳಿಂದ ದೂರವಿರಿ. ಅವುಗಳು ಯಾವ್ಯಾವುವು ಎಂದು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಇದನ್ನು ಓದಿ...

ಎಸ್ಫೋಲಿಯೇಷನ್ - ನಿರ್ಜೀವ ಚರ್ಮ ನಿವಾರಣೆ

ಎಸ್ಫೋಲಿಯೇಷನ್ - ನಿರ್ಜೀವ ಚರ್ಮ ನಿವಾರಣೆ

ಫೇಶಿಯಲ್ ಚಿಕಿತ್ಸೆಯ ನಂತರ ಎಸ್ಫೋಲಿಯೇಷನ್ ಖಡಾಖಂಡಿತವಾಗಿ ಮಾಡಬಾರದು. ಏಕೆಂದರೆ, ತ್ವಚೆಯನ್ನು ಉಜ್ಜಿ ನಿರ್ಜೀವ ಚರ್ಮವನ್ನು ನಿವಾರಿಸಲು ಯತ್ನಿಸುವಾಗ ಅದು ತ್ವಚೆಯ ರೂಪವನ್ನು ಹಾಳು ಮಾಡುವುದಲ್ಲದೆ ಮೊಡವೆಗಳಿಗೂ ಕಾರಣವಾಗಬಹುದು. ಆದ್ದರಿಂದ ಕನಿಷ್ಠ ಪಕ್ಷ ಮೂರು ದಿನಗಳಾದರೂ ಹೀಗೆ ಮಾಡಬಾರದು.

ಆವಿ ತೆಗೆದುಕೊಳ್ಳುವುದು

ಆವಿ ತೆಗೆದುಕೊಳ್ಳುವುದು

ಫೇಶಿಯಲ್ ಚಿಕಿತ್ಸೆಯ ನಂತರ ನೀರಿನ ಆವಿ ತೆಗೆದುಕೊಳ್ಳುವುದರಿಂದ ಕನಿಷ್ಠ ಒಂದು ವಾರವಾದರೂ ದೂರವಿರಬೇಕು. ಇಲ್ಲದಿದ್ದರೆ, ತ್ವಚೆಯ ಸೂಕ್ಷ್ಮತೆ ಹೆಚ್ಚಾಗಿ ಮೊಡವೆಗಳಾಗಿ ಕೆಟ್ಟದಾಗಿ ಕಾಣಬಹುದು. ಹಾಗಾಗಿ ಇದರಿಂದ ದೂರವಿರುವುದು ಉತ್ತಮ.

ಸೌಂದರ್ಯವರ್ಧಕ(ಮೇಕಪ್)

ಸೌಂದರ್ಯವರ್ಧಕ(ಮೇಕಪ್)

ಮೇಕಪ್ ವಸ್ತುಗಳೆಲ್ಲವೂ ಬಿರುಸಾದ ರಾಸಾಯನಿಕಗಳಿಂದ ತುಂಡಿಕೊಂಡಿದೆಯೆಂದು ನಮಗೆಲ್ಲ ತಿಳಿದಿರುವುದು ಸತ್ಯ. ಈ ವಸ್ತುಗಳನ್ನು ಫೇಶಿಯಲ್ ಚಿಕಿತ್ಸೆಯ ನಂತರ ಬಳಸುವುದರಿಂದ ತ್ವಚೆಯ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ಹೀಗಿರುವಾಗ ೭೨ ಗಂಟೆಗಳಾದರೂ ಮೇಕಪ್ ಹಚ್ಚದಿರುವುದು ಸೂಕ್ತ.

ಮುಖಕ್ಕೆ ಮಾಲೀಷ್

ಮುಖಕ್ಕೆ ಮಾಲೀಷ್

ಫೇಶಿಯಲ್ ಚಿಕಿತ್ಸೆಯ ನಂತರ ಮುಖಕ್ಕೆ ಮಾಲೀಷ್ ಅಥವಾ ಆಗಾಗ ಸ್ಪರ್ಶಿಸುವುದರಿಂದ ಸೋಂಕುಂಟಾಗಿ ಅವಲಕ್ಷಣವಾದ ಮೊಡವೆಗಳಾಗಬಹುದು. ಆದ್ದರಿಂದ ಉನ್ನತ ತ್ವಚಾಸಂರಕ್ಷಣಾ ತಜ್ಞರು ಮಹಿಳೆಯರಿಗೆ ಹೀಗೆ ಮಾಡದಿರಲು ಪ್ರೇರೇಪಿಸುತ್ತಾರೆ. ಚಿಕಿತ್ಸೆಯ ನಂತರ ಒಂದು ವಾರದವರೆಗೆ ಮುಖಕ್ಕೆ ಮಾಲೀಷ್ ಮಾಡದಿರಲು ಪ್ರಯತ್ನಿಸಬೇಕು.

ಮೊಡವೆಗಳನ್ನು ಚಿವುಟುವುದು

ಮೊಡವೆಗಳನ್ನು ಚಿವುಟುವುದು

ಫೇಶಿಯಲ್ ಚಿಕಿತ್ಸೆಯ ನಂತರ ಮೇಡವೆಗಳನ್ನು ಚಿವುಟಲು ಮನಸ್ಸಾಗಬಹುದು. ಇದರಿಂದ ಮೊಡವೆಗಳು ಇನ್ನು ಹೆಚ್ಚಾಗಿ ಅಹಿತಕರ ಸೋಂಕುಗಳಾಗಬಹುದು. ಆದ್ದರಿಂದ ಫೇಶಿಯಲ್ ಆದ ಮೇಲೆ ಮೊಡವೆಗಳನ್ನು ಮುಟ್ಟದಿರುವಂತೆ ನೋಡಿಕೊಳ್ಳಿ.

 ಬಿಸಿಲಿನಲ್ಲಿ ಹೊರಹೋಗುವುದು

ಬಿಸಿಲಿನಲ್ಲಿ ಹೊರಹೋಗುವುದು

ಈ ಸೌಂದರ್ಯ ಚಿಕಿತ್ಸೆಯ ನಂತರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳು ತ್ವಚೆಯ ಸೂಕ್ಷ್ಮತೆಯನ್ನು ಇನ್ನೂ ಹೆಚ್ಚಾಗಿಸಿ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಹೊರಗೆ ಹೋಗುವ ಮುನ್ನ ಚರ್ಮಕ್ಕೆ ಬೇಕಾದ ರಕ್ಷಣೆ ನೀಡಲು ಮರೆಯದಿರಿ.

ಕೆಮಿಕಲ್ ಪೀಲಿಂಗ್ಸ್

ಕೆಮಿಕಲ್ ಪೀಲಿಂಗ್ಸ್

ಹಲವಾರು ಮಹಿಳೆಯರು ತ್ವಚೆಯನ್ನು ಆರೋಗ್ಯಪೂರ್ಣವಾಗಿಡಲು ಮಾಡಿಸಿಕೊಳ್ಳುವ ಮತ್ತೊಂದು ಸೌಂದರ್ಯ ಚಿಕಿತ್ಸೆಯೇ ಕೆಮಿಕಲ್ ಪೀಲಿಂಗ್. ಫೇಶಿಯಲ್ ಆದ ಮೇಲೆ ಇದನ್ನು ಮಾಡಿಸಿಕೊಳ್ಳುದರಿಂದ ತ್ವಚೆಗೆ ಹಾನಿಯುಂಟಾಗಿ ಚರ್ಮದಲ್ಲಿನ ಪ್ರೋಟೀನ್ ಕೊಲಾಜೆನ್ನಿನ ರಚನೆಯ ವಿಘಟನೆಯಾಗುತ್ತದೆ. ಈ ಎರಡು ಚಿಕಿತ್ಸೆಗಳ ನಡುವೆ ಸುಮಾರು ಎರಡು ವಾರಗಳ ಅಂತರವಿರುವಂತೆ ನೋಡಿಕೊಳ್ಳಿರಿ.

ವಾಕ್ಸಿಂಗ್ ಅಥವಾ ಥ್ರೆಡ್ಡಿಂಗ್

ವಾಕ್ಸಿಂಗ್ ಅಥವಾ ಥ್ರೆಡ್ಡಿಂಗ್

ವಾಕ್ಸಿಂಗ್ ಅಥವಾ ಥ್ರೆಡ್ಡಿಂಗ್ ಅನ್ನು ಬಹಳ ಕಠಿಣವಾದ ಸೌಂದರ್ಯ ಚಿಕಿತ್ಸೆಗಳೆಂದು ಪರಿಗಣಿಸಲಾಗಿದೆ.ಫೇಶಿಯಲ್ ನಂತರ ಇವುಗಳನ್ನು ಮಾಡಿಸುವುದರಿಂದ ಚರ್ಮವು ಕೆಂಪಾಗಿ ಸೂಕ್ಷ್ಮತೆಗೊಳಗಾಗಬಹುದು. ಯಾವಾಗಲೂ ಈ ಚಿಕಿತ್ಸೆಗಳನ್ನು ಫೇಶಿಯಲ್ನ ನಂತರ ಮಾಡುವುದು ಉತ್ತಮ.

ಮುಖಕ್ಕೆ ಪ್ಯಾಕ್‌ಗಳು ಮತ್ತು ಮಾಸ್ಕ್‌ಗಳು

ಮುಖಕ್ಕೆ ಪ್ಯಾಕ್‌ಗಳು ಮತ್ತು ಮಾಸ್ಕ್‌ಗಳು

ಮುಖಕ್ಕೆ ಪ್ಯಾಕುಗಳು ಮತ್ತು ಮಾಸ್ಕ್‌ಗಳನ್ನು ಹಚ್ಚುವುದು ತ್ವಚೆಯ ಆರೈಕೆಯ ತುಂಬಾ ಒಳ್ಳೆಯ ಅಭ್ಯಾಸ. ಆದರೆ ಫೇಶಿಯಲ್ ಚಿಕಿತ್ಸೆಯ ನಂತರ ಪ್ಯಾಕುಗಳು ಮತ್ತು ಮಾಸ್ಕ್‌ಗಳನ್ನು ಉಪಯೋಗಿಸುವುದು ಚರ್ಮದ ಮೇಲೆ ಋಣಾತ್ಮಕ ಪರಿಣಾಮ ಬೀರಿ ಕಿರಿಕಿರಿಯನ್ನುಂಟು ಮಾಡಬಹುದು. ಆದ್ದರಿಂದ ಈ ಅಭ್ಯಾಸವನ್ನು ಕನಿಷ್ಠ ಒಂದು ವಾರ ಮುಂದೂಡುವುದು ಉತ್ತಮ.

English summary

Top Things You Must Avoid After A Facial Treatment

Getting a facial is one of the best ways of pampering your skin. This is a monthly ritual that can make a world of difference to the appearance and health of your skin. Women with different skin types and age groups go for facials on a regular basis. This beauty treatment is cited as a skin health booster for all the right reasons. Undergoing a facial treatment can impart a radiant glow on your skin and eliminate the dirt and grime from your skin. However, not taking a proper care of your post-facial skin can do more harm than good to your skin.