For Quick Alerts
ALLOW NOTIFICATIONS  
For Daily Alerts

ವಯಸ್ಸನ್ನು ಮರೆಮಾಚಬೇಕೆನಿಸಿದರೆ ಈ ಔಷಧಗಳ ಮೊರೆ ಹೋಗಿ

By Divya Pandith
|

ಸದಾಕಾಲ ಯವ್ವನದಲ್ಲಿ ಇರಲು ಬಯಸುತ್ತಾರೆ. ಸದಾ ಕಾಲ ಎಲ್ಲರನ್ನು ಆಕರ್ಷಿಸಬೇಕು ಎನ್ನುವ ತುಮಲ. ಹಾಗೊಮ್ಮೆ ಮುಖದ ಮೇಲೆ ಮೊಡವೆ ಅಥವಾ ಇನ್ಯಾವುದೋ ಸಮಸ್ಯೆಗಳಿಂದ ತ್ವಚೆಯ ಮೇಲೆ ಕಲೆಗಳು ಉಂಟಾದರೆ ಸಾಕು, ವಿವಿಧ ಬಗೆಯ ಆರೈಕೆ ಆರಂಭವಾಗುವುದು. ಒಟ್ಟಿನಲ್ಲಿ ಆ ಮೊಡವೆ ಮತ್ತು ಕಲೆಗಳು ವಾಸಿಯಾಗಬೇಕು. ಇಂತಹ ಹಂಬಲಗಳು ಹದಿಹರೆಯದವರಲ್ಲಿ ಇರುತ್ತದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಹೇಳಬೇಕೆಂದರೆ ವ್ಯಕ್ತಿ ವಯಸ್ಸಾಗುತ್ತಾ ಹೋದಂತೆ ಅವರ ಮನಸ್ಸಿನಲ್ಲಿ ನಾವಿನ್ನೂ ಚಿಕ್ಕವಯಸ್ಸಿನವರಂತೆ ಕಾಣಬೇಕು ಎನ್ನುವ ಆಸೆ ಪ್ರತಿಯೊಬ್ಬರು ಹೆಚ್ಚಾಗುತ್ತದೆ.

ಅದಕ್ಕಾಗಿಯೇ ಉಡುಗೆ ತೊಡುಗೆಯಲ್ಲಿ ವ್ಯತ್ಯಾಸ, ಕೇಶರಾಶಿಯ ಬಣ್ಣದ ಬಗ್ಗೆ ಕಾಳಜಿ ತೋರುತ್ತಾರೆ. ಒಬ್ಬ ವ್ಯಕ್ತಿಗೆ ವಯಸ್ಸಾಗಿದೆ ಎಂದು ಗುರುತಿಸಲು ಅವರ ದೇಹದಾಕೃತಿ, ಉಡುಗೆ ತೊಡುಗೆ ಅಥವಾ ಕೂದಲಿನ ಬಣ್ಣವನ್ನು ನೋಡಬೇಕೆಂದಿಲ್ಲ. ವ್ಯಕ್ತಿಯ ಮುಖ, ಕುತ್ತಿಗೆ, ಕೈಗಳು, ಬೆನ್ನು ಹೀಗೆ ಬಹಿರಂಗವಾಗಿ ತೋರುವ ತ್ವಚೆಯ ಗುಣಮಟ್ಟವನ್ನು ಗ್ರಹಿಸಿದರೆ ಸಾಕು. ವ್ಯಕ್ತಿಯ ವಯಸ್ಸನ್ನು ಗುರುತಿಸಬಹುದು.

ಸೂರ್ಯನ ಮಾನ್ಯತೆಯಿಂದ ಮೆಲನೊಸೈಟ್ಸ್ ಎಂಬ ಜೀವಕೋಶವು ಉತ್ಪಾದನೆಯಾಗುತ್ತವೆ. ಇದರಿಂದ ಚರ್ಮವು ಗಾಢವಾಗುತ್ತದೆ. ಮತ್ತು ಸುಕ್ಕುಗಟ್ಟಿರುವಂತಹ ವಿನ್ಯಾಸವನ್ನು ಪಡೆದುಕೊಳ್ಳುತ್ತದೆ. ಯಾರು ಸೂರ್ಯನ ಕಿರಣದ ಅಡಿಯಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೊ ಅಂತಹವರು ಬಹುಬೇಗ ವಯಸ್ಸಾದವರಂತೆ ತೋರುತ್ತಾರೆ. ಹಾಗಂತ

ವಯಸ್ಸಾದಂತಹ ಕಳೆ ಹೊಂದುವುದು ಅಪಾಯ ಎಂಬ ಅರ್ಥವಲ್ಲ. ನೋಡಲು ಸ್ವಲ್ಪ ವಯಸ್ಸಾದವರಂತೆ ತೋರುತ್ತಾರೆ ಎನ್ನುವುದಷ್ಟೆ. ಈ ಕುರಿತು ಅತಿಯಾದ ಚಿಂತನೆಗೆ ಒಳಗಾಗಿ ಬೇಸರ ಪಡುವ ಅಗತ್ಯವಿಲ್ಲ. ಈ ಸಮಸ್ಯೆಗಳಿಂದ ದೂರಾಗಲು ಸರಳವಾದ 10 ಮನೆ ಔಷಧಿಗಳಿವೆ. ಅವುಗಳನ್ನು ಅನ್ವಯಿಸಿಕೊಂಡರೆ ಸದಾ ಕಾಲ ಯುವಕರಂತಹ ಕಳೆಯಿಂದ ಕೂಡಿರಬಹುದು....

 ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಇದು ಅತ್ಯುತ್ತಮವಾದ ಎಕ್ಸ್‍ಫೊಲೈಂಟ್ ಗುಣವನ್ನು ಹೊಂದಿದೆ. ಇದರಲ್ಲಿರುವ ಆಲ್ಫಾ-ಹೈಡ್ರಾಕ್ಸಿ ಆಮ್ಲವು ಸತ್ತ ಚರ್ಮ ಕೋಶಗಳನ್ನು ತಗೆದು, ಹೆಚ್ಚು ಆಕರ್ಷಿತವಾಗಿರುವಂತೆ ಮಾಡುತ್ತದೆ.

ಬಳಸುವ ಬಗೆ:

1. ಒಂದು ಹತ್ತಿಯ ಚಂಡನ್ನು ಆಪಲ್ ಸೈಡರ್ ವಿನೆಗರ್‍ನಲ್ಲಿ ಅದ್ದಿ, ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

2. ಒಂದು ರಾತ್ರಿ ಕಾಲ ಅದು ತ್ವಚೆಯ ಮೇಲೆ ಹೀರಲು ಬಿಡಿ.

3. ನಿಮ್ಮದು ಸೂಕ್ಷ್ಮ ತ್ವಚೆಯಾಗಿದ್ದರೆ ವಿನೆಗರ್ ಜೊತೆ ಆಲಿವ್ ಎಣ್ಣೆಯನ್ನು ಮಿಶ್ರಗೊಳಿಸಬಹುದು. ಆಲಿವ್ ಎಣ್ಣೆ ತ್ವಚೆಯನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.

4. ಉತ್ತಮ ಫಲಿತಾಂಶಕ್ಕೆ ನಿತ್ಯವೂ ಈ ಕ್ರಿಯೆಯನ್ನು ಅನ್ವಯಿಸಿ.

ನಿಂಬೆ

ನಿಂಬೆ

ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಚರ್ಮಕ್ಕೆ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಚರ್ಮದಲ್ಲಿನ ಮೆಲನಿನ್ ವರ್ಣದ್ರವ್ಯವನ್ನು ಒಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ತ್ವಚೆಯನ್ನು ಅದಾ ತಾಜಾ ಹಾಗೂ ಆಕರ್ಷಕವಾಗಿರುವಂತೆ ಮಾಡುತ್ತದೆ. ನಿಂಬೆ ರಸವನ್ನು ತ್ವಚೆಯ ಮೇಲೆ ಅನ್ವಯಿಸಿಕೊಂಡಾಗ ಬಿಸಿಲಿಗೆ ಹೋಗ ಬಾರದು. ಇದರಿಂದ ಚರ್ಮದಲ್ಲಿ ಕೆರಳಿಕೆ ಮತ್ತು ಕೆಂಪಾದ ಬಣ್ಣಬರುವ ಸಾಧ್ಯತೆ ಇರುತ್ತದೆ. ಆದಷ್ಟು ಮನೆಯೊಳಗಿರುವಾಗ ಮಾತ್ರ ನಿಂಬೆ ರಸದ ಅನ್ವಯ ಮಾಡಿ.

ವಿಧಾನ:

1. ಒಂದು ನಿಂಬೆ ಹಣ್ಣನ್ನು ಸಮನಾಗಿ ಎರಡು ಭಾಗ ಮಾಡಿ.

2. ನಂತರ ನಿಂಬೆ ತುಂಡುಗಳಿಂದ ಮುಖ ಹಾಗೂ ಪೀಡಿತ ಪ್ರದೇಶಗಳ ಮೇಲೆ ಅನ್ವಯಿಸಿ.

3. ಚರ್ಮ ರಸವನ್ನು ಹೀರಿಕೊಳ್ಳಲು 15-20 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ಸಮಸ್ಯೆ ಗುಣಮುಖ ಹೊಂದುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಸಮೃದ್ಧವಾಗಿರುತ್ತದೆ. ಇದು ಚರ್ಮದ ಕಿರಿಕಿರಿ ಹಾಗೂ ವಯಸ್ಸಿನ ಕಳೆಯನ್ನು ತಗೆದು ತ್ವಚೆಯನ್ನು ಹಗುರಗೊಳಿಸುತ್ತದೆ.

ವಿಧಾನ:

1. ಒಂದು ಕಪ್ ಮಜ್ಜಿಗೆಯನ್ನು ತೆಗೆದುಕೊಳ್ಳಿ.

2. ಹತ್ತಿ ಚಂಡನ್ನು ಅದ್ದಿ, ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

3. 15020 ನಿಮಿಷಗಳ ಕಾಲ ಆರಲು ಬಿಟ್ಟು, ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ಎಣ್ಣೆ ಮುಕ್ತಗೊಳಿಸಲು ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು.

5. ಉತ್ತಮ ಫಲಿತಾಂಶ ಪಡೆಯಲು ನಿತ್ಯವೂ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿ ಸಲ್ಫರ್ ಕಾಂಪೌಂಡ್ ಎನ್ನುವ ನಂಜು ನಿರೋಧಕ ಅಂಶವಿದೆ. ಇದು ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ಸುಲಭವಾಗಿ ನಿವಾರಿಸುತ್ತದೆ. ಯಾರಿಗೆ ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ರಸದ ಆರೈಕೆ ಇಷ್ಟವಾಗುವುದಿಲ್ಲವೋ ಅಂತಹವರು ಇದರ ಮೊರೆ ಹೋಗಬಹುದು.

ವಿಧಾನ:

1. ಒಂದು ಈರುಳ್ಳಿಯನ್ನು ತುಂಡರಿಸಿ, ಪೀಡಿತ ಪ್ರದೇಶದ ಮೇಲೆ ಅನ್ವಯಿಸಿ.

2. ನಂರತ 10-20 ನಿಮಿಷಗಳ ಕಾಲ ಆರಲು ಬಿಡಿ.

3. ವಾಸನೆ ಕಣ್ಮರೆಯಾದ ನಂತರ ನೀರಿನಿಂದ ಸ್ವಚ್ಛಗೊಳಿಸಿ.

4. ಚರ್ಮದ ಮೇಲಿರುವ ಚುಕ್ಕೆಗಳು ಶಮನವಾಗುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಿ.

ಪಪ್ಪಾಯ

ಪಪ್ಪಾಯ

ಪಪ್ಪಾಯದಲ್ಲಿ ಆಲ್ಫಾ-ಹೈಡ್ರಾಕ್ಸಿ ಆಮ್ಲ ಸಮೃದ್ಧವಾಗಿರುವುದರಿಂದ ಸತ್ತ ಚರ್ಮ ಕೋಶಗಳನ್ನು ತೆಗೆಯುತ್ತದೆ. ಸುಕ್ಕುಗಟ್ಟಿದ ತ್ವಚೆ, ಕಲೆ ಹಾಗೂ ಇನ್ನಿತರ ಸಮಸ್ಯೆಗಳನ್ನು ನಿವಾರಿಸುತ್ತದೆ.

ವಿಧಾನ:

1. ನಾಜೂಕಿನಿಂದ ಪಪ್ಪಾಯದ ಸಿಪ್ಪೆಯನ್ನು ತೆಗೆದುಕೊಳ್ಳಿ.

2. ತಿರುಳನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

3. ಸುಮಾರು 10-20 ನಿಮಿಷಗಳಕಾಲ ಆರಲು ಬಿಡಿ. ನಂತರ ಮೃದುವಾಗಿ ಮಸಾಜ್ ಮಾಡಿ.

4. ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

5. ಉತ್ತಮ ಫಲಿತಾಂಶಕ್ಕಾಗಿ ನಿತ್ಯವೂ ಅನ್ವಯಿಸಿ.

ಅಲೋವೆರಾ

ಅಲೋವೆರಾ

ಅಲೋವೆರಾ ನೈಸರ್ಗಿಕವಾಗಿ ಚರ್ಮದ ಮೇಲಿರುವ ಮಾಯ್ಚುರೈಸ್ ಅನ್ನು ಸಂರಕ್ಷಿಸುತ್ತದೆ. ಉರಿಯೂತ, ಕಲೆ, ಸುಕ್ಕುಗಟ್ಟಿರುವುದು, ಕಪ್ಪು ಕಲೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ವಿಧಾನ

1. ಅಲೋವೆರಾವನ್ನು ಕತ್ತರಿಸಿ, ಲೋಳೆಯನ್ನು ತೆಗೆದುಕೊಳ್ಳಿ.

2. ಚರ್ಮದ ಮೇಲೆ ಅನ್ವಯಿಸಿ 30 ನಿಮಿಷಗಳಕಾಲ ಬಿಡಿ.

3. ಆರಿದ ಮೇಲೆ ನೀರಿನಿಂದ ತೊಳೆಯಿರಿ.

4. ಉತ್ತಮ ಫಲಿತಾಂಶಕ್ಕೆ ದಿನಕ್ಕೆ ಎರಡುಬಾರಿ ಪುನರಾವರ್ತಿಸಿ.

ಮೊಸರು

ಮೊಸರು

ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಚರ್ಮದ ಮೇಲಿರುವ ಕಂದು ಕಲೆ ಮತ್ತು ಸತ್ತ ಚರ್ಮದ ಕೋಶವನ್ನು ತೆಗೆದು ಹಾಕುತ್ತದೆ.

ವಿಧಾನ:

1. ಪೀಡಿತ ಪ್ರದೇಶದ ಮೇಲೆ ತಾಜಾ ಮೊಸರನ್ನು ನೇರವಾಗಿ ಅನ್ವಯಿಸಿ.

2. ತ್ವಚೆ ಅದನ್ನು ಹೀರಿಕೊಳ್ಳಲು 30 ನಿಮಿಷಗಳ ಕಾಲ ಬಿಡಿ.

3. ನಂತರ ನೀರಿನಿಂದ ತೊಳೆಯಿರಿ.

4. ಮಲಗುವ ಮುನ್ನವೂ ಇದನ್ನು ಅನ್ವಯಿಸಿಕೊಳ್ಳಬಹುದು.

5. ಉತ್ತಮ ಫಲಿತಾಂಶಕ್ಕೆ ನಿತ್ಯವೂ ಅನ್ವಯಿಸಿ.

ಟೊಮ್ಯಾಟೋ

ಟೊಮ್ಯಾಟೋ

ಟೊಮ್ಯಾಟೋದಲ್ಲಿ ಲಿಕೊಪೀನ್ ಸಮೃದ್ಧವಾಗಿದೆ. ಇದರಲ್ಲಿರುವ ಬ್ಲೀಚಿಂಗ್ ಪ್ರಾಪರ್ಟಿಗಳು ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಆರೋಗ್ಯಕರ ಹಾಗೂ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ವಿಧಾನ:

1. ಟೊಮ್ಯಾಟೋವನ್ನು ಕತ್ತರಿಸಿ, ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

2. ಚರ್ಮವು ರಸವನ್ನು ಹೀರಿಕೊಳ್ಳಲು 20 ನಿಮಿಷಗಳಕಾಲ ಬಿಡಿ.

3. ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

4. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ.

ಹರಳೆಣ್ಣೆ

ಹರಳೆಣ್ಣೆ

ವಯಸ್ಸಾದ ಚರ್ಮದ ಸುಧಾರಣೆ ಹಾಗೂ ಮದೃದುವಾದ ವಿನ್ಯಾಸ ನೀಡಲು ಹರಳೆಣ್ಣೆ ಅತ್ಯುತ್ತಮ ಮನೆ ಔಷಧಿ.

ವಿಧಾನ:

1. ಹರಳೆಣ್ಣೆಯನ್ನು ನೇರವಾಗಿ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

2. ಚರ್ಮವು ಎಣ್ಣೆಯನ್ನು ಹೀರಿಕೊಳ್ಳುವ ತನಕ ಸರಿಯಾಗಿ ಮಸಾಜ್ ಮಾಡಿ.

3. ಉತ್ತಮ ಫಲಿತಾಂಶ ಪಡೆಯಲು ದಿನಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಬಹುದು.

4. ಶುಷ್ಕ ತ್ವಚೆಯನ್ನು ಹೊಂದಿದ್ದರೆ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸ್ವಲ್ಪ ಸೇರಿಸಿ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಇದರಲ್ಲಿ ವಿಟಮಿನ್ "ಸಿ' ಹಾಗೂ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಚರ್ಮದ ಮೇಲಿರುವ ಕಂದು ಬಣ್ಣದ ಚುಕ್ಕೆಗಳನ್ನು ತೆಗೆಯಲು ಹಾಗೂ ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತದೆ.

ವಿಧಾನ:

1. ಕಲ್ಲಂಗಡಿ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

2. ಚರ್ಮದ ಮೇಲೆ ಇರುವ ರಸ ಒಣಗಲು 15-20 ನಿಮಿಷಗಳ ಕಾಲ ಬಿಡಿ.

3. ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

4. ಉತ್ತಮ ಫಲಿತಾಂಶಕ್ಕೆ ನಿತ್ಯವೂ ಅನ್ವಯಿಸಿ.

ವಯಸ್ಸಿನ ತ್ವಚೆಯನ್ನು ತಡೆಯಲು ಸಲಹೆ

ವಯಸ್ಸಿನ ತ್ವಚೆಯನ್ನು ತಡೆಯಲು ಸಲಹೆ

ಸೂರ್ಯನ ಕಿರಣಕ್ಕೆ ಹೋಗುವಾಗ 30 ಎಸ್ ಪಿ ಎಫ್ ಸನ್ಸ್ ಕ್ರೀಮ್ ಅನ್ವಯಿಸಿಕೊಂಡು ಹೋಗಿ. ಬಹಳ ಸಮಯ ಸೂರ್ಯನ ಕಿರಣದದಲ್ಲಿ ಕೆಲಸ ಮಾಡಬೇಕಾದರೆ ಪ್ರತಿ ಎರಡು ಗಂಟೆಗೊಮ್ಮೆ ಕ್ರೀಮ್‍ನ್ನು ಅನ್ವಯಿಸಿ. ಆದಷ್ಟು ಮೈತುಂಬಾ ಆವರಿಸುವ ಬಟ್ಟೆಯನ್ನು ಧರಿಸಿ. ಸೂರ್ಯನ ಕಿರಣ ತಡೆಯುವ ಟೋಪಿ ಧರಿಸಿ.

English summary

ten-simple-home-remedies-to-remove-age-spots

Age spots appear more frequently in people who spend a lot of time under the sun. While age spots are not dangerous, it will, however, make you look older. But let's not worry too much about that because we have 10 simple home remedies to help you get rid of them. Let's take a look.
X
Desktop Bottom Promotion