ಮನೆ ಔಷಧಿ: ಸೌಂದರ್ಯಕ್ಕೆ ಸರಳ ಮದ್ದು-ಅಡುಗೆಮನೆಯ ಶುಂಠಿ

By: Hemanth
Subscribe to Boldsky

ನಾವು ತಿನ್ನುವ ಪ್ರತಿಯೊಂದು ಮಸಾಲೆ ಹಾಗೂ ತರಕಾರಿಗಳು ಆರೋಗ್ಯಕ್ಕೆ ಭಾರೀ ಲಾಭ ಉಂಟು ಮಾಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಅದರಲ್ಲೂ ಭಾರತೀಯರು ಬಳಸುವಂತಹ ಮಸಾಲೆಗಳು ಹಾಗೂ ಸಾಂಬಾರ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಒಂದಲ್ಲ ಒಂದು ರೀತಿಯಿಂದ ಇದು ಆರೋಗ್ಯವನ್ನು ಕಾಪಾಡುವುದು ಮತ್ತು ಬೇರೆ ಯಾವುದೇ ಕಾಯಿಲೆಗಳು ಬರದಂತೆ ಕಾಪಾಡುವುದು.

ಭಾರತೀಯರು ಹೆಚ್ಚಾಗಿ ಬಳಸುವಂತಹ ಶುಂಠಿಯಿಂದ ಹಲವಾರು ರೀತಿಯ ಲಾಭಗಳು ನಮ್ಮ ದೇಹಕ್ಕೆ ಆಗುವುದು. ಇದರಲ್ಲಿ ವಿಟಮಿನ್ ಬಿ, ಸಿ, ನಾರಿನಾಂಶ, ಸತು, ಜೈವಿಕ ಸಕ್ರಿಯ ಸಂಯುಕ್ತಗಳಾದ ಪಾಲಿಸ್ಯಾಕಡೈಡ್ ಗಳು, ಸಫೋನಿನ್‌ಗಳಿವೆ. ಸಾವಿರಾರು ವರ್ಷಗಳಿಂದಲೂ ಶುಂಠಿಯನ್ನು ಮನೆಮದ್ದಿನಲ್ಲಿ ಬಳಸಲಾಗುತ್ತಿದೆ.

ಅಡುಗೆಮನೆಯ ಶುಂಠಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು!

ಇದು ಜೀರ್ಣಕ್ರಿಯೆ, ಕಫ ಮತ್ತು ಜ್ವರ ನಿವಾರಣೆ ಮಾಡುವುದು. ಶುಂಠಿಯನ್ನು ಕಾಂತಿಯುತ ಚರ್ಮದ ಆರೈಕೆಗಾಗಿಯೂ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹಸಿ, ಹುಡಿ, ರಸ ಮತ್ತು ಒಣಗಿಸಿದ ಶುಂಠಿ ಮತ್ತು ಎಣ್ಣೆಯನ್ನು ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ. ಚರ್ಮದ ಆರೈಕೆಯಲ್ಲಿ ಇದನ್ನು ಹೇಗಲ್ಲಾ ಬಳಸಿಕೊಳ್ಳಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ವಯಸ್ಸಾಗುವ ಲಕ್ಷಣ ತಡೆಯಲು

ವಯಸ್ಸಾಗುವ ಲಕ್ಷಣ ತಡೆಯಲು

ಶುಂಠಿಯಲ್ಲಿ ಇರುವಂತಹ ಸುಮಾರು 40 ಆ್ಯಂಟಿಆಕ್ಸಿಡೆಂಟ್ ಗಳು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಚರ್ಮಕ್ಕೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್‌ನ್ನು ಇದು ತಡೆಯುವುದು. ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಬಣ್ಣವನ್ನು ಇದು ಸುಧಾರಿಸುವುದು. ಶುಂಠಿ ಹುಡಿಗೆ ಜೇನುತುಪ್ಪ ಮತ್ತು ಲಿಂಬೆರಸ ಬೆರೆಸಿಕೊಳ್ಳಿ. ಇದನ್ನು ವಾರದಲ್ಲಿ ಎರಡು ಬಾರಿ ಇದನ್ನು ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಮೊಡವೆ ಹಾಗೂ ಕಲೆಗಳ ನಿವಾರಣೆಗೆ

ಮೊಡವೆ ಹಾಗೂ ಕಲೆಗಳ ನಿವಾರಣೆಗೆ

ಶುಂಠಿಯಿಂದ ಚರ್ಮವನ್ನು ಸರಿಪಡಿಸಬಹುದು. ಶುಂಠಿಯಲ್ಲಿ ಇರುವಂತಹ ನಂಜು ನಿರೋಧಕ ಗುಣಗಳು ಚರ್ಮದ ಮೇಲುಗಡೆ ಇರುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದು ಮಾತ್ರವಲ್ಲದೆ ರಂಧ್ರದೊಳಗೆ ಕೂಡ ಇದು ಕೆಲಸ ಮಾಡುವುದು. ತುಂಬಾ ಸೂಕ್ಷ್ಮ ಚರ್ಮವಿರುವವರು ಕೂಡ ಯಾವುದೇ ಅಡ್ಡಪರಿಣಾಮವಿಲ್ಲದೆ ಶುಂಠಿ ಬಳಸಿಕೊಳ್ಳಬಹುದು. ಶುಂಠಿಯ ರಸಕ್ಕೆ ಹತ್ತಿ ಉಂಡೆ ಅದ್ದಿಕೊಂಡು ಅದನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ. ಇದನ್ನು ನೀರಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕೆ ಕೆಲವು ದಿನಗಳ ಕಾಲ ಇದನ್ನು ಬಳಸಿ.

ಸೆಲ್ಯೂಲೈಟ್ ವಿರುದ್ಧ ಹೋರಾಡುವುದು

ಸೆಲ್ಯೂಲೈಟ್ ವಿರುದ್ಧ ಹೋರಾಡುವುದು

ಶುಂಠಿಯು ರಕ್ತ ಸಂಚಾರ ಉತ್ತಮಪಡಿಸುವುದು. ಇದರಿಂದಾಗಿ ಸೆಲ್ಯೂಲೈಟ್ ಕಡಿಮೆಯಾಗುವುದು. ಶುಂಠಿ ಮತ್ತು ಲಿಂಬೆಯ ಸ್ಕ್ರಬ್ ಬಳಸಿಕೊಂಡು ಇದರಿಂದ ಮುಕ್ತಿ ಪಡೆಯಿರಿ. ಒಂದು ಲಿಂಬೆ, 2 ಚಮಚ ತುರಿದ ಶುಂಠಿ, ½ ಕಪ್ ಸಕ್ಕರೆ ಮತ್ತು ¼ ಕಪ್ ಆಲಿವ್ ತೈಲ. ಬಳಸಿಕೊಳ್ಳಿ. ಈ ಮಿಶ್ರಣವನ್ನು ಒಂದು ವಾರ ತನಕ ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ಬಳಸಬಹುದು. ಸೆಲ್ಯೂಲೈಟ್ ಗೆ ವಾರದಲ್ಲಿ 2ರಿಂದ 3 ಸಲ ಸ್ಕ್ರಬ್ ಮಾಡಿ...

ಕೂದಲಿನ ಸರ್ವರೋಗಕ್ಕೂ 'ಶುಂಠಿಯ' ಆರೈಕೆ!

ಚರ್ಮದ ಬೊಕ್ಕೆ ತೆಗೆಯಲು

ಚರ್ಮದ ಬೊಕ್ಕೆ ತೆಗೆಯಲು

ಸೌಂಧರ್ಯದಲ್ಲಿ ಬೊಕ್ಕೆಗಳು ತುಂಬಾ ಕಿರಿಕಿರಿ ಉಂಟು ಮಾಡುವುದು. ಬೊಕ್ಕೆ ತೆಗೆಯಲು ಶುಂಠಿಯು ತುಂಬಾ ನೈಸರ್ಗಿಕ ಸಾಮಗ್ರಿ. ಶುಂಠಿ ತುಂಡು ಮಾಡಿಕೊಂಡು ಅದನ್ನು ಐದು ನಿಮಿಷ ಕಾಲ ಬೊಕ್ಕೆ ಮೇಲಿಡಿ. ಒಂದು ವಾರ ಕಾಲ ದಿನದಲ್ಲಿ ಎರಡು ಸಲ ಇದನ್ನು ಮಾಡಬೇಕು. ಬೊಕ್ಕೆಗಳು ಕುಗ್ಗುವುದರಿಂದ ಸುಂದರ ಚರ್ಮವು ನಿಮ್ಮದಾಗುವುದು.

ಕಾಂತಿ ಹೆಚ್ಚಿಸುವುದು

ಕಾಂತಿ ಹೆಚ್ಚಿಸುವುದು

ಶುಂಠಿ ಬಳಸಿಕೊಂಡು ಕಾಂತಿಯುತ ಚರ್ಮ ಪಡೆಯಬಹುದಾಗಿದೆ. ಒಂದು ಚಮಚ ಶುಂಠಿ ರಸ, ಎರಡು ಚಮಚ ರೋಸ್ ವಾಟರ್ ಮತ್ತು ½ ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ ಬಳಿಕ ತೊಳೆಯಿರಿ.

ಸುಟ್ಟ ಗಾಯ ಮತ್ತು ಗುಳ್ಳೆಗಳ ಶಮನ

ಸುಟ್ಟ ಗಾಯ ಮತ್ತು ಗುಳ್ಳೆಗಳ ಶಮನ

ಮುಖದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು ಯುವಜನರದಲ್ಲಿ ಸೌಂಧರ್ಯ ಕೆಡಿಸುವುದು ಮತ್ತು ಸುಟ್ಟ ಗಾಯಗಳು ಕೂಡ ಮುಖದ ಮೇಲೆ ಕಲೆ ಉಂಟು ಮಾಡುವುದು. ಇದನ್ನು ಶುಂಠಿ ರಸ ಅಥವಾ ಶುಂಠಿ ತುಂಡಿನ್ನು ದಿನದಲ್ಲಿ 2 ರಿಂದ ಮೂರು ಸಲ ಬಳಸುವುದರಿಂದ ನಿವಾರಣೆ ಮಾಡಬಹುದು. ನಿಯಮಿತವಾಗಿ ಬಳಸುತ್ತಾ ಹೋದರೆ 6ರಿಂದ 12 ವಾರಗಳಲ್ಲಿ ಇದು ಸುಂದರ ಚರ್ಮ ನೀಡುವುದು. ಸುಟ್ಟ ಗಾಯಗಳಿಗೆ ಶುಂಠಿ ಬಳಸುವಾಗ ಗಾಯಗಳು ಶಮನಗೊಂಡ ಬಳಿಕ ಬಳಸಬೇಕು. ಬಿಸಿಲಿನಿಂದ ಆಗಿರುವ ಕಲೆಗಳನ್ನು ಇದು ನಿವಾರಿಸುವುದು.

English summary

Surprising Skin Care Benefits Of Ginger

Ginger is considered as one of the healthiest herbs in the plant family. It is loaded with nutrients such as vitamin B and C, fibre, zinc, and bioactive compounds such as polysaccharides, saponin, and many others. Ginger found its place in Asian cooking thousands of years ago and overall well-being of a person is assured on consuming ginger. It is also used in many homes remedies to cure digestion, cough, and flu symptoms and these are very well known to all.
Subscribe Newsletter