ಸುಂದರವಾಗಿ ಕಾಣಬೇಕೇ? ಇಲ್ಲಿದೆ ನೋಡಿ ಸಿಂಪಲ್ ಬ್ಯೂಟಿ ಟಿಪ್ಸ್

By: Hemanth
Subscribe to Boldsky

ಕಲೆ ರಹಿತ ಸುಂದರ ತ್ವಚೆ ಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಸಿನಿಮಾ ನಟಿಯರ ತ್ವಚೆ ನೋಡಿ ಇಂತಹ ತ್ವಚೆ ನಮ್ಮದಾಗಬಾರದೇ ಎನ್ನುವ ಬಯಕೆ ಮೂಡುವುದು. ಆದರೆ ಪ್ರತಿಯೊಬ್ಬರಿಗೂ ಇಂತಹ ಸುಂದರ ತ್ವಚೆ ಸಿಗುವುದಿಲ್ಲ. ಕೆಲವರಿಗೆ ಇದು ದೇವರು ಕೊಟ್ಟಿರುವ ವರ ಎಂದರೂ ತಪ್ಪಾಗಲಾರದು. ಯಾಕೆಂದರೆ ಹುಟ್ಟುತ್ತಲೇ ಅವರಿಗೆ ಸುಂದರ ತ್ವಚೆ ಬಂದಿರುತ್ತದೆ. ಇನ್ನು ಕೆಲವರು ಸುಂದರ ತ್ವಚೆ ಪಡೆಯಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ.

ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಯೊಂದು ಕ್ರೀಮ್ ಅನ್ನು ಬಳಸುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಮಾರುಕಟ್ಟೆಯಲ್ಲಿ ತ್ವಚೆಯನ್ನು ಬಿಳಿಗೊಳಿಸುವ ಮತ್ತು ಕಲೆಗಳನ್ನು ಹೋಗಲಾಡಿಸುವಂತಹ ಕ್ರೀಮ್ ಗಳು ದಿನಕ್ಕೊಂದು ಬರುತ್ತದೆ. ಆದರೆ ಇಂತಹ ಕ್ರೀಮ್‌ಗಳಲ್ಲಿ ರಾಸಾಯನಿಕ ಹಾಕಿರುವ ಕಾರಣದಿಂದ ಹೆಚ್ಚು ಬಳಸಿದರೆ ಅದು ತ್ವಚೆಯನ್ನು ಮತ್ತಷ್ಟು ಕೆಡಿಸಬಹುದು. ಬಿಳಿಯಾದ ಸುಂದರ ತ್ವಚೆ ಪಡೆಯಬೇಕೆಂದರೆ ಮೆಲನಿನ್ ಸ್ರವಿಸುವಿಕೆಯನ್ನು ನಿಯಂತ್ರಣದಲ್ಲಿ ಇಡಬೇಕು. 

ನೀವು ವಯಸ್ಸಾದಂತೆ ಕಾಣುತ್ತಿದ್ದೀರಾ? ಹಾಗಾದರೆ ಇವುಗಳ ಉಪಯೋಗ ಮಾಡಿ

ಇಂದಿನ ದಿನಗಳಲ್ಲಿ ಸುಂದರ ತ್ವಚೆ ಪಡೆಯಲು ಹಲವಾರು ರೀತಿಯ ಶಸ್ತ್ರಚಿಕಿತ್ಸೆಗಳು, ರಾಸಾಯನಿಕ ಚಿಕಿತ್ಸೆಗಳು ಮತ್ತು ಲೇಸರ್ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇದು ಮುಂದೆ ಕೆಲವು ಅಡ್ಡಪರಿಣಾಮ ಉಂಟುಮಾಡಬಹುದು. ಕಲೆರಹಿತವಾಗಿರುವ ಬಿಳಿಯ ತ್ವಚೆಯ ಆರೈಕೆಗೆ ನೀವೇ ತಯಾರಿಸಬಹುದಾದ ಕೆಲವೊಂದು ಫೇಸ್ ಪ್ಯಾಕ್‌ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಬಳಸಿಕೊಂಡು ನಿಮ್ಮ ತ್ವಚೆಯ ಬಣ್ಣವನ್ನು ಬಿಳಿಯಾಗಿಸಿ..... 

ಸೌತೆಕಾಯಿ ಮತ್ತು ಲಿಂಬೆ ರಸದ ಫೇಸ್ ಪ್ಯಾಕ್

ಸೌತೆಕಾಯಿ ಮತ್ತು ಲಿಂಬೆ ರಸದ ಫೇಸ್ ಪ್ಯಾಕ್

ತ್ವಚೆಯನ್ನು ಬಿಳಿಯಾಗಿಸುವ ಕೆಲಸದಲ್ಲಿ ಲಿಂಬೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಸೌತೆಕಾಯಿಯ ಶಮನಕಾರಿ ಗುಣದೊಂದಿಗೆ ಇದನ್ನು ಸೇರಿಸಿಕೊಂಡಾಗ ತ್ವಚೆ ಬಿಳಿಗೊಳಿಸುವ ಅತ್ಯುತ್ತಮ ಫೇಸ್ ಪ್ಯಾಕ್ ಆಗಿದೆ.

ಬೇಕಾಗುವ ಸಾಮಗ್ರಿಗಳು

*ಒಂದು ಚಮಚ ಲಿಂಬೆ ರಸ

*ಅರ್ಧ ಕಪ್ ಸೌತೆಕಾಯಿ

*ಒಂದು ಚಮಚ ಅರಿಶಿನ ಹುಡಿ

*ನೀರು

ವಿಧಾನ

ವಿಧಾನ

1.ಸೌತೆಕಾಯಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದರ ಜ್ಯೂಸ್ ತೆಗೆಯಿರಿ.

2.ಈ ಜ್ಯೂಸ್ ಗೆ ಲಿಂಬೆರಸ ಮತ್ತು ಅರಶಿನ ಹುಡಿ ಹಾಕಿ.

3.ಅಗತ್ಯವಿದ್ದರೆ ನೀರು ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

4. ತಣ್ಣೀರಿನಿಂದ ಮುಖ ತೊಳೆಯಿರಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿಕೊಳ್ಳಿ.

ಮುಖದ ಸೌಂದರ್ಯಕ್ಕೆ ಸೌತೆಕಾಯಿಯ ಫೇಸ್ ಪ್ಯಾಕ್

ಕಡಲೆಹಿಟ್ಟು, ಬಾದಾಮಿ ಎಣ್ಣೆ ಮತ್ತು ಹಾಲಿನ ಫೇಸ್ ಪ್ಯಾಕ್

ಕಡಲೆಹಿಟ್ಟು, ಬಾದಾಮಿ ಎಣ್ಣೆ ಮತ್ತು ಹಾಲಿನ ಫೇಸ್ ಪ್ಯಾಕ್

ತ್ವಚೆ ಬಿಳಿಯಾಗಿಸುವಂತಹ ಸಾಮಗ್ರಿಗಳಲ್ಲಿ ಕಡಲೆ ಹಿಟ್ಟು ಮೊದಲ ಸ್ಥಾನದಲ್ಲಿದೆ. ನೈಸರ್ಗಿಕ ಸ್ಕ್ರಬ್ ನಿಂದ ಚರ್ಮದ ಬಣ್ಣವನ್ನು ಬಿಳಿಯಾಗಿಸಬಹುದು.ಬಾದಾಮಿ ಎಣ್ಣೆ ಮತ್ತು ಹಾಲು ಚರ್ಮವನ್ನು ಮೃಧುವಾಗಿಸುವುದು ಮತ್ತು ಮೆಲನಿನ್ ಉತ್ಪತ್ತಿ ಕಡಿಮೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

*3 ಚಮಚ ಕಡಲೆಹಿಟ್ಟು

*1 ಚಮಚ ಹಾಲು

*½ ಚಮಚ ಬಾದಾಮಿ ಎಣ್ಣೆ

ವಿಧಾನ

ವಿಧಾನ

*ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಿಶ್ರಣ ಮಾಡಿ ಮತ್ತು ಮುಖವನ್ನು ಸ್ವಚ್ಛ ಮಾಡಿಕೊಂಡು ಹಚ್ಚಿಕೊಳ್ಳಿ.

* 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

* ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಓಟ್ ಮೀಲ್ ಮತ್ತು ಟೊಮೆಟೊ ಜ್ಯೂಸ್

ಓಟ್ ಮೀಲ್ ಮತ್ತು ಟೊಮೆಟೊ ಜ್ಯೂಸ್

ಬಿಳಿ ಚರ್ಮವನ್ನು ಪಡೆಯಲು ಓಟ್ ಮೀಲ್ ಒಳ್ಳೆಯದು. ಟೊಮೆಟೋದಲ್ಲಿ ಬ್ಲೀಚಿಂಗ್ ಗುಣಗಳು ಇವೆ. ಇದರಿಂದ ಈ ಫೇಸ್ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು

*3 ಚಮಚ ಓಟ್ ಮೀಲ್ ಹುಡಿ

*2 ಚಮಚ ಟೊಮೆಟೊ ಜ್ಯೂಸ್

*1 ಚಮಚ ಮೊಸರು

ವಿಧಾನ

1)ಓಟ್ ಮೀಲ್ ಹುಡಿ ಮತ್ತು ಟೊಮೆಟೋ ಜ್ಯೂಸ್ ನ್ನು ಮಿಶ್ರಣ ಮಾಡಿಕೊಳ್ಳಿ.

2) ಇದಕ್ಕೆ ಮೊಸರು ಹಾಕಿ ಮಿಶ್ರಣ ಮಾಡಿ.

3) ಈ ಪ್ಯಾಕ್ ಅನ್ನು ತ್ವಚೆಗೆ ಹಚ್ಚಿಕೊಳ್ಳಿ.

4) 15 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

5) ವಾರದಲ್ಲಿ ಎರಡು ಸಲ ಬಳಸಿ.

ಮುಖದ ಅಂದಕ್ಕೆ, ಟೊಮೆಟೊ-ಶ್ರೀಗಂಧದ ಫೇಸ್ ಪ್ಯಾಕ್

ಆಲೂಗಡ್ಡೆ ಮತ್ತು ಲಿಂಬೆಯ ಫೇಸ್ ಪ್ಯಾಕ್

ಆಲೂಗಡ್ಡೆ ಮತ್ತು ಲಿಂಬೆಯ ಫೇಸ್ ಪ್ಯಾಕ್

ಆಲೂಗಡ್ಡೆಯಲ್ಲಿ ಕ್ಯಾಟೆಕೋಲೇಸ್ ಎನ್ನುವ ಕಿಣ್ವವಿದೆ. ಇದರಲ್ಲಿರುವ ಬ್ಲೀಚಿಂಗ್ ಗುಣಗಳು ಕಲೆಗಳು ಹಾಗೂ ಕಪ್ಪು ವೃತ್ತಗಳನ್ನು ನಿವಾರಿಸುತ್ತದೆ. ಇದಕ್ಕೆ ಲಿಂಬೆರಸ ಸೇರಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.

ಬೇಕಾಗುವ ಸಾಮಗ್ರಿಗಳು

*ಒಂದು ಮಧ್ಯಮ ಗಾತ್ರದ ಬಟಾಟೆ

*ಕೆಲವು ಹನಿ ಲಿಂಬೆರಸ

ವಿಧಾನ

ವಿಧಾನ

1) ಆಲೂಗಡ್ಡೆ ತುರಿಯಿರಿ ಮತ್ತು ಅದಕ್ಕೆ ಲಿಂಬೆರಸ ಹಾಕಿಕೊಳ್ಳಿ.

2)ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆ ಇರಲಿ.

3)ನೀರಿನಿಂದ ಮುಖ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಈ ಫೇಸ್ ಪ್ಯಾಕ್‌ ಅನ್ನು ನಿಯಮಿತವಾಗಿ ಬಳಸಿ.

English summary

Super Easy DIY Face Masks For Fair Skin

Most of the times people overlook this fact and can go to any lengths to achieve fair skin. But to attain fair skin, it is important to control the secretion of melanin. This cannot simply be attained by external application of creams. Procedures such as laser treatments, chemical peels and even surgery are available, which promise fair skin. However, there are a few secrets in Ayurveda to achieve fair skin. Given below are a few DIY face masks that you can do at home to lighten your complexion.'
Subscribe Newsletter