ತ್ವಚೆಯ ಆರೋಗ್ಯಕ್ಕೆ ಸೂರ್ಯಕಾಂತಿ ಎಣ್ಣೆಯ ಆರೈಕೆ

By: Divya
Subscribe to Boldsky

ಸೂರ್ಯಕಾಂತಿ ಎಣ್ಣೆಯನ್ನು ಇತರ ತೈಲಗಳಿಗೆ ಹೋಲಿಸಿದರೆ ಸಮೃದ್ಧ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಅಮೆರಿಕಾದಲ್ಲಿ ಈ ಎಣ್ಣೆಯನ್ನು ಅಡುಗೆ ಹಾಗೂ ಚರ್ಮದ ಆರೈಕೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದು ದೇಹದ ಆರೋಗ್ಯದ ಜೊತೆಗೆ ಅನೇಕ ಚರ್ಮರೋಗಗಳ ನಿವಾರಣೆಗೆ ಬಳಸಲಾಗುತ್ತದೆ.

ತ್ವಚೆಯ ಆರೋಗ್ಯ ಕಾಪಾಡುವಲ್ಲಿ ತೈಲಗಳ ಪಾತ್ರ ಬಹಳ ಪ್ರಮುಖವಾದದ್ದು. ಅದರಲ್ಲೂ ಸೂರ್ಯಕಾಂತಿ ಎಣ್ಣೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಈ ಎಣ್ಣೆಯ ಬಳಸಿ ಅಡುಗೆ ಮಾಡುವುದರಿಂದಲೂ ತ್ವಚೆಯು ಹೆಚ್ಚು ಕಾಂತಿಯುತವಾಗಿರುತ್ತದೆ. ಯಾವ ಬಗೆಯಲ್ಲಿ ಎಣ್ಣೆಯನ್ನು ಬಳಸಿ ಉಪಯೋಗ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ...

ಮೊಡವೆ ಚಿಕಿತ್ಸೆ

ಮೊಡವೆ ಚಿಕಿತ್ಸೆ

2 ಚಮಚ ಮೊಸರು, ಸೂರ್ಯಕಾಂತಿ ಎಣ್ಣೆ ಒಂದು ಚಮಚ ಮತ್ತು 2 ಚಮಚ ಕ್ಯಾಸ್ಟರ್ ಎಣ್ಣೆ. ಇವುಗಳ ಮಿಶ್ರಣವನ್ನು ಮೊಡವೆ ಹಾಗೂ ಮುಖದ ಇತರ ಭಾಗಗಳಿಗೂ ಅನ್ವಯಿಸಬೇಕು. ನಂತರ 10 ನಿಮಿಷ ಮಸಾಜ್ ಮಾಡಿ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಮೊಡವೆ, ಉರಿಊತ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.

ಸತಾಯಿಸುವ 'ಮೊಡವೆ ಕಲೆಗೆ' ಮನೆಯಲ್ಲೇ ಚಿಕಿತ್ಸೆ! ಪ್ರಯತ್ನಿಸಿ ನೋಡಿ...

ಸುಕ್ಕುಗಟ್ಟುವಿಕೆಗೆ ಚಿಕಿತ್ಸೆ

ಸುಕ್ಕುಗಟ್ಟುವಿಕೆಗೆ ಚಿಕಿತ್ಸೆ

2 ಚಮಚ ಸೂರ್ಯಕಾಂತಿ ಎಣ್ಣೆ, 1 ಚಮಚ ಅಲೋವೆರಾ ಜೆಲ್, ಒಂದು ಚಮಚ ದಾಲ್ಚಿನ್ನಿ ಪುಡಿ. ಇವುಗಳ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು 15 ನಿಮಿಷ ಆರಲು ಬಿಡಬೇಕು. ನಂತರ ತಂಪಾದ ನೀರಿನಲ್ಲಿ ತೊಳೆಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ತ್ವಚೆ ಸುಕ್ಕುಗಟ್ಟುವುದು, ವಯಸ್ಸಾದಂತೆ ಕಾಣುವ ಗೆರೆಗಳನ್ನು ತಡೆಯಬಹುದು. ಅಲ್ಲದೆ ತ್ವಚೆಯು ಹೆಚ್ಚು ಕಾಂತಿಯುತವಾಗಿರುವಂತೆ ಮಾಡುತ್ತದೆ.

ಬರೀ ಹತ್ತೇ ದಿನಗಳಲ್ಲಿ ಮುಖದ ಸುಕ್ಕು ಮಂಗಮಾಯ...

ಸೂರ್ಯನ ಕಿರಣದ ಸುಟ್ಟ ಕಲೆಗೆ ಚಿಕಿತ್ಸೆ

ಸೂರ್ಯನ ಕಿರಣದ ಸುಟ್ಟ ಕಲೆಗೆ ಚಿಕಿತ್ಸೆ

ಒಂದು ಕಪ್ ಸೇಬು ಸೈಡರ್ ವಿನೆಗರ್, ಒಂದು ಚಮಚ ಸೂರ್ಯಕಾಂತಿ ಎಣ್ಣೆ ಮತ್ತು ಒಂದು ಚಮಚ ಅಲೋವೆರಾ ಜೆಲ್. ಇವುಗಳನ್ನು ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿ, ಮುಖಕ್ಕೆ ಅನ್ವಯಿಸಬೇಕು. 10 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಸೂರ್ಯನ ಕಿರಣಗಳಿಂದ ಉಂಟಾದ ಕಪ್ಪು ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ.

ತ್ವಚೆಯ ತೇವಾಂಶಕ್ಕೆ ಚಿಕಿತ್ಸೆ

ತ್ವಚೆಯ ತೇವಾಂಶಕ್ಕೆ ಚಿಕಿತ್ಸೆ

ಸೂರ್ಯಕಾಂತಿ ಎಣ್ಣೆಯನ್ನು ಸ್ವಲ್ಪ ಸಮಯದ ವರೆಗೆ ಬಿಸಿಮಾಡಿ. ಆರಿದ ಮೇಲೆ ಎಣ್ಣೆಯಿಂದ ಮೂಕಕ್ಕೆ ಮಸಾಜ್‍ಮಾಡಿಕೊಂಡು, ರಾತ್ರಿ ನಿದ್ರೆ ಮಾಡಬೇಕು. ಬೆಳಗ್ಗೆ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಜೊತೆಗೆ ಹೆಚ್ಚು ತಾಜಾ ಮತ್ತು ಕಾಂತಿಯುತವಾಗಿರುತ್ತದೆ.

ತ್ವಚೆಯೂ ಹೆಚ್ಚು ಆಕರ್ಷಕವಾಗಿ ಕಂಗೊಳಿಸಲು...

ತ್ವಚೆಯೂ ಹೆಚ್ಚು ಆಕರ್ಷಕವಾಗಿ ಕಂಗೊಳಿಸಲು...

ಸ್ವಲ್ಪ ಸೂರ್ಯಕಾಂತಿ ಎಣ್ಣೆ ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ, ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಬೇಕು. ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಹೈಪರ್ಪಿಗ್ಮೆಂಟೆಡ್ ತ್ವಚೆಗೆ ಆರೈಕೆ ಸಿಗುವುದು. ತ್ವಚೆಯೂ ಹೆಚ್ಚು ಆಕರ್ಷಕವಾಗಿ ಕಂಗೊಳಿಸುವುದು.

ಶುಷ್ಕ ತ್ವಚೆಗೆ ಚಿಕಿತ್ಸೆ

ಶುಷ್ಕ ತ್ವಚೆಗೆ ಚಿಕಿತ್ಸೆ

ಕ್ಯಾಸ್ಟರ್ ಎಣ್ಣೆ, ಅಡುಗೆ ಸೋಡಾ ಸ್ವಲ್ಪ ಮತ್ತು ಸೂರ್ಯಕಾಂತಿ ಎಣ್ಣೆ ಸ್ವಲ್ಪ. ಇವುಗಳ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಆರಲು ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಶುಷ್ಕ ತ್ವಚೆಯವರಿಗೆ ಉಂಟಾಗುವ ಉರಿಯ ಕಿರಿಕಿರಿ ನಿವಾರಣೆಯಾಗುತ್ತದೆ. ಜೊತೆಗೆ ಸತ್ತ ಚರ್ಮದ ಕೋಶಗಳು ಹಾಗೂ ಕೊಳೆಯನ್ನು ತೆಗೆಯಲು ಸಹಾಯ ಮಾಡುವುದು. ತ್ವಚೆಯು ಸದಾ ತೇವಾಂಶದಿಂದ ಕೂಡಿರುತ್ತದೆ.

ಕಣ್ಣಿನ ಆರೈಕೆಯ ಚಿಕಿತ್ಸೆ

ಕಣ್ಣಿನ ಆರೈಕೆಯ ಚಿಕಿತ್ಸೆ

ಸ್ವಲ್ಪ ಸೂರ್ಯಕಾಂತಿ ಎಣ್ಣೆಯನ್ನು ಬಿಸಿಮಾಡಬೇಕು. ಉಗುರು ಬೆಚ್ಚಗಿರುವಾಗ ಮುಖಕ್ಕೆ ಬಳಿದುಕೊಂಡು, ಮಸಾಜ್ ಮಾಡಬೇಕು. ಕಣ್ಣಿನ ಕೆಳಭಾಗಕ್ಕೂ ಅನ್ವಯಿಸಬೇಕು. ಹೀಗೆ ರಾತ್ರಿ ಬಿಟ್ಟು ಬೆಳಗ್ಗೆ ತೊಳೆಯಬೇಕು. ಆಗ ತ್ವಚೆಯು ಆರೋಗ್ಯಕರವಾಗಿರುವುದಲ್ಲದೆ ಕಣ್ಣಿನ ಉರಿ ಮತ್ತು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗುವುದು.

ಮೃದು ಚರ್ಮಕ್ಕೆ ಸ್ನಾನ ಚಿಕಿತ್ಸೆ

ಮೃದು ಚರ್ಮಕ್ಕೆ ಸ್ನಾನ ಚಿಕಿತ್ಸೆ

ಒಂದು ಕಪ್ ಬೇಕಿಂಗ್ ಸೋಡಾ, ಅರ್ಧ ಕಪ್ ಸೂರ್ಯಕಾಂತಿ ಎಣ್ಣೆ. ಇವೆರಡರ ಮಿಶ್ರಣವನ್ನು 2-3 ಚಮಚದಷ್ಟು ಸ್ನಾನದ ನೀರಿಗೆ ಸೇರಿಸಬೇಕು. ನಂತರ ಆ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮವು ಮೃದು ಹಾಗೂ ಕೋಮಲವಾಗಿರುತ್ತದೆ.

ಒಂದೆರಡು ಚಮಚ ಆಲಿವ್ ಎಣ್ಣೆ-ಇದುವೇ 'ಸೌಂದರ್ಯದ ಗಣಿ'!

English summary

Sunflower Oil Recipes For Skin Care Routine

Experts believe that sunflower oil is better and healthy for the body as compared to other oils which are usually used for consumption. The oil which is native to America is often used in cooking purposes and hardly is included in the skin care routine. Well, this volatile oil contains emollient properties, which not only benefit your health but also help provide you with several skin benefits.
Story first published: Tuesday, May 30, 2017, 8:01 [IST]
Subscribe Newsletter