For Quick Alerts
ALLOW NOTIFICATIONS  
For Daily Alerts

ಕೆನ್ನೆಯ ಚರ್ಮ ಜೋಲು ಬೀಳುತ್ತಿದೆಯೇ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

By Arshad
|

ಮಹಿಳೆಯರು ಸಹಜವಾಗಿಯೇ ಸೌಂದರ್ಯಪ್ರಿಯರಾಗಿದ್ದು ತಮ್ಮ ಸೌಂದರ್ಯವನ್ನು ಹೆಚ್ಚು ಕಾಲದವರೆಗೆ ಕಾಪಾಡಿಕೊಳ್ಳಲು ಹೆಚ್ಚಿನ ಅಸ್ಥೆ ವಹಿಸುತ್ತಾರೆ. ಅತ್ಯುತ್ತಮವಾಗಿ ಕಾಣಿಸಿಕೊಳ್ಳಬೇಕಾಗಿರುವುದು ಯಾವುದೇ ವಯಸ್ಸಿಗೂ ಅಗತ್ಯವಾಗಿದ್ದು ವಿಶೇಷ ಕಾಳಜಿಯನ್ನು ವಹಿಸಲೇಬೇಕಾಗಿರುತ್ತದೆ. ನಮ್ಮ ದೇಹದ ಅತಿ ಹೆಚ್ಚು ವಿಸ್ತಾರವುಳ್ಳ ಅಂಗವೆಂದರೆ ಚರ್ಮ.

ದೇಹದ ಗಾತ್ರದೊಂದಿಗೇ ಚರ್ಮ ಹಿಗ್ಗುತ್ತದಾದರೂ ವಯಸ್ಸಾದಂತೆ ದೇಹದ ಗಾತ್ರ ಕುಗ್ಗುತ್ತದೆ ಹಾಗೂ ಚರ್ಮ ನೆರಿಗೆ ಬೀಳುತ್ತದೆ ಹಾಗೂ ಜೋಲುಬೀಳತೊಡಗುತ್ತದೆ. ವರ್ಷಗಳು ಕಳೆಯುತ್ತಾ ಹೋದಂತೆ ಸಡಿಲವಾದ ಚರ್ಮ ಗುರುತ್ವದ ಬಲಕ್ಕೆ ಮಣಿದು ಪರದೆಯಂತೆ ನೆರಿಗೆ ನೆರಿಗೆಯಾಗತೊಡಗುತ್ತದೆ.

ವೃದ್ಧಾಪ್ಯದ ಲಕ್ಷಣಗಳನ್ನು ಸ್ಪಷ್ಟವಾಗಿ ತೋರುವುದೇ ಈ ನೆರಿಗೆಗಳು. ಅದರಲ್ಲೂ ಮುಖದ ಚರ್ಮದಲ್ಲಿ ಬೀಳುವ ನೆರಿಗೆಗಳು ಚರ್ಮದ ಸೆಳೆತಕ್ಕೆ ಅಗತ್ಯವಾಗಿರುವ ಕೊಲ್ಯಾಜೆನ್ ಎಂಬ ಅಂಗಾಂಶದ ಉತ್ಪಾದನೆ ಕುಂಠಿತವಾಗುವ ಮೂಲಕ ಕೊಂಚ ಹೆಚ್ಚೇ ಜೋಲುಬೀಳುತ್ತದೆ. ಕೆನ್ನೆಯ ಚರ್ಮ ಉಳಿದ ಭಾಗಕ್ಕಿಂತ ಮೊದಲು ಜೋಲುಬೀಳುತ್ತದೆ.

skin glowing

ಈ ಜೋಲುಬಿದ್ದ ಚರ್ಮದ ಮೂಲಕ ವೃದ್ದಾಪ್ಯ ಪ್ರಕಟಿಸುವುದು ಯಾರಿಗೂ ಇಷ್ಟವಿಲ್ಲ. ತಾರುಣ್ಯವನ್ನು ಕಾಪಾಡಿಕೊಳ್ಳಬೇಕಾದರೆ ದೇಹದ ಇತರ ಭಾಗಕ್ಕಿಂತಲೂ ಮುಖದ ಚರ್ಮದ ಸೆಳೆತವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಈ ಕೊರತೆಯನ್ನು ನೀಗಿಸುವ ನೂರಾರು ಕ್ರೀಮುಗಳು ಹಾಗೂ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಆದರೆ ಇವೆಲ್ಲವೂ ಹಣ ಮಾಡುವ ದುರುದ್ದೇಶದಿಂದಲೇ ಬಿಡುಗಡೆಯಾಗಿರುವ ಕಾರಣ ಇವುಗಳು ಸೌಂದರ್ಯವನ್ನು ವೃದ್ಧಿಸುವ ಹುಸಿಭರವಸೆಯನ್ನು ನೀಡುತ್ತವೆಯೇ ಹೊರತು ಪರಿಹಾರವಲ್ಲ. ಆಧುನಿಕ ವಿಧಾನಗಳಾದ ಬೋಟಾಕ್ಸ್ ಹಾಗೂ ಇತರ ಚರ್ಮದ ಒಳಗೆ ಅಂಗಾಂಶವನ್ನು ತುಂಬಿಸುವ ಚಿಕಿತ್ಸೆಗಳು ಉತ್ತಮ ಪರಿಣಾಮ ಒದಗಿಸುತ್ತವಾದರೂ ಇವು ತೀರಾ ದುಬಾರಿ ಹಾಗೂ ಎಲ್ಲರಿಗೂ ಒಗ್ಗುವಂತಹದ್ದೂ ಆಗಿರುವುದಿಲ್ಲ.

ಸುಕ್ಕಾದ ತ್ವಚೆಯೇ? ಚಿಂತೆ ಬೇಡ, ಇಲ್ಲಿದೆ ನೋಡಿ 'ಹೋಮ್ ಮೇಡ್ ಸ್ಕಿನ್ ಪ್ಯಾಕ್'

ಈಗ ಉಳಿದಿರುವುದೊಂದೇ ಆಯ್ಕೆ-ಅದೇ ಆಯುರ್ವೇದ. ನಿಸರ್ಗ ಚರ್ಮದ ಆರೈಕೆಗಾಗಿ ಹಲವಾರು ಪೋಷಕಾಂಶಗಳನ್ನು ಒದಗಿಸಿದ್ದು ಇವುಗಳು ಚರ್ಮ ಜೋಲುಬೀಳುವ ತೊಂದರೆಯನ್ನೂ ಸಮರ್ಥವಾಗಿ ನಿಭಾಯಿಸುತ್ತವೆ. ಈ ಗುಣವನ್ನು ಹೊಂದಿರುವ ಕೆಲವಾರು ಮುಖಲೇಪಗಳನ್ನು ಇಂದು ಪರಿಚಯಿಸಲಾಗುತ್ತಿದ್ದು ಇವುಗಳ ಸರಿಯಾದ ಬಳಕೆಯಿಂದ ಕೆನ್ನೆಗಳು ಗುಳಿಬೀಳುವುದು ಹಾಗೂ ಜೋಲು ಬೀಳುವುದನ್ನೂ ತಡೆಗಟ್ಟಿ ಯೌವನವನ್ನು ಹೆಚ್ಚಿನ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಮೊಟ್ಟೆಯ ಬಿಳಿಭಾಗ ಹಾಗೂ ಮುಲ್ತಾನಿ ಮಿಟ್ಟಿಯ ಮುಖಲೇಪ
ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣ ಮೊಟ್ಟೆಯ ಬಿಳಿಭಾಗದಲ್ಲಿ ಯಥೇಚ್ಛವಾಗಿದೆ. ಈ ಗುಣವನ್ನು ಮುಲ್ತಾನಿ ಮಿಟ್ಟಿ ಇನ್ನಷ್ಟು ಹೆಚ್ಚಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
-2 ದೊಡ್ಡಚಮಚ ಮುಲ್ತಾನಿ ಮಿಟ್ಟಿ
-1 ಮೊಟ್ಟೆಯ ಬಿಳಿಭಾಗ
-ಒಂದು ವೇಳೆ ನಿಮ್ಮ ಚರ್ಮ ಒಣಚರ್ಮವಾಗಿದ್ದರೆ ಕೆಲವು ಹನಿ ಗ್ಲಿಸರಿನ್

ವಿಧಾನ
1) ಮೊಟ್ಟೆಯ ಬಿಳಿಭಾಗವನ್ನು ಚೆನ್ನಾಗಿ ಗೊಟಾಯಿಸಿ.
2) ಇದಕ್ಕೆ ಮುಲ್ತಾನಿ ಮಿಟ್ಟಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ
3) ಕೆಲವು ತೊಟ್ಟು ಗ್ಲಿಸರಿನ್ ಬೆರೆಸಿ ಮಿಶ್ರಣ ಮಾಡಿದ ಬಳಿಕ ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ.
4) ಸುಮಾರು ಹದಿನೈದು ನಿಮಿಷ ಹಾಗೇ ಇರಿಸಿ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಜೇನು ಮತ್ತು ಬೆಣ್ಣೆಹಣ್ಣಿನ ಮುಖಲೇಪನ
ಜೇನು ಒಂದು ನೈಸರ್ಗಿಕ ಬಿಳಿಚುಕಾರಕ ಹಾಗು ತೇವಕಾರಕವಾಗಿದೆ. ಬೆಣ್ಣೆಹಣ್ಣಿನಲ್ಲಿ ಹಲವಾರು ವಿಟಮಿನ್ ಹಾಗೂ ಖನಿಜಗಳ ಆಗರವೇ ಲಭ್ಯವಿದ್ದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಈ ಜೋಡಿಗೆ ಚರ್ಮದಲ್ಲಿ ಕೊಲ್ಯಾಜೆನ್ ಹೆಚ್ಚಿಸುವ ಗುಣವೂ ಇದ್ದು ನಿಯಮಿತವಾಗಿ ಬಳಸುವ ಮೂಲಕ ಚರ್ಮದ ಸೆಳೆತ ಬಿಗಿಯಾಗಿರುವಂತೆ ನೋಡಿಕೊಳ್ಳುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
-1 ಒಂದು ಬೆಣ್ಣೆಣ್ಣಿನ ತಿರುಳಿ
-2 ಚಿಕ್ಕ ಚಮಚ ಜೇನು
-1 ವಿಟಮಿನ್ ಇ ಮಾತ್ರೆ

35ರ ನಂತರವೂ ತಾರುಣ್ಯದ ಕಳೆಯಿಂದ ಮಿಂಚಬೇಕೆ?

ವಿಧಾನ
1) ಒಂದು ಚಿಕ್ಕ ಪಾತ್ರೆಯಲ್ಲಿ ಬೆಣ್ಣೆಹಣ್ಣಿನ ತಿರುಳನ್ನು ಹಾಕಿ ಚಮಚದಿಂದ ಚೆನ್ನಾಗಿ ಕಿವುಚಿ.
2) ಇದಕ್ಕೆ ವಿಟಮಿನ್ ಇ ಮಾತ್ರೆಯ ಒಳಗಿನ ಪುಡಿ ಹಾಗೂ ಜೇನನ್ನು ಬೆರೆಸಿ.
3) ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿ.
4) ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.
3) ಜೇನು ಮತ್ತು ಬ್ಲೂಬೆರಿ ಹಣ್ಣುಗಳ ಮುಖಲೇಪನ ಬ್ಲೂಬೆರಿ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ವಯಸ್ಸಾಗುವ ಗತಿಯನ್ನು ನಿಧಾನಗೊಳಿಸುತ್ತದೆ. ಜೇನು ಉತ್ತಮ ತೇವಕಾರಕ ಹಾಗೂ ಚರ್ಮದ ಜೀವಕೋಶಗಳನ್ನು ಮರು ಉತ್ಪಾದಿಸಲು ನೆರವಾಗುತ್ತದೆ. ಈ ಮುಖಲೇಪ ನೆರಿಗೆಗಳನ್ನು ಕಡಿಮೆ ಮಾಡುವುದಲ್ಲದೇ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
ಅರ್ಧ ಕಪ್ ಬ್ಲೂಬೆರಿ ಹಣ್ಣುಗಳು, ಎರಡು ಚಿಕ್ಕ ಚಮಚ ಜೇನು
ವಿಧಾನ:
1) ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಬ್ಲೂಬೆರಿ ಹಣ್ಣುಗಳನ್ನು ನುಣ್ಣಗೆ ಅರೆಯಿರಿ.
2) ಬಳಿಕ ಈ ತಿರುಳನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಜೇನು ಬೆರೆಸಿ ಮಿಶ್ರಣ ಮಾಡಿ.್
3) ಈಗತಾನೇ ತೊಳೆದ ಮುಖಕ್ಕೆ ಈ ಲೇಪವನ್ನು ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕನಯವಾದ ಮಸಾಜ್ ಮಾಡುತ್ತಾ ತೊಳೆದುಕೊಳ್ಳಿ.

ಲೋಳೆಸರ ಹಾಗೂ ಕಿತ್ತಳೆ ಹಣ್ಣಿನ ಮುಖಲೇಪನ:
ನೆರಿಗೆಯನ್ನು ನಿವಾರಿಸುವಲ್ಲಿ ನಿರ್ಸಗ ಅತ್ಯುತ್ತಮ ಕೊಡುಗೆಯಾಗಿರುವ ಲೋಳೆಸರ ಹಾಗೂ ಕಿತ್ತಳೆಯ ಜೋಡಿಗೆ ಸರಿಸಾಟಿಯೇ ಇಲ್ಲ. ಕಿತ್ತಳೆಯಲ್ಲಿ ವಿಟಮಿನ್ ಸಿ ಇದ್ದು ಘಾಸಿಗೊಂಡ ಜೀವಕೋಶಗಳನ್ನು ಪುನಃಶ್ಚೇತನಗೊಳಿಸುತ್ತದೆ. ಈ ಲೇಪದ ಪರಿಣಾಮ ಅದ್ಭುತವಾಗಿರುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
-1 ಈಗತಾನೇ ಕತ್ತರಿಸಿದ ಲೋಳೆಸರದ ಕೋಡು
-1 ಕಿತ್ತಳೆ ಹಣ್ಣಿನ ತಿರುಳು
-1 ಚಿಕ್ಕಚಮಚ ಮೆಕ್ಕೆಜೋಳದ ಹಿಟ್ಟು.


ವಿಧಾನ:
1) ಲೋಳೆಸರದ ಕೋಡನ್ನು ಹಿಂಡಿ ಲೋಳೆಯನ್ನು ಸಂಗ್ರಹಿಸಿ.
2) ಕಿತ್ತಳೆ ಹಣ್ಣಿನ ತಿರುಳನ್ನು ಬೆರೆಸಿ.
3) ಮೆಕ್ಕೆಜೋಳದ ಹಿಟ್ಟು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಈಗತಾನೇ ತೊಳೆದ ಮುಖಕ್ಕೆ ಹಚ್ಚಿಕೊಳ್ಳಿ.
4) ಈ ಲೇಪವನ್ನು ಸುಮಾರು ಅರ್ಧಘಂಟೆ ಹಾಗೇ ಬಿಡಿ.
5) ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಪರಿಣಾಮವನ್ನು ಆಗಲೇ ಗಮನಿಸಿಬಹುದು.

ಮೊಟ್ಟೆಯ ಬಿಳಿಭಾಗ ಮತ್ತು ಮೊಸರು
ಇನ್ನು ಇದಕ್ಕೆ ಕೊಂಚವೇ ಅಂದರೆ ಕಾಲು ಚಿಕ್ಕಚಮಚದಷ್ಟು ಸಕ್ಕರೆ ಬೆರೆಸಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೆಲ ಹೊತ್ತು ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಓಟ್ಸ್
ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಚಮಚ ಓಟ್ಸ್ ರವೆ ಅಥವಾ ಓಟ್ ಮೀಲ್ ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆರಸ
ಒಂದು ವೇಳೆ ಮುಖದಲ್ಲಿ ಕಪ್ಪು ಕಲೆಗಳು, ಮೊಡವೆಯ ಗುರುತುಗಳು, ಗಾಯದ ಗುರುತುಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದರಿಂದ ನೆರಿಗೆಗಳ ಜೊತೆಗೇ ಕಲೆಗಳೂ ನಿಧಾನವಾಗಿ ಮಾಯವಾಗುತ್ತಾ ಹೋಗುತ್ತವೆ. ಒಂದು ಮೊಟ್ಟೆಯ ಬಿಳಿಭಾಗಕ್ಕೆ ಎರಡು ಚಿಕ್ಕ ಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತೊಳೆದ ಮುಖಕ್ಕೆ ತೆಳುವಾಗಿ ಹಚ್ಚಿ. ಕಣ್ಣಿಗೆ ಹೋಗದಂತೆ ಎಚ್ಚರವಹಿಸಿ. ವಿಶೇಷವಾಗಿ ಕಲೆಗಳಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಕಳೆದು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಅನುಸರಿಸಿ.

English summary

Skin Tightening Face Masks For Sagging Skin Around The Cheeks

Our skin is the largest organ of our body. The skin on our faces is especially thin compared to the skin on the rest of the body. Over time, due to the gravity, our delicate skin starts to sag. This results in formation of wrinkles. Wrinkles are considered to be the first signs of ageing. The facial skin becomes loose also due the slower production of collagen. The skin around the cheek is often the first place which starts to sag.
X
Desktop Bottom Promotion