ಮುಖದ ಸೌಂದರ್ಯ ಹೆಚ್ಚಿಸಲು ಓಟ್‌ಮೀಲ್' ಫೇಸ್ ಪ್ಯಾಕ್

By: Divya Pandith
Subscribe to Boldsky

ಮಹಿಳೆಯರು ಇತರ ಯಾವುದೇ ವಿಷಯಗಳಿಗೆ ಆದ್ಯತೆಯನ್ನು ನೀಡದೇ ಇದ್ದರೂ ತ್ವಚೆಯ ಸೌಂದರ್ಯವನ್ನು ಕಾಪಾಡಲು ಹಲವಾರು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ನುಣುಪಾದ ಯಾವುದೇ ಹಾನಿ ಇಲ್ಲದ ಮುಖ ಸೌಂದರ್ಯವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಸ್ತ್ರೀಯ ಕನಸಾಗಿರುತ್ತದೆ. ಅದಕ್ಕೆಂದೇ ಆಕೆ ಮಾರುಕಟ್ಟೆಯಲ್ಲಿ ಬರುವ ಹಲವಾರು ಉತ್ಪನ್ನಗಳನ್ನು ನಿತ್ಯವೂ ಪ್ರಯೋಗಿಸುತ್ತಿರುತ್ತಾರೆ ಮತ್ತು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ.

ಆದರೆ ತಮ್ಮ ಸೌಂದರ್ಯಕ್ಕಾಗಿ ತಮ್ಮ ಬಳಿಯೇ ಇರುವ ಅದ್ಭುತ ಔಷಧಗಳನ್ನು ಇವರು ಮರೆತಿರುತ್ತಾರೆ. ಹೌದು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಬದಲಿಗೆ ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಸೌಲಭ್ಯಗಳಿಂದ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು ಎಂಬ ಗುಟ್ಟನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಓಟ್‌ಮೀಲ್ ಅನ್ನು ಬಳಸಿಕೊಂಡು ತಯಾರಿಸುವ ಬೇರೆ ಬೇರೆ ಫೇಸ್‌ ಮಾಸ್ಕ್ ಕುರಿತಾದ ಮಾಹಿತಿಯನ್ನು ಇಂದಿಲ್ಲಿ ನೀಡುತ್ತಿದ್ದೇವೆ. ಬರಿಯ ಓಟ್‌ಮೀಲ್ ಅಲ್ಲದೆ ಇದರೊಂದಿಗೆ ಬೇರೆ ಬೇರೆ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಫೇಸ್ ಮಾಸ್ಕ್ ಅನ್ನು ನಿಮಗೆ ತಯಾರಿಸಿ ಕೊಳ್ಳಬಹುದಾಗಿದೆ.... 

ಓಟ್ ಮೀಲ್ ಮತ್ತು ಜೇನುತುಪ್ಪ

ಓಟ್ ಮೀಲ್ ಮತ್ತು ಜೇನುತುಪ್ಪ

*ಬೇಯಿಸಿದ ಒಂದು ಚಮಚ ಓಟ್‌ಮೀಲ್ 2 ಟೀ ಚಮಚ ಜೇನುತುಪ್ಪವನ್ನು ಬೆರೆಸಿ.

*ಮುಖದ ಮೇಲೆ ಮಿಶ್ರಣವನ್ನು ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

*10 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.

*ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿದರೆ ಮುಖವು ಕಾಂತಿ ಹಾಗೂ ತಾಜಾತನದಿಂದ ಕೂಡಿರುತ್ತದೆ.

ಓಟ್ ಮೀಲ್, ಅಡುಗೆ ಸೋಡ ಮತ್ತು ನೀರು

ಓಟ್ ಮೀಲ್, ಅಡುಗೆ ಸೋಡ ಮತ್ತು ನೀರು

*1 ಟೇಬಲ್ ಚಮಚ ಬೇಯಿಸಿದ ಓಟ್‌ಮೀಲ್ 1/2 ಟೀ ಚಮಚ ಬೇಕಿಂಗ್ ಸೋಡ ಮತ್ತು 3 ಟೀ ಚಮಚ ನೀರನ್ನು ಸೇರಿಸಿ.

*ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 10 ನಿಮಿಷಗಳ ಕಾಲ ಆರಲು ಬಿಡಿ.

ನಂತರ ತಿಳಿಯಾದ ಸ್ಕಿನ್ ಟೋನರ್ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರಕ್ಕೊಮ್ಮೆ ಇದನ್ನು ಅನ್ವಯಿಸುವುದರಿಂದ ಮುಖದ ಮೇಲಿರುವ ಕಪ್ಪು ಕಲೆಯನ್ನು ತೆಗೆಯಬಹುದು.

ಓಟ್ ಮೀಲ್ ಮತ್ತು ಮೊಸರು

ಓಟ್ ಮೀಲ್ ಮತ್ತು ಮೊಸರು

*1 ಟೀ ಚಮಚ ಬೇಯಿಸಿದ ಓಟ್ ಮೀಲ್‌ಗೆ, 2 ಟೀ ಚಮಚ ಮೊಸರನ್ನು ಸೇರಿಸಿ.

*ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 10 ನಿಮಿಷಗಳ ಕಾಲ ಆರಲು ಬಿಡಿ.

*ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರಕ್ಕೊಮ್ಮೆ ಇದನ್ನು ಅನ್ವಯಿಸುವುದುರಿಂದ ಚರ್ಮವು ಮೃದು ಹಾಗೂ ಕೋಮಲತೆಯನ್ನು ಪಡೆದುಕೊಳ್ಳುತ್ತದೆ.

 ಓಟ್ ಮೀಲ್, ನಿಂಬೆ ರಸ ಮತ್ತು ಆಲಿವ್ ಎಣ್ಣೆ

ಓಟ್ ಮೀಲ್, ನಿಂಬೆ ರಸ ಮತ್ತು ಆಲಿವ್ ಎಣ್ಣೆ

*1 ಟೇಬಲ್ ಚಮಚ ಬೇಯಿಸಿದ ಓಟ್‌ಮೀಲ್, 1 ಟೇಬಲ್ ಚಮಚ ನಿಂಬೆ ರಸ ಮತ್ತು 1 ಟೀ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೂ ಅನ್ವಯಿಸಿ.

*ನಂತರ 10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರಕ್ಕೊಮ್ಮೆ ಇದನ್ನು ಅನ್ವಯಿಸುವುದುರಿಂದ ಮುಖದ ಮೇಲಿರುವ ಬ್ಲ್ಯಾಕ್ ಹೆಡ್ಸ್ ತೆಗೆಯಬಹುದು.

ಓಟ್ ಮೀಲ್ ಮತ್ತು ಬಾದಾಮಿ ಎಣ್ಣೆ

ಓಟ್ ಮೀಲ್ ಮತ್ತು ಬಾದಾಮಿ ಎಣ್ಣೆ

*1 ಟೀ ಚಮಚ ಬೇಯಿಸಿದ ಓಟ್‌ಮೀಲ್ 1 ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ.

*ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ ಸ್ವಲ್ಪ ಸಮಯಗಳ ಕಾಲ ಆರಲು ಬಿಡಿ.

*ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಳಿಕ ಮಾಯಿಶ್ಚರೈಸರ್ ಕ್ರೀಮ್ಅನ್ನು ಅನ್ವಯಿಸಿ.

*ವಾರಕ್ಕೆ ಎರಡು ಬಾರಿ ಇದನ್ನು ಅನ್ವಯಿಸುವುದುರಿಂದ ಚರ್ಮವು ಹೊಳಪು ಹಾಗೂ ಕಾಂತಿಯಿಂದ ಕೂಡಿರುತ್ತದೆ.

ಓಟ್‌ಮೀಲ್,ಬಾಳೆಹಣ್ಣು ಮತ್ತು ಗುಲಾಬಿ ನೀರು

ಓಟ್‌ಮೀಲ್,ಬಾಳೆಹಣ್ಣು ಮತ್ತು ಗುಲಾಬಿ ನೀರು

*ಸ್ವಲ್ಪ ಕಿವುಚಿದ ಬಾಳೆಹಣ್ಣು, 1 ಟೀ ಚಮಚ ಬೇಯಿಸಿದ ಓಟ್‌ಮೀಲ್, 3 ಟೀ.ಚಮಚ ಗುಲಾಬಿ ನೀರನ್ನು ಸೇರಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೂ ಅನ್ವಯಿಸಿ.

*20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ತಿಂಗಳಿಗೆ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸುವುದುರಿಂದ ಮುಖ ಸ್ವಚ್ಛ ಹಾಗೂ ಕಾಂತಿಯಿಂದ ಕೂಡಿರುತ್ತದೆ.

ಓಟ್‌ಮೀಲ್ ಮತ್ತು ಹಾಲು

ಓಟ್‌ಮೀಲ್ ಮತ್ತು ಹಾಲು

*ಒಂದು ಬೌಲ್‌ನಲ್ಲಿ 2 ಟೀ ಚಮಚ ಬೇಯಿಸಿದ ಓಟ್‌ಮೀಲ್ ಮತ್ತು 1 ಟೀಚಮಚ ಹಾಲನ್ನು ಸೇರಿಸಿ.

*ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಅನ್ವಯಿಸಿ.

*15 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸುವುದುರಿಂದ ಮುಖ ತಾಜಾತನದಿಂದ ಕೂಡಿರುತ್ತದೆ.

ಓಟ್‌ಮೀಲ್ ಮತ್ತು ಸೇಬು ರಸ

ಓಟ್‌ಮೀಲ್ ಮತ್ತು ಸೇಬು ರಸ

*1 ಟೀ ಚಮಚ ಬೇಯಿಸಿದ ಓಟ್‌ಮೀಲ್ ಮತ್ತು 2 ಟೀ.ಚಮಚ ತಾಜಾ ಸೇಬು ರಸ ಸೇರಿಸಿ

*ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 10 ನಿಮಿಷಗಳ ಕಾಲ ಬಿಡಿ

*ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಕ್ರೀಮ್ ಅನ್ವಯಿಸಿ

*ತಿಂಗಳಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸುವುದರಿಂದ ಮುಖದಲ್ಲಿ ಸುಕ್ಕುಗಟ್ಟುವುದು ಮತ್ತು ಮೊಡವೆಯನ್ನು ನಿವಾರಿಸುತ್ತದೆ.

ಓಟ್‌ಮೀಲ್ ಮತ್ತು ಮೊಟ್ಟೆ

ಓಟ್‌ಮೀಲ್ ಮತ್ತು ಮೊಟ್ಟೆ

ನೈಸರ್ಗಿಕ ಕಾಂತಿಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಮೊಟ್ಟೆ ಅತ್ಯುತ್ತಮ ಔಷಧ ಪರಿಹಾರ ಎಂದೆನಿಸಿದೆ. ಹುಡಿ ರೂಪದಲ್ಲಿರುವ ಓಟ್‌ಮೀಲ್ ಅನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಬೆರೆಸಿ ಮತ್ತು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಒಣಗುವವರೆಗೆ ಹಾಗೆಯೇ ಬಿಡಿ ನಂತರ ತುಸು ಬೆಚ್ಚಗೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ತದನಂತರ ತಣ್ಣೀರಿನಿಂದ ಮುಖವನ್ನು ಇನ್ನೊಮ್ಮೆ ತೊಳೆದುಕೊಳ್ಳಿ.

ಓಟ್‌ಮೀಲ್ ಮತ್ತು ಹಣ್ಣು

ಓಟ್‌ಮೀಲ್ ಮತ್ತು ಹಣ್ಣು

ನಿಮ್ಮ ಮುಖದಲ್ಲಿ ಏನಾದರೂ ಗಾಯಗಳು ಅಥವಾ ಕಲೆಗಳಿದ್ದರೆ ಇದು ಅತ್ಯಂತ ಉತ್ತಮವಾಗಿರುವ ಮಾಸ್ಕ್ ಆಗಿದೆ. ಒಂದು ಬಾಳೆಹಣ್ಣನ್ನು ಹಿಸುಕಿಕೊಳ್ಳಿ ಇದಕ್ಕೆ ಸ್ವಲ್ಪ ಪಪ್ಪಾಯವನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ. ನಂತರ ಲಿಂಬೆ ರಸವನ್ನು ಈ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ವಾರಕ್ಕೊಮ್ಮೆ ಈ ಫೇಸ್‌ಪ್ಯಾಕ್ ಅನ್ನು ಹಚ್ಚಿಕೊಳ್ಳುತ್ತಿರಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಓಟ್‌ಮೀಲ್ ಮತ್ತು ಬಾದಾಮಿ

ಓಟ್‌ಮೀಲ್ ಮತ್ತು ಬಾದಾಮಿ

ನಿಮ್ಮ ಮುಖವನ್ನು ಕಾಂತಿಯುಕ್ತವಾಗಿ ಹೊಳೆಯುವಂತೆ ಮಾಡುವಲ್ಲಿ ಇವೆರಡೂ ಕಮಾಲಿನದ್ದಾಗಿದೆ. ಹುಡಿ ಮಾಡಿದ ಬಾದಾಮಿಯನ್ನು ಓಟ್ಸ್‌ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಹಾಲು ಮತ್ತು ಓಟ್‌ಮೀಲ್

ಹಾಲು ಮತ್ತು ಓಟ್‌ಮೀಲ್

ಹುಡಿ ರೂಪದಲ್ಲಿರುವ ಓಟ್‌ಮೀಲ್ ಅನ್ನು ಹಾಲಿನೊಂದಿಗೆ ಬೆರೆಸಿ ಮತ್ತು ಸ್ಕ್ರಬ್ ತಯಾರಿಸಿಕೊಳ್ಳಿ. ಸ್ಕ್ರಬ್ ಮಾದರಿಯಲ್ಲಿ ವೃತ್ತಾಕಾರವಾಗಿ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ಟ್ಯಾನ್ ಅನ್ನು ನಿವಾರಿಸುತ್ತದೆ ಮತ್ತು ತ್ವಚೆಯನ್ನು ಹೈಡ್ರೇಟ್‌ಗೊಳಿಸುತ್ತದೆ.

English summary

Simple Homemade Oatmeal Face Packs

Oatmeal is a treasure-trove of powerful skin-benefiting properties. And, that is why, it is often hailed as a miraculous skin care ingredient. Consisting of anti-inflammatory and antioxidant agents, oatmeal can effectively boost the skin's overall health, whilst combating various unsightly conditions. Be it acne-related problem or hyper-pigmentation, oatmeal can be used for a variety of skin issues.
Subscribe Newsletter