Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ವಯಸ್ಸಾದಂತೆ ಕಾಣುತ್ತಿದ್ದೀರಾ? ಹಾಗಾದರೆ ಇವುಗಳ ಉಪಯೋಗ ಮಾಡಿ
ಸಾಮಾನ್ಯವಾಗಿ ತ್ವಚೆಯ ಮೇಲೆ ಇರುವ ತೆರೆದ ರಂಧ್ರಗಳು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ತೆರೆದ ರಂಧ್ರಗಳಿಂದ ಹೆಚ್ಚು ವಯಸ್ಸಾದಂತೆ ಗೋಚರಿಸುತ್ತೇವೆ. ಇವುಗಳಲ್ಲಿ ಕೊಳೆಗಳು ತುಂಬಿಕೊಂಡು ಸೋಂಕು, ಉರಿಯೂತಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇವು ಕೇವಲ ಮುಖದ ಮೇಲಷ್ಟೇ ಅಲ್ಲ, ನಮ್ಮ ಶರೀರದ ಎಲ್ಲಾ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಈ ಸಮಸ್ಯೆಯಿಂದ ಪಾರಾಗಲೂ ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ, ಮುಖದ ಭಾಗದಲ್ಲಾದರೂ ಆರೈಕೆ ಮಾಡಿಕೊಳ್ಳಬೇಕು.
ಸೆಲೆಬ್ರಿಟಿಗಳಂತಹ ದೋಷರಹಿತ ಮುಖವನ್ನು ಹೊಂದಬೇಕು ಎಂದು ನಾವು ಹಂಬಲಿಸುವುದು ಸಹಜ. ಅಂತಹ ತ್ವಚೆ ಹೊಂದಲು ಸ್ವಲ್ಪ ಕಷ್ಟ ಎನಿಸಿದರೂ ಕೆಲವು ಸೌಂದರ್ಯ ಚಿಕಿತ್ಸೆ ಹಾಗೂ ಲೇಸರ್ ಚಿಕಿತ್ಸೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಮ್ಮ ತ್ವಚೆಯ ಆರೈಕೆಯ ಬಗೆಯನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ತೆರೆದ ರಂಧ್ರಗಳನ್ನು ಮುಚ್ಚಲು ಕೆಲವು ನೈಸರ್ಗಿಕ ಪರಿಹಾರಗಳಿವೆ. ಅವುಗಳಿಂದ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಚಿಕಿತ್ಸೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ. ನಿಮ್ಮ ತ್ವಚೆಯೂ ಇದೇ ಸಮಸ್ಯೆಯಿಂದ ಬಳಲುತ್ತಿದೆ ಎಂದರೆ ತಡ ಮಾಡಬೇಡಿ. ಈ ಕೆಳಗಿನ ಆರೈಕೆ ವಿಧಾನವನ್ನು ಅನುಸರಿಸಿ, ನಿಮ್ಮ ಮೈಕಾಂತಿಯನ್ನು ಹೆಚ್ಚಿಸಿಕೊಳ್ಳಿ...

ಐಸ್ ಕ್ಯೂಬ್ಸ್
ತ್ವಚೆಯ ಮೇಲಿರುವ ತೆರೆದ ರಂಧ್ರಗಳನ್ನು ಮುಚ್ಚಲು ಐಸ್ ಕ್ಯೂಬ್ಸ್ ತ್ವರಿತ ಪರಿಹಾರವನ್ನು ನೀಡುತ್ತವೆ. ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್‍ಅನ್ನು ಸುತ್ತಿಕೊಂಡು, ಮುಖದ ಮೇಲೆ ಮಸಾಜ್ ಮಾಡಿ. ಹೀಗೆ 5-10 ಸೆಕೆಂಡ್‍ಗಳ ಕಾಲ ಮಸಾಜ್ ಮಾಡುವುದರಿಂದ ತೆರೆದ ರಂಧ್ರಗಳು ಬಿಗಿಯಾಗುತ್ತವೆ. ತ್ವಚೆಯೂ ಸುಂದರವಾಗಿ ಕಾಣುವುದು.

ಟೊಮೆಟೊ ರಸ
ಟೊಮೆಟೊ ರಸ ಚರ್ಮದ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಟೊಮೆಟೊ ಚೂರನ್ನು ಮುಖದ ಮೇಲಿರುವ ರಂಧ್ರಗಳ ಮೇಲೆ ಮಸಾಜ್ ಮಾಡಿ, ಸ್ವಲ್ಪ ಸಮಯ ಆರಲು ಬಿಡಬೇಕು. ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಇದು ರಂಧ್ರವನ್ನು ಮುಚ್ಚುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಸ್ಟೀಮ್
ಸೌಂದರ್ಯ ಚಿಕಿತ್ಸೆಗೆ ಪಾರ್ಲರ್‌ಗಳಿಗೆ ಹಣವನ್ನು ವ್ಯಯಿಸುವ ಬದಲು, ಮನೆಯಲ್ಲೇ ಕೆಲವು ಚಿಕಿತ್ಸೆಯನ್ನು ನಾವೇ ಮಾಡಿ ಕೊಳ್ಳಬಹುದು. ವಾರಕ್ಕೆರಡು ಬಾರಿ ಅಥವಾ ಒಮ್ಮೆ ಬಿಸಿನೀರಿನ ಉಗಿಯನ್ನು ಮುಖಕ್ಕೆ ತೆಗೆದುಕೊಳ್ಳಿ. ಇದರಿಂದ ರಂಧ್ರವು ಮುಚ್ಚುವುದಲ್ಲದೆ ತ್ವಚೆಯ ಮೇಲಿರುವ ಕೊಳೆಗಳು ನಿವಾರಣೆಯಾಗುತ್ತವೆ.

ಬೇಕಿಂಗ್ ಸೋಡಾ
ಇದು ತ್ವಚೆಯ ಮೇಲೆ ಧನಾತ್ಮಕ ಪರಿಣಾಮವನ್ನುಂಟುಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ 2 ಚಮಚ ಬೇಕಿಂಗ್ ಸೋಡವನ್ನು ಬೆರೆಸಿ, ಮಿಶ್ರಣ ತಯಾರಿಸಿಕೊಳ್ಳಬೇಕು. ಆ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. 5 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆದರೆ ರಂಧ್ರಗಳು ಬಹು ಬೇಗ ಕೂಡಿಕೊಳ್ಳುತ್ತವೆ.

ಶ್ರೀಗಂಧ
ಇದು ಬಸವಳಿದ ತ್ವಚೆಗೆ ಮರು ಜೀವ ತುಂಬುತ್ತದೆ. ಒಂದು ಚಮಚ ಶ್ರೀಗಂಧದ ಪುಡಿ, ಒಂದು ಚಮಚ ಅರಿಶಿನ ಪುಡಿ, ಸ್ವಲ್ಪ ಬಾದಾಮಿ ಎಣ್ಣೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಮುಖಕ್ಕೆ ಅನ್ವಯಿಸಿ 20 ನಿಮಿಷ ಆರಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆದರೆ ರಂಧ್ರಗಳು ಮುಚ್ಚಿಕೊಳ್ಳುವವು.

ರೋಸ್ ವಾಟರ್
ತ್ವಚೆಗೆ ಸಾಕಷ್ಟು ಆರೈಕೆ ಮಾಡುವ ಉತ್ತಮ ಉತ್ಪನ್ನ ರೋಸ್ ವಾಟರ್. ನಿತ್ಯವೂ ರೋಸ್ ವಾಟರ್‌ನಿಂದ ಮುಖವನ್ನು ಸ್ವಚ್ಛಗೊಳಿಸುವುದು ಅಥವಾ ಮಸಾಜ್ ಮಾಡುವುದರಿಂದ ರಂಧ್ರಗಳ ಗಾತ್ರ ತಗ್ಗುವುದು.

ಅಲೋವೆರಾ
ಚರ್ಮ ಹಾಗೂ ಕೂದಲ ಆರೈಕೆಗೆ ಉತ್ತಮ ಆಯ್ಕೆ ಅಲೋವೆರಾ. ಅಲೋವೆರಾ ಜೆಲ್‍ನಿಂದ ಮುಖವನ್ನು ಮಸಾಜ್ ಮಾಡಿ, 15 ನಿಮಿಷ ಆರಲು ಬಿಡಿ. ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ರಂಧ್ರಗಳು ಮುಚ್ಚಿಕೊಳ್ಳುವವು.



Click it and Unblock the Notifications
