ಮುಖದಲ್ಲಿ ಕಾಣುವ ವೈಟ್ ಹೆಡ್ಸ್ ನಿವಾರಿಸಲು ಸುಲಭ ಉಪಾಯಗಳು

Posted By: Divya Pandith
Subscribe to Boldsky

ಮುಖವನ್ನು ನೋಡಿದಾಗ ಅದು ಸ್ವಚ್ಛತೆಯಿಂದ ಹಾಗೂ ಕಾಂತಿಯುತವಾಗಿ ಕಾಣಬೇಕು. ಆಗ ನೋಡುವವರಿಗೂ ನಮಗೂ ಏನೋ ಒಂದು ಬಗೆಯ ಖುಷಿ ಇರುತ್ತದೆ. ಅದೇ ಮುಖದ ಮೇಲೆ ಕೊಳೆ, ಕಲೆ ಹಾಗೂ ಮಂಕಾದ ತ್ವಚೆಯಿಂದ ಕೂಡಿದ್ದರೆ ಬೇಸರ ಹಾಗೂ ಒಂದು ಬಗೆಯ ಮುಜುಗರದ ಭಾವನೆ ಕಾಡುತ್ತಿರುತ್ತದೆ. ಇಂತಹ ಒಂದು ಪರಿಸ್ಥಿತಿಯಿಂದ ಪಾರಾಗಬೇಕೆಂದರೆ ಕೆಲವು ನೈಸರ್ಗಿಕ ಉತ್ಪನ್ನಗಳಿಂದ ಆರೈಕೆ ಮಾಡಿಕೊಳ್ಳಬೇಕು. ಮುಖದ ಮೇಲೆ ಮೂಗಿನ ಸಂಧಿ, ಹಣೆ, ಗದ್ದ ಸೆರಿದಂತೆ ಇತರೆಡೆ ವೈಟ್‍ಹೆಡ್ಸ್ ಅಥವಾ ಸಣ್ಣ ಬಿಳಿ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. 

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಚರ್ಮದಲ್ಲಿ ಸತ್ತ ಜೀವಕೋಶಗಳು, ಧೂಳು, ಕೊಳೆ, ಕಸಗಳ ಪರಿಣಾಮವಾಗಿ ಮೆದೋಗ್ರಂಥಿಗಳು ಮುಚ್ಚಿಕೊಳ್ಳುತ್ತವೆ. ಇದನ್ನೆ ವೈಟ್ ಹೆಡ್ಸ್ ಎಂದು ಕರೆಯಲಾಗುವುದು. ಇನ್ನು ಇದನ್ನು ನಿವಾರಿಸಲು ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಇಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ಎಂದಾದರೆ ಈ ಕೆಳಗೆ ವಿವರಿಸಲಾದ ಸೂಕ್ತ ವಿವರಣೆಯನ್ನು ಅರಿಯಿರಿ. ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿ. ವೆಟ್‍ಹೆಡ್‌ಗಳಿಂದ ಮುಕ್ತರಾಗಿ. ಸದಾ ಕಾಂತಿ ಹಾಗೂ ಆರೋಗ್ಯಯುತ ತ್ವಚೆಯಂದ ಕಂಗೊಳಿಸಿ....

ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿ

1/2 ಟೀ ಚಮಚ ಶ್ರೀಗಂಧದ ಪುಡಿಗೆ 1 ಟೀ ಚಮಚದಷ್ಟು ಕದಡಿದ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳ ಮೇಲೆ ಅನ್ವಯಿಸಿ. 5 ನಿಮಿಷ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿತ್ಯವೂ ಈ ಕ್ರಿಯೆಯನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ

1/2 ಟೀ ಚಮಚ ತೆಂಗಿನೆಣ್ಣೆಗೆ 3 ಹನಿ ಟೀ ಟ್ರೀ ಎಣ್ಣೆಯನ್ನು ಬೆರೆಸಿ ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳ ಮೇಲೆ ಅನ್ವಯಿಸಿ.

ಐದು ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

1 ಟೀ ಚಮಚ ಕಾದಾರಿದ ನೀರಿಗೆ 4 ಹನಿ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳ ಮೇಲೆ ಅನ್ವಯಿಸಿ.

5 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರದಲ್ಲಿ 3-4 ಬಾರಿ ಮಾಡುವುದರಿಂದ ವೈಟ್‍ಹೆಡ್ಸ್ ನಿರ್ಮೂಲನೆ ಮಾಡಬಹುದು.

ಓಟ್ ಮೀಲ್

ಓಟ್ ಮೀಲ್

2 ಟೀ ಚಮಚ ಬೇಯಿಸಿದ ಓಟ್ ಮೀಲ್‍ಗೆ 1 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಹಣೆ, ಕೆನ್ನೆ ಹಾಗೂ ಮುಖದ ಮೇಲೆ ಅನ್ವಯಿಸಿ.

ಕೆಲವು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ ನಂತರ 10 ನಿಮಿಷಗಳ ಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿತ್ಯವೂ ಈ ಕ್ರಿಯೆಯನ್ನು ಅನ್ವಯಿಸಿದರೆ ಉತ್ತಮ ಪರಿಣಾಮವನ್ನು ಕಾಣಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

1 ಟೀ ಚಮಚ ನೀರಿಗೆ 1/2 ಟೀ ಚಮಚ ಅಡುಗೆ ಸೋಡವನ್ನು ಬೆರೆಸಿ.

ತಕ್ಷಣವೇ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಲ್ಲಿ ಶುದ್ಧಗೊಳಿಸಿ

ವಾರದಲ್ಲಿ 2-3 ಬಾರಿ ಹೀಗೆ ಮಾಡುವುದರಿಂದ ಗಣನೀಯವಾದ ಪರಿಣಾಮವನ್ನು ಪಡೆಯಬಹುದು.

ನಿಂಬೆ

ನಿಂಬೆ

ನಿಂಬೆ ಹಣ್ಣಿನ ಸ್ಲೈಸ್ ಮಾಡಿಕೊಂಡು, ಅದರ ಮೇಲೆ 3-4 ಹನಿ ಜೇನುತುಪ್ಪವನ್ನು ಬಿಡಿ.

ನಂತರ ಆ ಸ್ಲೈಸ್‍ನಿಂದ ಮುಖ ಹಾಗೂ ಪೀಡಿತ ಪ್ರದೇಶದ ಮೇಲೆ ಮಸಾಜ್ ಮಾಡಿ.

ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ.

ನಿತ್ಯವೂ ಒಮ್ಮೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಕಡ್ಲೇ ಹಿಟ್ಟು

ಕಡ್ಲೇ ಹಿಟ್ಟು

1/2 ಟೀ ಚಮಚ ಕಡ್ಲೆ ಹಿಟ್ಟಿಗೆ 1 ಟೀ ಚಮಚ ನೀರನ್ನು ಸೇರಿಸಿ.

ತಕ್ಷಣವೇ ಮುಖ ಹಾಗೂ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ನಂತರ ಒದ್ದೆಯಾಗಿರುವ ಬಟ್ಟೆಯಿಂದ ಮುಖವಾಡವನ್ನು ಒರೆಸಿ ತೆಗೆಯಿರಿ.

ನಿತ್ಯವೂ ಒಮ್ಮೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಕ್ಲೇ/ ಮಣ್ಣು

ಕ್ಲೇ/ ಮಣ್ಣು

1/2 ಟೀ ಚಮಚ ಬೆನ್‍ಟೋನೈಟ್ ಕ್ಲೇಗೆ 1 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.

ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ.

ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಅನ್ವಯಿಸಿದರೆ ವೈಟ್‍ಹೆಡ್ಸ್ ಗಳನ್ನು ಸುಲಭವಾಗಿ ನಿವಾರಿಸಬಹುದು.

ಬ್ರೌನ್ ಸಕ್ಕರೆ

ಬ್ರೌನ್ ಸಕ್ಕರೆ

1 ಟೀ ಚಮಚ ಆಲಿವ್ ಎಣ್ಣೆಗೆ 1/2 ಟೀ ಚಮಚ ಬ್ರೌನ್ ಸಕ್ಕರೆ ಸೇರಿಸಿ.

ಮಿಶ್ರಣವನ್ನು ತಕ್ಷಣವೇ ಹಣೆ, ಗಲ್ಲ ಹಾಗೂ ಮುಖಕ್ಕೆ ಅನ್ವಯಿಸಿ.

5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರದಲ್ಲಿ 3-4 ಬಾರಿ ಮಾಡುವುದರಿಂದ ಉತ್ತಮ ಪರಿಹಾರವನ್ನು ಪಡೆಯಬಹುದು.

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್

ಒಂದು ಬೌಲ್‍ನಲ್ಲಿ 1/2 ಟೀ ಚಮಚ ವಿಚ್ ಹ್ಯಾಝೆಲ್ ಹಾಗೂ 2 ಟೀ ಚಮಚ ಕಾದಾರಿದ ನೀರನ್ನು ಸೇರಿಸಿ.

ಒಂದು ಹತ್ತಿ ಚೆಂಡನ್ನು ಆ ಮಿಶ್ರಣದಲ್ಲಿ ಅದ್ದಿ, ನಂತರ ಪೀಡಿತ ಪ್ರದೇಶದ ಮೇಲೆ ಅನ್ವಯಿಸಿ.

5-10 ನಿಮಿಷಗಳ ಬಳಿಕ ತಣ್ಣಗಿನ ನೀರಿನಿಂದ ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಆಲೂಗಡ್ಡೆ

ಆಲೂಗಡ್ಡೆ

ಹಸಿ ಆಲೂಗಡ್ಡೆಯನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತಿನ ಬಳಿಕ ಮುಖನ್ನು ತೊಳೆಯಿರಿ. ನಂತರ ಆಲೂಗಡ್ಡೆಯಿಂದ ಸ್ಕ್ರಬ್ ಮಾಡಿ. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ವೈಟ್ ಹೆಡ್ಸ್ ಅನ್ನು ಸುಲಭದಲ್ಲಿ ಹೋಗಲಾಡಿಸಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯ ಹುಡಿಯನ್ನು ತಯಾರಿಸಿಕೊಂಡು ಇದಕ್ಕೆ ಜೇನು ಬೆರೆಸಿ ನಂತರ ಇದನ್ನು ಹಾನಿಯಾಗಿರುವ ಸ್ಥಳಕ್ಕೆ ಹಚ್ಚಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೂ ಇದನ್ನು ಬಳಸಿಕೊಳ್ಳಬಹುದಾಗಿದೆ ಇದರಿಂದ ಮೊಡವೆಗಳ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇವೆರಡೂ ವಸ್ತುಗಳು ಉರಿಯೂತ ಗುಣಲಕ್ಷಣಗಳನ್ನು ಪಡೆದುಕೊಂಡಿದ್ದು ಎಲ್ಲಾ ರೀತಿಯ ಮೊಡವೆಗಳನ್ನು ನಿವಾರಿಸಲು ಸಹಕಾರಿ ಎಂದೆನಿಸಲಿದೆ.

ಕಡಲೆ ಹಿಟ್ಟು

ಕಡಲೆ ಹಿಟ್ಟು

ವೈಟ್‌ಹೆಡ್ಸ್‌ ಅನ್ನು ನಿವಾರಣೆ ಮಾಡಿ ತ್ವಚೆಯನ್ನು ಎಕ್ಸ್‌ಪೋಲಿಯೇಟ್ ಮಾಡುವಲ್ಲಿ ಕಡಲೆಹಿಟ್ಟು ಅತ್ಯುತ್ತಮ ಎಂದೆನಿಸಿದೆ. ಕಡಲೆಹಿಟ್ಟನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ಮುಖಕ್ಕೆ ಸ್ಕ್ರಬ್‌ನಂತೆ ಇದನ್ನು ಬಳಸಿಕೊಳ್ಳಿ. ಇದು ಸಂಪೂರ್ಣ ಮುಖದಿಂದ ಮೃತಕೋಶಗಳನ್ನು ನಿವಾರಿಸಲಿದ್ದು ರಂಧ್ರಗಳನ್ನು ಮುಕ್ತವಾಗಿಸಲಿದೆ. ಇದರಿಂದ ವೈಟ್‌ಹೆಡ್ಸ್ ಉಂಟಾಗಲಾರದು.

English summary

Remedies To Get Rid Of Whiteheads From Chin And Forehead

Whiteheads are the tiny white bumps that pop up on the forehead, chin and nose area. They are a type of acne that occur when the pores of your skin get clogged up by dead skin cells, toxins, dirt and sebum. These bumps are most commonly spotted on forehead and chin area. And, the presence of thesecomedones can make your skin appear unclean and unsightly. Fortunately, getting rid of whiteheads from forehead and chin area is an achievable task. There are scores of beauty products, scrubs available in the stores that can eliminate whiteheads. You can use any of the following remedies to treat this unsightly skin problem. Take a look at them here: