For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಹೆಚ್ಚಿಸುವ ರೆಡ್ ವೈನ್ ಫೇಸ್ ಮಾಸ್ಕ್

By Jaya subramanya
|

ತ್ವಚೆಯ ಕಾಳಜಿಯ ವಿಷಯಕ್ಕೆ ಬಂದಾಗ ಯುವತಿಯರು ಸೂಕ್ತ ತೀರ್ಮಾನಗಳನ್ನೇ ಕೈಗೊಳ್ಳುತ್ತಾರೆ. ಹೆಚ್ಚು ರಾಸಾಯನಿಕಗಳ ಬಳಕೆಯನ್ನು ಮಾಡದೆಯೇ ಮನೆಯಲ್ಲೇ ದೊರೆಯುವ, ಪ್ರಾಕೃತಿಕ ಉತ್ಪನ್ನಗಳನ್ನು ಬಳಸಿಕೊಂಡು ತ್ವಚೆಯ ಪೋಷಣೆಯನ್ನು ಮಾಡುತ್ತಾರೆ. ಆದರೆ ನೀವು ಈ ಹಿಂದೆ ಎಲ್ಲಾದರೂ ರೆಡ್ ವೈನ್ ಫೇಸ್ ಮಾಸ್ಕ್ ಬಗ್ಗೆ ಕೇಳಿದ್ದೀರಾ?

ಹಾಗಿದ್ದರೆ ಈ ರೆಡ್ ವೈನ್ ಮಾಸ್ಕ್ ಅನ್ನು ನೀವು ಪ್ರಯತ್ನಿಸಲೇಬೇಕು. ಈ ಮಾಸ್ಕ್ ನಿಮಗೆ ಈ ಹಿಂದೆ ಎಂದೂ ಕಾಣದ ಪ್ರಯೋಜನವನ್ನು ನೀಡುವುದು ಖಂಡಿತ. ಈ ಮಾಸ್ಕ್ ಅನ್ನು ಪ್ರಯತ್ನಿಸುವ ಮುನ್ನ ಇಂದಿನ ಲೇಖನದಲ್ಲಿ ಇದರ ಪ್ರಯೋಜನಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

Red Wine

ಮನೆಯಲ್ಲೇ ದೊರೆಯುವ ಅಡುಗೆ ಮನೆಯ ಪರಿಕರಗಳಿಂದ ಈ ರೆಡ್ ವೈನ್ ಫೇಸ್ ಪ್ಯಾಕ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ರೆಡ್ ವೈನ್, ಜೇನು ಮತ್ತು ಮೊಸರನ್ನು ಈ ಮಾಸ್ಕ್‌ಗಾಗಿ ನೀವು ಬಳಸಬೇಕು. ಈ ಮೂರು ಸಾಮಾಗ್ರಿಗಳು ಮನೆಯಲ್ಲೇ ಸುಲಭವಾಗಿ ದೊರೆಯುತ್ತದೆ ಮತ್ತು ಫೇಸ್ ಮಾಸ್ಕ್ ತಯಾರಿಯಲ್ಲಿ ಅತ್ಯುನ್ನತ ಪ್ರಯೋಜನವನ್ನು ನೀಡುವುದು ಖಂಡಿತ.

ಈ ವೈನ್ ಫೇಸ್ ಮಾಸ್ಕ್ ಅನ್ನು ಯಾವುದೇ ತ್ವಚೆಯ ಪ್ರಕಾರಕ್ಕೆ ಯಾವುದೇ ಹವಾಮಾನದಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ. ರೆಡ್ ವೈನ್‌ನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ತ್ವಚೆಯ ಪ್ರಾಥಮಿಕ ಸಮಸ್ಯೆಗಳಾದ ವಯಸ್ಸಾಗುವಿಕೆ ಮತ್ತು ಕ್ಷೀಣ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಫೇಸ್ ಮಾಸ್ಕ್ ಬಳಸಿದರೆ ಸಾಕು ಕೆಲವೇ ದಿನಗಳಲ್ಲಿ ನಿಮಗೆ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ.

ವಾರದಲ್ಲಿ ಎಷ್ಟು ಬಾರಿ ಬೇಕಾದರೂ ಈ ಫೇಸ್ ಮಾಸ್ಕ್ ಅನ್ನು ನಿಮಗೆ ಬಳಸಬಹುದಾಗಿದೆ. ಅಂತೆಯೇ ವಿಶೇಷ ಸಂದರ್ಭಗಳಲ್ಲಿ ನಿಮಗೆ ಇನ್ನೂ ಸುಂದರವಾಗಿ ಕಾಣಬೇಕೆಂಬ ಹಂಬಲವಿದ್ದಲ್ಲಿ ನಿತ್ಯವೂ ಬಳಸಿಕೊಂಡು ತ್ವಚೆಯ ಕಾಂತಿಯನ್ನು ದ್ವಿಗುಣಬಳಸಬಹುದಾಗಿದೆ. ಬರಿಯ ಮುಖಕ್ಕೆ ಮಾತ್ರವಲ್ಲದೆ ದೇಹದ ಇತರ ಭಾಗಕ್ಕೂ ಈ ಫೇಸ್ ಮಾಸ್ಕ್ ಅನ್ನು ಬಳಸಬಹುದಾಗಿದೆ. ಅಂತೆಯೇ ಇದನ್ನು ಹಚ್ಚಿಕೊಂಡ ನಂತರ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಹೆಚ್ಚುವರಿ ಜಿಡ್ಡು, ಮುಚ್ಚಿಕೊಂಡ ರಂಧ್ರಗಳು, ತ್ವಚೆಯ ಬಿರುಕುಗಳಾದ ಮೊಡವೆಗಳು, ಕಾಂತಿರಹಿತ ತ್ವಚೆಯನ್ನು ಇದು ನಿವಾರಿಸುತ್ತದೆ. ಹಾಗಿದ್ದರೆ ಈ ಫೇಸ್ ಮಾಸ್ಕ್ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳೋಣ...

ಮಾಸ್ಕ್ ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು
*ಒಂದು ಕಪ್‌ನಷ್ಟು ರೆಡ್ ವೈನ್ (ಮನೆಯಲ್ಲಿಯೇ ತಯಾರಿಸಿದ ಸಾವಯವ ವೈನ್)
*ಒಂದು ಚಮಚದಷ್ಟು ಆರ್ಗ್ಯಾನಿಕ್ ಜೇನು (ಶುದ್ಧ ಜೇನು)
*1/2 ಬೌಲ್ ಮೊಸರು
*ಎಗ್ ಬೀಟರ್
*ಒಂದು ಡ್ರೈ ಬೌಲ್‌ನಲ್ಲಿ ಮೊಸರು ಹಾಕಿಕೊಂಡು ಎಗ್ ಬೀಟರ್‌ನಲ್ಲಿ ಮಿಶ್ರ ಮಾಡಿಕೊಳ್ಳಿ
*ಈಗ ಜೇನು ಬೆರೆಸಿ ಮತ್ತು ಚಮಚ ಬಳಸಿಕೊಂಡು ಮಿಶ್ರ ಮಾಡಿ
*ಮೊಸರಿನೊಂದಿಗೆ ಜೇನು ಚೆನ್ನಾಗಿ ಬೆರೆತುಕೊಂಡ ನಂತರ ಚಮಚದಷ್ಟು ರೆಡ್ ವೈನ್ ಅನ್ನು ಇದಕ್ಕೆ ಸೇರಿಸಿ. ಇದನ್ನು *ಎಗ್‌ಬೀಟರ್‌ನಲ್ಲಿ ಪುನಃ ಮಿಶ್ರ ಮಾಡಿಕೊಳ್ಳಿ. ಇದರಿಂದ ನೀವು ಗುಲಾಬಿ ಮಿಶ್ರಿತ ಫೇಸ್ ಮಾಸ್ಕ್ ಅನ್ನು ಪಡೆದುಕೊಳ್ಳುತ್ತೀರಿ.
*ಈ ಮಾಸ್ಕ್ ಅನ್ನು ಸಂಪೂರ್ಣವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಕೈಗಳಿಂದ ಬೇಕಾದರೂ ಇದನ್ನು ಹಚ್ಚಿಕೊಳ್ಳಿ ಇಲ್ಲವೇ ಬ್ರಶ್ ಬಳಸಿ.
*20-30 ನಿಮಿಷಗಳ ನಂತರ ನಿಮ್ಮಮ ತ್ವಚೆ ಒಣಗುತ್ತದೆ ಮತ್ತು ಈ ಸಮಯದಲ್ಲಿ ಮುಖವನ್ನು ತೊಳೆದುಕೊಳ್ಳಿ
*ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಟೋನರ್ ಅಥವಾ ಮಾಯಿಶ್ಚರೈಸರ್ ಅನ್ನು ಬಳಸಿ.
*ಈ ಮಾಸ್ಕ್ ತಯಾರಿಸಿ ಅದನ್ನು ಫ್ರಿಡ್ಜ್‌ನಲ್ಲಿರಿಸಿ ನಂತರ ಕೂಡ ನಿಮಗೆ ಹಚ್ಚಿಕೊಳ್ಳಬಹುದಾಗಿದೆ.

English summary

Recipe For Red Wine Face Mask With Other Kitchen Products At Home

Have you ever tried a red wine face mask? Well, if yes, then here is a new red wine face mask recipe that you can try.If it's your first time, then this red wine face mask is a must try for its long-lasting results and quick-to-do recipe. So, before preparing this red wine face mask, learn about its advantages and the probable outcome after its application: You need only three simple kitchen ingredients to prepare this red wine face pack - red wine, honey and curd. All of the three ingredients are very easily available and can be used beyond this face mask.
Story first published: Monday, July 10, 2017, 21:01 [IST]
X
Desktop Bottom Promotion