For Quick Alerts
ALLOW NOTIFICATIONS  
For Daily Alerts

  ದೀಪಾವಳಿ ಸ್ಪೆಷಲ್: ಸೌಂದರ್ಯ ಪ್ರಿಯರಿಗೆ ಒಂದಿಷ್ಟು ಬ್ಯೂಟಿ ಟಿಪ್ಸ್

  By Arshad
  |

  ಹಬ್ಬದ ದಿನಗಳು ಮತ್ತೊಮ್ಮೆ ಬಂದಿವೆ. ಹಬ್ಬದ ಸಂಭ್ರಮವನ್ನು ಔತಣಕೂಟಗಳ ಮೂಲಕ ಆಚರಿಸಲು ಎಲ್ಲರೂ ಒಂದಲ್ಲಾ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡೇ ಇರುತ್ತಾರೆ. ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ತಮ್ಮ ಆತ್ಮೀಯರನ್ನು ಈ ಔತಣಕೂಟಗಳಿಗೆ ಆಹ್ವಾನಿಸುತ್ತಾರೆ. ನಿಮಗೂ ಈಗಾಗಲೇ ಇಂತಹ ಔತಣಕೂಟಗಳ ಆಹ್ವಾನ ಬಂದಿರಬಹುದು.

  ಈ ಔತಣಕೂಟಗಳಲ್ಲಿ ಭಾಗವಹಿಸುವ ಮೂಲಕ ಹೊಸ ಸಂಪರ್ಕ ಹಾಗೂ ಸ್ನೇಹಿತರನ್ನು ಗಳಿಸುವುದು ಹಾಗೂ ಈ ಮೂಲಕ ಜೀವನವನ್ನು ಇನ್ನಷ್ಟು ರಂಜನೀಯವಾಗಿಸಬಹುದು. ಆದರೆ ಈ ಔತಣಕೂಟಗಳಲ್ಲಿ ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಬಟ್ಟೆ ಹಾಗೂ ಪ್ರಸಾದನಗಳನ್ನು ಧರಿಸಿ ಬರುವ ಕಾರಣ ಒಂದು ವೇಳೆ ನಿಮ್ಮ ತ್ವಚೆ ಕಳಾರಹಿತವಾಗಿದ್ದರೆ ಈ ಔತಣಕೂಟದಲ್ಲಿ ಭಾಗವಹಿಸಲು ನಿಮಗೆ ಕೊಂಚ ಮುಜುಗರವಾಗಬಹುದು. ವಿಶೇಷವಾಗಿ ಪ್ರತಿದಿನವೂ ಧರಿಸುವ ಮೇಕಪ್ ಹಾಗೂ ರಾಸಾಯನಿಕ ಆಧಾರಿತ ಪ್ರಸಾಧನಗಳನ್ನು ಬಳಸುವ ಮೂಲಕ ತ್ವಚೆಯ ಸೂಕ್ಷ್ಮ ಪದರಗಳನ್ನು ಘಾಸಿಗೊಳಿಸಬಹುದು.

  dull skin

  ಪರಿಣಾಮವಾಗಿ ತ್ವಚೆ ಕಳಾರಹಿತ ಹಾಗೂ ಅನಾಕರ್ಷಣೀಯವಾಗುತ್ತದೆ. ಒಂದು ವೇಳೆ ಈ ಔತಣಕೂಟದಲ್ಲಿ ಭಾಗವಹಿಸಲು ನಿಮಗೆ ಉತ್ಸುಕತೆ ಇದ್ದರೆ ಈ ಕೂಟಕ್ಕೆ ಆಗಮಿಸುವ ಇತರ ವ್ಯಕ್ತಿಗಳ ಗಮನವನ್ನು ಪಡೆಯಲೂ ನೀವು ಖಂಡಿತಾ ಪ್ರಯತ್ನಿಸುತ್ತೀರಿ. ಆರೋಗ್ಯಕರ ಹಾಗೂ ಕಾಂತಿಯುಕ್ತ ತ್ವಚೆ ಉತ್ತಮ ಆರೋಗ್ಯದ ಕೈಗನ್ನಡಿಯಾಗಿದ್ದು ಈಗ ಮೇಕಪ್ ನಿಂದ ಕಲೆಗಳನ್ನು ಮರೆಮಾಚುವ ಅಗತ್ಯವೇ ಇರುವುದಿಲ್ಲ. ಸತತವಾದ ಉದ್ಯೋಗದ ಒತ್ತಡ, ಹಬ್ಬದ ತಯಾರಿ ಹಾಗೂ ಮೇಕಪ್ ಉತ್ಪನ್ನಗಳ ಅತಿ ಬಳಕೆಯಿಂದ ಉಂಟಾಗುವ ಪರಿಣಾಮಗಳೆಲ್ಲವೂ ಮುಖದ ಕಾಂತಿಯನ್ನೇ ಕಸಿದುಬಿಡುತ್ತವೆ. ಆದರೆ ಇವು ನಿಮ್ಮ ಮೋಜು ಅನುಭವಿಸುವ ಹಕ್ಕನ್ನು ಕಸಿಯಬಾರದು.

  ಹಣೆಯ ಮೇಲಿನ ನೆರಿಗೆಯನ್ನು ನಿವಾರಿಸಲು ನೈಸರ್ಗಿಕ ಟಿಪ್ಸ್

  ನಿಸರ್ಗ ನಮಗೆ ಹಲವಾರು ಉತ್ಪನ್ನಗಳನ್ನು ನೀಡಿದ್ದು ತ್ವಚೆಯ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಹಬ್ಬಗಳ ಸಂಭ್ರಮದ ಸಮಯದಲ್ಲಿ ಬಳಸಲು ಈ ಉತ್ಪನ್ನಗಳು ಅತಿ ಸುರಕ್ಷಿತವಾಗಿದ್ದು ಕ್ಷಿಪ್ರವಾಗಿ ತಮ್ಮ ಪರಿಣಾಮವನ್ನು ಒದಗಿಸುತ್ತದೆ. ರಾತ್ರಿ ಮಲಗುವ ಮುನ್ನ ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಈ ಉತ್ಪನ್ನಗಳನ್ನು ಹಚ್ಚಿಕೊಂಡು ಮಲಗಿಕೊಳ್ಳಿ. ಮರುದಿನ ಬೆಳಿಗ್ಗಿದ್ದ ಬಳಿಕ ಎದ್ದು ಮುಖ ತೊಳೆದುಕೊಂಡಾಗ ತ್ವಚೆ ಕೋಮಲ ಹಾಗೂ ಕಾಂತಿಯುಕ್ತವಾಗಿರುವುದನ್ನು ಗಮನಿಸಬಹುದು. ಬನ್ನಿ, ಒಂದೇ ರಾತ್ರಿಯಲ್ಲಿ ತ್ವಚೆಯ ಕಾಂತಿಯನ್ನು ಹೆಚ್ಚಿಸುವ, ಈ ಮೂಲಕ ಹಿಂದಿನ ಔತಣಕೂಟದಿಂದ ಕಳೆಗುಂದಿದ್ದ ತ್ವಚೆಗೆ ನವಚೈತನ್ಯ ನೀಡಿ ಮುಂದಿನ ಔತಣಕ್ಕೆ ಅಣಿಯಾಗಿಸಲು ನೆರವಾಗುವ ನೈಸರ್ಗಿಕ ಪ್ರಸಾದನಗಳನ್ನು ನೋಡೋಣ... 

  Lime Juice

  ಲೋಳೆಸರ ಹಾಗೂ ಲಿಂಬೆರಸ

  ಚರ್ಮದ ಕಾಂತಿಯನ್ನು ಹೆಚ್ಚಿಸಲು ನಿಸರ್ಗ ನೀಡಿರುವ ಅದ್ಭುತ ಕೊಡುಗೆ ಎಂದರೆ ಲೋಳೆಸರವಾಗಿದೆ. ಇದರ ಬಳಕೆಯಿಂದ ಅದ್ಭುತವಾದ ಪರಿಣಾಮವನ್ನು ಕ್ಷಿಪ್ರವಾಗಿ ಪಡೆಯಬಹುದು. ಲಿಂಬೆರಸ ಅತ್ಯುತ್ತಮ ನೈಸರ್ಗಿಕ ಬಿಳಿಚುಕಾರಕವಾಗಿದೆ. ಈ ಜೋಡಿ ತ್ವಚೆಯಲ್ಲಿರುವ ಕಲೆಗಳನ್ನು ತಿಳಿಗೊಳಿಸಿ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  ಅಗತ್ಯವಿರುವ ಸಾಮಾಗ್ರಿಗಳು

  -1 ಚಿಕ್ಕ ಚಮಚ ಈಗತಾನೇ ಹಿಂಡಿ ತೆಗೆದ ಲೋಳೆಸರದ ರಸ

  - ಅರ್ಧ ಲಿಂಬೆಯ ರಸ

  ವಿಧಾನ

  ಇವೆರಡನ್ನೂ ಚೆನ್ನಾಗಿ ಬೆರೆಸಿ ಏಕಪ್ರಕಾರದ ದ್ರವವಾಗಿಸಿ.

  ಈ ಮಿಶ್ರಣವನ್ನು ಈಗತಾನೇ ಚೆನ್ನಾಗಿ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಚರ್ಮ ಈ ದ್ರಾವಣವನ್ನು ಪೂರ್ಣವಾಗಿ ಹೀರಿಕೊಳ್ಳುವವರೆಗೂ ತೆಳುವಾಗಿ ಹಚ್ಚಿಕೊಳ್ಳುತ್ತಾ ನಯವಾಗಿ ಮಸಾಜ್ ಮಾಡಿಕೊಳ್ಳಿ.  ಈ ದ್ರಾವಣ ಒಣಗಿದ ಬಳಿಕ ರಾತ್ರಿ ಸುಖವಾಗಿ ಪವಡಿಸಿ ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

  Peach fruit

  ಪೀಚ್ ಹಾಗೂ ಟೊಮಾಟೋ ಮುಖಲೇಪ

  ಇವೆರಡೂ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾನದ ಆಂಟಿ ಆಕ್ಸಿಡೆಂಟು ಹಾಗೂ ವಿಟಮಿನ್ನುಗಳು ಲಭ್ಯವಿದೆ. ಇವು ನಿಮ್ಮ ತ್ವಚೆಯ ಸಹಜವರ್ಣವನ್ನು ಮರುಕಳಿಸುವುದು ಮಾತ್ರವಲ್ಲದೇ ಕಾಂತಿಯನ್ನೂ ಹೆಚ್ಚಿಸುತ್ತದೆ.

  ಅಗತ್ಯವಿರುವ ಸಾಮಾಗ್ರಿಗಳು

  -1/2 ಪೀಚ್ ಹಣ್ಣು

  -1/2 ಟೊಮೆಟೊ ಹಣ್ಣು

  ವಿಧಾನ

  *ಇವೆರಡನ್ನೂ ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ಸೋಸಿ ರಸ ಸಂಗ್ರಹಿಸಿ.

  *ರಾತ್ರಿ ಮಲಗುವ ಮುನ್ನ ಈ ರಸವನ್ನು ಮುಖದ ತ್ವಚೆಗೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಈ ರಸವನ್ನು ತ್ವಚೆ ಪೂರ್ಣವಾಗಿ ಹೀರಿಕೊಳ್ಳುವವರೆಗೂ ಮಸಾಜ್ ಮಾಡಿ ಬಳಿಕ ಸುಖವಾಗಿ ನಿದ್ರಿಸಿ. ಮರುದಿನ ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

  coffee

  ಕಾಫಿ ಮತ್ತು ಆಲಿವ್ ಎಣ್ಣೆಯ ಸ್ಕ್ರಬ್

  ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣವನ್ನು ಇವೆರಡೂ ಸಾಮಾಗ್ರಿಗಳು ಹೊಂದಿದ್ದು ಒಂದೇ ರಾತ್ರಿಯಲ್ಲಿ ಚರ್ಮದ ಕಾಂತಿಯನ್ನುಹೆಚ್ಚಿಸಲು ನೆರವಾಗುತ್ತದೆ. ಕಾಫಿ ಉತ್ತಮವಾದ ಸ್ಕ್ರಬ್ ಅಥವಾ ಸತ್ತ ಜೀವಕೋಶಗಳನ್ನು ನಿವಾರಿಸುವ ಸಾಮಾಗ್ರಿಯಾಗಿದೆ. ಆಲಿವ್ ಎಣ್ಣೆ ಘಾಸಿಗೊಂಡ ಚರ್ಮವನ್ನು ರಿಪೇರಿಗೊಳಿಸುವ ಹಾಗೂ ಚರ್ಮದ ಕಲೆಗಳನ್ನು ನಿವಾರಿಸುವ ಗುಣ ಹೊಂದಿದೆ.

  ಅಗತ್ಯವಿರುವ ಸಾಮಾಗ್ರಿಗಳು

  -2 ದೊಡ್ಡ ಚಮಚ ಹುರಿದು ಪುಡಿಮಾಡಿದ ಕಾಫಿಪುಡಿ (ಚಿಕೋರಿ ಸೇರಿಸಿರಬಾರದು)್

  -1 ದೊಡ್ಡಚಮಚ ಆಲಿವ್ ಎಣ್ಣೆ

  ವಿಧಾನ

  ಇವೆರಡೂ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  ಈ ಲೇಪದಿಂದ ಮುಖವನ್ನು ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ.

  ಈ ಲೇಪನದಿಂದ ಒಸರುವ ಹೆಚ್ಚುವರಿ ಎಣ್ಣೆಯನ್ನು ಕಾಗದದ ಟಿಶ್ಯೋ ಒಂದನ್ನು ಒತ್ತಿಕೊಂಡು ಹೀರುವಂತೆ ಮಾಡಿ. ಈ ಲೇಪನ ದಪ್ಪನಾಗಿ ಹಾಗೇ ಇರುವಂತೆ ಮಾಡಿ. ರಾತ್ರಿ ಹಾಗೇ ಸುಖವಾಗಿ ನಿದ್ರಿಸಿ ಮರುದಿನ ಬೆಳಿಗ್ಗೆ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

  cucumber

  ಸೌತೆ ಮತ್ತು ಆಲೂಗಡ್ಡೆಯ ರಸ

  ತ್ವಚೆಗೆ ತಂಪು ಹಾಗೂ ರಿಪೇರಿಗೊಳಿಸುವ ಗುಣವನ್ನು ಸೌತೆಕಾಯಿ ಹೊಂದಿದೆ. ಚರ್ಮದ ಒಟ್ಟಾರೆ ಕಾಂತಿಯನ್ನು ಹೆಚ್ಚಿಸಲು ಸೌತೆಕಾಯಿಯ ಗುಣಪಡಿಸುವ ಗುಣ ಹಾಗೂ ಆರ್ದ್ರತೆ ಒದಗಿಸುವ ಗುಣ ನೆರವಾಗುತ್ತದೆ. ಆಲುಗಡ್ಡೆಯ ರಸ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  ಅಗತ್ಯವಿರುವ ಸಾಮಾಗ್ರಿಗಳು

  -1/2 ಎಳೆ ಸೌತೆಕಾಯಿ (ಸಿಪ್ಪೆ ಸಹಿತ)

  -1/2 ಆಲುಗಡ್ಡೆ (ಸಿಪ್ಪೆ ರಹಿತ)

  ವಿಧಾನ

  ಇವೆರಡೂ ಸಾಮಾಗ್ರಿಗಳನ್ನು ಬ್ಲೆಂಡರಿನಲ್ಲಿ ಚೆನ್ನಾಗಿ ಗೊಟಾಯಿಸಿ.

  ಈ ಮಿಶ್ರಣವನ್ನು ಸೋಸಿ ರಸವನ್ನು ಸಂಗ್ರಹಿಸಿ.

  ಈ ರಸವನ್ನು ರಾತ್ರಿ ಮಲಗುವ ಮುನ್ನ ನಯವಾದ ಮಸಾಜ್ ಮೂಲಕ ಚರ್ಮಕ್ಕೆ ಹಚ್ಚಿಕೊಳ್ಳಿ. ರಸವನ್ನು ಚರ್ಮ ಪೂರ್ಣವಾಗಿ ಹೀರಿಕೊಳ್ಳುವವರೆಗೂ ಮಸಾಜ್ ಮಾಡಿ ಬಳಿಕ ಸುಖವಾಗಿ ನಿದ್ರಿಸಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

  Almond Oil

  ಬಾದಾಮಿ ಎಣ್ಣೆ

  ಬಾದಾಮಿ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದೆ. ಈ ಎಣ್ಣೆಯ ಬಳಕೆಯಿಂದ ಚರ್ಮದಲ್ಲಿ ಎದುರಾಗುವ ಸೂಕ್ಷ್ಮ ನೆರಿಗೆಗಳು ಕಡಿಮೆಯಾಗುತ್ತದೆ. ಈ ಎಣ್ಣೆಯ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಸತ್ತ ಜೀವಕೋಶಗಳು ಸುಲಭವಾಗಿ ವಿಸರ್ಜಿಸಲ್ಪಡುತ್ತವೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಸಾದಾ ಬಾದಾಮಿ ಎಣ್ಣೆಯನ್ನು ನೇರವಾಗಿ ಚರ್ಮದ ಮೇಲೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎಣ್ಣೆಯ ಬಳಕೆಯಿಂದ ಹೆಚ್ಚು ಕಾಲ ಚರ್ಮದ ಕಾಂತಿ ಉಳಿಯುತ್ತದೆ ಹಾಗೂ ವೃದ್ಧಾಪ್ಯ ಆವರಿಸುವ ಗತಿ ನಿಧಾನವಾಗುತ್ತದೆ.

  English summary

  Overnight skin treatments to get rid of dull skin this festive season

  These are overnight treatments that means apply these on a cleansed face at night and go to sleep. You will wake up to amazingly glowing and smooth skin in the morning... Here are a few overnight skin treatments which will help you get rid of any dullness from the late partying and get you ready for another party in no time.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more