ಮುಖದ ಸೌಂದರ್ಯ ಹೆಚ್ಚಿಸಬೇಕೇ? ಇಲ್ಲಿದೆ ನೋಡಿ 15 ಬ್ಯೂಟಿ ಟಿಪ್ಸ್

By: manu
Subscribe to Boldsky

ಭೂಮಿ ಮೇಲಿರುವ ಪ್ರತಿಯೊಬ್ಬರು ಸೌಂದರ್ಯಕ್ಕೆ ಮಾರು ಹೋಗುವವರೇ. ಅದು ಹೆಣ್ಣಿನ ಸೌಂದರ್ಯವಾಗಿರಲಿ, ಪ್ರಕೃತಿ ಅಥವಾ ಇನ್ನಿತರ ಬೇರೆ ಯಾವುದೇ ಸೌಂದರ್ಯವಾಗಿರಲಿ. ಎಲ್ಲರು ಸೌಂದರ್ಯವನ್ನು ಪ್ರಶಂಸಿಸುವವರೇ. ಇದಕ್ಕಾಗಿಯೇ ಮಹಿಳೆಯರು ತಮ್ಮ ತ್ವಚೆಯ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನವಿಟ್ಟುಕೊಳ್ಳುವರು. ಸೌಂದರ್ಯವರ್ಧಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರೀಮ್‌ಗಳು ಹಾಗೂ ಇನ್ನಿತರ ಸಾಮಗ್ರಿಗಳು ಸಿಗುವುದು.

ಆದರೆ ಇದನ್ನು ಬಳಸಿಕೊಂಡರೆ ಮುಂದೆ ಅಡ್ಡಪರಿಣಾಮಗಳು ಬರಬಹುದು. ಇದರ ಬದಲಿಗೆ ನೈಸರ್ಗಿಕವಾಗಿ ತಯಾರಿಸಿ ಬಳಸಬಹುದಾದ ತ್ವಚೆಯ ಮಾಸ್ಕ್‌ಗಳು ತ್ವಚೆಗೆ ಕಾಂತಿ ನೀಡುವುದು. ಆದರೆ ಇದರೊಂದಿಗೆ ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ನಿದ್ರಿಸುವ ಭಂಗಿ, ಆಹಾರೋಗ್ಯಕರ ಆಹಾರ, ದೇಹಕ್ಕೆ ಸಾಕಷ್ಟು ನೀರಿನಾಂಶ ಒದಗಿಸುವುದು.

ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಸರಿಯಾಗಿ ತಿನ್ನುವುದು ಮತ್ತು ದಿನನಿತ್ಯ ವ್ಯಾಯಾಮ ಮಾಡುವುದು ಇದರಲ್ಲಿ ಪ್ರಮುಖವಾಗಿದೆ. ರಾತ್ರಿ ವೇಳೆ ನೀವು ಬಳಸಬಹುದಾದ ಕೆಲವೊಂದು ತ್ವಚೆಯ ಮಾಸ್ಕ್ ಗಳ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಇದರಿಂದ ತ್ವಚೆಯು ಕಾಂತಿಯುವಾಗಿ ಹೊಳೆಯುವುದರಲ್ಲಿ ಸಂಶಯವೇ ಇಲ್ಲ. ಈ ಮಾಸ್ಕ್‌ಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ...

ಬಾದಾಮಿ ಮತ್ತು ಜೊಜೊಬಾ ಎಣ್ಣೆ ಫೇಸ್ ಮಾಸ್ಕ್

ಬಾದಾಮಿ ಮತ್ತು ಜೊಜೊಬಾ ಎಣ್ಣೆ ಫೇಸ್ ಮಾಸ್ಕ್

ಬಾದಾಮಿ ಮತ್ತು ಜೊಜೊಬಾ ಎಣ್ಣೆಯ ಫೇಸ್ ಮಾಸ್ಕ್ ನೀವು ಬಳಸಬಹುದಾದ ತುಂಬಾ ಪರಿಣಾಮಕಾರಿ ಫೇಸ್ ಮಾಸ್ಕ್. ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ತ್ವಚೆಗೆ ಕಾಂತಿಯು ಸಿಗುವುದು. ಇದರಲ್ಲಿ ಇರುವ ವಿಟಮಿನ್ ಇ ತ್ವಚೆಗೆ ಒಳ್ಳೆಯ ಪೋಷಕಾಂಶ ನೀಡುವುದು.

ಬಾದಾಮಿ: ಸ್ವಲ್ಪ ದುಬಾರಿಯಾದರೂ, ಮುಖಕ್ಕೆ-ಕೂದಲಿಗೆ ಒಳ್ಳೆಯದು

ಲಿಂಬೆ ಮತ್ತು ಹಾಲಿನ ಕ್ರೀಮ್

ಲಿಂಬೆ ಮತ್ತು ಹಾಲಿನ ಕ್ರೀಮ್

ಲಿಂಬೆ ಮತ್ತು ಹಾಲಿನ ಕ್ರೀಮ್‌ನ ಮಾಸ್ಕ್ ಅನ್ನು ಹಚ್ಚಿಕೊಂಡರೆ ಬೆಳಿಗ್ಗೆ ಎದ್ದಾಗ ನೀವು ಕಾಂತಿಯುತ ತ್ವಚೆ ಪಡೆಯಬಹುದು. ಒಂದು ಚಮಚ ಲಿಂಬೆ ರಸ ಮತ್ತು ¼ ಚಮಚ ಹಾಲಿನ ಕ್ರೀಮ್ ತೆಗೆದುಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ತೊಳೆಯಿರಿ.

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋ ಮತ್ತು ಜೇನುತುಪ್ಪ

ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡಿ ಬಿಗಿಗೊಳಿಸುವುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು. ಜೇನುತುಪ್ಪದೊಂದಿಗೆ ಸೇರಿಸಿದಾಗ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು. ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ.

ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಓಟ್ಸ್ ಮತ್ತು ಜೇನುತುಪ್ಪ

ಓಟ್ಸ್ ಮತ್ತು ಜೇನುತುಪ್ಪ

ಈ ಫೇಸ್ ಮಾಸ್ಕ್ ಮುಖಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ನಿದ್ರಿಸುವಾಗ ಚರ್ಮವನ್ನು ಇದು ಪುನಶ್ಚೇತನಗೊಳಿಸುವುದು. ಎರಡು ಚಮಚ ಜೇನುತುಪ್ಪದೊಂದಿಗೆ ಎರಡು ಚಮಚ ಓಟ್ಸ್ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ. ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಮುಖ ತೊಳೆಯಿರಿ.

ಹಸಿರು ಟೀ ಕುದಿಸಿ ಸೋಸಿದ ನೀರು

ಹಸಿರು ಟೀ ಕುದಿಸಿ ಸೋಸಿದ ನೀರು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ಅಕ್ಕಿ ನೀರಿನೊಂದಿಗೆ ಮುಖ ತೊಳೆಯಿರಿ

ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ನಾಲ್ಕು ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಬೇವಿನ ಪುಡಿ

ಬೇವಿನ ಪುಡಿ

ಒಂದು ವೇಳೆ ಮುಖದಲ್ಲಿ ಚಿಕ್ಕದಾಗಿ ಮೊಡವೆಗಳು ಮೂಡುತ್ತಿದ್ದರೆ ಬೇವಿನ ಪುಡಿಯನ್ನು ತಣ್ಣೀರಿನಲ್ಲಿ ಬೆರೆಸಿ ನುಣುಪಾದ ಲೇಪನ ತಯಾರಿಸಿ ತೆಳುವಾಗಿ ಹಚ್ಚಿಕೊಳ್ಳಿ. ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮೊಡವೆಗಳನ್ನು ಮಾಗಿಸುವುದು ಮಾತ್ರವಲ್ಲ, ಕಲೆಗಳನ್ನೂ ನಿಧಾನವಾಗಿ ನಿವಾರಿಸುತ್ತದೆ.

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ದಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ಒಂದು ಬೌಲ್‌ನಷ್ಟು ತೊಗರಿಕಾಳುಗಳನ್ನು ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಿ.. ನಂತ್ರ ಮೂರು ಆಲೂಗಡ್ಡೆಯನ್ನು ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ.. ಎರಡನ್ನು ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ ನಾಲ್ಕರಿಂದ ಐದು ಲೋಟ ನೀರು ಹಾಕಿ ಬೇಯಿಸಿ.. ಕುಕ್ಕರ್ ಮೂರು ವಿಷಿಲ್ ಬಂದ ನಂತ್ರ ಆಫ್ ಮಾಡಿ ಪ್ರೆಷರ್ ಇಳಿಯಲು ಬಿಡಿ. ತಣ್ಣಗಾದ ನಂತ್ರ ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ನೀರಿನಿಂದ ಬೇರ್ಪಡಿಸಿ.. ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ಈಗ ಪೇಸ್ಟ್ ತಯಾರಿಸಿಕೊಳ್ಳಿ

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ...

ಹಸಿ ಬೀಟ್‌ರೂಟಿನ ರಸ ಪ್ರಯತ್ನಿಸಿ ನೋಡಿ...

ಹಸಿ ಬೀಟ್‌ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ. ಈ ರಸವನ್ನು ನೇರವಾಗಿ ಮುಖದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಅಥವಾ ಮೂರು ಬಾರಿ ಪುನರಾವರ್ತಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಕಡಲೆ ಹಿಟ್ಟು+ಎರಡು ಚಮಚ ಮೊಸರು

ಕಡಲೆ ಹಿಟ್ಟು+ಎರಡು ಚಮಚ ಮೊಸರು

ಎರಡು ಚಮಚ ಕಡಲೆ ಹಿಟ್ಟು, ಎರಡು ಚಮಚ ಮೊಸರು, ಒಂದು ಮೊಟ್ಟೆಯ ಬಿಳಿ ಲೋಳೆ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ವಿಟಮಿನ್ ಇ ಮಾತ್ರೆ, ಎರಡು ಚಮಚ ಬಾದಾಮಿ ಎಣ್ಣೆ ಮತ್ತು ಎರಡು ಚಮಚ ಹಾಲು. ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಹತ್ತಿ ಉಂಡೆ ಅಥವಾ ಬ್ರಷ್ ತೆಗೆದುಕೊಂಡು ಹಾಲನ್ನು ಮುಖದ ಮೇಲೆ ಹಾಕುತ್ತಾ ಇರಿ. ಫೇಸ್ ಪ್ಯಾಕ್ ಒಣಗಲು ಬಿಡಬೇಡಿ. 20 ನಿಮಿಷ ಬಳಿಕ ಮುಖ ತೊಳೆಯಿರಿ.

ಆಲುಗಡ್ಡೆ ಪೇಸ್ ಪ್ಯಾಕ್

ಆಲುಗಡ್ಡೆ ಪೇಸ್ ಪ್ಯಾಕ್

ಒಂದು ಆಲುಗಡ್ಡೆಯನ್ನು ಬೇಯಿಸಿ ಇದನ್ನು ಕಿವುಚಿ ಮತ್ತೆ ನೀರಿಗೆ ಬೆರೆಸಿ ಚೆನ್ನಾಗಿ ಕಲಕಿ ಮತ್ತೊಮ್ಮೆ ಕುದಿಸಿ. ಈ ನೀರು ತಣಿದ ಬಳಿಕ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಸಮಪ್ರಮಾಣದಲ್ಲಿ ಹಸಿ ಹಾಲನ್ನು ಬೆರೆಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಲ್ಲಿ ಹತ್ತಿಯುಂಡೆಯನ್ನು ಅದ್ದಿ ಮುಖದ ಚರ್ಮಕ್ಕೆ ನವಿರಾಗಿ ಹಚ್ಚಿ ಹತ್ತು ಅಥವಾ ಹದಿನೈದು ನಿಮಿಶ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಕಡಿಮೆ ವಯಸ್ಸಿನಲ್ಲಿಯೇ ಎದುರಾದ ನೆರಿಗೆಗಳನ್ನು ನಿವಾರಿಸಬಹುದು.

ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು

ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು

ಅವಕಾಡೋ ಅಥವಾ ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಈ ಪ್ಯಾಕ್ ಅನ್ನು ಪ್ರಯತ್ನಿಸಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಿ.

 ಒಣಗಿಸಿ ಪುಡಿಮಾಡಿದ ಕಿತ್ತಳೆಯ ಸಿಪ್ಪೆ

ಒಣಗಿಸಿ ಪುಡಿಮಾಡಿದ ಕಿತ್ತಳೆಯ ಸಿಪ್ಪೆ

ಕಿತ್ತಳೆ ಹಣ್ಣುಗಳನ್ನು ತಿಂದ ಬಳಿಕ ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಒಂದು ದಿನ ಒಳಭಾಗ ಮೇಲಿರುವಂತೆ, ಮರುದಿನ ಹೊರಭಾರ ಮೇಲಿರುವಂತೆ ಒಣಗಿಸಿ ತೇವಾಂಶವೆಲ್ಲಾ ಹೋಗುವಂತೆ ಮಾಡಿ. ಚೆನ್ನಾಗಿ ಒಣಗಿದ ಬಳಿಕ ಇದನ್ನು ಕುಟ್ಟಿ ಪುಡಿ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಪುಡಿಯನ್ನು ಕೊಂಚ ಹಾಲಿನಲ್ಲಿ ಬೆರೆಸಿ ಲೇಪನ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದರಿಂದ ಮುಖದ ನೆರಿಗೆಗಳು, ಮೊಡವೆ ಮತ್ತು ಚರ್ಮದ ಇತರ ಚಿಕ್ಕಪುಟ್ಟ ತೊಂದರೆಗಳು ಇಲ್ಲವಾಗುತ್ತವೆ.

English summary

Overnight Face Masks For A Glowing Skin

These face masks are effective in bringing back the natural glow to the skin. They rejuvenate the skin and make it appear healthy and youthful.Therefore, in this article, we at Boldsky will be listing out some of the effective face masks that help you to get a glowing skin overnight. Read it, try it and notice the difference!
Please Wait while comments are loading...
Subscribe Newsletter