For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿ ಹೆಚ್ಚಿಸುವ ನೈಸರ್ಗಿಕ ಉತ್ಪನ್ನಗಳು-ಪ್ರಯತ್ನಿಸಿ ನೋಡಿ

By Divya Pandith
|

ಅನಾರೋಗ್ಯಕರ ಜೀವನ ಶೈಲಿ ಅಭ್ಯಾಸಗಳು, ಅಸಮರ್ಪಕವಾದ ತ್ವಚೆಯ ಆರೈಕೆ, ಕಲುಶಿತ ಮತ್ತು ಹಾನಿಕಾರಕ ಗಾಳಿಗಳು ತ್ವಚೆಯ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರುತ್ತದೆ. ಗಾಳಿಯಲ್ಲಿರುವ ರಾಸಾಯನಿಕ ಪದಾರ್ಥಗಳು ಚರ್ಮದ ಮೇಲೆ ನೇರವಾಗಿ ದಾಳಿ ಮಾಡುವುದರಿಂದ ಉರಿಯೂತ, ಮೊಡವೆ, ತೇವಾಂಶ ಕಳೆದುಕೊಳ್ಳುವುದು ಅಥವಾ ನಿರ್ಜೀವ ತ್ವಚೆಯಂತೆ ಶೋಭಿಸುವುದು.

ನಿತ್ಯ ಕೆಲಸಕ್ಕೆ ತರಳುವಾಗ ಅಥವಾ ಕಾಲೇಜಿಗೆ ಹೋಗುವ ಸಮಯದಲ್ಲಿ ಸುಂದರ ಕಾಣುವ ಉದ್ದೇಶಕ್ಕೆ ಮೇಕಪ್ ಮಾಡಿಕೊಳ್ಳುವುದು ಸಹಜ. ಈ ರೀತಿಯ ಮೇಕಪ್ ಮಾಡಿಕೊಂಡ ಪರಿಣಾಮವಾಗಿಯೂ ತ್ವಚೆಯ ಮೇಲೆ ಗಾಢವಾದ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ. ಕಳಪೆ ಗುಣಮಟ್ಟದ ಮೇಕಪ್ ಉತ್ಪನ್ನಗಳು ಬಹು ಬೇಗ ಚರ್ಮದ ಗುಣಮಟ್ಟವನ್ನು ಕಳೆಯುತ್ತವೆ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಅಥವಾ ಪುನಃಶ್ಚೇತನಗೊಳಿಸಲು ಪರಿಣಾಮಕಾರಿ ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.

ಚರ್ಮದ ಆರೋಗ್ಯ ಕಾಪಾಡಲು ನೈಸರ್ಗಿಕವಾದ ಕೆಲವು ಉತ್ಪನ್ನಗಳನ್ನು ಬಳಸಿಕೊಳ್ಳಬಹುದು. ಈ ಉತ್ಪನ್ನಗಳು ತ್ವಚೆಗೆ ಅಗತ್ಯವಿರುವ ಪೋಷಕಾಂಶವನ್ನು ಒದಗಿಸುತ್ತವೆ. ಜೊತೆಗೆ ನೈಸರ್ಗಿಕವಾಗಿಯೇ ಚರ್ಮವು ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ. ಹಾಗಾದರೆ ಈ ಉತ್ಪನ್ನಗಳು ಯಾವವು? ಅವುಗಳ ಬಳಕೆ ಹೇಗೆ? ಪ್ರಯೋಜನಗಳೇನು? ಎನ್ನುವ ಸೂಕ್ತ ವಿವರಣೆಯನ್ನು ನಮ್ಮ ಬೋಲ್ಡ್‍ಸ್ಕೈ ನಿಮಗೆ ತಿಳಿಸಿಕೊಡುತ್ತದೆ.

ಸೌತೆಕಾಯಿ

ಸೌತೆಕಾಯಿ

ತ್ವಚೆಯ ಆಳದಿಂದ ಸಂಪೂರ್ಣವಾಗಿ ತಾಜಾತನಗೊಳಿಸುವಂತೆ ಮಾಡುವ ನೈಸರ್ಗಿಕ ಉತ್ಪನ್ನವೆಂದರೆ ಸೌತೆಕಾಯಿ. ಮುಖದ ಮೇಲೆ, ಸೌತೆಕಾಯಿಯ ಪೇಸ್ಟ್‍ಅನ್ನು ಅನ್ವ¬ಸಿ. ಸ್ವಲ್ಪ ಸಮಯದ ನಂತರ ಘನೀಕರಿಸಿದ ನೀರಿನಿಂದ ತೊಳೆಯಬೇಕು. ಆಗ ಚರ್ಮವು ಹೊಳಪು ಹಾಗೂ ತೇವಾಂಶದಿಂದ ಕೂಡಿರುವಂತೆ ಕಾಣುತ್ತದೆ. ದಿನಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಚರ್ಮವು ಆರೋಗ್ಯಪೂರ್ಣವಾಗಿ ಇರುವುದು. ತಾಜಾ ಸೌತೆಕಾಯಿಯ ರಸವನ್ನು ತೆಗೆದುಕೊಂಡು, ಅದನ್ನು ಮುಖದ ಟೋನರ್ ಆಗಿಯೂ ಸಹ ಬಳಸಬಹುದು.

ತ್ವಚೆಯನ್ನು ತಂಪಾಗಿಸುವ 'ಸೌತೆಕಾಯಿ' ಫೇಸ್​ಪ್ಯಾಕ್

ಅಲೋವೆರಾ

ಅಲೋವೆರಾ

ತ್ವಚೆಯ ಆರೋಗ್ಯ ಕಾಪಾಡಲು ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ. ಇದರ ತಿರುಳನ್ನು ತೆಗೆದು ಚರ್ಮದ ಮೇಲೆ ಅನ್ವಯಿಸಿಕೊಳ್ಳುವುದರಿಂದ ರಿಫ್ರೆಶ್ ನೋಡವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಇ ಹೇರಳವಾಗಿರುವುದರಿಂದ ತ್ವಚೆಯ ಮೇಲಿರುವ ಚಿಕ್ಕಪುಟ್ಟ ಗಾಯ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಅಲೋವೆರಾ ಜೆಲ್‍ಅನ್ನು ನೇರವಾಗಿ ಅಥವಾ ಫೇಶಿಯಲ್ ಉತ್ಪನ್ನಗಳೊಂದಿಗೆ ಬೆರೆಸಿ ಮುಖವಾಡವನ್ನು ಅನ್ವಯಿಸಿಕೊಳ್ಳಬಹುದು. ನಿಯಮಿತವಾಗಿ ಹೀಗೆ ಮಾಡುವುದರಿಂದ ಕಾಂತಿಯು ಹೆಚ್ಚುತ್ತದೆ. ಜೊತೆಗೆ ತ್ವಚೆಯನ್ನು ಶುಚಿಗೊಳಿಸುತ್ತದೆ.

ನಿಂಬೆ ರಸ

ನಿಂಬೆ ರಸ

ಚರ್ಮದ ಆರೋಗ್ಯ ಕಾಪಾಡಲು ಅತ್ಯತ್ತಮ ನೈಸರ್ಗಿಕ ಪದಾರ್ಥಗಳಲ್ಲಿ ನಿಂಬೆ ರಸವೂ ಒಂದು. ತಾಜಾ ನಿಂಬೆ ರಸದಲ್ಲಿ ಚಿಕ್ಕ ಹತ್ತಿ ಚೆಂಡನ್ನು ನೆನೆಸಿಕೊಂಡು, ಚರ್ಮದ ಮೇಲೆ ಅನ್ವಯಿಸಿ. ನಂತರ ಲಘುವಾಗಿ ಮಸಾಜ್ ಮಾಡಿ. ನಿತ್ಯವೂ ಹೀಗೆ ಮಾಡುವುದರಿಂದ ಧೂಳು, ಬೆವರು, ಎಣ್ಣೆಜಿಡ್ಡಿನಿಂದ ಕೊಳಕಾದ ಚರ್ಮವು ಸ್ವಚ್ಛವಾಗುತ್ತದೆ. ಅಲ್ಲದೆ ಅನಾವಶ್ಯಕಾಗಿ ಕಾಣಿಸಿಕೊಳ್ಳುವ ಗುಳ್ಳೆ ಮತ್ತು ತುರಿಕೆಗಳನ್ನು ಶಮನಗೊಳಿಸಬಹುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವು ಉತ್ಕರ್ಷಣ ನಿರೋಧಕಗಳ ಆಗರವಾದ ಉತ್ಪನ್ನ. ಇದನ್ನು ಚರ್ಮದ ಮೇಲೆ ಅನ್ವಯಿಸುವುದರಿಂದ ನಿಮಷದಲ್ಲಿಯೇ ತ್ವಚೆಯನ್ನು ರಿಫ್ರೆಶ್ ಮಾಡುವುದು. ಕಲುಶಿತವಲ್ಲದ ಅಥವಾ ಸಾವಯವ ಜೇನುತುಪ್ಪವನ್ನು ತ್ವಚೆಯ ಮೇಲೆ ಅನ್ವಯಿಸಬೇಕು. ನಿತ್ಯವೂ ಈ ಕ್ರಿಯೆ ಮುಂದುವರಿದರೆ ತ್ವಚೆಯು ಕಾಂತಿಯಿಂದ ಹಾಗೂ ಆರೋಗ್ಯಪೂರ್ಣವಾಗಿ ಕಂಗೊಳಿಸುವುದು. ತಕ್ಷಣಕ್ಕೆ ನಿಮ್ಮ ತ್ವಚೆಯನ್ನು ಸುಂದರೊಳಿಸಿಕೊಂಡು ಹೋಗುವ ಅನಿವಾರ್ಯತೆಯ ಸಂದರ್ಭದಲ್ಲಿ ಜೇನುತುಪ್ಪದ ಮೊರೆ ಹೋಗಬಹುದು.

ಗುಲಾಬಿ ನೀರು

ಗುಲಾಬಿ ನೀರು

ರೋಸ್ ವಾಟರ್/ಗುಲಾಬಿ ನೀರು ಒಂದು ನೈಸರ್ಗಿಕ ಘಟಕಾಂಶ. ಇದು ಚರ್ಮದ ಆರೈಕೆಯ ಕೆಲಸದಲ್ಲಿ ಪವಾಡ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಕೊಳಕಾದ ಚರ್ಮವನ್ನು ನೈಸರ್ಗಿಕವಾಗಿ ಪುನಃಸ್ಥಾಪಿಸಲು ಮತ್ತು ಕಲ್ಮಶಗಳನ್ನು ತೆಗೆಯಲು ಗುಲಾಬಿ ನೀರು ನೈಸರ್ಗಿಕ ಶುದ್ಧೀಕರಣದ ಉತ್ಪನ್ನ. ನಿತ್ಯವೂ ಇದರ ಬಳಕೆಯಿಂದ ತ್ವಚೆಯನ್ನು ಶುದ್ಧಿಗೊಳಿಸಿದರೆ ಚರ್ಮವು ಹೊಳಪು ಹಾಗೂ ತಾಜಾತನದಿಂದ ಕೂಡಿರುತ್ತದೆ. ಇದನ್ನು ರಾತ್ರಿ ನಿದ್ರೆ ಮಾಡುವಾಗ ಅನ್ವಯಿಸಿಕೊಂಡು, ಮುಂಜಾನೆ ಮುಖ ತೊಳೆಯಬಹುದು.

ಕೇಸರಿ

ಕೇಸರಿ

ಕೇಸರಿ ಎಳೆಗಳು ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಉತ್ತಮವಾದ ಉತ್ಪನ್ನವಾಗಿದೆ. ಇದರ ಬಳಕೆಯಿಂದ ಚರ್ಮವು ಒಳಗಿನಿಂದಲೇ ರಿಫ್ರೆಶ್ ಮಾಡುವುದು. ಕೇಸರಿ ಎಳೆಯ ನೀರು ಅಥವಾ ನೈಸರ್ಗಿಕ ಪೇಶಿಯಲ್ ಮುಖವಾಡದ ಜೊತೆ ಬೆರೆಸಿ ಬಳಸುವುದರಿಂದ ಹಾನಿಗೊಳಗಾದ ಚರ್ಮವೂ ಸರಿ ಹೋಗುತ್ತದೆ. ಅಲ್ಲದೆ ಮಂಕಾದ ತ್ವಚೆಯನ್ನು ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ.

ಕೇಸರಿ+ ಜೇನು ತುಪ್ಪದ ಫೇಸ್ ಪ್ಯಾಕ್-ದುಬಾರಿಯಾದರೂ ತ್ವಚೆಗೆ ಒಳ್ಳೆಯದು

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯನ್ನು ತಯಾರಿಸಿ, ತಣ್ಣಗಾಗಲು ಬಿಡಬೇಕು. ತಣ್ಣಗಿರುವ ಗ್ರೀನ್ ಟೀಯನ್ನು ಮುಖದ ಮೇಲೆ ಅನ್ವಯಿಸಿ. ಜೊತೆಗೆ ನಿಮಿಷಗಳ ಕಾಲ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯಮೇಲಿರುವ ಕೊಳೆ ಹಾಗೂ ಸತ್ತ ಜೀವಕೋಶಗಳು ನಿರ್ಮೂಲವಾಗುತ್ತದೆ. ತ್ವಚೆಯೂ ತೇವಾಂಶದಿಂದ ಕೂಡಿರುವಂತೆ ಕಾಣುತ್ತದೆ.

ಮೊಡವೆಗಳ ನಿವಾರಣೆಗೆ ಗ್ರೀನ್ ಟೀ ಅಸ್ತ್ರದ ಬಳಕೆ

ಅರಿಶಿನ ಪುಡಿ

ಅರಿಶಿನ ಪುಡಿ

ಚರ್ಮದ ಆರೋಗ್ಯ ಕಾಪಾಡಲು ಹಾಗೂ ರಿಫ್ರೆಶ್ ಮಾಡಲು ಇರುವ ಇನ್ನೊಂದು ಅದ್ಭುತವಾದ ನೈಸರ್ಗಿಕ ಉತ್ಪನ್ನ ಅರಿಶಿನ ಪುಡಿ. ಸಾಂಪ್ರದಾಯಿಕ ಉತ್ಪನ್ನವಾದ ಇದನ್ನು ಪುರಾತನ ಕಾಲದಿಂದಲೂ ಸೌಂದರ್ಯ ವರ್ಧಕ ಉತ್ಪನ್ನವಾಗಿ ಬಳಸಲಾಗುತ್ತಿದೆ. ಇದರ ಮುಖವಾಡವನ್ನು ಅನ್ವಯಿಸುವುದರಿಂದ ಚರ್ಮದ ಮೇಲಿರುವ ಧೂಳು ಮತ್ತು ಕಲೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಚಿಕ್ಕ ಪುಟ್ಟ ಗಾಯಗಳು ಹಾಗೂ ಮೊಡವೆಗಳನ್ನು ಶಮನಗೊಳಿಸುತ್ತದೆ. ನಿತ್ಯವೂ ಇದರ ಮುಖವಾಡವನ್ನು ಅನ್ವಯಿಸುವುದರಿಂದ ತ್ವಚೆಯ ಮೇಲಿರುವ ಅನುಪಯುಕ್ತ ಕೂದಲುಗಳಿಂದಲೂ ಮುಕ್ತಿ ಪಡೆಯಬಹುದು. ಕೆನೆ ಮತ್ತು ಅರಿಶಿನದ ಮಿಶ್ರಣದೊಂದಿಗೆ ಬಳಸಿದರೆ ತ್ವಚೆಯು ಹೆಚ್ಚು ಕಾಂತಿ ಹಾಗೂ ತಾಜಾತನದಿಂದ ಕೂಡಿರುತ್ತದೆ.

ಮುಖದ ಅಂದ-ಚೆಂದ ಹೆಚ್ಚಿಸುವ ಅರಿಶಿನ-ಅಲೋವೆರಾ ಫೇಸ್ ಪ್ಯಾಕ್‍

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ನಾವು ಬಳಸುವ ದೈನಂದಿನ ಕ್ರೀಮ್ ಅಥವಾ ಟೋನರ್‍ಗಳಲ್ಲಿ ಬಾದಾಮಿ ತೈಲವನ್ನು ಸೇರಿಸಿಕೊಳ್ಳಬಹುದು. ಇದು ಚರ್ಮವನ್ನು ಹೆಚ್ಚು ಪ್ರಕಾಶವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ನಮಗೆ ತ್ವಚೆಯು ಹೆಚ್ಚು ತಾಜಾತನದಿಂದ ಕೂಡಿರುವಂತೆ ಅನುಭವವಾಗುತ್ತದೆ. ನಿಯಮಿತವಾಗಿ ಇದರ ಬಳಕೆಯಿಂದ ಚರ್ಮವು ಆರೋಗ್ಯದಿಂದ ಕೂಡಿರುತ್ತದೆ.

ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಪುದೀನ ರಸ

ಪುದೀನ ರಸ

ತಾಜ ಪುದೀನ ರಸವು ತ್ವಚೆಯ ರಿಫ್ರೆಶ್‍ನರ್ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಚರ್ಮದ ಬಣ್ಣವನ್ನು ಹೆಚ್ಚು ಹೊಳಪು ಹಾಗೂ ಬಿಳುಪಿನಿಂದ ಕೂಡಿರುವಂತೆ ಮಾಡುತ್ತದೆ. ಸ್ಪ್ರೇ ಬಾಟಲ್‍ನಲ್ಲಿ ಇದರ ರಸವನ್ನು ಸಂಗ್ರಹಿಸಿ, ಆಗಾಗ ತ್ವಚೆಯಮೇಲೆ ಸಿಂಪಡಿಸಿಕೊಂಡು ಚಿಕಿತ್ಸೆಗೊಳಪಡಿಸಿಕೊಂಡರೆ, ಚರ್ಮದ ಮೇಲಿರುವ ಕೊಳೆ ಹೋಗಿ ಸ್ವಚ್ಛ ಹಾಗೂ ತಾಜಾತನದ ಅನುಭವ ನೀಡುತ್ತದೆ.

ಪುದೀನ ಸೊಪ್ಪಿನ ಚಟ್ನಿ ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ

ಮೊಸರು

ಮೊಸರು

ನಿಮ್ಮ ಚರ್ಮವನ್ನು ಪುನರ್ ಯೌವನಗೊಳಿಸಲು ಮತ್ತು ಹಲವಾರು ಸಮಸ್ಯೆಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ತ್ವಚೆಯನ್ನು ಆರೋಗ್ಯವಾಗಿರುವಂತೆ ಮಾಡುವ ನೈಸರ್ಗಿಕ ಉತ್ಪನ್ನಗಳಲ್ಲಿ ಇದು ಒಂದು. ಚರ್ಮವು ಧೂಳಿನಿಂದ ಅಥವಾ ಜಿಡ್ಡಿನಿಂದ ಕೂಡಿರುವಾಗ ಸ್ವಚ್ಛತೆಗೆ ಮೊಸರನ್ನು ಬಳಸಬಹುದು. ವಾರದಲ್ಲಿ ಎರಡು ಬಾರಿ ಇದರ ಉಪಯೋಗ ಮಾಡುವುದರಿಂದ ತ್ವಚೆಯು ಧನಾತ್ಮಕ ಫಲಿತಾಂಶವನ್ನು ಪಡೆಯಬಹುದು.

ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!

English summary

Natural Ingredients You Can Use To Refresh Your Skin

As today at Boldsky, we have brought together a list of natural ingredients you can use to make your skin appear healthy and fresh. From rejuvenating your skin's texture to treating tired-looking skin, these natural ingredients can do it all. All the below mentioned natural ingredients are replete with antioxidants, antibacterial elements that can not only prevent breakouts but also ensure that your skin appears fresh and clean at all times.Take a look at these miraculous natural ingredients here.
Story first published: Saturday, October 21, 2017, 12:08 [IST]
X
Desktop Bottom Promotion