For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಉತ್ಪನ್ನ... ತ್ವಚೆಯ ಆರೋಗ್ಯಕ್ಕೆ ಬಹಳ ಚೆನ್ನ...

ತ್ವಚೆಯ ರಕ್ಷಣೆಗೆ ಹಾಗೂ ಅವುಗಳ ಆರೋಗ್ಯ ವೃದ್ಧಿಗೆ ನಮ್ಮ ನಿಸರ್ಗದಲ್ಲಿ ಅನೇಕ ಉತ್ಪನ್ನಗಳಿವೆ. ಪ್ರತಿದಿನ ಚರ್ಮಕ್ಕೆ ಇವುಗಳ ಆರೈಕೆ ಮಾಡುತ್ತಾಬಂದರೆ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಬಹುದು

By Divya
|

ಅನೇಕರು ತಮ್ಮ ತ್ವಚೆ ಹಾಗೂ ಗುಣಮಟ್ಟದ ಬಗ್ಗೆ ಅರಿತುಕೊಳ್ಳಲು ಎಡವುತ್ತಾರೆ. ಜೊತೆಗೆ ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳಿಗಿಂತ ದುಬಾರಿ ಬೆಲೆಯ ಸೌಂದರ್ಯವರ್ಧಕಗಳನ್ನು ಬಳಸಿದರೆ ಮಾತ್ರ ಸುಂದರವಾಗಿ ಕಾಣುತ್ತೇವೆ ಎನ್ನುವ ತಪ್ಪು ಕಲ್ಪನೆಗೆ ಒಳಗಾಗಿರುತ್ತಾರೆ. ಯಾರೋ ಮಾಡಿದ ಪ್ರಯೋಗಗಳನ್ನು ತಮ್ಮ ತ್ವಚೆಯ ಮೇಲೆ ಮಾಡಿಕೊಂಡು, ಚರ್ಮದ ಆರೋಗ್ಯವನ್ನು ಇನ್ನಷ್ಟು ಹಾಳುಮಾಡಿಕೊಳ್ಳುತ್ತಾರೆ. ತ್ವಚೆಯ ಕಾಂತಿಗೆ ದುಬಾರಿ ಬೆಲೆಯ ಉತ್ಪನ್ನ ಏತಕ್ಕೆ ಬೇಕು?

ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ವಿವಿಧ ಬಗೆಯ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳನ್ನು ಬಳಸಲಾಗಿರುತ್ತವೆ. ಇವುಗಳನ್ನು ಪ್ರತಿದಿನ ನಮ್ಮ ತ್ವಚೆಗೆ ಅನ್ವಯ ಮಾಡುತ್ತಿದ್ದರೆ ಚರ್ಮದ ಕೋಶಗಳು ಮತ್ತು ಅಂಗಾಶಗಳ ಬೆಳವಣಿಗೆಗೆ ತೊಂದರೆ ಉಂಟಾಗುತ್ತದೆ. ತ್ವಚೆಯು ತೇವಾಂಶವನ್ನು ಕಳೆದುಕೊಂಡು ಬಹಳ ಬೇಗ ಸುಕ್ಕುಗಟ್ಟುವ ಸಮಸ್ಯೆ ಬಲಿಯಾಗುವುದು. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಒಂದು ಖುಷಿಕರವಾದ ಸಂಗತಿಯೆಂದರೆ ತ್ವಚೆಯ ರಕ್ಷಣೆಗೆ ಹಾಗೂ ಅವುಗಳ ಆರೋಗ್ಯ ವೃದ್ಧಿಗೆ ನಮ್ಮ ನಿಸರ್ಗದಲ್ಲಿ ಅನೇಕ ಉತ್ಪನ್ನಗಳಿವೆ. ಪ್ರತಿದಿನ ಚರ್ಮಕ್ಕೆ ಇವುಗಳ ಆರೈಕೆ ಮಾಡುತ್ತಾಬಂದರೆ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಬಹುದು....

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಎಣ್ಣೆ. ಅತ್ಯುತ್ತಮ ಆರೋಗ್ಯಕರ ಅಂಶವನ್ನು ಒಳಗೊಂಡಿರುವ ಈ ಎಣ್ಣೆಯನ್ನು ತ್ವಚೆಯ ಆರೋಗ್ಯ ಕಾಪಾಡಲು ಬಳಸಬಹುದು. ಇದನ್ನು ಪ್ರತಿದಿನ ಬಳಸುವುದರಿಂದ ಚರ್ಮವನ್ನು ಹೈಡ್ರೇಟಿಂಗ್ ಮಾಡುತ್ತದೆ. ಜೊತೆಗೆ ಮೊಡವೆ, ಕಪ್ಪುಕಲೆಗಳನ್ನು ನಿವಾರಿಸಿ ಚರ್ಮ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಎಲ್ಲಾ ಬಗೆಯ ಚರ್ಮದವರು ಸಹ ಬಳಸಬಹುದಾದ ಉತ್ಪನ್ನವೆಂದರತೆ ಆಪಲ್ ಸೈಡರ್ ವಿನೆಗರ್. ಇದು ಚರ್ಮದ ರೋಗಕಾರಕ ಹಾಗೂ ಸೂಕ್ಷ್ಮಾಣುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹೀಗಾಗಿ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನಿಸಿಯಮ್ ಇರುವುದರಿಂದ ತ್ವಚೆಯು ಮೊಡವೆಯಿಂದ ಮುಕ್ತಿ ಪಡೆದು ಕಾಂತಿಯುತವಾಗಿ ಕಂಗೊಳಿಸುತ್ತದೆ.

ಜೇನು ತುಪ್ಪ

ಜೇನು ತುಪ್ಪ

ಜೇನುತುಪ್ಪದಲ್ಲಿ ಬಹಳಷ್ಟು ಜೀವಸತ್ವಗಳು ಇರುತ್ತವೆ. ಇದು ಪ್ರೋಟೀನ್, ಕಿಣ್ವಗಳು ಮತ್ತು ಚರ್ಮವನ್ನು ಉತ್ತೇಜಿಸುವ ಆಮ್ಲಗಳ ಮೂಲವಾಗಿದೆ. ಇದನ್ನು ಪ್ರತಿದಿನ ಹಚ್ಚುತ್ತಬಂದರೆ ತ್ವಚೆಯು ತೇವಾಂಶದಿಂದ ಕೂಡಿ ಹೆಚ್ಚು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಸಮುದ್ರ ಉಪ್ಪು

ಸಮುದ್ರ ಉಪ್ಪು

ಸಮುದ್ರದ ಉಪ್ಪು ಎಲ್ಲಾವಿಧದ ಚರ್ಮಕ್ಕೆ ಬಳಸಬಹುದಾದ ಬಹುಮುಖ ಘಟಕಾಂಶ. ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಇವೆ. ಇದನ್ನು ಜೇನು ತುಪ್ಪ ಮತ್ತು ತೆಂಗಿನ ಎಣ್ಣೆಯ ಮಿಶ್ರಣದೊಂದಿಗೆ ಬೆರೆಸಿ ಹಚ್ಚಿಕೊಂಡರೆ ತ್ವಚೆಯು ಹೆಚ್ಚು ಆರೋಗ್ಯವಾಗಿ, ಕಲೆ ಮುಕ್ತವಾಗುತ್ತದೆ. ಜೊತೆಗ ಹೊಳಪಿನ ಚರ್ಮ ನಿಮ್ಮದಾಗುವುದು.

ಆವಕಾಡೂ/ ಬಟರ್ ಫ್ರೂಟ್

ಆವಕಾಡೂ/ ಬಟರ್ ಫ್ರೂಟ್

ಈ ಅದ್ಭುತ ಹಣ್ಣು ಅಮೈನೋ ಆಮ್ಲ ಹಾಗೂ ಉತ್ತಮ ಜೀವಸತ್ವಗಳನ್ನು ಒಳಗೊಂಡಿದೆ. ಇದನ್ನು ಪ್ರತಿದಿನ ಮುಖಕ್ಕೆ ಅನ್ವಯಿಸುತ್ತಾ ಬಂದರೆ ಮೊಡವೆ, ಗುಳ್ಳೆಗಳು, ಉರಿಊತ ಹಾಗೂ ಇನ್ನಿತರ ಚರ್ಮ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ.

ಲೋಳೆಸರ

ಲೋಳೆಸರ

ಲೋಳೆಸರ ತ್ವಚೆಯ ಆರೋಗ್ಯ ಕಾಪಾಡಲು ಬಹಳ ಉಪಯುಕ್ತಕಾರಿ ಉತ್ಪನ್ನ. ಪ್ರತಿದಿನ ಇದರ ತಿರುಳನ್ನು ಮುಖಕ್ಕೆ ಹಚ್ಚಿದರೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತದೆ. ಮುಖದ ಮೇಲಿರುವ ಮೊಡವೆ, ಒಣಗಿದ ಚರ್ಮ, ಕಪ್ಪುಕಲೆಯನ್ನು ಹೋಗಲಾಡಿಸಿ ತ್ವಚೆಯು ಕಾಂತಿಯುತವಾಗಿರುವಂತೆ ಮಾಡುತ್ತದೆ. ಇದನ್ನು ಎಲ್ಲಾ ಬಗೆಯ ತ್ವಚೆಯವರು ಬಳಸಬುದು.

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಈ ಎಣ್ಣೆಯಲ್ಲಿ ಪ್ರೋಟಿನ್ ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇವು ಹಲವಾರು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತವೆ. ಇದನ್ನು ಪ್ರತಿದಿನ ಬಳಸುವುದರಿಂದ ತ್ವಚೆಯನ್ನು ಶುಭ್ರ ಹಾಗೂ ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ.

English summary

Natural Ingredients That Can Be Used On All Types Of Skin

The natural ingredients, which we have listed in this article, work their best in providing you with a beautiful and healthy skin that would suit all skin types....
X
Desktop Bottom Promotion