For Quick Alerts
ALLOW NOTIFICATIONS  
For Daily Alerts

ಸತಾಯಿಸುವ 'ಮೊಡವೆ ಕಲೆಗೆ' ಮನೆಯಲ್ಲೇ ಚಿಕಿತ್ಸೆ! ಪ್ರಯತ್ನಿಸಿ ನೋಡಿ...

By Hemanth
|

ಮುಖ ಹಾಗೂ ದೇಹವನ್ನು ನೋಡಿಕೊಂಡು ಸೌಂದರ್ಯವನ್ನು ಅಳೆಯಲಾಗುತ್ತದೆ. ಆದರೆ ಕೆಲವು ಸಲ ಮುಖದ ಮೇಲಿನ ಮೊಡವೆಗಳು ಸೌಂದರ್ಯವನ್ನು ಹಾಳುಗೆಡವುತ್ತವೆ. ಹದಿಹರೆಯದಿಂದ ಹಿಡಿದು 30ರ ಹರೆಯದ ವಯಸ್ಸಿನವರಲ್ಲಿ ಇದು ಸಾಮಾನ್ಯವಾಗಿರುವಂತಹ ಸಮಸ್ಯೆಯಾಗಿದೆ. ಧೂಳು, ಕಲುಷಿತ ವಾತಾವರಣ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳಿಂದ ಮೊಡವೆ ಕಾಣಿಸಿಕೊಳ್ಳುತ್ತದೆ.

ತ್ವಚೆಯನ್ನು ಆರೈಕೆ ಮಾಡಿಕೊಳ್ಳುತ್ತಾ ಒಳ್ಳೆಯ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಅದರಿಂದ ಖಂಡಿತವಾಗಿಯೂ ನಮಗೆ ಲಾಭವಾಗಲಿದೆ. ಮೊಡವೆಗಳ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮೊಡವೆ ಸಮಸ್ಯೆಗೆ ಯಾಕೆ ಚಿಂತೆ? ಮನೆಯಲ್ಲಿಯೇ ಇದೆ ಪರಿಹಾರ!

ಆದರೆ ಮನೆಮದ್ದನ್ನು ಬಳಸಿಕೊಂಡು ಮೊಡವೆಗಳನ್ನು ನಿವಾರಣೆ ಮಾಡಿದರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಈ ಲೇಖನದಲ್ಲಿ ಮೊಡವೆಗಳ ಕಲೆಗಳನ್ನು ನಿವಾರಣೆ ಮಾಡಿ ಸ್ವಚ್ಛ ತ್ವಚೆ ನೀಡುವಂತಹ ಉಪಾಯವನ್ನು ನಿಮಗೆ ಹೇಳಿಕೊಡಲಿದೆ. ಮನೆಮದ್ದಿನಿಂದ ಮೊಡವೆಗಳನ್ನು ನಿವಾರಿಸುವುದು ಹೇಗೆಂದು ನೀವು ತಿಳಿಯಿರಿ.

ಹಿಂಗಿನ ಪೇಸ್ಟ್
 

ಹಿಂಗಿನ ಪೇಸ್ಟ್

ಮೊಡವೆಗಳು ಉಂಟು ಮಾಡಿರುವಂತಹ ಕಲೆಗಳನ್ನು ನಿವಾರಣೆ ಮಾಡಲು ಮತ್ತು ಹೊಸ ಮೊಡವೆಗಳು ಮೂಡದಂತೆ ತಡೆಯಲು ಹಿಂಗಿನ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

ಮೊಸರಿನ ಮಸಾಜ್

ಮೊಸರಿನ ಮಸಾಜ್

ಒಂದು ಕಪ್‌ನಲ್ಲಿ ಒಂದು ದೊಡ್ಡಚಮಚ ಓಟ್ಸ್ ಪುಡಿ, ಎರಡು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಮೊಸರು ಹಾಕಿ ಚೆನ್ನಾಗಿ ಕಲಕಿ.ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಕಪ್ಪುಬಣ್ಣಕ್ಕೆ ಕಾರಣವಾದ ವರ್ಣದ್ರವ್ಯಗಳನ್ನು ತಿಳಿಗೊಳಿಸುವ ಗುಣ ಹೊಂದಿರುವ ಕಾರಣ ಮುಖದ ಮೇಲಿರುವ ಮೊಡವೆ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನದಲ್ಲೊಂದು ಬಾರಿ, ರಾತ್ರಿ ಮಲಗುವ ಮುನ್ನ ಪಾಲಿಸಿ. ಸುಮಾರು ನಾಲ್ಕರಿಂದ ಆರು ವಾರಗಳಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎನ್ನುವುದು ಭಾರತೀಯರಿಗೆ ತುಂಬಾ ಪೂಜ್ಯನೀಯ ಮತ್ತು ಇದು ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುವುದು. ತುಳಸಿಯು ಮೊಡವೆಗಳ ಕಲೆಗಳನ್ನು ನಿವಾರಿಸುವಲ್ಲಿ ಅಗ್ರಗಣ್ಯವೆನಿಸಿದೆ. ತುಳಸಿ ಎಲೆಗಳು ಮತ್ತು ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಭಾದಿತ ಜಾಗಕ್ಕೆ ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರರಿಂದ ನಾಲ್ಕು ಸಲ ಇದನ್ನು ಹಚ್ಚಿಕೊಂಡರೆ ಸಮಸ್ಯೆ ನಿವಾರಣೆಯಾಗುವುದು.

ಕಡಲೆ ಹಿಟ್ಟು ಮತ್ತು ರೋಸ್ ವಾಟರ್
 

ಕಡಲೆ ಹಿಟ್ಟು ಮತ್ತು ರೋಸ್ ವಾಟರ್

ರೋಸ್ ವಾಟರ್ ಜತೆಗೆ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿಕೊಂಡು ಪ್ರತಿದಿನ ಮುಖಕ್ಕೆ ಹಚ್ಚಿಕೊಂಡರೆ ಮೊಡವೆಯ ಕಲೆಗಳನ್ನು ನಿವಾರಣೆ ಮಾಡಿ ಮುಖವನ್ನು ಸ್ವಾಭಾವಿಕವಾಗಿ ಸುಂದರವಾಗಿಸುವುದು.

ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಬಿಸಿಲಿನಲ್ಲಿ ಒಣಗಿಸಿದ ಕಿತ್ತಳೆ ಸಿಪ್ಪೆಯನ್ನು ಹುಡಿ ಮಾಡಿಕೊಂಡು ಅದನ್ನು ಹಾಲಿನಲ್ಲಿ ಹಾಕಿಕೊಂಡು ಫೇಸ್ ಪ್ಯಾಕ್ ಮಾಡಿಕೊಂಡು ಬಳಸಬೇಕು. ರೆಟಿನಾಲ್ ನಿಂದ ಸಮೃದ್ಧವಾಗಿರುವಂತಹ ಪ್ರಸಕ್ತ ಚರ್ಮವನ್ನು ಒಣಗಿಸಿ ಹೊಸ ಚರ್ಮವನ್ನು ತರುತ್ತದೆ. ಇದರಿಂದ ಮೊಡವೆ ಕಲೆಗಳು ದೂರವಾಗುತ್ತದೆ. ಸ್ವಚ್ಛವಾಗಿರುವಂತಹ ಚರ್ಮವನ್ನು ಪಡೆಯಲು ಇದು ತುಂಬಾ ಸರಳ ಮತ್ತು ಅದ್ಭುತವಾಗಿರುವ ವಿಧಾನವಾಗಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದನ್ನು ಹುಡಿ ಮಾಡಿಕೊಂಡು ಡಬ್ಬದಲ್ಲಿ ಹಾಕಿಟ್ಟು ಮುಚ್ಚಳ ಮುಚ್ಚಿಟ್ಟರೆ ದೀರ್ಘ ಸಮಯದ ತನಕ ಬಳಸಬಹುದು. ಟೊಮೆಟೋ ಜ್ಯೂಸ್, ಬಟಾಟೆ ಸಿಪ್ಪೆ ಮತ್ತು ಅಲೋವೆರಾದ ಜ್ಯೂಸ್ ನ್ನು ಬಳಸಬಹುದು.

ಒಂದೇ ವಾರದಲ್ಲಿ ಮುಖದಲ್ಲಿನ ಮೊಡವೆಗಳು ಮಂಗಮಾಯ!

ಗಂಧ(ಚಂದನ)

ಗಂಧ(ಚಂದನ)

ಚಂದನಕ್ಕೆ ರೋಸ್ ವಾಟರ್ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಮೊಡವೆಗಳ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದ ಬಳಿಕ ನೀರಿನಿಂದ ತೊಳೆಯಿರಿ. ಪ್ರತೀ ದಿನ ಇದನ್ನು ಬಳಸಿದರೆ ಕಾಂತಿಯುತ ತ್ವಚೆಯನ್ನು ಪಡೆಯಬಹುದು.

English summary

Natural Home Remedies to Get Rid of Acne Scars Fast

Acne is a common problem among men and women who are in their teens or until they are thirty. The harmonal variation in the body leads to pimples, boils, etc. To keep away acne is possible if the right diet is had and the skin is taken a little more care. For the existing acne, the best way to keep away the scars and marks is not touch or squeeze them.
Story first published: Saturday, May 20, 2017, 9:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more