30 ರ ಹರೆಯದಲ್ಲಿ 20 ರ ತರುಣಿಯಂತೆ ಕಾಣುವುದು ಹೇಗೆ?

By: Jaya subramanya
Subscribe to Boldsky

ನೀವು ಮೂವತ್ತರ ಹರೆಯವನ್ನು ಸಮೀಪಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ತ್ವಚೆಗೆ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ. ತ್ವಚೆಯ ಹೆಚ್ಚಿನ ಸಮಸ್ಯೆಗಳು ಈ ವಯಸ್ಸಿನಲ್ಲಿಯೇ ಆರಂಭವಾಗುವುದರಿಂದ ತ್ವಚೆಗೆ ಹೆಚ್ಚಿನ ಮುತುವರ್ಜಿಯನ್ನು ನೀವು ವಹಿಸಬೇಕಾಗುತ್ತದೆ. ಅದಾಗ್ಯೂ ಕೆಲವು ಹೆಂಗಳೆಯರು ಮೂವತ್ತರ ಹರೆಯದಲ್ಲಿ ಕೂಡ ನಳನಳಿಸುವ ತ್ವಚೆಯನ್ನು ಹೊಂದಿರುತ್ತಾರೆ. ನೀವು ಮೂವತ್ತರ ಹರೆಯವನ್ನು ಸಮೀಪಿಸುತ್ತಿದ್ದೀರಿ ಎಂದಾದಲ್ಲಿ ಗಾಬರಿ ಪಡಬೇಕಾದ ಅಗತ್ಯವೇ ಇಲ್ಲ. 

ಅಂದ ಹೆಚ್ಚಿಸಲು ಆರ್ಯುವೇದದಲ್ಲಿದೆ ಸಪ್ತ ಮಾರ್ಗ

ಕೆಲವೊಂದು ಸೌಂದರ್ಯ ಸಲಹೆಗಳನ್ನು ನೀವು ಅನುಸರಿಸಿದರೆ ಸಾಕು ನಿಮ್ಮ ಸೌಂದರ್ಯವನ್ನು ಇನ್ನೂ ನಳನಳಿಸುವಂತೆ ನೀವು ಇರಿಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಸಲಹೆಗಳು ನಿಮ್ಮ ಸೌಂದರ್ಯವನ್ನು ವೃದ್ಧಿಗೊಳಿಸಿ ಮೂವತ್ತರ ಹರೆಯದಲ್ಲೂ ಇಪ್ಪತ್ತರ ಯವ್ವೌನವನ್ನು ನಿಮಗೆ ನೀಡುತ್ತದೆ. ನೀವು ಮೂವತ್ತು ವಯಸ್ಸಿನವರು ಎಂದು ನೀವಾಗಿ ಹೇಳಿದರೂ ಅವರು ನಂಬಲಾರರು. ಹಾಗಿದ್ದರೆ ಈ ಸೌಂದರ್ಯ ಗುಟ್ಟನ್ನು ನೀವು ಅರಿತುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ. ಅದಕ್ಕೂ ಮುಂಚೆ ನೀವು ಬೆಳಗ್ಗಿನ ಹೊತ್ತಿನಲ್ಲೇ ಕೆಲವೊಂದು ಸೌಂದರ್ಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ...

Skin Rituals To Follow In 30s

ಮೊದಲು ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ

ನೀವು ಮೂವತ್ತರ ಹರೆಯವನ್ನು ತಲುಪುತ್ತಿದ್ದೀರಿ ಎಂದಾದಲ್ಲಿ ನಿಮ್ಮ ತ್ವಚೆಗೆ ಹೆಚ್ಚಿನ ಕಾಳಜಿಯನ್ನು ನೀಡಲು ಆರಂಭಿಸಿ. ನೀವು ಮುಂಜಾನೆ ಎದ್ದು ಮುಖವನ್ನು ತೊಳೆದುಕೊಳ್ಳಬೇಕಾಗುತ್ತದೆ. ಮುಖವನ್ನು ತೊಳೆಯಲು ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಿ. ನಿಮ್ಮ ಮುಖಕ್ಕೆ ಇದರಿಂದ ತಾಜಾತನ ದೊರೆಯುತ್ತದೆ.

ಸನ್‌ಸ್ಕ್ರೀನ್ ಬಳಸಿ

ನೀವು ಹೊಗರಡೆ ಹೋಗುತ್ತಿದ್ದೀರಿ ಎಂದಾದಲ್ಲಿ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದನ್ನು ಮರೆಯದಿರಿ. ನೀವು ಮೇಕಪ್ ಮಾಡಿಕೊಳ್ಳುವುದಕ್ಕಿಂತ ಮುಂಚೆಯೇ ಸನ್ ಸ್ಕ್ರೀನ್ ಅನ್ನು ಬಳಸಿ. ನಿಮ್ಮ ತ್ವಚೆಗೆ ಅನುಗುಣವಾಗಿರುವ ಸನ್‌ಸ್ಕ್ರೀನ್ ಅನ್ನು ಬಳಸಿ.

Skin Rituals To Follow In 30s

ಸೇರಮ್‌ನೊಂದಿಗೆ ಆಂಪಲ್ ಬಳಕೆ ಮಾಡಿ ತ್ವಚೆಯ ಆರೈಕೆ ಮಾಡಿ

30 ರ ಹರೆಯದಲ್ಲಿ ಆಂಪಲ್‌ಗಳನ್ನು ನಿತ್ಯವೂ ನಿಮ್ಮ ತ್ವಚೆಗೆ ಮಾಡಿ. ಇದರ ಜೊತೆಗೆ ಸೇರಮ್ ಅನ್ನು ಮಿಶ್ರ ಮಾಡಿಕೊಂಡು ಇದನ್ನು ತ್ವಚೆಗೆ ಹಚ್ಚಿಕೊಳ್ಳಿ. ಇದು ಬೇರೆ ಬ್ರಾಂಡ್‌ಗಳಲ್ಲಿ ಲಭ್ಯವಿದೆ.

ನಿಮ್ಮ ಮುಖವನ್ನು ಕ್ಲೆನ್ಸ್ ಮಾಡಿಕೊಳ್ಳಿ

ರಾತ್ರಿ ಸಮಯದಲ್ಲಿ ನಿಮ್ಮ ಮುಖವನ್ನು ಕ್ಲೆನ್ಸ್ ಮಾಡಿಕೊಳ್ಳಿ. ಇದರಿಂದ ನೀವು ತಾಜಾ ಆಗಿರುತ್ತೀರಿ. ಎಕ್ಸ್‌ಫೋಲಿಯೇನ್ ಮರೆಯಬೇಡಿ ನಿಮ್ಮ 30 ರ ಹರೆಯದಲ್ಲಿ ಎಕ್ಸ್‌ಫೋಲಿಯೇಶನ್ ಮಾಡುವುದನ್ನು ಮರೆಯದಿರಿ. ನಿಮ್ಮ ಮುಖವನ್ನು ಸ್ಕ್ರಬ್ ಮಾಡಿಕೊಳ್ಳಿ ಅದೂ ವಾರಕ್ಕೆ ಮೂರು ಬಾರಿ ಈ ಕ್ರಿಯೆಯನ್ನು ನಡೆಸಿ.

Skin Rituals To Follow In 30s

ಕಣ್ಣಿನ ಕ್ರೀಮ್ ಬಳಸಿ

ನೀವು ನಿದ್ರಿಸುವ ಮುನ್ನ ಕಣ್ಣಿನ ಕ್ರೀಮ್ ಅನ್ನು ನೀವು ಬಳಸಲೇಬೇಕು. ಇದರಿಂದ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಉಂಟಾಗುವುದನ್ನು ನಿಮಗೆ ತಡೆಯಬಹುದಾಗಿದೆ.

ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

English summary

Morning & Night-time Skin Rituals To Follow In 30s

After 30s, the skin all of a sudden starts showing changes. Not that you have to visit a dermat on your 30th birthday but gradually little efforts should be taken every day and extra time should be spent on skin in order to keep it looking flawless and ageless. If the right skin care initiatives are taken at the right time, then the growing age is less visible on the skin.
Subscribe Newsletter