ಸುಕ್ಕುಗಟ್ಟಿದ ತ್ವಚೆಯ ಸಂರಕ್ಷಣೆ ಮಾಡಲು ನೈಸರ್ಗಿಕ ಪರಿಹಾರಗಳು

Posted By: Jaya subramanya
Subscribe to Boldsky

ವಯಸ್ಸು ಯಾರನ್ನೂ ಕಾಯುವುದಿಲ್ಲ ಎಂಬ ಮಾತಿನಂತೆ ಕಾಲಚಕ್ರ ಉರುಳಿದಂತೆ ನಾವು ಹದಿಹರೆಯವನ್ನು ಕಳೆದು ಜವಬ್ದಾರಿಯುತ ವಯಸ್ಸಿಗೆ ಬಂದುಬಿಡುತ್ತೇವೆ. ಮೂವತ್ತರ ಹರೆಯದಲ್ಲಿ ನಮ್ಮ ಬಾಲಿಶ ವರ್ತನೆಗಳು ಮರೆಯಾಗಿ ಸಂಸಾರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಬಿಡುತ್ತೇವೆ. ನಿಮ್ಮ ದೇಹವು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ ಅಂತೆಯೇ ನಿಮ್ಮ ಸೌಂದರ್ಯದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ನೀವು ಕಂಡುಕೊಳ್ಳುತ್ತೀರಿ.

ನೀವು ಸೂಕ್ತವಾದ ಆಹಾರ ಮತ್ತು ದೇಹಕ್ಕೆ ಸಾಕಷ್ಟು ದಂಡನೆಯನ್ನು ನೀಡುತ್ತಿಲ್ಲ ಎಂದಾದಲ್ಲಿ ದೇಹವು ನಿಮ್ಮ ಮಾತನ್ನು ಕೇಳುವುದಿಲ್ಲ. ಬೊಜ್ಜು ಉಂಟಾಗಿ ದೇಹದ ಆಕಾರ ವಿಸ್ತಾರಗೊಳ್ಳಬಹುದು ಅಂತೆಯೇ ಇದರಿಂದಾಗಿ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆಗಳನ್ನು ನೀವು ಅನುಭವಿಸುವುದು ಖಂಡಿತ. ಆದ್ದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಆಹಾರ ಮತ್ತು ವ್ಯಾಯಮವನ್ನು ನೀಡಬೇಕು. ಮುಖದಲ್ಲಿ ಸುಕ್ಕುಗಳು ಆರಂಭವಾಗುವ ಕಾಲ ಇದಾಗಿರುವುದರಿಂದ ಇದಕ್ಕಾಗಿ ನೀವು ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ದೀರ್ಘಕಾಲದವರೆಗೆ ಹದಿಹರೆಯದ ತ್ವಚೆಯನ್ನು ನೀವು ಪಡೆದುಕೊಳ್ಳಬೇಕು ಎಂದಾದಲ್ಲಿ ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಲೇಬೇಕಾಗುತ್ತದೆ. ಬನ್ನಿ ಆ ಉತ್ಪನ್ನಗಳೇನು ಎಂಬುದನ್ನು ಮುಂದೆ ಓದಿ...

coffee powder

ಕಾಫಿ ಬೀಜ

ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮ ತ್ವಚೆಯನ್ನು ಬಿಗಿಗೊಳಿಸುತ್ತವೆ. ಇದು ತ್ವಚೆಯಲ್ಲಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ ಮತ್ತು ಮುಕ್ತ ರಾಡಿಕಲ್‌ಗಳಿಂದ ತ್ವಚೆಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.

ಬಳಸುವ ವಿಧಾನ:

ವಾರಕ್ಕೊಮ್ಮೆ 1/2 ಚಮಚ ಕಾಫಿ ಹುಡಿಯನ್ನು 1 ಚಮಚ ಲಿಂಬೆ ರಸದೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ನಿಮ್ಮ ತ್ವಚೆಯ ಮೇಲೆ ಇದನ್ನು ಹಾಕಿ. 5-10 ನಿಮಿಷಗಳ ನಂತರ ಇದನ್ನು ತೊಳೆದುಕೊಳ್ಳಿ.

ಪ್ರಿಮೋರ್ಸ್ ಆಯಿಲ್

ಸುಕ್ಕುಗಟ್ಟಿದ ತ್ವಚೆಯ ಸಂರಕ್ಷಣೆ ಮಾಡಲು ಇದು ಅತ್ಯುತ್ತಮವಾಗಿದೆ. ಇದು ಮಾಯಿಶ್ಚರೈಸರ್‌ನಂತೆ ಕಾರ್ಯನಿರ್ವಹಿಸಿ ನಿಮ್ಮ ತ್ವಚೆಯನ್ನು ಬಿಗಿಗೊಳಿಸುತ್ತದೆ.

ಬಳಸುವ ವಿಧಾನ:

ಪ್ರಿಮೊರ್ಸ್ ಆಯಿಲ್ ಅನ್ನು 1 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿ. ನಿಮ್ಮ ತ್ವಚೆ ಮತ್ತು ದೇಹದ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಇದನ್ನು ಬಳಸಿ ನೋಡಿ.

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗವನ್ನು ನಿಮ್ಮ ಸುಕ್ಕುಗಟ್ಟಿದ ತ್ವಚೆಯನ್ನು ನಿವಾರಿಸಲು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಪ್ರೊಟೀನ್ ಮತ್ತು ಉತ್ಕರ್ಷಣ ನಿರೋಧಿ ಅಂಶಗಳಿದ್ದು ಇದು ತ್ವಚೆಯನ್ನು ಸುಕ್ಕುಗಟ್ಟುವುದರಿಂದ ಸಂರಕ್ಷಿಸುತ್ತದೆ.

ಬಳಸುವ ವಿಧಾನ:

ಮೊಟ್ಟೆಯ ಬಿಳಿ ಭಾಗವನ್ನು ಬೇರ್ಪಡಿಸಿಕೊಳ್ಳಿ ಮತ್ತು ಒದ್ದೆ ತ್ವಚೆಯ ಮೇಲೆ ಇದನ್ನು ಹಚ್ಚಿಕೊಳ್ಳಿ. 15 ನಿಮಿಷ ಹಾಗೆಯೇ ಬಿಡಿ, ನಂತರ ಅದನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಿರಿ.

coconut oil

ತೆಂಗಿನೆಣ್ಣೆ

ನಿಮ್ಮ ತ್ವಚೆಯನ್ನು ಸಂರಕ್ಷಿಸಲು ತೆಂಗಿನೆಣ್ಣೆ ಅತ್ಯುತ್ತಮವಾಗಿದೆ. ಇದು ತ್ವಚೆಯಲ್ಲಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ ಮತ್ತು ಸುಕ್ಕುಗಟ್ಟುವಿಕೆಯಿಂದ ತ್ವಚೆಯನ್ನು ಕಾಪಾಡುತ್ತದೆ.

ಬಳಸುವ ವಿಧಾನ

ಸ್ವಲ್ಪ ತೆಂಗಿನೆಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 3-4 ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಿ.

ಮಣ್ಣು

ಮಣ್ಣಿನಲ್ಲಿ ಕೂಡ ಉತ್ತಮ ಉತ್ಕರ್ಷಣ ನಿರೋಧಿ ಅಂಶಗಳಿದ್ದು ನಿಮ್ಮ ಮುಖದಿಂದ ಬೇಡದ ಅಂಶಗಳನ್ನು ನಿವಾರಿಸಿ ತ್ವಚೆ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ:

1/2 ಚಮಚ ಮಣ್ಣಿಗೆ 2 ಚಮಚ ಅಲೊವೇರಾ ಜೆಲ್ ಅನ್ನು ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖದಲ್ಲಿ ಈ ಮಿಶ್ರಣವನ್ನು 10 ನಿಮಿಷ ಹಾಗೆಯೇ ಇರಿಸಿಕೊಳ್ಳಿ. ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ.

ಮುಲ್ತಾನಿ ಮಿಟ್ಟಿ

ಹಿಂದಿನಿಂದಲೂ ತ್ವಚೆಯ ಹಲವಾರು ಸಮಸ್ಯೆಗಳಿಗೆ ಮುಲ್ತಾನಿ ಮಿಟ್ಟಿ ಅತ್ಯುತ್ತಮವಾಗಿದೆ. ಇದು ತ್ವಚೆಯ ಕೋಶಗಳನ್ನು ಬಿಗಿಗೊಳಿಸುತ್ತದೆ ಮತ್ತು ಕೊಲೆಜನ್ ಅನ್ನು ವೃದ್ಧಿಗೊಳಿಸುತ್ತದೆ ಹಾಗೂ ನಿಮ್ಮ ತ್ವಚೆಯ ಸಂಪೂರ್ಣ ಸ್ಥಿತಿಸ್ಥಾಒಕತ್ವವನ್ನು ಉತ್ತಮಗೊಳಿಸುತ್ತದೆ.

multhani

ಬಳಸುವ ವಿಧಾನ:

1/2 ಚಮಚ ಮುಲ್ತಾನಿ ಮಿಟ್ಟಿಯನ್ನು 1 ಚಮಚ ಲಿಂಬೆ ರಸದೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ಪ್ರಕ್ರಿಯೆಯನ್ನು ಮಾಡಿ ನೋಡಿ.

ವಿಟಮಿನ್ ಇ ಆಯಿಲ್

ಮುಖವನ್ನು ಬಿಗಿಗೊಳಿಸುವ ನೈಸರ್ಗಿಕ ಆಯಿಲ್ ಅನ್ನು ಈ ಟ್ಯಾಬ್ಲೆಟ್ ಹೊಂದಿದೆ.

ಬಳಸುವ ವಿಧಾನ:

ರಾತ್ರಿ ಮಲಗುವುದಕ್ಕೆ ಮುಂಚೆ ಈ ಎಣ್ಣೆಯನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ರಾತ್ರಿಪೂರ್ತಿ ಹಾಗೆಯೇ ಬಿಡಿ. ಬೆಳಗ್ಗೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಇದರಿಂದ ಉತ್ತಮ ಫಲಿತಾಂಶವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ವಾರದಲ್ಲಿ 3-4 ಬಾರಿ ಇದನ್ನು ಪ್ರಯೋಗಿಸಿ.

papaya

ಪಪ್ಪಾಯ

ನಿಮ್ಮ ಸುಕ್ಕುಗಟ್ಟಿದ ತ್ವಚೆಯನ್ನು ಉತ್ತಮಗೊಳಿಸುವ ಪಪ್ಪಾಯ ಅತ್ಯುತ್ತಮವಾಗಿದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮ ತ್ವಚೆಯನ್ನು ಬಿಗಿಗೊಳಿಸುತ್ತದೆ ಮತ್ತು ಮಂಕಾಗಿ ಕಾಣುವುದರಿಂದ ಸಂರಕ್ಷಿಸುತ್ತದೆ.

ಬಳಸುವ ವಿಧಾನ:

1 ಚಮಚ ಪಪ್ಪಾಯವನ್ನು 1/2 ಚಮಚ ಅಕ್ಕಿಹುಡಿಯೊಂದಿಗೆ ಬೆರೆಸಿ. ನಿಮ್ಮ ಸಂಪೂರ್ಣ ತ್ವಚೆಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ 10 ನಿಮಿಷಗಳ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಈ ಮನೆಮದ್ದನ್ನು ಬಳಸಿ ನೋಡಿ.

English summary

Miraculous Home Remedies You Can Use To Get A Firm Facial Skin

Home remedies have stood the test of time and have proven to be incredibly beneficial in making the facial skin firm and younger looking. Here, we've compiled a list of such remedies that can tighten your facial skin in an effective manner. Take a look at them: