ಬ್ಯೂಟಿ ಟಿಪ್ಸ್: ಹಣ್ಣು ಪ್ರಿಯರಿಗೆ 'ಹಣ್ಣುಗಳ ಫೇಸ್ ಪ್ಯಾಕ್'

By: Hemanth
Subscribe to Boldsky

ಮಳೆಗಾಲ ಬಂತೆಂದರೆ ರೈತರಿಗೆ ಖುಷಿ, ನಗರದಲ್ಲಿ ಇರುವವರಿಗೆ ಇದೇನೋ ಒಂದು ರೀತಿಯ ಕಿರಿಕಿರಿ. ಅದೇ ಮಳೆಗಾಲದಲ್ಲಿ ನೀರು ಮತ್ತು ವಾತಾವರಣ ಒಂದೇ ರೀತಿಯಾಗಿರದ ಕಾರಣ ಹಲವಾರು ರೀತಿಯ ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಪ್ರಮುಖವಾಗಿ ಮುಖದ ಮೇಲೆ ಮೂಡುವಂತಹ ಮೊಡವೆ, ಬೊಕ್ಕೆ ಇತ್ಯಾದಿಗಳು ಚರ್ಮದ ಸಮಸ್ಯೆ ಉಂಟು ಮಾಡುವುದು.

ಮುಖದ ಸೌಂದರ್ಯ ಹೆಚ್ಚಿಸಲು-ತಾಜಾ 'ಹಣ್ಣುಗಳ ಫೇಸ್' ಪ್ಯಾಕ್!

ಇಂತಹ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್‌ಗಳು ಲಭ್ಯವಿದ್ದರೂ ಇದರಿಂದ ಯಾವುದೇ ಪ್ರಯೋಜನವಾಗದೆ ಇರುವಾಗ ಮಳೆಗಾಲದಲ್ಲಿ ಸಿಗುವಂತಹ ಕೆಲವೊಂದು ಹಣ್ಣುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಇದು ತುಂಬಾ ಪರಿಣಾಮಕಾರಿಯಾಗಿ ಮೊಡವೆ ಹಾಗೂ ಇತರ ಸಮಸ್ಯೆ ನಿವಾರಿಸುವುದು. ಮಳೆಗಾಲದಲ್ಲಿ ಹಣ್ಣುಗಳ ಫೇಸ್ ಪ್ಯಾಕ್ ಮಾಡಿಕೊಳ್ಳಲು ಹಣ್ಣುಗಳ ಜತೆಗೆ ಇತರ ಕೆಲವೊಂದು ಸಾಮಗ್ರಿಗಳನ್ನು ಹಾಕಿಕೊಳ್ಳಬೇಕು. ಇದರಿಂದ ತ್ವಚೆಯ ಸಮಸ್ಯೆ ನಿವಾರಣೆಯಾಗಿ ಕಾಂತಿಯುತ ತ್ವಚೆ ನಿಮ್ಮದಾಗುವುದು...

ಜಾಮೂನು

ಜಾಮೂನು

ಜಾಮೂನು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದೇ ಜಾಮೂನನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಿಕೊಳ್ಳಬಹುದು. ಜಾಮೂನು ಬಳಸಿಕೊಂಡು ಮಾಡುವಂತಹ ಫೇಸ್ ಪ್ಯಾಕ್ ಎಲ್ಲಾ ವಿಧದ ಚರ್ಮಗಳಿಗೆ ಒಳ್ಳೆಯ ಬಣ್ಣ ನೀಡುವುದು. ಮೊಡವೆ ಹಾಗೂ ಬೊಕ್ಕೆಗಳ ಸಮಸ್ಯೆ ಇರುವಂತಹ ಚರ್ಮಕ್ಕೆ ಕೂಡ ಜಾಮೂನು ತುಂಬಾ ಒಳ್ಳೆಯದು. ಎಣ್ಣೆಯಂಶವಿರುವ ಚರ್ಮ ಹೊಂದಿರುವವರಿಗೆ ಜಾಮೂನು ಫೇಸ್ ಪ್ಯಾಕ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ವಿಧಾನ

ವಿಧಾನ

ಬೇಕಾಗುವ ಸಾಮಗ್ರಿಗಳು

*10 ಜಾಮೂನು

*ಒಂದು ಚಮಚ ಬಾರ್ಲಿ ಹುಡಿ

*3 ಚಮಚ ನೆಲ್ಲಿಕಾಯಿ ರಸ

*1 ಚಮಚ ರೋಸ್ ವಾಟರ್

ಜಾಮೂನನ್ನು ಹಿಸುಕಿಕೊಂಡು ದಪ್ಪಗಿನ ಪೇಸ್ಟ್ ಆಗಿ ಮಾಡಿ ಮತ್ತು ಒಂದು ಸಣ್ಣ ಪಾತ್ರೆಗೆ ಹಾಕಿಡಿ. ಇದಕ್ಕೆ ಬಾರ್ಲಿ ಹುಡಿ, ನೆಲ್ಲಿಕಾಯಿ ರಸ ಮತ್ತು ರೋಸ್ ವಾಟರ್ ಹಾಕಿಕೊಳ್ಳಿ.

ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ತುಂಬಾ ನೀರಿನಂತೆ ಇರುವ ಕಾರಣದಿಂದ ಒಂದು ಟವೆಲ್ ಹಿಡಿದುಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

ಜಾಮೂನು ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು.

30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ದಾಳಿಂಬೆ

ದಾಳಿಂಬೆ

ಹಾನಿಗೊಳಗಾಗಿರುವ ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ವಯಸ್ಸಾಗುವ ಲಕ್ಷಣ, ಮೊಡವೆ, ಬೊಕ್ಕೆ ಹಾಗೂ ಇತರ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಇದು ನಿವಾರಣೆ ಮಾಡುವುದು. ದಾಳಿಂಬೆ ಜತೆಗೆ ಕೋಕಾ ಹುಡಿ ಹಾಕಿಕೊಂಡು ಫೇಸ್ ಪ್ಯಾಕ್ ಮಾಡಿದರೆ ಅದರಿಂದ ಮೊಡವೆ ನಿವಾರಣೆ ಆಗುವುದು ಮಾತ್ರವಲ್ಲದೆ ಚರ್ಮಕ್ಕೆ ಕಾಂತಿ ಸಿಗುವುದು.

'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!

ವಿಧಾನ

ವಿಧಾನ

ಬೇಕಾಗುವ ಸಾಮಗ್ರಿಗಳು

*½ ದಾಳಿಂಬೆಯ ಪೇಸ್ಟ್

*2 ಚಮಚ ಕೋಕಾ ಹುಡಿ

ದಾಳಿಂಬೆಯ ಪೇಸ್ಟ್ ಗೆ ಎರಡು ಚಮಚ ಕೋಕಾ ಹುಡಿ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿದರೆ ಮಳೆಗಾಲದ ಫೇಸ್ ಪ್ಯಾಕ್ ತಯಾರಾಗುವುದು. ದಾಳಿಂಬೆ ಫೇಸ್ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸುಮಾರು 20-25 ನಿಮಿಷ ಕಾಲ ಇದು ಹಾಗೆ ಇರಲಿ.

ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಪೇರಳೆ ಅಥವಾ ಸೀಬೆ ಹಣ್ಣು

ಪೇರಳೆ ಅಥವಾ ಸೀಬೆ ಹಣ್ಣು

ದಿನಕ್ಕೊಂದು ಪೇರಳೆ ತಿಂದರೆ ವಯಸ್ಸಾಗುವ ಬೀಳುವ ನೆರಿಗೆಯಿಂದ ದೂರವಿರಬಹುದು ಎನ್ನುವ ಮಾತಿದೆ. ಪೇರಳೆಯನ್ನು ಮಳೆಗಾಲದಲ್ಲಿ ಬಳಸಿಕೊಳ್ಳಬೇಕು. ಚರ್ಮದಲ್ಲಿ ನೆರಿಗೆ ಹಾಗೂ ಚರ್ಮ ಜೋತು ಬೀಳುವ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಪೇರಳೆಯು ಚರ್ಮಕ್ಕೆ ಸ್ಥಿತಿಸ್ಥಾಪಕತ್ವ ಒದಗಿಸಿಕೊಡುವುದು. ಇದರಿಂದ ಚರ್ಮವು ಬಿಗಿಯಾಗುವುದು.

ವಿಧಾನ

ವಿಧಾನ

ಬೇಕಾಗುವ ಸಾಮಗ್ರಿಗಳು

*½ ಪೇರಳೆ ಹಣ್ಣು

*ಒಂದು ಸಣ್ಣ ಬಾಳೆಹಣ್ಣು

*2 ಚಮಚ ಜೇನುತುಪ್ಪ

*ಮೊದಲು ಪೇರಳೆಯ ಪೇಸ್ಟ್ ಮಾಡಿಕೊಳ್ಳಬೇಕು. ಬಳಿಕ ಬಾಳೆಹಣ್ಣನ್ನು ಹಿಚುಕಿಕೊಳ್ಳಬೇಕು. ಪೇರಳೆ ಹಣ್ಣಿನ ಪೇಸ್ಟ್ ಮತ್ತು ಬಾಳೆಹಣ್ಣನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಿ.

*ಈ ಪೇಸ್ಟ್ ಗೆ ಜೇನುತುಪ್ಪ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆ ಬಿಟ್ಟರೆ ಫೇಸ್ ಪ್ಯಾಕ್ ಸರಿಯಾಗಿ ಒಣಗುವುದು. ಇದನ್ನು ನೀರು ಹಾಕಿ ತೊಳೆಯಿರಿ.

ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

English summary

Miraculous Fruit-based Face Packs For The Monsoon Season

Skin problems jump to their peak during the monsoon season. Pimples, acnes, rashes, etc., pop up all over the body because of the rain water and harsh weather conditions. Getting immediate remedies for the skin is also troublesome during the monsoon because the rains do not allow you to go out. What's the remedy?
Subscribe Newsletter