ಮುಖವನ್ನು ತ್ವರಿತವಾಗಿ ಬೆಳ್ಳಗಾಗಿಸುವ ನೈಸರ್ಗಿಕ ಫೇಸ್ ಪ್ಯಾಕ್‌ಗಳು

By: Hemanth
Subscribe to Boldsky

ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಭಾಗಕ್ಕೂ ಹೋದರೂ ಅಲ್ಲಿ ಯಾವುದಾದರೂ ಕಾಮಗಾರಿ ಕೆಲಸ ನಡೆಯುತ್ತಾ ಇರುವುದು ನಿಮಗೆ ಕಾಣಿಸುವುದು. ಇಂತಹ ಸಮಯದಲ್ಲಿ ರಸ್ತೆಯಲ್ಲಿ ಹೋಗುವಾಗ ನಮ್ಮ ಮೇಲೆ ಧೂಳು ಹಾಗೂ ಇತರ ಕಲುಷಿತ ಅಂಟಿಕೊಳ್ಳುವುದು ಸಾಮಾನ್ಯ. ಧೂಳು ಹಾಗೂ ಕಲ್ಮಷದಿಂದಾಗಿ ಚರ್ಮವು ತುಂಬಾ ಕಳೆಗುಂದಿದಂತೆ ಆಗಿ ನಿಸ್ತೇಜವಾಗಬಹುದು. ಇಂತಹ ಚರ್ಮವನ್ನು ಯಾರೂ ಇಷ್ಟಪಡಲ್ಲ. ಕಾಂತಿಯುತ ಹಾಗೂ ಸುಂದರ ಚರ್ಮವು ಪ್ರತಿಯೊಬ್ಬರ ಬಯಕೆಯಾಗಿದೆ. ತ್ವಚೆ ಬಿಳಿಯಾಗುವಂತಹ ಹಲವಾರು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸೌಂದರ್ಯ ಟಿಪ್ಸ್- ಒಮ್ಮೆ ಈ ನೈಸರ್ಗಿಕ ವಿಧಾನ ಪ್ರಯತ್ನಿಸಿ ನೋಡಿ

ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವಂತಹ ಇಂದಿನ ದಿನಗಳಲ್ಲಿ ತ್ವಚೆಯ ಆರೈಕೆ ಮಾಡಲು ಪ್ರತಿಯೊಬ್ಬರಿಗೂ ಸಮಯವಿರುವುದಿಲ್ಲ. ಇದರಿಂದ ಹಿಂದಿನಿಂದಲೂ ಹಿರಿಯರು ಅನುಸರಿಸಿಕೊಂಡು ಬಂದಿರುವ ಕೆಲವು ಫೇಸ್ ಮಾಸ್ಕ್‌ಗಳ ಬಗ್ಗೆ ನಮಗೆ ಅರಿವೇ ಇಲ್ಲ. ಇದರ ಬಗ್ಗೆ ತಿಳಿದಿದ್ದರೂ ಅದನ್ನು ಮಾಡಿಕೊಳ್ಳುವಷ್ಟು ಸಮಯ ಹಾಗೂ ತಾಳ್ಮೆ ಇರಲ್ಲ.

ನೈಸರ್ಗಿಕ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!

ಇಂತಹ ಸಮಯದಲ್ಲಿ ಹೆಚ್ಚಿನ ಸಮಯ ವ್ಯರ್ಥ ಮಾಡದೆ ತಯಾರಿಸಬಹುದಾದ ಕೆಲವು ಫೇಸ್ ಮಾಸ್ಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಈ ಫೇಸ್ ಮಾಸ್ಕ್‌ಗಳು ಚರ್ಮದ ರಂಧ್ರಗಳನ್ನು ಶುದ್ಧೀಕರಿಸಿ ಚರ್ಮವನ್ನು ಬಿಳಿಯಾಗಿಸುವುದು. ಇದನ್ನು ಹೇಗೆ ತಯಾರಿಸುವುದು ಎಂದು ತಿಳಿಯಲು ಲೇಖನದತ್ತ ಒಂದು ನೋಟ ಬೀರಿ.....

ಲಿಂಬೆರಸ ಮತ್ತು ಹಾಲು

ಲಿಂಬೆರಸ ಮತ್ತು ಹಾಲು

ಲಿಂಬೆರಸಕ್ಕೆ ತಣ್ಣಗಿನ ಹಾಲನ್ನು ಮಿಶ್ರಣ ಮಾಡಿಕೊಳ್ಳಬೇಕು. ಇದು ದಪ್ಪಗಿದ್ದರೆ ಅದಕ್ಕೆ ನೀರು ಬೆರೆಸಿ. ನಿಸ್ತೇಜ ಚರ್ಮದ ಮೇಲೆ ಇದನ್ನು ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ಇದರ ಘಾಟು ತುಂಬಾ ಹೆಚ್ಚಾಗಿರುವ ಕಾರಣದಿಂದ ಲಿಂಬೆರಸ ಮತ್ತು ಹಾಲಿನ ಫೇಸ್ ಮಾಸ್ಕ್ ಅನ್ನು ಸ್ನಾನಕ್ಕೆ ಮೊದಲು ಹಚ್ಚಬೇಕು.

ಟೊಮೆಟೊ, ಮೊಸರು ಮತ್ತು ಓಟ್ ಮೀಲ್

ಟೊಮೆಟೊ, ಮೊಸರು ಮತ್ತು ಓಟ್ ಮೀಲ್

ಟೊಮೆಟೊ ತುಂಡು ಮಾಡಿ ಅದನ್ನು ರುಬ್ಬಿಕೊಂಡು ರಸ ತೆಗೆಯಿರಿ. ಇದಕ್ಕೆ ಹಗುರ ಮೊಸರನ್ನು ಮಾತ್ರ ಬಳಸಿಕೊಳ್ಳಿ.

ಟೊಮೆಟೋ ರಸ ಮತ್ತು ಮೊಸರನ್ನು ಮಿಶ್ರಣ ಮಾಡಿಕೊಳ್ಳಿ.

ಈ ಮಾಸ್ಕ್ ನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಳ್ಳಿ.

ಓಟ್ ಮೀಲ್ ಬಳಸಿಕೊಂಡು ಇದನ್ನು ಸ್ಕ್ರಬ್ ಆಗಿಯೂ ಬಳಸಬಹುದು.

ನಿಸ್ತೇಜ ಚರ್ಮದ ಮೇಲೆ ಇದನ್ನು ಸರಿಯಾಗಿ ಮಸಾಜ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಕಿತ್ತಳೆ ಸಿಪ್ಪೆ ಮತ್ತು ಮೊಸರು

ಮನೆಯಲ್ಲಿ ಕಿತ್ತಳೆ ಸಿಪ್ಪೆಯ ಹುಡಿ ಮಾಡುವುದು ತುಂಬಾ ದೀರ್ಘ ಪ್ರಕ್ರಿಯೆಯಾಗಿದೆ. ಇದರ ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಕಿತ್ತಳೆ ಹುಡಿ ಬಳಸಿಕೊಳ್ಳಿ.

ಹಗುರ ಮೊಸರಿನೊಂದಿಗೆ ಕಿತ್ತಳೆ ಹುಡಿ ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ಚರ್ಮಕ್ಕೆ ಮಸಾಜ್ ಮಾಡಿ.

ಮುಖದಲ್ಲಿ ಇದು ಒಣಗಿದ ಬಳಿಕ ತಣ್ಣೀರಿನಿಂದ ಇದನ್ನು ತೊಳೆಯಿರಿ.

ಕಡಲೆ ಹಿಟ್ಟು ಮತ್ತು ನೀರು

ಕಡಲೆ ಹಿಟ್ಟು ಮತ್ತು ನೀರು

ಒಂದು ಚಮಚ ಕಡಲೆಹಿಟ್ಟು ಮತ್ತು ಅರ್ಧ ಕಪ್ ನೀರನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಾಸ್ಕ್ ನ್ನು ಸ್ವಲ್ಪ ತೆಳು ಮಾಡಿಕೊಳ್ಳಿ.

ಕಡಲೆಹಿಟ್ಟಿನ ಮಿಶ್ರಣವನ್ನು ನಿಸ್ತೇಜ ಚರ್ಮದ ಮೇಲೆ ಹಚ್ಚಿಕೊಳ್ಳಿ. ಇದು ಒಣಗಲು ಬಿಡಿ ಬಳಿಕ ನೀರಿನಿಂದ ತೊಳೆಯಿರಿ.

ಕಡಲೆ ಹಿಟ್ಟಿನ ಫೇಸ್ ಮಾಸ್ಕ್ ಕೆಲವೇ ಸಮಯದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ನೀಡುವುದು.

ಜೇನುತುಪ್ಪ, ಲಿಂಬೆರಸ, ಹಾಲಿನ ಹುಡಿ ಮತ್ತು ಬಾದಾಮಿ ಎಣ್ಣೆ

ಜೇನುತುಪ್ಪ, ಲಿಂಬೆರಸ, ಹಾಲಿನ ಹುಡಿ ಮತ್ತು ಬಾದಾಮಿ ಎಣ್ಣೆ

ಬೇಕಾಗಿರುವ ಸಾಮಗ್ರಿಗಳ ಪಟ್ಟಿ ಸ್ವಲ್ಪ ದೊಡ್ಡದಾಗಿ ಕಾಣಿಸುವುದು. ಆದರೆ ಈ ಫೇಸ್ ಮಾಸ್ಕ್ ತಯಾರಿಸುವುದು ತುಂಬಾ ಸುಲಭ.

ಒಂದು ಚಮಚ ಹಸಿ ಜೇನುತುಪ್ಪ, ಲಿಂಬೆಯ ರಸ, ಒಂದು ಚಿಟಿಕೆ ಹಾಲಿನ ಹುಡಿ ಜತೆಯಾಗಿ ಬೆರೆಸಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಹಗುರ ಹಳದಿ ಬಣ್ಣದ ಮಿಶ್ರಣಕ್ಕೆ ಕೆಲವು ಹನಿ ಬಾದಾಮಿ ಎಣ್ಣೆ ಸೇರಿಸಿಕೊಳ್ಳಿ ಮತ್ತು ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ.

15 ನಿಮಿಷ ಬಿಟ್ಟು ಇದನ್ನು ತಣ್ಣೀರಿನಿಂದ ತೊಳೆಯಿರಿ.

English summary

kitchen-ingredients-for-skin-whitening

Exposure of the skin to dirt and dust makes it dull and doomed. No woman wants to carry such a skin and immediately hunts for skin-whitening mask recipes. Usually, skin-whitening mask recipes are elaborate and today's women do not really have so much time in hand. Considering the time factor as a primary concern, here are skin-whitening mask recipes that can be prepared at home with simple kitchen ingredients alone.
Subscribe Newsletter