ಮುಖದ ಸೌಂದರ್ಯ ಹೆಚ್ಚಿಸುವ ಶ್ರೀಗಂಧದ ಫೇಸ್ ಪ್ಯಾಕ್

By Divya Pandith
Subscribe to Boldsky

ತ್ವಚೆಯ ಆರೈಕೆಯಲ್ಲಿ ಶ್ರೀಗಂಧವು ಸಾಂಪ್ರದಾಯಿಕ ಪರಿಹಾರವನ್ನು ನೀಡುತ್ತದೆ. ಸಾಮಾನ್ಯವಾಗಿ ಕಾಡುವು ಕೆಲವು ಚರ್ಮ ಸಮಸ್ಯೆಗಳನ್ನು ಶ್ರೀಗಂಧ ಸರಳರೂಪದಲ್ಲಿ ಪರಿಹರಿಸುತ್ತದೆ. ಅಲ್ಲದೆ ಉತ್ತಮ ರೀತಿಯಲ್ಲಿ ಆರೋಗ್ಯವನ್ನು ಆರೈಕೆ ಮಾಡುತ್ತದೆ. ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುವ ಶ್ರೀಗಂಧವನ್ನು ಮುಖವಾಡವನ್ನಾಗಿ ಬಳಸಬಹುದು. ಇದರಿಂದ ಬಸವಳಿದ ನಿಮ್ಮ ತ್ವಚೆಯು ಬಹುಬೇಗ ಚೇತರಿಕೆಯನ್ನು ಕಂಡುಕೊಳ್ಳುವುದು.

ಶ್ರೀಗಂಧದೊಡನೆ ಇನ್ನಿತರ ನೈಸರ್ಗಿಕ ಉತ್ಪನ್ನಗಳ ಮಿಶ್ರರಣ ಮಾಡಿದರೆ ಇದರ ಶಕ್ತಿಯು ದ್ವಿಗುಣಗೊಳ್ಳುವುದು. ಧೂಳು, ಮಾಲಿನ್ಯ ಹಾಗೂ ಸೂರ್ಯನ ಕಿರಣಗಳಿಂದಾಗಿ ತ್ವಚೆಯ ಮೇಲೆ ಉಂಟಾಗುವ ಸಮಸ್ಯೆಗಳನ್ನು ಬಹುಬೇಗ ಶಮನಗೊಳಿಸುವುದು. ನಿಜ, ಚರ್ಮದ ವಿವಿಧ ಬಗೆಯ ಕಾಳಜಿಗಾಗಿ ಶ್ರೀಗಂಧದ ಪುಡಿಯನ್ನು ಹೇಗೆ ಬಳಸಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡುವುದು. ಉದಾ: ಮೊಡವೆ ತ್ವಚೆಯವರಿಗೆ ಯಾವ ಬಗೆಯ ಆರೈಕೆ ಮಾಡಬೇಕು? ಶುಷ್ಕ ತ್ವಚೆಯವರು ಯಾವ ಮಾರ್ಗ ಅನುಸರಿಸಬಹುದು? ಹೀಗೆ ಅನೇಕ ಬಗೆಯ ಮಾಹಿತಿಗಳು ನಿಮಗಾಗಿ ಇಲ್ಲಿವೆ...

ಎಣ್ಣೆ ತ್ವಚೆಯವರಿಗೆ

ಎಣ್ಣೆ ತ್ವಚೆಯವರಿಗೆ

ಏನೆಲ್ಲಾ ಸಾಮಗ್ರಿಗಳು ಬೇಕು?

1. 1/2 ಟೀ ಚಮಚ ಶ್ರೀಗಂಧದ ಪುಡಿ

2. 1/2 ಟೀ ಚಮಚ ಮುಲ್ತಾನಿ ಮಣ್ಣು

3. ಒಂದು ಚಮಚ ಗುಲಾಬಿ ನೀರು

ಬಳಸುವ ವಿಧಾನ

ಈ ಮೇಲೆ ಹೇಳಿರುವ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ, ಮಿಶ್ರಗೊಳಿಸಿ.

ನಂತರ ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ.

10 ನಿಮಿಷಗಳ ಕಾಲ ಆರಲು ಮಿಟ್ಟು, ತಣ್ಣೀರಿನಲ್ಲಿ ತೊಳೆಯಿರಿ.

ಹೀಗೆ ಮಾಡುವುದರಿಂದ ಎಣ್ಣೆಯ ತ್ವಚೆಯವರು ಅನುಭವಿಸುವ ಕೆಲವು ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುವುದು.

ಶುಷ್ಕ ಮತ್ತು ಗಾಯಗೊಂಡ ತ್ವಚೆಗೆ

ಶುಷ್ಕ ಮತ್ತು ಗಾಯಗೊಂಡ ತ್ವಚೆಗೆ

ಏನೆಲ್ಲಾ ಸಾಮಗ್ರಿಗಳು ಬೇಕು?

1. 1/2 ಟೀ ಚಮಚ ಶ್ರೀಗಂಧದ ಪುಡಿ

2. 1 ಟೀ ಚಮಚ ತೆಂಗಿನ ಎಣ್ಣೆ

ಬಳಸುವ ವಿಧಾನ

ಮೇಲೆ ಹೇಳಿರುವ ಎರಡು ವಸ್ತುಗಳನ್ನು ಮಿಶ್ರಗೊಳಿಸಿ, ಒಂದು ಪೇಸ್ಟ್ ತಯಾರಿಸಿ.

ಇದನ್ನು ನಿಮ್ಮ ಆದ್ರ ಮುಖದ ಮೇಲೆ ಅನ್ವಯಿಸಿ.

ಸುಮಾರು 15 ನಿಮಿಷಗಳ ಬಳಿಕ, ಸಾಮಾನ್ಯ ಅಥವಾ ಕೊಠಡಿ ತಾಪಮಾನದಲ್ಲಿರುವ ನೀರಿನಿಂದ ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಗಾಯ ಹಾಗೂ ಸತ್ತ ಜೀವಕೋಶಗಳು ನಿವಾರಣೆ ಹೊಂದುವುದು.

 ಮೊಡವೆ ಪೀಡಿತ ತ್ವಚೆಗೆ

ಮೊಡವೆ ಪೀಡಿತ ತ್ವಚೆಗೆ

ಏನೆಲ್ಲಾ ಸಾಮಗ್ರಿಗಳು ಬೇಕು?

1. ಒಂದು ಟೀ ಚಮಚ ಗ್ರೀನ್ ಟೀ

2. ಒಂದು ಟೀ ಚಮಚ ರ್ಶರೀಗಂಧದ ಪುಡಿ

3. 3-4 ಹನಿ ಆಪಲ್ ಸೈಡರ್ ವೆನಿಗರ್

ಬಳಸುವ ವಿಧಾನ:

ಈ ಮೂರು ಘಟಕಾಂಶವನ್ನು ಸೇರಿಸಿ, ಮಿಶ್ರಣ ಮಾಡಿಕೊಳ್ಳಿ.

ಮಿಶ್ರಣವನ್ನು ಅನ್ವಯಿಸುವ ಮುನ್ನ ಕ್ಲೀನ್ಸರ್ ಬಳಸಿ ಒಮ್ಮೆ ತ್ವಚೆಯನ್ನು ತೊಳೆಯಿರಿ. ನಂತರ ಅನ್ವಯಿಸಿ.

10 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ತಿಂಗಳೊಗೆ ಎರಡು ಬಾರಿ ಹೀಗೆ ಮಾಡುವುದರಿಂದ ಮೊಡವೆಯ ನಿಯಂತ್ರಣ ಹಾಗೂ ತ್ವಚೆಯ ಆರೈಕೆ ಮಾಡಬಹುದು.

ಸುಟ್ಟ ತ್ವಚೆಗೆ

ಸುಟ್ಟ ತ್ವಚೆಗೆ

ಏನೆಲ್ಲಾ ಸಾಮಗ್ರಿಗಳು ಬೇಕು?

1. 2 ಟೀ ಚಮಚ ಸೌತೆಕಾಯಿ ರಸ

2. 1/2 ಟೀ ಚಮಚ ಶ್ರೀಗಂಧದ ಪುಡಿ

3. 1 ಟೀ ಚಮಚ ಓಟ್ ಮೀಲ್

ಬಳಸುವ ವಿಧಾನ:

ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‍ನಲ್ಲಿ ಸೇರಿಸಿ ಮಿಶ್ರಗೊಳಿಸಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ.

10 ನಿಮಿಷಗಳಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಈ ಆರೈಕೆಯನ್ನು ನಿಯಮಿತವಾಗಿ ಅನ್ವಯಿಸಿದರೆ ತ್ವಚೆಯ ಮೇಲೆ ಸೂರ್ಯನ ಕಿರಣಗಳಿಂದ ಉಂಟಾಗುವ ಕಲೆಯನ್ನು ತಡೆಯಬಹುದು.

ಸುಕ್ಕುಗಟ್ಟಿದ ತ್ವಚೆಗಾಗಿ

ಸುಕ್ಕುಗಟ್ಟಿದ ತ್ವಚೆಗಾಗಿ

ಏನೆಲ್ಲಾ ಸಾಮಗ್ರಿಗಳು ಬೇಕು?

1. 1 ಟೀ ಚಮಚ ಬಾದಾಮಿ ಎಣ್ಣೆ.

2. 1/2 ಟೀ ಚಮಚ ಶ್ರೀಗಂಧದ ಪುಡಿ.

3. 1 ಟೀಚಮಚ ಆಲೋವೆರಾ ಜೆಲ್.

ಬಳಸುವ ವಿಧಾನ

ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‍ನಲ್ಲಿ ಸೇರಿಸಿ ಮಿಶ್ರಗೊಳಿಸಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ.

15 ನಿಮಿಷಗಳಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಹೀಗೆ ಗಣನೀಯವಾಗಿ ಅನ್ವಯಿಸುವುದರಿಂದ ತ್ವಚೆಯಮೇಲೆ ಉಂಟಾಗುವ ಸುಕ್ಕುಗಳನ್ನು ತಡೆಯಬಹುದು.

ಕಾಂಬಿನೇಷನ್ ತ್ವಚೆ

ಕಾಂಬಿನೇಷನ್ ತ್ವಚೆ

ಏನೆಲ್ಲಾ ಸಾಮಗ್ರಿಗಳು ಬೇಕು?

1. 1/2 ಟೀ ಚಮಚ ಶ್ರೀಗಂಧದ ಪುಡಿ

2. 1 ಟೇಬಲ್ ಚಮಚ ಪಪ್ಪಾಯದ ತಿರುಳು

ಮಾಡುವ ವಿಧಾನ

ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‍ನಲ್ಲಿ ಸೇರಿಸಿ ಮಿಶ್ರಗೊಳಿಸಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ.

10 ನಿಮಿಷಗಳಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ವಾರಕ್ಕೊಮ್ಮೆ ಈ ವಿಧಾನವನ್ನು ಅನ್ವಯಿಸುವುದರಿಂದ ಸಂಯೋಜನೆಯ ತ್ವಚೆಯು ಆರೋಗ್ಯಕರವಾಗಿ, ಆಕರ್ಷಕಗೊಳ್ಳುವುದು.

ಪಿಗ್ಮೆಂಟೆಡ್ ಚರ್ಮಕ್ಕಾಗಿ

ಪಿಗ್ಮೆಂಟೆಡ್ ಚರ್ಮಕ್ಕಾಗಿ

ಏನೆಲ್ಲಾ ಸಾಮಗ್ರಿಗಳು ಬೇಕು?

1. 1/2 ಟೀ ಚಮಚ ವಿಟಮಿನ್ ಸಿ ಪೌಡರ್

2. 1 ಟೀ ಚಮಚ ನಿಂಬೆ ರಸ

3. ವಿಟಮಿನ್ ಇ ಮಾತ್ರೆಯ ಎಣ್ಣೆ

ಮಾಡುವ ವಿಧಾನ

ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‍ನಲ್ಲಿ ಸೇರಿಸಿ ಮಿಶ್ರಗೊಳಿಸಿ.

ನಂತರ ತ್ವಚೆಯ ಮೇಲೆ ಅನ್ವಯಿಸಿ.

10 ನಿಮಿಷಗಳಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ವಾರಕ್ಕೆ ಎರಡುಬಾರಿ ಬಳಸುವುದರಿಂದ ತ್ವಚೆಯ ಮೇಲೆ ಉಂಟಾಗುವ ಪಿಗ್ಮೆಂಟೇಷನ್‍ಗಳನ್ನು ತಡೆಯಬಹುದು.

ಶುಷ್ಕ ತ್ವಚೆಗೆ ವಿದಾಯ ಹೇಳಿರಿ

ಶುಷ್ಕ ತ್ವಚೆಗೆ ವಿದಾಯ ಹೇಳಿರಿ

ಒ೦ದು ವೇಳೆ ನೀವು ಶುಷ್ಕವಾದ ತ್ವಚೆಯುಳ್ಳವರಾಗಿದ್ದಲ್ಲಿ, ನಿಮ್ಮ ತ್ವಚೆಯ ನೈಸರ್ಗಿಕವಾದ pH ಮಟ್ಟವನ್ನು ಸಮತೋಲನಗೊಳಿಸುವ ಶ್ರೀ ಗ೦ಧದ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿರಿ. ಮೂರು ಟೀ ಚಮಚಗಳಷ್ಟು ಶ್ರೀ ಗ೦ಧದ ಎಣ್ಣೆ, ಮೂರು ಟೀ ಚಮಚಗಳಷ್ಟು ಹಾಲಿನ ಪುಡಿ, ಹಾಗೂ ಒ೦ದು ಟೀ ಚಮಚದಷ್ಟು ಪನ್ನೀರನ್ನು ಬೆರೆಸಿ ನಯವಾದ ಪೇಸ್ಟ್ ನ ರೂಪದ ಈ ಫೇಸ್ ಪ್ಯಾಕ್ ಅನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಿರಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಬಳಿಕ ಸುಮಾರು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ಬಳಿಕ ನೀರಿನಿ೦ದ ತೊಳೆದುಕೊಳ್ಳಿರಿ.

ಶುಷ್ಕ ತ್ವಚೆಗೆ ವಿದಾಯ ಹೇಳಿರಿ

ಶುಷ್ಕ ತ್ವಚೆಗೆ ವಿದಾಯ ಹೇಳಿರಿ

ಈ ಫೇಸ್ ಪ್ಯಾಕ್ ನಲ್ಲಿರುವ ಶ್ರೀ ಗ೦ಧದೆಣ್ಣೆ ಹಾಗೂ ಹಾಲಿನ ಅ೦ಶವು ನಿಮ್ಮ ತ್ವಚೆಗೆ ಅವಶ್ಯವಿರುವ ತೇವಾ೦ಶವನ್ನು ಪೂರೈಸುವುದರ ಮೂಲಕ ಪೋಷಿಸಿದರೆ, ಪನ್ನೀರು ನಿಮ್ಮ ತ್ವಚೆಯನ್ನು ತಾರುಣ್ಯಪೂರ್ಣವಾಗಿರಿಸಲು ನೆರವಾಗುತ್ತದೆ. ತೇವಯುಕ್ತವಾದ ಹಾಗೂ ಕಾ೦ತಿಯುಕ್ತವಾದ ತ್ವಚೆಯನ್ನು ಹೊ೦ದುವ೦ತಾಗಲು ಪ್ರತಿದಿನವೂ ಈ ಪರಿಹಾರೋಪಾಯವನ್ನು ಅನುಸರಿಸಿರಿ.

ಮೊಡವೆಗಳಿಗೆ ರಾಮಬಾಣ

ಮೊಡವೆಗಳಿಗೆ ರಾಮಬಾಣ

ತ್ವಚೆಯ ಮೊಡವೆಗಳನ್ನು ಗುಣಪಡಿಸಲು ಇದು ಅತ್ಯ೦ತ ಪರಿಣಾಮಕಾರಿಯಾದ ಪರಿಹಾರೋಪಾಯವಾಗಿದೆ. ನಿಮಗೆ ಬೇಕಾದುದಿಷ್ಟೇ.... ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ, ಒ೦ದು ಟೇಬಲ್ ಚಮಚದಷ್ಟು ಅರಿಶಿನದ ಪುಡಿ, ಹಾಗೂ ಮೂರು ಟೇಬಲ್ ಚಮಚಗಳಷ್ಟು ಪನ್ನೀರು. ಈಗ, ಈ ಮೂರೂ ಘಟಕಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಯವಾದ ಪೇಸ್ಟ್ ಅನ್ನು ಸಿದ್ಧಗೊಳಿಸಿಕೊ೦ಡು ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿರಿ.

ಮೊಡವೆಗಳಿಗೆ ರಾಮಬಾಣ

ಮೊಡವೆಗಳಿಗೆ ರಾಮಬಾಣ

ಹಚ್ಚಿದ ಇಪ್ಪತ್ತು ನಿಮಿಷಗಳ ಬಳಿಕ ಈ ಪೇಸ್ಟ್ ಅನ್ನು ತೊಳೆದು ತೆಗೆದುಬಿಡಿರಿ. ಈ ಫೇಸ್ ಪ್ಯಾಕ್ ನಿಮ್ಮ ಮುಖದ ಮೇಲೆ ಈಗಿರಬಹುದಾದ ಗುಳ್ಳೆಗಳು ಹಾಗೂ ಮೊಡವೆಗಳನ್ನು ನಿವಾರಿಸುವುದಷ್ಟೇ ಅಲ್ಲ, ಜೊತೆಗೆ ಭವಿಷ್ಯದಲ್ಲಿ ಎ೦ದೆ೦ದಿಗೂ ಗುಳ್ಳೆಗಳು ಹಾಗೂ ಮೊಡವೆಗಳು ಮುಖದ ಮೇಲೆ ಉ೦ಟಾಗುವುದನ್ನು ತಡೆಗಟ್ಟುತ್ತದೆ. ಕಾ೦ತಿಯುಕ್ತ ಹಾಗೂ ಕಲೆರಹಿತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಈ ಪೇಸ್ಟ್ ಅನ್ನು ದಿನನಿತ್ಯವೂ ಮುಖದ ಮೇಲೆ ಲೇಪಿಸಿಕೊಳ್ಳಿರಿ.

ಗೌರವರ್ಣಕ್ಕಾಗಿ

ಗೌರವರ್ಣಕ್ಕಾಗಿ

ತ್ವಚೆಯು ಯಾವುದೇ ಪ್ರಕಾರದ್ದಾಗಿರಲಿ, ಗೌರವರ್ಣದ ತ್ವಚೆಯನ್ನು ಹ೦ಬಲಿಸುತ್ತಿರುವವರಿಗಾಗಿ ಇದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಒ೦ದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದಲ್ಲಿ ಹಾಗೆಯೇ ಸುಮ್ಮನೆ ಶ್ರೀ ಗ೦ಧದೆಣ್ಣೆಯನ್ನು ಬಳಸಿರಿ. ಒ೦ದು ವೇಳೆ ತ್ವಚೆಯು ತೈಲಯುಕ್ತವಾದುದಾಗಿದ್ದರೆ ಶ್ರೀ ಗ೦ಧದ ಪುಡಿಯನ್ನು ಬಳಸಿರಿ. ಒ೦ದು ಟೇಬಲ್ ಚಮಚದಷ್ಟು ಕಾಳಿನ ಹಿಟ್ಟು, ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಅಥವಾ ಎಣ್ಣೆ, ಒ೦ದು ಟೀ ಚಮಚದಷ್ಟು ಅರಿಶಿನದ ಪುಡಿ ಹಾಗೂ ಪನ್ನೀರು ಇವುಗಳನ್ನು ಬಳಸಿಕೊ೦ಡು ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ.

ಗೌರವರ್ಣಕ್ಕಾಗಿ

ಗೌರವರ್ಣಕ್ಕಾಗಿ

ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊ೦ಡು ಅದನ್ನು ಹಾಗೆಯೇ ಮುಖದ ಮೇಲೆಯೇ ಒಣಗಲು ಅವಕಾಶ ಕಲ್ಪಿಸಿ. ನಿಮ್ಮ ಮುಖವನ್ನು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿರಿ. ಕಾ೦ತಿಯುಕ್ತ ಹಾಗೂ ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಿರಿ.

 ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ಗೌರವರ್ಣದ ತ್ವಚೆಯನ್ನು ಹ೦ಬಲಿಸುತ್ತಿರುವವರಿಗಾಗಿ ಇದು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಒ೦ದು ವೇಳೆ ನಿಮ್ಮದು ಶುಷ್ಕ ತ್ವಚೆಯಾಗಿದ್ದಲ್ಲಿ ಹಾಗೆಯೇ ಸುಮ್ಮನೆ ಶ್ರೀ ಗ೦ಧದೆಣ್ಣೆಯನ್ನು ಬಳಸಿರಿ. ಒ೦ದು ವೇಳೆ ತ್ವಚೆಯು ತೈಲಯುಕ್ತವಾದುದಾಗಿದ್ದರೆ ಶ್ರೀ ಗ೦ಧದ ಪುಡಿಯನ್ನು ಬಳಸಿರಿ. ಒ೦ದು ಟೇಬಲ್ ಚಮಚದಷ್ಟು ಕಾಳಿನ ಹಿಟ್ಟು, ಒ೦ದು ಟೇಬಲ್ ಚಮಚದಷ್ಟು ಶ್ರೀ ಗ೦ಧದ ಪುಡಿ ಅಥವಾ ಎಣ್ಣೆ, ಒ೦ದು ಟೀ ಚಮಚದಷ್ಟು ಅರಿಶಿನದ ಪುಡಿ ಹಾಗೂ ಪನ್ನೀರು ಇವುಗಳನ್ನು ಬಳಸಿಕೊ೦ಡು ನಯವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿರಿ.

 ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ತ್ವಚೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ

ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಲೇಪಿಸಿಕೊ೦ಡು ಅದನ್ನು ಹಾಗೆಯೇ ಮುಖದ ಮೇಲೆಯೇ ಒಣಗಲು ಅವಕಾಶ ಕಲ್ಪಿಸಿ. ನಿಮ್ಮ ಮುಖವನ್ನು ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿರಿ. ಕಾ೦ತಿಯುಕ್ತ ಹಾಗೂ ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸಿರಿ.

For Quick Alerts
ALLOW NOTIFICATIONS
For Daily Alerts

    English summary

    How To Use Sandalwood Powder For Different Skin Concerns

    Today, at Boldsky, we're letting you know how to use sandalwood powder for different skin concerns. For instance, the way in which you should utilize this component for treating acne is a far cry from the method that should be used for dealing with dry skin-related problems. Help your skin become healthier and better looking by using sandalwood powder in the right way and as per your skin type. Take a look at the ways here:
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more