For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿಗೆ ನಿಂಬೆ ರಸದ ಆರೈಕೆ

By Divya Pandith
|

ಪುರಾತನ ಕಾಲದಿಂದಲೂ ಸೌಂದರ್ಯದ ಆರೈಕೆಯಲ್ಲಿ ಗಣನೀಯವಾಗಿ ಸಹಾಯ ಮಾಡುತ್ತಿರುವ ನೈಸರ್ಗಿಕ ಘಟಕ ಎಂದರೆ ನಿಂಬೆ ಹಣ್ಣು. ಇದರಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿರುವುದರಿಂದ ತ್ವಚೆಯನ್ನು ಶುದ್ಧಗೊಳಿಸುವುದು, ಕಲೆಯನ್ನು ನಿವಾರಿಸುವುದು ಹಾಗೂ ತಾಜಾ ತನದಿಂದ ಸದಾ ಕಂಗೊಳಿಸುವಂತೆ ಮಾಡುತ್ತದೆ. ಇದರಲ್ಲಿರುವ ಸಿಟ್ರಿಕ್ ಆಸಿಡ್ ಗುಣವು ಚರ್ಮವನ್ನು ಬ್ಲೀಚ್ ಮಾಡುವ ಸಾಮಥ್ರ್ಯವನ್ನು ಪಡೆದುಕೊಂಡಿದೆ. ಅಲ್ಲದೆ ಸೂರ್ಯನ ಕಿರಣಗಳಿಂದ ಮಂಕಾದ ತ್ವಚೆಗೆ ಪುನಃ ಜೀವ ತುಂಬಿ, ಆಕರ್ಷಿತಗೊಳ್ಳುವಂತೆ ಮಾಡುತ್ತದೆ.

ಸೂರ್ಯನ ಕಿರಣದಿಂದ ಹಾಗೂ ಧೂಳಿನಿಂದ ತ್ವಚೆಯು ಬಹು ಬೇಗ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಚಳಿಗಾಲದ ವಾತಾವರಣದಲ್ಲಿ ಶುಷ್ಕತೆಯೂ ಸೇರಿಕೊಂಡು ಬಹುಬೇಗ ಒಣಗಿದ ಚರ್ಮದಂತೆ ಶೋಭಿತವಾಗುವುದು. ಈ ಸಮಸ್ಯೆಗಳ ನಿವಾರಣೆಗಾಗಿ ಅನೇಕರು ವಿವಿಧ ಬಗೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ತಾತ್ಕಾಲಿಕವಾಗಿ ಸುಂದರವಾಗಿರುವಂತೆ ಕಾಣಿಸುತ್ತದೆಯಾದರೂ ಚರ್ಮದ ಆರೋಗ್ಯ ಇನ್ನಷ್ಟು ಹದಗೆಡಬಹುದು.

ಕಾಡುವ ಸನ್‍ ಟ್ಯಾನ್‍ ಸಮಸ್ಯೆಗೆ ಮಜ್ಜಿಗೆ-ಓಟ್ಸ್ ಲೇಪನ

ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೇ ಇರುವ ನಿಂಬೆ ಹಣ್ಣನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಇದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿದರೆ ಇನ್ನಷ್ಟು ಪರಿಣಾಮಕಾರಿಯಾದ ಆರೈಕೆಯನ್ನು ಮಾಡಬಹುದು. ಹಾಗಾದರೆ ಆ ಆರೈಕೆಯ ವಿಧಾನಗಳು ಯಾವವು? ಎನ್ನುವ ನಿಮ್ಮ ಪ್ರಶ್ನೆಗೆ ಸೂಕ್ತ ವಿವರಣೆಯು ಮುಂದಿನ ಭಾಗದಲ್ಲಿ ನೀಡಲಾಗಿದೆ...

 ಸೌತೆಕಾಯಿಯೊಂದಿಗೆ ನಿಂಬೆ ರಸ

ಸೌತೆಕಾಯಿಯೊಂದಿಗೆ ನಿಂಬೆ ರಸ

ಒಂದು ಟೇಬಲ್ ಚಮಚ ಸೌತೆಕಾಯಿ ಪೇಸ್ಟ್‍ನೊಂದಿಗೆ ಒಂದು ಟೀ ಚಮಚ ನಿಂಬೆ ರಸ ಸೇರಿಸಿ.

ಸರಿಯಾಗಿ ತ್ವಚೆಯ ಮೇಲೆ ಅನ್ವಯಿಸಿ.

ಇದನ್ನು ತ್ವಚೆ ಹೀರಿಕೊಳ್ಳಲು 10 ನಿಮಿಷಗಳಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರದಲ್ಲಿ ಕಡಿಮೆ ಎಂದರೂ 3-4 ಸಲ ಅನ್ವಯಿಸಿದರೆ ಸೂರ್ಯನ ಕಿರಣದಿಂದ ಸುಟ್ಟ ಚರ್ಮವು ಬಹು ಬೇಗ ಹೊಳಪನ್ನು ಪಡೆದುಕೊಳ್ಳುತ್ತದೆ.

ಅರಿಶಿನದ ಜೊತೆ ನಿಂಬೆ ರಸ

ಅರಿಶಿನದ ಜೊತೆ ನಿಂಬೆ ರಸ

ಒಂದು ಟೀ ಚಮಚ ನಿಂಬೆ ರಸಕ್ಕೆ ಚಿಟಕೆ ಅರಿಶಿನ ಹಾಗೂ 1/2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.

ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.

5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿ.

ಮಜ್ಜಿಗೆಯೊಂದಿಗೆ ನಿಂಬೆ ರಸ

ಮಜ್ಜಿಗೆಯೊಂದಿಗೆ ನಿಂಬೆ ರಸ

ಒಂದು ಟೀ ಚಮಚ ನಿಂಬೆ ರಸಕ್ಕೆ 2 ಟೀ ಚಮಚ ಮಜ್ಜಿಗೆಯನ್ನು ಸೇರಿಸಿ.

ಇದನ್ನು ಮುಖಕ್ಕೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.

5 ನಿಮಿಷಗಳ ಬಳಿಕೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸೂರ್ಯನ ಕಲೆಯನ್ನು ನಿವಾರಿಸಲು ವಾರದಲ್ಲಿ 2-3 ಬಾರಿ ಈ ವಿಧಾನವನ್ನು ಅನ್ವಯಿಸಬೇಕು.

ಮೊಸರಿನೊಂದಿಗೆ ನಿಂಬೆ ರಸ

ಮೊಸರಿನೊಂದಿಗೆ ನಿಂಬೆ ರಸ

ಒಂದು ಟೀ ಚಮಚ ನಿಂಬೆ ರಸಕ್ಕೆ 2 ಟೀ ಚಮಚ ಮೊಸರನ್ನು ಸೇರಿಸಿ.

ಪೀಡಿತ ಪ್ರದೇಶದಲ್ಲಿ ಮಿಶ್ರಣವನ್ನು ಅನ್ವಯಿಸಿ.

5 ನಿಮಿಷಗಳ ಕಾಲ ತ್ವಚೆಯ ಮೇಲೆ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತರ ಚರ್ಮವನ್ನು ತಾಜಾಗೊಳಿಸುವ ಟೋನರ್‍ಅನ್ನು ಅನ್ವಯಿಸಿ.

ಈ ವಿಧಾನವನ್ನು ಗಣನೀಯವಾಗಿ ಅನುಸರಿಸುವುದರಿಂದ ಬಹು ಬೇಗ ಸೂರ್ಯನ ಕಲೆಯಿಂದ ಮುಕ್ತಿ ಹೊಂದಬಹುದು.

ನಿಂಬೆ ರಸದೊಂದಿಗೆ ಅಲೋವೆರಾ ಮತ್ತು ಕಿತ್ತಳೆ ಸಿಪ್ಪೆಯ ಪುಡಿ

ನಿಂಬೆ ರಸದೊಂದಿಗೆ ಅಲೋವೆರಾ ಮತ್ತು ಕಿತ್ತಳೆ ಸಿಪ್ಪೆಯ ಪುಡಿ

ಅರ್ಧ ಟೀ ಚಮಚ ನಿಂಬೆ ರಸಕ್ಕೆ 1 ಟೀ ಚಮಚ ಆಲೋವೆರಾ ಮತ್ತು ಒಂದು ಚಿಟಕೆ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. 10 ನಿಮಿಷಗಳ ಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಲ್ಲಿ ಸ್ವಚ್ಛಗೊಳಿಸಿ.

ಈ ಮಿಶ್ರಣವನ್ನು ವಾರಕ್ಕೊಮ್ಮೆ ಅನ್ವಯಿಸುವುದರಿಂದ ಬಹು ಬೇಗ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ನಿಂಬೆ ರಸ, ಕಡ್ಲೆ ಹಿಟ್ಟು ಮತ್ತು ಜೇನುತುಪ್ಪ

ನಿಂಬೆ ರಸ, ಕಡ್ಲೆ ಹಿಟ್ಟು ಮತ್ತು ಜೇನುತುಪ್ಪ

ಒಂದು ಟೀ ಚಮಚ ನಿಂಬೆ ರಸಕ್ಕೆ 1/2 ಟೀ ಚಮಚ ಕಡ್ಲೆ ಹಿಟ್ಟು ಮತ್ತು 1 ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ.

ಮಿಶ್ರಣವನ್ನು ಮುಖಕ್ಕೆ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

10-15 ನಿಮಿಷಗಳ ಕಾಲ ಮುಖದ ಮೇಲೆ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

ವಾರಕ್ಕೊಮ್ಮೆ ಈ ವಿಧಾನವನ್ನು ನ್ವಯಿಸುವುದರಿಂದ ಮುಖವು ಕಾಂತಿಯಿಂದ ಕಂಗೊಳಿಸುತ್ತದೆ.

ನಿಂಬೆ ರಸ ಮತ್ತು ಓಟ್ ಮೀಲ್

ನಿಂಬೆ ರಸ ಮತ್ತು ಓಟ್ ಮೀಲ್

ಒಂದು ಟೇಬಲ್ ಚಮಚ ಓಟ್ ಮೀಲ್ ಜೊತೆ 2 ಟೀ ಚಮಚ ನಿಂಬೆ ರಸವನ್ನು ಸೇರಿಸಿ

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5-10 ನಿಮಿಷಗಳಕಾಲ ಮೃದುವಾಗಿ ಮಸಾಜ್ ಮಾಡಿ

ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ

ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಸೂರ್ಯನ ಕಿರಣದಿಂದ ಉಂಟಾದ ತೊಂದರೆಯಿಂದ ಮುಕ್ತಿ ಹೊಂದಬಹುದು.

ನಿಂಬೆ ರಸದೊಂದಿಗೆ ಪಪ್ಪಾಯದ ತಿರುಳು

ನಿಂಬೆ ರಸದೊಂದಿಗೆ ಪಪ್ಪಾಯದ ತಿರುಳು

ಎರಡು ಟೀ ಚಮಚ ನಿಂಬೆ ರಸಕ್ಕೆ ಅದೇ ಪ್ರಮಾಣದ ಪಪ್ಪಾಯದ ತಿರುಳನ್ನು ಸೇರಿಸಿ, ಮಿಶ್ರಗೊಳಿಸಿ

ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ

ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ಶುದ್ಧಗೊಳಿಸಿ

ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಮೂರುಬಾರಿ ಈ ವಿಧಾನವನ್ನು ಅನ್ವಯಿಸಿ

English summary

How To Use Lemon Juice To Remove Sun Tan From Your Face

In the past few years, lemon juice has become a cult favourite for treating skin-related problems. This natural ingredient is replete with vitamin C, citric acid and other compounds that can improve the state of your skin. It is also known to act as a bleaching or skin-whitening agent. This ability of lemon juice makes it a true favourite for treating sun tanned skin.
X
Desktop Bottom Promotion