ಹಣೆಯ ಮೇಲಿನ ನೆರಿಗೆಯನ್ನು ನಿವಾರಿಸಲು ನೈಸರ್ಗಿಕ ಟಿಪ್ಸ್

By: Jaya subramanya
Subscribe to Boldsky

ವಯಸ್ಸಾದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಾಣಲು ಆರಂಭಿಸುತ್ತದೆ. ಇದರಲ್ಲಿ ನೆರಿಗೆಯೂ ಒಂದಾಗಿದೆ. ಹಣೆಯಲ್ಲಿ ಕೈಯಲ್ಲಿ ಕಾಣುವ ನೆರಿಗೆಗಳು ವಯಸ್ಸಾಗುವಿಕೆಯ ಸೂಚನೆಯಾಗಿದ್ದು ನೀವು ನೈಸರ್ಗಿಕ ರೂಪದಲ್ಲಿ ಈ ನೆರಿಗೆಗಳಿಗೆ ಸೂಕ್ತ ಆರೈಕೆಯನ್ನು ಮಾಡಬಹುದಾಗಿದೆ. ವಯಸ್ಸಾದಂತೆ ನಮ್ಮ ಸೌಂದರ್ಯ ಇಂಗಿ ಹೋಗುತ್ತದೆ ಎಂಬ ಮಾತು ಸುಳ್ಳಾಗಿದೆ. ಎಲ್ಲರಿಗೂ ವಯಸ್ಸಾಗುವಿಕೆ, ವೃದ್ಧಾಪ್ಯ ಬಂದೇ ಬರುತ್ತದೆ ಆದರೆ ವಯಸ್ಸಾದರೂ ಅದನ್ನು ತೋರ್ಪಡಿಸಿಕೊಳ್ಳದೆಯೇ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

ಕುತ್ತಿಗೆಯಲ್ಲಿ ಮೂಡುವ ನೆರಿಗೆ ಸಮಸ್ಯೆ! ಇಲ್ಲಿದೆ ನೋಡಿ ಸರಳೋಪಾಯ....

ನೀವು ಸಿನಿಮಾ ನಟ ನಟಿಯರನ್ನೇ ಕಾಣಬಹುದು. ಅವರುಗಳಿಗೆ ವಯಸ್ಸಾಗಿದ್ದರೂ ಅವರ ತ್ವಚೆ ಸುಕೋಮಲವಾಗಿರುತ್ತದೆ ಮತ್ತು ಅವರುಗಳು ಫಿಟ್ ಆಗಿರುತ್ತಾರೆ. ಇದಕ್ಕೆ ಕಾರಣ ಅವರುಗಳು ನೈಸರ್ಗಿಕವಾಗಿ ತಮ್ಮ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದಾಗಿದೆ. ಇಂದು ಕಾಸ್ಮೆಟಿಕ್ ಸರ್ಜರಿಯಂತಹ ಆಧುನಿಕ ವಿಧಾನಗಳು ವೈದ್ಯಲೋಕದಲ್ಲಿದ್ದರೂ ಇವುಗಳಿಂದ ಅನೇಕ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.

ಇಂದಿನ ಲೇಖನದಲ್ಲಿ ನಿಮಗೆ ಯಾವುದೇ ರೀತಿಯ ಹಾನಿಯುಂಟಾಗದೇ ನಿಮ್ಮ ತ್ವಚೆಯನ್ನು ಪೋಷಿಸಲು ಕಾರಣವಾಗಿರುವ ಹಾಗೂ ನೆರಿಗೆ ಸಮಸ್ಯೆಯನ್ನು ತೊಡೆದು ಹಾಕುವ ಕೆಲವೊಂದು ಪರಿಹಾರ ವಿಧಾನಗಳನ್ನು ನೀಡುತ್ತಿದ್ದೇವೆ. ಇವುಗಳಲ್ಲಿರುವ ವಿಟಮಿನ್‌ಗಳು ಮತ್ತು ಪ್ರೊಟೀನ್ ಅಂಶಗಳು ತ್ವಚೆಯ ನೆರಿಗೆ ಮತ್ತು ಇನ್ನಿತರ ಸಮಸ್ಯೆಗಳನ್ನು ನಿವಾರಿಸುವುದು ಖಂಡಿತ....

 ಪಪ್ಪಾಯ

ಪಪ್ಪಾಯ

ಪಪೈನ್ ಅಂಶವನ್ನು ಒಳಗೊಂಡಿರುವ ಪಪ್ಪಾಯದಲ್ಲಿ ನಿಮ್ಮ ತ್ವಚೆಗೆ ಮ್ಯಾಜಿಕ್ ಉಂಟುಮಾಡುವ ಅಂಶಗಳಿವೆ. ಇದು ನಿಮ್ಮ ಹಣೆಯಲ್ಲಿರುವ ನೆರಿಗೆ ಮಾತ್ರವಲ್ಲದೆ ದೇಹದ ಇನ್ನಿತರ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸಲಿದೆ.

ಬಳಸುವುದು ಹೇಗೆ

ಚಮಚದಷ್ಟು ಪಪ್ಪಾಯ ತಿರುಳನ್ನು ಬೇರ್ಪಡಿಸಿಕೊಳ್ಳಿ

ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ

ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

 ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗ

ಇದೊಂದು ನೈಸರ್ಗಿಕ ಪರಿಹಾರವಾಗಿ ನಿಮ್ಮ ತ್ವಚೆಗೆ ಕಾಂತಿಯನ್ನುಂಟು ಮಾಡಲಿದ್ದು ನೆರಿಗೆ ಸಮಸ್ಯೆಯನ್ನು ನಿವಾರಿಸಲಿದೆ.

ಬಳಸುವ ವಿಧಾನ

1 ಮೊಟ್ಟೆಯ ಬಿಳಿ ಭಾಗವನ್ನು 2 ಚಮಚ ಲಿಂಬೆ ರಸದೊಂದಿಗೆ ಮಿಶ್ರ ಮಾಡಿಕೊಳ್ಳಿ

ನಿಮ್ಮ ಹಣೆಯ ಭಾಗಕ್ಕೆ ಹಚ್ಚಿಕೊಳ್ಳಿ

15 ನಿಮಿಷಗಳ ನಂತರ ತೊಳೆದುಕೊಳ್ಳಿ

ಕಿತ್ತಳೆ ಸಿಪ್ಪೆ ಹುಡಿ

ಕಿತ್ತಳೆ ಸಿಪ್ಪೆ ಹುಡಿ

ಸಿಟ್ರಸ್ ಅಂಶವುಳ್ಳ ಫೇಸ್ ಪ್ಯಾಕ್ ನಿಮ್ಮ ಹಣೆಯ ನೆರಿಗೆಗಳನ್ನು ತ್ವರಿತವಾಗಿ ನಿವಾರಿಸುತ್ತವೆ.

ಬಳಸುವ ವಿಧಾನ

ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆ ಹುಡಿಯನ್ನು ರೋಸ್ ವಾಟರ್‌ನೊಂದಿಗೆ ಕಲಸಿಕೊಳ್ಳಿ

ನಿಮ್ಮ ಹಣೆಗೆ ಇದನ್ನು ಹಚ್ಚಿಕೊಳ್ಳಿ

15 ನಿಮಿಷಗಳ ನಂತರ ಇದನ್ನು ತೊಳೆದುಕೊಳ್ಳಿ

ಅನಾನಸ್

ಅನಾನಸ್

ಅನಾನಸ್‌ನಲ್ಲಿ ವಿಟಮಿನ್ ಅಂಶಗಳು ಹೆಚ್ಚಿದ್ದು, ಇದು ನಿಮ್ಮ ಹಣೆಯ ನೆರಿಗೆಯಂತಹ ಸಮಸ್ಯೆಯನ್ನು ದೂರಮಾಡುತ್ತದೆ.

ಅನಾನಸ್ ವಿಧಾನ

ಅನಾನಸ್ ರಸವನ್ನು ಸಂಗ್ರಹಿಸಿ

ಈ ರಸದಲ್ಲಿ ಹತ್ತಿಯನ್ನು ಅದ್ದಿಕೊಂಡು ನಿಮ್ಮ ಹಣೆಗೆ ಹಚ್ಚಿಕೊಳ್ಳಿ

ನಿಮ್ಮ ತ್ವಚೆಯಲ್ಲಿ 10 ನಿಮಿಷಗಳ ಕಾಲ ಈ ರಸ ಹಾಗೆಯೆ ಇರಲಿ

ನಂತರ ತಣ್ಣೀರಿನಿಂದ ಹಣೆಯನ್ನು ತೊಳೆದುಕೊಳ್ಳಿ.

ವಿಚ್ ಹೇಜಲ್

ವಿಚ್ ಹೇಜಲ್

ವಯಸ್ಸಾಗುವಿಕೆಯ ಹಲವಾರು ಸಮಸ್ಯೆಗಳನ್ನು ನಿವಾರಿಸಲು ವಿಚ್ ಹೇಜಲ್ ಸಹಕಾರಿಯಾಗಿದೆ. ಅದರಲ್ಲು ಹಣೆಯಲ್ಲಿನ ನೆರಿಗೆಯಂತಹ ಸಮಸ್ಯೆಯನ್ನು ಇದು ಕೂಡಲೇ ನಿವಾರಿಸುತ್ತದೆ.

ಬಳಸುವ ವಿಧಾನ

ವಿಚ್ ಹೇಜಲ್‌ನೊಂದಿಗೆ 3-4 ಚಮಚಷ್ಟು ಗ್ರೀನ್ ಟೀಯನ್ನು ಬಳಸಿಕೊಳ್ಳಿ. ಇದನ್ನು ನಿಮ್ಮ ತಲೆಗೆ ಹಚ್ಚಿಕೊಳ್ಳಿ

15 ನಿಮಿಷಗಳ ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ.

ಆಲೀವ್ ಆಯಿಲ್

ಆಲೀವ್ ಆಯಿಲ್

ವಿಟಮಿನ್ ಇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಹಣೆಯಲ್ಲಿನ ನೆರಿಗೆಯನ್ನು ಕ್ಷಣ ಮಾತ್ರದಲ್ಲಿ ಕಿತ್ತೊಗೆಯುತ್ತದೆ.

ಬಳಸುವ ವಿಧಾನ

ನಿಮ್ಮ ಹಣೆಗೆ ಆಲೀವ್ ಆಯಿಲ್‌ನಿಂದ ಮಸಾಜ್ ಮಾಡಿಕೊಳ್ಳಿ

ಇದನ್ನು ರಾತ್ರಿಪೂರ್ತಿ ಹಾಗೆಯೇ ಬಿಡಿ

ನಂತರ ಮರುದಿನ ಬೆಳಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಕ್ಯಾಲೆಂಡುಲಾ

ಕ್ಯಾಲೆಂಡುಲಾ

ಇದು ಮುಕ್ತ ರಾಡಿಕಲ್‌ನೊಂದಿಗೆ ನೈಸರ್ಗಿಕವಾಗಿ ಹೋರಾಡುವ ಗಿಡಮೂಲಿಕೆಯಾಗಿದ್ದು ಇದು ನಿಮ್ಮ ವಯಸ್ಸಾಗುವಿಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ.

ಬಳಸುವ ವಿಧಾನ

ಒಂದು ಚಮಚದಷ್ಟು ಕ್ಯಾಲೆಂಡುಲಾ ಫ್ಲೋರ್ಟ್ಸ್ ಅನ್ನು 2 ಚಮಚದಷ್ಟು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ

ನಿಮ್ಮ ಹಣೆಗೆ ಪೂರ್ತಿ ಈ ಎಣ್ಣೆಯನ್ನು ಹಚ್ಚಿಕೊಳ್ಳಿ

10-15 ನಿಮಿಷಗಳ ತರುವಾಯ ಇದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

English summary

How To Treat Forehead Wrinkles

Forehead wrinkles are inevitable by-products of ageing and stopping them from occurring is something that is beyond our control. However, reducing the prominence of such signs of ageing is an achievable task. Few people like to get cosmetic procedures done such as botox, etc. But, in case you're someone who wishes to go for treatmentsthat are safe and natural, then today's post is perfect for you. As today at Boldsky, we'll be letting you know about the natural ways in which you can treat creases on your forehead.
Subscribe Newsletter