ಹೊಳಪುಳ್ಳ ಹಾಗು ಕಾಂತಿಯುತವಾದ ತ್ವಚೆ ಯಾರಿಗೆ ಬೇಡ ಹೇಳಿ? ಪ್ರತಿ ಮಹಿಳೆ ಹಾಗು ಪುರುಷರ ಕನಸು ಯಾವದೇ ಕಾಲಕ್ಕೂ ಸುಂದರವಾಗಿ ಕಾಣಿಸಿಕೊಳ್ಳಬೆಕು ಎಂಬುದು. ಮಾರುಕಟ್ಟೆಯಲ್ಲಿ ಅನೇಕ ರಾಸಾಯನಿಕಗಳು ಲಭ್ಯವಿದ್ದರೂ ಕೋಕೋ ಬಟರ್ ಎಲ್ಲವುಗಳಿಗಿಂತ ಅತ್ಯಂತ ಉಪಯುಕ್ತವಾದದ್ದು, ಕಾರಣ ಅದರ ನೈಸರ್ಗಿಕ ಗುಣಗಳು. ಕೋಕೋ ಬಟರ್ ಅತ್ಯಂತ ಮೃದುವಾಗಿದ್ದು, ಹೆಡಸುಭರಿತವಾಗಿದೆ, ಈ ಗುಣದಿಂದಲೇ ಇದು ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವ ಸಾಮರ್ಥ್ಯ ಪಡೆದಿದೆ.
ಕ್ಲಿಯರ್ ತ್ವಚೆಗಾಗಿ 5 ಚಾಕಲೇಟ್ ಫೇಶಿಯಲ್ ರೆಸಿಪಿ
ಸ್ವಲ್ಪ ಚಳಿಗಾಲ ಬಂತೆದರೆ ಸಾಕು ಅನೇಕರಿಗೆ ತ್ವಚೆಯು ಸಂಪೂರ್ಣ ಒಣಗಿ, ಬಿರುಕು ಬಿಟ್ಟು, ತುರಿಕೆ ಬರಿಸುತ್ತದೆ.ಇದರಿಂದ ಬಹಳ ಹಿಂಸೆ ಅನ್ನಿಸುವದಲ್ಲದೆ, ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಮಾಯಿಶ್ಚರೈಸ್ ಮಾಡುವ ಗುಣವುಳ್ಳ ಈ ಕೋಕೋ ಬಟರನ್ನು ಹತ್ತು ಹಲವಾರು ವಿಧಾನಗಳಲ್ಲಿ ಬಳಸಿ ನಮ್ಮ ತ್ವಚೆಯನ್ನು ರಕ್ಷಿಸಬಹುದು. ಮನೆಯಲ್ಲಿ ಕೂಡ ಸುಲಭವಾಗಿ ನಿಮ್ಮದೇ ಕೋಕೋ ಬಟರನ್ನು ಕೋಕೋ ಪೌಡರ್ ಮತ್ತು ಬೆಣ್ಣೆಯನ್ನು ಬಳಸಿ ತಯಾರಿಸಿಕೊಳ್ಳಬಹುದು. ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಇನ್ನೇನು ಕಾಲಿಡುತ್ತಿರುವ ಚಳಿರಾಯನನಿಂದ ರಕ್ಷಣೆ ಪಡೆಯಬಹುದು. ನೀವು ನಿಶ್ಚಿತವಾಗಿ ದಟ್ಸಕನ್ನಡಕ್ಕೆ ಆಭಾರಿಯಾಗಿರುತ್ತೀರ.
ಕೋಕೋ ಬಟರಿನ ನೇರ ಬಳಕೆ:
ಕೋಕೋ ಬಟರನ ಒಂದು ತುಂಡು ತೆಗೆದುಕೊಂಡು, ಕರಗಲು ಬಿಡಿ.
ಸ್ವಲ್ಪ ಹೊತ್ತಿನ ನಂತರ ನಿಮಗೆ ಬೇಕಾದ ತ್ವಚೆಯ ಭಾಗಗಳಿಗೆ ನಿಧನವಾಗಿ ಲೇಪಿಸಿಕೊಳ್ಳಿ.
20-25 ನಿಮಿಷ ಹಾಗೆಯೇ ಬಿಟ್ಟುಬಿಡಿ.
ನಂತರ ಶುಭ್ರವಾದ ಬಟ್ಟೆಯನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಅದ್ದಿ, ಹಿಂಡಿ ತೆಗೆಯಿರಿ.
ಬೆಣ್ಣೆ ಸವರಿದ ತ್ವಚೆಯ ಭಾಗವನ್ನು ನಿಧಾನಕ್ಕೆ ಒರೆಸಿಕೊಳ್ಳಿ.
ತಿಂಗಳಿಗೆ 4 ರಿಂದ 5 ಬಾರಿ ಪುನರಾವರ್ತಿಸಿದರೆ, ಬೆಣ್ಣೆಯಂತಹ ತ್ವಚೆ ನಿಮ್ಮದಾಗುವದು.
ಕೊಬ್ಬರಿ ಎಣ್ಣೆ ಮತ್ತು ಕೋಕೋ ಬಟರ್‌ನ ಮಿಶ್ರಣ
*6 ರಿಂದ 7 ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ. 4 ಚಮಚದಷ್ಟು ಕೋಕೋ ಬಟರ್‌ನ್ನು ಕರಗಿಸಿ, ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ.
* ಎರಡನ್ನೂ ಚೆನ್ನಾಗಿ ಬೆರೆಸಿ ಒಂದೇ ಸಮನಾದ ಮಿಶ್ರಣವನ್ನು ತಯಾರಿಸಿಕೊಳ್ಳಿ.
*ಮಿಶ್ರಣವನ್ನು ಒಂದು ಗಾಜಿನ ಭರಣಿಯಲ್ಲಿ ಶೇಖರಿಸಿಟ್ಟುಕೊಳ್ಳಿ.
*ಕೊಠಡಿಯ ತಾಪಮನಕ್ಕೆ ಸರಿಹೊಂದುವಹಾಗೆ ಸ್ವಲ್ಪ ಹೊತ್ತು ಬಿಟ್ಟುಬಿಡಿ.
*ನಂತರ ಎಲ್ಲೆಲ್ಲಿ ಶುಷ್ಕ ತ್ವಚೆಯಿದೆಯೋ ಅಲ್ಲಿ ಲೇಪಿಸಿಕೊಳ್ಳಿ.
* ಐದು ನಿಮಿಷದವರೆಗೆ ಮಸಾಜ್ ಮಾಡಿಕೊಂಡು, 20 ನಿಮಿಷಗಳವರೆಗೆ ಹಾಗೆಯೇ ಬಿಟ್ಟುಬಿಡಿ.
*ನಂತರ ಸ್ವಚ್ಛವಾದ, ಬಿಸಿನೀರಿನಲ್ಲಿ ಅದ್ದಿ ತೆಗೆದ ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ.
ತಿಂಗಳಿಗೆ 3 ರಿಂದ 4 ಬಾರಿ ಮಾಡಿಕೊಳ್ಳುವದರಿಂದ ಶುಷ್ಕ ತ್ವಚೆ ಮಾಯವಾಗಿಬಿಡುವದು.
ಜೇನುತುಪ್ಪ ಮತ್ತು ಕೋಕೋ ಬಟರ್‌ನ ಮಿಶ್ರಣ
*ಒಂದು ಚಮಚದಷ್ಟು ಕರಗಿಸಿದ ಕೋಕೋ ಬಟರ್‌ನ್ನು 2 ಚಮಚದಷ್ಟು ಜೇನುತುಪ್ಪದೊಂದಿಗೆ ಬೆರೆಸಿಕೊಳ್ಳಿ.
*ಒಣಗಿದ ಚರ್ಮವಿರುವ ಕಡೆಯೆಲ್ಲ ಚೆನ್ನಾಗಿ ಮೆತ್ತಿಕೊಳ್ಳಿ.
*30 ರಿಂದ 40 ನಿಮಿಷ ಆರಾಮಾಗಿ ಕುಳಿತುಕೊಳ್ಳಿ.
*ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ.
*ಸ್ವಚ್ಛವಾದ ತೆಳು ಬಟ್ಟೆಯಿಂದ ಒರೆಸಿಕೊಳ್ಳಿ.
*ವಾರಕೊಮ್ಮೆಯಾದರೂ ಇದನ್ನು ಪುನರಾವರ್ತಿಸಿ, ಮೃದುವಾದ ತ್ವಚೆ ನಿಮ್ಮದಾಗಿಸಿಕೊಳ್ಳಿ.
ಹಹೋಬಾ ಎಣ್ಣೆ ಮತ್ತು ಕೋಕೋ ಬಟರ್‌ನ ಮಿಶ್ರಣ
*2-3 ಚಮಚ ಕರಗಿಸಿದ ಕೋಕೋ ಬಟರ್ ಮತ್ತು ಹಹೋಬಾ ಎಣ್ಣೆಯ(ಆನ್‌ಲೈನ್ ಖರೀದಿಸಬಹುದು) ಮಿಶ್ರಣವನ್ನು ತಯಾರಿಸಿಕೊಳ್ಳಿ.
*ಶುಷ್ಕ ತ್ವಚೆ ಇರುವ ಭಾಗಕ್ಕೆ ನಿಧಾನವಾಗಿ ಲೇಪಿಸಿಕೊಳ್ಳಿ, ಚೆನ್ನಗಿ ಮಸಾಜ್ ಮಾಡಿ.
*ಸ್ವಲ್ಪ ಹೊತ್ತು ಹಾಗೇ ಬಿಟ್ಟುಬಿಡಿ.
*ನಂತರ ಶುಭ್ರವಾದ ಬಟ್ಟೆಯನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಅದ್ದಿ ಹಿಂಡಿ ತೆಗೆಯಿರಿ. ಅದರಿಂದ ಎಣ್ಣೆ ಲೇಪಿಸಿದ ಸ್ಥಳವನ್ನು ನಿಧಾನಕ್ಕೆ ಒರೆಸಿಕೊಳ್ಳಿ.
*ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ ನೋಡಿ, ಒಳ್ಳೆಯ ಪರಿಣಾಮ ದೊರೆಯದೆ ಇರುವದಿಲ್ಲ.
ಶೇ ಬಟರ್ ಮತ್ತು ಕೋಕೋ ಬಟರ್‌ನ ಮಿಶ್ರಣ
*ಶೇ ಬಟರ್ ಮತ್ತು ಕೋಕೋ ಬಟರ್‌ನ ಸಮನಾದ ಮಿಶ್ರಣ ತಯಾರಿಸಿಕೊಳ್ಳಿ.
*ಮಿಶ್ರಣವನ್ನು ಶುಷ್ಕ ತ್ವಚೆಯ ಮೇಲೆ ನಿಧಾನವಾಗಿ ಸವರಿ ಚೆನ್ನಾಗಿ ಮಸಾಜ್ ಮಾಡಿ.
*20 ರಿಂದ 25 ನಿಮಿಷ ಹಾಗೆ ಬಿಟ್ಟುಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
*ವಾರದಲ್ಲಿ ೩ ರಿಂದ ೪ ಬಾರಿ ಈ ಮಿಶ್ರಣವನ್ನು ಲೇಪಿಸಿಕೊಂಡರೆ ಒಳ್ಳೆಯ ಲಾಭ ದೊರೆಯುವದು.
ಆಲಿವ್ ಎಣ್ಣೆ ಮತ್ತು ಕೋಕೋ ಬಟರ್‌ನ ಮಿಶ್ರಣ
ಒಂದು ಚಮದಷ್ಟು ಆಲಿವ್ ಎಣ್ಣೆಯನ್ನು ಮೈಕ್ರೊವೇವ್‌ನಲ್ಲಿ ಬೆಚ್ಚಗೆ ಮಾಡಿಕೊಳ್ಳಿ. ಕರಗಿಸಿದ ಕೋಕೋ ಬಟರ್‌ನ ಜೊತೆಗೆ ಬೆರೆಸಿ.
ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
ಶುಷ್ಕ ತ್ವಚೆಯ ಮೇಲೆ ನಿಧಾನವಾಗಿ ಲೇಪಿಸಿಕೊಳ್ಳಿ. ಚೆನ್ನಾಗಿ ಮಸಾಜ್ ಮಾದಿ.
10 ರಿಂದ 15 ನಿಮಿಷ ಹಾಗೇ ಬಿಟ್ಟುಬಿಡಿ.
ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
ವಾರಕ್ಕೆ ಕನಿಷ್ಠಪಕ್ಷ ಎರಡು ಬಾರಿಯಾದರೂ ಈ ವಿಧಾನವನ್ನು ಪುನರಾವರ್ತಿಸಿ, ಒಳ್ಳೆಯ ಲಾಭ ದೊರೆಯುವದು.
ವಿಟಮಿನ್ 'ಈ' ಎಣ್ಣೆ ಮತ್ತು ಕೋಕೋ ಬಟರ್‌ನ ಮಿಶ್ರಣ
*ಮೆಡಿಕಲ್ ಶಾಪಿನಿಂದ ವಿಟಮಿನ್ 'ಈ' ಕ್ಯಾಪ್ಸೂಲ್ ಖರೀದಿಸಿ. ಅದರಲ್ಲಿರುವ ಎಣ್ಣೆಯನ್ನು ಹೊರತೆಗೆದು ಕೋಕೋ ಬಟರ್‌ನೊಂದಿಗೆ ಬೆರೆಸಿಕೊಳ್ಳಿ.
*ನಿಧಾನವಾಗಿ ಒಣ ಚರ್ಮಕ್ಕೆ ಲೇಪಿಸಿಕೊಳ್ಳಿ.
*2೦ ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.
*ನೀವು ಈ ಪದ್ಧತಿಯನ್ನು ವಾರಕೊಮ್ಮೆಯಾದರೂ ಅನುಸರಿಸಿದರೆ ಸಾಕು, ಚರ್ಮ ಮೃದುವಾಗುವದು.
ಮೊಸರು ಮತ್ತು ಕೋಕೋ ಬಟರ್‌ನ ಮಿಶ್ರಣ
*ಕೋಕೋ ಬಟರ್‌ನ ಒಂದು ತುಂಡನ್ನು ಮೈಕ್ರೋವೇವ್‌ನಲ್ಲಿ ೨೦ ಸೆಕೆಂಡುಗಳಷ್ಟು ಬೆಚ್ಚಗೆ ಮಾಡಿಕೊಳ್ಳಿ.
*ನಂತರ ಇದನ್ನು ೧ ಚಮಚದಷ್ಟು ತಾಜಾ ಮೊಸರಿನ ಜೊತೆಗೆ ಬೆರೆಸಿಕೊಳ್ಳಿ.
*ಶುಷ್ಕ ಚರ್ಮಕ್ಕೆ ಲೇಪಿಸಿಕೊಳ್ಳಿ.
*20 ನಿಮಿಷಗಳವರೆಗೆ ಹಾಗೇ ಬಿಟ್ಟುಬಿಡಿ.
*ನಂತರ ಬೆಚ್ಚಗಿನ ನೀರಿನಿಂದ ನೀಟಾಗಿ ತೊಳೆದುಕೊಳ್ಳಿ.
*ವಾರಕ್ಕೊಮ್ಮೆ ಮಾಡಿನೋಡಿ ಅದ್ಭುತವಾದ ಪರಿಣಾಮ ಲಭ್ಯವಾಗುವದು.
ದಿನನಿತ್ಯ ಬಳಸುವ ಮಾಯಿಶ್ಚರೈಸರ್ ಮತ್ತು ಕೋಕೋ ಬಟರ್‌ನ ಮಿಶ್ರಣ
*ಒಂದು ತುಂಡು ಕೋಕೋ ಬಟರ್‌ನ್ನು ಕರಗಿಸಿಕೊಳ್ಳಿ.
*ನಿಮ್ಮ ದಿನನಿತ್ಯದ ಯಾವದೇ ಮಾಯಿಶ್ಚರೈಸರ್ ಆದರೂ ಪರವಾಗಿಲ್ಲ, ಅದರ ಜೊತೆಗೆ ಕೋಕೋ ಬಟರ್ ಬೆರೆಸಿ.
*ಶುಷ್ಕ ತ್ವಚೆ ಇರುವ ಎಲ್ಲ ಕಡೆ ಧಾರಾಳವಾಗಿ ಲೇಪಿಸಿಕೊಳ್ಳಿ ಹಾಗು ನಿಧಾನಕ್ಕೆ ಮಸಾಜ್ ಮಾಡಿ.
*ಚರ್ಮದಲ್ಲಿ ಚೆನ್ನಾಗಿ ಇಂಗುವಂತೆ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ.
*ವಾರಕೂಮ್ಮೆ ಈ ರೀತಿ ಮಾಡಿ ನೋಡಿ ಹೊಳಪುಳ್ಳ ತ್ವಚೆ ನಿಮ್ಮದಾಗುತ್ತದೆ.
ಅಲೋವೆರಾ ಜೆಲ್ ಮತ್ತು ಕೋಕೋ ಬಟರ್‌ನ ಮಿಶ್ರಣ:
*ನಿಮ್ಮ ಮನೆಯ ಸುತ್ತಮುತ್ತಲು ಅಲೋವೆರಾ ಗಿಡಗಳಿರಬಹುದು ಗಮನಿಸಿ ನೋಡಿ, ಇದು ಸ್ವಲ್ಪ ಕ್ಯಾಕ್ಟಸ್ ಗಿಡವನ್ನು ಹೋಲುತ್ತದೆ, ಹುಷಾರಾಗಿರಿ. ಇದು *ನೋಡಲಿಕ್ಕೆ ಯಾವದೋ ಉಪಯೋಗಕ್ಕೆ ಬಾರದ ಗಿಡದಂತೆ ಕಂಡರೂ, ಅನೇಕ ಲಾಭಗಳಿವೆ.
*ಅಲೋವೆರಾ ಎಲೆಯನ್ನು ಕತ್ತರಿಸಿ, ಅದರಲ್ಲಿರುವ ರಸವನ್ನು ಶೇಖರಿಸಿಕೊಳ್ಳಿ.
*ಕರಗಿಸಿದ ಒಂದು ಚಮಚ ಕೋಕೋ ಬಟರ್‌ನ್ನು ಅಲೋ ವೆರಾ ರಸದೊಂದಿಗೆ ಬೆರೆಸಿಕೊಳ್ಳಿ.
*ಸ್ವಲ್ಪ ಲೋಳೆಯೆನಿಸುತ್ತದೆ, ಆದರೆ ತೊಂದರೆಯಿಲ್ಲ. ನಿಧಾನಕ್ಕೆ ನಿಮ್ಮ ತ್ವಚೆಯ ಮೇಲೆ ಲೇಪಿಸಿಕೊಳ್ಳಿ.
*ಹಾಗೆಯೇ ಒಣಗಲು ಬಿಟ್ಟುಬಿಡಿ.
*ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.
*ವಾರಕ್ಕೆರಡು ಬಾರಿ ಮಾಡಿಕೊಂಡರೆ ನಿಮ್ಮ ತ್ವಚೆಯಲ್ಲಿ ಅಮೋಘ ಬದಲಾವಣೆ ಕಾಣಿಸಿಕೊಳ್ಳುವದು.
*ನಿಮಗೆ ಅನುಕೂಲಕರವಾದ ಯಾವದೇ ಒಂದು ವಿಧಾನವನ್ನು ಪ್ರಯತ್ನಿಸಿದರೂ ಸಾಕು ಅತ್ಯಾಕರ್ಷಕವಾದ ತ್ವಚೆ ಪಡೆಯುವದರಲ್ಲಿ ಸಂಶಯವೇ ಇಲ್ಲ!!!
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ದಿನವಿಡೀ ತಾಜಾತನದ ಲುಕ್ ನಿಮ್ಮದಾಗಬೇಕೆ... ಇಲ್ಲಿದೆ ಸಿಂಪಲ್ ಟ್ರಿಕ್ಸ್
ದೇಹದ ಆಯಾಸ ಮುಖದ ಮೇಲೆ ಕಾಣದಿರಲು ಈ ಸಲಹೆಗಳನ್ನು ಅನುಸರಿಸಿ ನೋಡಿ
ಬರೀ ಏಳೇ ದಿನಗಳಲ್ಲಿ ಬೆಳ್ಳಗಾಗುವಿರಿ! ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
ತಲೆಕೂದಲುಗಳು ದುರ್ಗಂಧ ಬೀರುತ್ತದೆಯೆ? ಹಾಗಾದರೆ ಈ ಮನೆ ಮದ್ದುಗಳನ್ನು ಮಾಡಿ ನೋಡಿ
ಮುಖದ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುವ ನೈಸರ್ಗಿಕ ಫೇಸ್ ಪ್ಯಾಕ್
ಸೌಂದರ್ಯ ವಿಷಯದಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ...
ಅಂದ ಕೆಡಿಸುವ ಕಪ್ಪು ವರ್ತುಲ ನಿವಾರಣೆಗೆ ಶೀಘ್ರ ಮನೆಮದ್ದುಗಳು
ಮುಖದ ಸೌಂದರ್ಯ ಹೆಚ್ಚಿಸಲು ಹೆಸರುಕಾಳಿನ ಫೇಸ್ ಪ್ಯಾಕ್
ಸುಂದರವಾಗಿ ಕಾಣಬೇಕೆ? ಹಾಗಾದರೆ ಪ್ರತಿನಿತ್ಯ ಈ ಸರಳ ಟಿಪ್ಸ್ ಅನುಸರಿಸಿ
ಕೂದಲುದುರುವ ಸಮಸ್ಯೆಯೇ? ಹಾಗಾದರೆ ಸರಿಯಾಗಿ ಹರಳೆಣ್ಣೆ ಹಚ್ಚಿ...
ಬ್ಯೂಟಿ ಟಿಪ್ಸ್: ಸುಲಭವಾಗಿ ತ್ವಚೆಯ ಮೇಲಿನ ಸಣ್ಣ ರಂಧ್ರಗಳನ್ನು ಶುದ್ಧೀಕರಿಸಿ
ತ್ವಚೆಗೆ ಹಾಲಿನ ಕೆನೆಯ ಫೇಸ್ ಪ್ಯಾಕ್-ಇನ್ನಷ್ಟು ಮುದ್ದಾಗಿ ಕಾಣುವಿರಿ
ಸುಂದರವಾಗಿ ಕಾಣಬೇಕೆ? ಹಾಗಾದರೆ ಈ ಸರಳ ಟಿಪ್ಸ್ ಅನುಸರಿಸಿ
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಸರ್ವಜ್ಞನಗರ ಕ್ಷೇತ್ರ ಪರಿಚಯ: ಜಾರ್ಜ್ ಹ್ಯಾಟ್ರಿಕ್ ಕನಸಿಗೆ ಬೀಳುತ್ತಾ ಕಡಿವಾಣ?
ಉಪೇಂದ್ರ ರಾಜಕೀಯ ಪ್ರವೇಶವೇ ಓಳು ಬರೀ ಓಳು!
ಸಿ.ವಿ.ರಾಮನ್ ನಗರ ಆಪ್ ಅಭ್ಯರ್ಥಿ ಮೋಹನ ದಾಸರಿ ಪರಿಚಯ