For Quick Alerts
ALLOW NOTIFICATIONS  
For Daily Alerts

ಮೊಡವೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು-ಎಲ್ಲಾ ಸರಿ ಹೋಗುತ್ತೆ...

By Deepak
|

ಮೊಡವೆಗಳು ಎಂದರೆ ಸಾಕು ಹದಿಹರೆಯದ ವಯಸ್ಕರು ಏನೋ ದೆವ್ವದ ಸಮಾಚಾರ ಕೇಳಿದಂತೆ ತಿರುಗಿ ನೋಡುತ್ತಾರೆ. ಮೊಡವೆಗಳು ನಮ್ಮ ಸೌಂದರ್ಯದ ಪಾಲಿಗೆ ಶತ್ರುಗಳು. ತ್ವಚೆಯಲ್ಲಿ ಕಾಣಿಸಿಕೊಳ್ಳುವ ಬೇಡದ ಅತಿಥಿಗಳು. ಮೊಡವೆ ಇಂತಹವರಿಗೆ ಬರುತ್ತದೆ ಎಂದು ಹೇಳಲಾಗದು. ಆದರೂ ಎಲ್ಲರಿಗೂ ಒಂದಲ್ಲ ಒಂದು ಕಾಲದಲ್ಲಿ ಮೊಡವೆ ಕಾಟ ಕೊಟ್ಟೇ ಇರುತ್ತದೆ.

ಮೊಡವೆಗಳು ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರಲ್ಲಿ ಕಳವಳವನ್ನು ಉಂಟುಮಾಡುವಂತಹ ಸಮಸ್ಯೆಯಾಗಿರುತ್ತದೆ. ಇದಕ್ಕೆ ಪುರುಷರೂ ಹೊರತಲ್ಲ ಆನೇಕ ಪುರುಷರು ಸಹ ಈ ಮೊಡವೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಗುರುತುಗಳನ್ನು ತೆಗೆಯಲು ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ವಲ್ಪ ಸಮಯದ ಅವಶ್ಯಕತೆ ಬೇಕಾಗುತ್ತದೆ.

ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಅದರಲ್ಲೂ ಹುಡುಗಿಯರು ತಮ್ಮ ಮೊಡವೆಯುಕ್ತ ಮುಖವನ್ನು ಇತರರಿಗೆ ತೋರಿಸಲು ಮುಜುಗರ ಪಡುತ್ತಾರೆ. ಇನ್ನು ವಿಶೇಷ ಸಂದರ್ಭಗಳಲ್ಲಿ ಮತ್ತು ಸಮಾರಂಭಗಳಲ್ಲಿ ಈ ಮುಜುಗರ ಅವರನ್ನು ಇನ್ನಷ್ಟು ಕಾಡುತ್ತದೆ. ಮೊಡವೆಗಳನ್ನು ಹೋಗಲಾಡಿಸಲು ಕ್ರೀಮ್ ಗಳನ್ನು ಔಷಧಿಗಳನ್ನು ಬಳಸುವುದು ಒಳ್ಳೆಯದಲ್ಲ.

ಇನ್ನು ಮುಂದೆ, ಮೊಡವೆಗೆ ಸೋಲುವ ಪ್ರಶ್ನೆಯೇ ಇಲ್ಲ..!

ಈ ಕ್ರೀಮ್ ಗಳನ್ನು ಕೇವಲ ಒಂದೆರಡು ವಾರಗಳ ಮಟ್ಟಿಗೆ ಬಳಸಬಹುದು.ಇದನ್ನು ದೀರ್ಘಕಾಲದವರಗೆ ಬಳಸಿದರೆ ಅದು ಅನೇಕ ಅಡ್ದ ಪರಿಣಾಮಗಳಿಗೆ ಕಾರಣವಾಗುತ್ತದೆ. ಅಲ್ಲದೆ ಚಿಕಿತ್ಸೆಯ ನಂತರವೂ ಮೊಡವೆಗಳು ಮರುಕಳಿಸುವ ಸಾಧ್ಯತೆ ಇರುತ್ತದೆ. ಅದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ನೈಸರ್ಗಿಕ ವಿಧಾನವನ್ನು ಆರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿರುತ್ತದೆ. ಬನ್ನಿ ಮೊಡವೆಗಳನ್ನು ಹೋಗಲಾಡಿಸಲು ಇರುವ ಕೆಲವು ಮನೆಯ ಮದ್ದುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ....

ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆ ಮತ್ತು ಜೇನುತುಪ್ಪ

ಮೊಡವೆಗಳನ್ನು ಹೋಗಲಾಡಿಸಲು ಸಾಸಿವೆ ಒಂದು ಅತ್ಯುತ್ತಮ ಮನೆ ಮದ್ದು. ಇದರಲ್ಲಿರುವ ಸ್ಯಾಲಿಸಿಲಿಕ್ ಅಮ್ಲ ಎಂಬ ನೈಸರ್ಗಿಕ ಅಂಶ ಮೊಡವೆಗಳನ್ನು ಮತ್ತು ಇತರ ಸೋಂಕನ್ನು ಹೋಗಲಾಡಿಸಲು ಒಂದು ಉತ್ತಮ ಮನೆ ಮದ್ದಾಗಿದೆ. ಕಾಲು ಟೀ ಸ್ಪೂನ್ ಸಾಸಿವೆ ಪುಡಿಯನ್ನು ಒಂದು ಟೀಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳವರಗೆ ಹಾಗೆ ಬಿಟ್ಟು ನಂತರ ಮುಖ ತೊಳೆಯಬೇಕು.

ಗ್ರೀನ್ ಟೀ ಐಸ್ ಟ್ಯೂಬ್

ಗ್ರೀನ್ ಟೀ ಐಸ್ ಟ್ಯೂಬ್

ಹೆಚ್ಚಿನ ಚಹಾ ಎಲೆಗಳನ್ನು ಸೇರಿಸಿ ಒಂದು ಗ್ರೀನ್ ಟೀಯನ್ನು ಮಾಡಿ ಅದನ್ನು ಐಸ್ ಟ್ರೇನಲ್ಲಿ ಹಾಕಿ ಸಣ್ಣ ಸಣ್ಣ ಐಸ್ ಕ್ಯೂಬ್‌ಗಳನ್ನು ಮಾಡಿಕೊಂಡು ಅದನ್ನು ಮೊಡವೆಯ ಭಾಗದಲ್ಲಿ ಮೃದುವಾಗಿ ಉಜ್ಜುವುದರಿಂದ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಅಲ್ಲದೆ ಇದು ಚರ್ಮದ ಊರಿಯೂತವನ್ನು ಸಹ ಕಡಿಮೆಯಾಗುತ್ತದೆ.

ಕತ್ತರಿಸಿದ ಟೊಮೆಟೊಗಳು

ಕತ್ತರಿಸಿದ ಟೊಮೆಟೊಗಳು

ಟೊಮೇಟೊನಲ್ಲಿ ಉತ್ಕರ್ಷಣ ನಿರೋಧಕ (antioxidant) ಸತ್ವಗಳು ಹೇರಳವಾಗಿದ್ದು, ಇದು ನಿಮ್ಮ ಚರ್ಮವನ್ನು ಮೃದುಗೊಳಿಸಲು ಹೆಚ್ಚು ಸಹಕಾರಿ. ಮೊಡವೆಗಳನ್ನು ಹೋಗಲಾಡಿಸಲು ಇದೂ ಸಹ ಒಂದು ಉತ್ತಮ ವಿಧಾನವಾಗಿದ್ದು ಇದರಿಂದ ಚರ್ಮದ ಸೋಂಕಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಟೊಮೆಟೋ ಹೋಳಿನ ರಸ ಅಥವಾ ಅದರೊಳಗಿನ ಅಂಶದಿಂದ ನಯವಾಗಿ ಮೊಡವೆಗಳಿಗೆ ತಿಕ್ಕಿದರೆ ಕಲೆಗಳು ವಾಸಿಯಾಗುತ್ತದೆ.

ಮೊಡವೆಗಳ ನಿವಾರಣೆಗೆ ಜ್ಯೂಸುಗಳು

ಬೆಳ್ಳುಳ್ಳಿ ಜ್ಯೂಸ್

ಬೆಳ್ಳುಳ್ಳಿ ಜ್ಯೂಸ್

ಬೆಳ್ಳುಳ್ಳಿ ಜ್ಯೂಸ್ ಚರ್ಮದ ಸೋಂಕು ಮತ್ತು ಮೊಡವೆಗಳನ್ನು ಹೋಗಲಾಡಿಸುವ ಒಂದು ಉತ್ತಮ ಮನೆ ಮದ್ದಾಗಿದೆ. ಸ್ವಲ್ಪ ಪ್ರಮಾಣದ ಬೆಳ್ಳುಳ್ಳಿ ಜ್ಯೂಸನ್ನು ಮೊಡವೆಯ ಭಾಗಕ್ಕೆ ಹಚ್ಚಿ ನಿಮಗೆ ಅನುಕೂಲವಾದಷ್ಟು ಸಮಯ ಬಿಟ್ಟು ನಂತರ ಮುಖ ತೊಳೆಯಬೇಕು.

ಮೊಟ್ಟೆಯ ಬಿಳಿ ಮಾಸ್ಕ್

ಮೊಟ್ಟೆಯ ಬಿಳಿ ಮಾಸ್ಕ್

ಮೊಟ್ಟೆಯ ಮಾಸ್ಕ್ ಅನ್ನು ತಯಾರಿಸುವಾಗ ಹೊಡೆದ ಮೊಟ್ಟೆಯ ಒಳ ತಿರುಳಿನಲ್ಲಿ ಬೆರಳನ್ನು ಹಾಕಿ (ಮೊಟ್ಟೆಯಲ್ಲಿರುವ ತಿರುಳುನ್ನೆಲ್ಲ ತೆಗೆದ ಮೇಲೆ). ಹೀಗೆ ಮೊಟ್ಟೆಯ ಚಿಪ್ಪಿಗೆ ಅಂಟಿಕೊಂಡ ಆ ಲೇಹ್ಯವನ್ನು ಮೊಡವೆಗಳಿಗೆ ಲೇಪಿಸಿ. ಇದನ್ನು 20 ನಿಮಿಷ ಬಿಡಿ. ಮೊಟ್ಟೆಯ ಬಿಳಿಭಾಗವನ್ನು ಲೇಪಿಸುವ ಮೊದಲು ನಿಂಬೆರಸವನ್ನು ಲೇಪಿಸುವುದರಿಂದ ಉತ್ತಮ ಹಾಗು ಶೀಘ್ರ ಪರಿಹಾರವನ್ನು ಪಡೆಯಬಹುದು.

ಆಪಲ್ ಸಿಡೆರ್ ವಿನೀಗರ್

ಆಪಲ್ ಸಿಡೆರ್ ವಿನೀಗರ್

ಮೊಡವೆಗಳಿಗೆ ದೊರೆಯುವ ಮತ್ತೊಂದು ಮನೆ ಮದ್ದು ಎಂದರೆ ಅದು ಆಪಲ್ ಸಿಡೆರ್ ವಿನೀಗರ್. ಒಂದು ಹತ್ತಿಯ ಉಂಡೆಯನ್ನು ಆಪಲ್ ಸಿಡೆರ್ ವಿನೀಗರ್‌ನಲ್ಲಿ ಅದ್ದಿ ಐದು ನಿಮಿಷಗಳ ಕಾಲ ಮೊಡವೆಗಳ ಮೇಲೆ ಇಡಿ. ಇಡೀ ಮುಖವನ್ನು ಈ ವಿನೀಗರಿನಿಂದ ಒರೆಸಬೇಡಿ. ಮೊಡವೆ ಇರುವ ಭಾಗವನ್ನು ಮಾತ್ರ ಒರೆಸಿ. ದಿನಕ್ಕೆ ಮೂರು ನಾಲ್ಕು ಬಾರಿ ಹೀಗೆ ಮಾಡಿ.

ನಿಂಬೆರಸ

ನಿಂಬೆರಸ

ರಾತ್ರಿ ಮಲಗುವಾಗ ಸ್ವಲ್ಪ ನಿಂಬೆರಸವನ್ನು ತೆಗೆದುಕೊಂಡು ಅದನ್ನು ಮೊಡವೆಗಳ ಮೇಲೆ ಹತ್ತಿಯ ಉಂಡೆಯ ಸಹಾಯದಿಂದ ಒರೆಸಿ. ಇದನ್ನು ರಾತ್ರಿಯೆಲ್ಲಾ ಹಾಗೆ ಬಿಟು, ಬೆಳಗ್ಗೆ ಒಣಗಿದ ಮೇಲೆ ಚೆನ್ನಾಗಿ ತೊಳೆಯಿರಿ.

English summary

How To Remove Pimples In One Day At Home

Girls can get embarrassed to show their pimply faces, especially when they are at any special occasion. Using medicated creams to treat pimples is not a good idea. You can use these creams or ointments only for a week or so, as they have many side effects if used over a long period of time. The pimples may even reoccur on the face after the treatment. Hence, its best to opt for natural ways to treat this problem.
Story first published: Wednesday, May 31, 2017, 20:14 [IST]
X
Desktop Bottom Promotion