ಬೇಸಿಗೆಯಲ್ಲಿ ಕಾಡುವ ತುರಿಕೆ, ಬೆವರುಗುಳ್ಳೆ ಸಮಸ್ಯೆಗಳಿಗೆ ಸರಳ ಟಿಪ್ಸ್

By: Divya
Subscribe to Boldsky

ಚರ್ಮವು ದೇಹದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದು. ಸೌಂದರ್ಯವನ್ನೂ ಬಿಂಬಿಸುವ ಈ ಅಂಗ ದೇಹದ ರಕ್ಷಣಾ ಕವಚ. ಬಾಹ್ಯ ಪರಿಸರದಿಂದ ಉಂಟಾಗುವ ಸಮಸ್ಯೆಯನ್ನು ಇದು ತಡೆಯುತ್ತದೆ. ಸೂರ್ಯನ ನೇರ ಕಿರಣದಿಂದ ಉಂಟಾಗುವ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಬ್ಯಾಕ್ಟೀರಿಯಾ, ವೈರಸ್‍ಗಳಂತಹ ಸೂಕ್ಷ್ಮ ಜೀವಿಗಳಿಗೆ ತಡೆಗೋಡೆಯಾಗಿ ನಿಂತು ಕಾರ್ಯ ನಿರ್ವಹಿಸುತ್ತದೆ. ಬೇಸಿಗೆಯಲ್ಲಿ ಕಂಡು ಬರುವ ಗುಳ್ಳೆಗಳಿಗೆ ಪರಿಹಾರ

ಶರೀರದ ಉಷ್ಣತೆಯನ್ನು ನಿಯಂತ್ರಿಸಲು ಬೆವರು ಗ್ರಂಥಿಗಳನ್ನು ಇದು ಹೊಂದಿದೆ. ಬೆವರುವಿಕೆಯಿಂದ ತ್ವಚೆಯ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅತಿಯಾದ ಉಷ್ಣತೆಯಿಂದ ಚರ್ಮದ ಮೇಲೆ ಒಂದು ರೀತಿಯ ಚಿಕ್ಕ ಚಿಕ್ಕ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವು ಹೆಚ್ಚು ತುರಿಕೆಯ ಅನುಭವವನ್ನು ನೀಡುತ್ತವೆ. ಇದರಿಂದ ತ್ವಚೆಯು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುವುದು. ಇವು ಸಾಮಾನ್ಯವಾಗಿ ಬಟ್ಟೆ ಧರಿಸುವ ಜಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.  ತುರಿಕೆ ಹೋಗಲಾಡಿಸುವ ಮನೆಮದ್ದುಗಳು

ಬೆವರನ್ನು ಹೊರ ಹಾಕುವ ಗ್ರಂಥಿಗಳು ನಿರ್ಬಂಧಿಸಿದಾಗ ಮತ್ತು ಬೆವರು ಆವಿಯಾಗದೇ ಇರುವಾಗ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯಿಂದ ಒಂದು ಬಗೆಯ ಕಿರಿಕಿರಿ ಮತ್ತು ತೀವ್ರ ತರದ ತುರಿಕೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದು ಶಿಶು-ವಯಸ್ಕರು ಎನ್ನುವ ತಾರತಮ್ಯವಿಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಈ ತೊಂದರೆಯಿಂದ ಪಾರಾಗಲು ಈ ಕೆಳಗಿನ ಕೆಲವು ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳಬಹುದು...

ಸಡಿಲವಾದ ಉಡುಪುb

ಸಡಿಲವಾದ ಉಡುಪುb

ಬೇಸಿಗೆಯಲ್ಲಿ ಬಿಗಿಯಾದ ಉಡುಪನ್ನು ಧರಿಸುವುದರಿಂದ ತ್ವಚೆಯ ಮೇಲೆ ಬೆವರು ಹಾಗೆ ಉಳಿದುಕೊಂಡು ಕಿರಿ ಕಿರಿಯನ್ನುಂಟುಮಾಡುತ್ತದೆ. ಸಡಿಲವಾದ ಉಡುಗೆ ತೊಡುವುದರಿಂದ ದೇಹಕ್ಕೆ ಗಾಳಿಯು ಹೇರಳವಾಗಿ ದೊರೆಯುತ್ತದೆ. ಜೊತೆಗೆ ತಂಪಾದ ಅನುಭವವನ್ನು ಪಡೆದು ಬೆವರು ಗುಳ್ಳೆಗಳಿಂದ ದೂರ ಉಳಿಯಬಹುದು.

ಕ್ರೀಮ್ ಬಳಸದಿರಿ

ಕ್ರೀಮ್ ಬಳಸದಿರಿ

ಬೇಸಿಗೆಯಲ್ಲಿ ಕ್ರೀಮ್ ಹಚ್ಚುವುದನ್ನು ಆದಷ್ಟು ನಿಲ್ಲಿಸಿ. ಕ್ರೀಮ್ ಹಾಗೂ ಪೆಟ್ರೋಲಿಯಂ ಜೆಲ್ಲಿಯಂತಹ ಉತ್ಪನ್ನಗಳು ಬೆವರು ಗ್ರಂಥಿಗಳನ್ನು ಮುಚ್ಚುತ್ತವೆ. ಆಗ ತ್ವಚೆಯ ಮೇಲೆ ಬೆವರು ಗುಳ್ಳೆ/ಬೆವರುಸೆಲೆ ಕಾಣಿಸಿಕೊಳ್ಳುತ್ತವೆ. ಕ್ರೀಮ್ ಬಳಕೆ ನಿಲ್ಲಿಸುವುದು ಒಂದು ಸೂಕ್ತ ಕ್ರಮ.

ಸ್ನಾನ ಮಾಡಿ

ಸ್ನಾನ ಮಾಡಿ

ಬೇಸಿಗೆಯಲ್ಲಿ ನಿಯಮಿತವಾಗಿ ಎರಡು ಬಾರಿಯಾದರೂ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ದೇಹದಲ್ಲಿರುವ ಕೊಳಕನ್ನು ತೆಗೆದು ಬೆವರು ಗ್ರಂಥಿ ಮುಚ್ಚಿಕೊಳ್ಳುವುದನ್ನು ತಡೆಯುತ್ತದೆ. ದೇಹವು ಸ್ವಲ್ಪ ಹೊತ್ತು ಶುದ್ಧ ಹಾಗೂ ತಣ್ಣಗಾಗಿ ಇರುತ್ತದೆ. ಬೆವರು ಗುಳ್ಳೆಗಳು ಹಾಗೂ ತುರಿಕೆಗಳು ಇರಲಾರವು.

ಬಿಸಿಯಾದ ವಾತಾವರಣದಿಂದ ದೂರವಿರಿ

ಬಿಸಿಯಾದ ವಾತಾವರಣದಿಂದ ದೂರವಿರಿ

ಬಿಸಿ ಕೋಣೆ ಅಥವಾ ನೇರವಾಗಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡದಿರಿ. ಆದಷ್ಟು ತಂಪಾದ ಕೊಠಡಿಯಲ್ಲಿ ಇದ್ದರೆ ದೇಹದಲ್ಲಿ ಉಂಟಾಗುವ ಅತಿಯಾದ ಬೆವರುವಿಕೆ ಹಾಗೂ ತುರಿಕೆಯಿಂದ ಪಾರಾಗಬಹುದು.

ದೇಹದ ಸೂಕ್ಷ್ಮ ಜಾಗಗಳ ಆರೈಕೆ

ದೇಹದ ಸೂಕ್ಷ್ಮ ಜಾಗಗಳ ಆರೈಕೆ

ದೇಹದ ಸೂಕ್ಷ್ಮ ಜಾಗಗಳಾದ ತೋಳು, ಕುತ್ತಿಗೆ, ತೊಡೆಯ ಸಂಧಿಗಳಲ್ಲಿ ಹೆಚ್ಚು ಬೆವರುವುದು. ಅಂತಹ ಜಾಗದಲ್ಲಿ ಬೆವರು ಬೇಗ ಆವಿಯಾಗದು. ಆಕಾರಣಕ್ಕಾಗಿ ಅವುಗಳ ಕಾಳಜಿ ವಹಿಸಬೇಕು. ಕರವಸ್ತ್ರಗಳಿಂದ ಬೆವರನ್ನು ಒರೆಸುವುದು, ಆಗಾಗ ನೀರಿನಿಂದ ತೊಳೆದುಕೊಳ್ಳುವುದು ಮತ್ತು ಸೂಕ್ತ ಡಿಯೋಡ್ರೆಂಟ್‍ಗಳನ್ನು ಬಳಕೆ ಮಾಡಬೇಕು.

ಕೆಲಸದ ವೇಳಾ ಪಟ್ಟಿ

ಕೆಲಸದ ವೇಳಾ ಪಟ್ಟಿ

ಬೇಸಿಗೆಯಲ್ಲಿ ಆದಷ್ಟು ನಮ್ಮ ಕೆಲಸದ ಅವಧಿಯ ವ್ಯತ್ಯಾಸ ಮಾಡಿಕೊಳ್ಳಬೇಕು. ಬೆಳಗ್ಗೆಯ ಸಮಯದಲ್ಲೇ ಹೆಚ್ಚು ಕೆಲಸ, ವಾಕಿಂಗ್ ಇನ್ನಿತರ ಕೆಲಸವನ್ನು ಮಾಡಿ ಮುಗಿಸಿಕೊಂಡರೆ ಬೆವರುವಿಕೆ ಕಡಿಮೆಯಾಗಿರುತ್ತದೆ. ಸೂರ್ಯನ ಶಾಖ ಹೆಚ್ಚುತ್ತಿದ್ದಂತೆ ಕೆಲಸ ಮಾಡುವಾಗ ಹೆಚ್ಚು ಆಯಾಸವಾಗುವುದು.

ಪೌಡರ್ ಬಳಕೆ

ಪೌಡರ್ ಬಳಕೆ

ಬೇಸಿಗೆಯ ಬೆವರಿಗೆಂದೇ ಸಿಗುವ ಕೆಲವು ಸೂಕ್ತ ಪೌಡರ್‍ಗಳನ್ನು ಬಳಸುವುದರಿಂದ ಬೆವರುವಿಕೆಯನ್ನು ತಡೆಯಬಹುದು. ದೇಹದ ಸೂಕ್ಷ್ಮ ಜಾಗದಲ್ಲಿ ಇವುಗಳನ್ನು ಹಚ್ಚಿಕೊಳ್ಳುವುದರಿಂದ ಬೆವರುವುದನ್ನು ತಡೆಯಬಹುದು. ಜೊತೆಗೆ ತ್ವಚೆಯ ಮೇಲಿರುವ ತುರಿಕೆಯ ಕಿರಿಕಿರಿ ತಪ್ಪುವುದು.

 ವೈದ್ಯರಿಗೆ ತೋರಿಸಿ

ವೈದ್ಯರಿಗೆ ತೋರಿಸಿ

ಬೇಸಿಗೆ ಉರಿಯಿಂದ ಕೆಲವರಿಗೆ ಊತ, ಜ್ವರ ಮತ್ತು ಗಂಭೀರವಾದ ತುರಿಕೆಗಳಿರುತ್ತವೆ. ಅಂತಹವರು ವೈದ್ಯರ ಸಲಹೆ ಪಡೆಯಬೇಕು. ಇಲ್ಲವಾದರೆ ಕೆಲವು ಸೋಂಕುಗಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.

 

 

English summary

How To Get Rid Of Heat Rashes

Your skin is one of the most vital parts of the body. It is not only of aesthetic importance but one must also remember that one's skin is the first line of defense.It protects you from the direct ultra violet rays of the sun and acts as a barrier for microbes such as bacteria and viruses.
Subscribe Newsletter