For Quick Alerts
ALLOW NOTIFICATIONS  
For Daily Alerts

ತುರಿಕೆ ಹೋಗಲಾಡಿಸುವ ಮನೆಮದ್ದುಗಳು

|

ತುರಿಕೆ ಅನ್ನುವುದು ಎಲ್ಲಾ ಕಾಲದಲ್ಲೂ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಅಲರ್ಜಿ ಆದಾಗ, ಸೋಪು, ಕ್ರೀಮ್ ಗಳಲೂ ನಿಮ್ಮ ತ್ವಚೆಗೆ ಆಗಿ ಬರದಿದ್ದರೆ, ಕೀಟಾಣುಗಳ ಕಡಿತದಿಂದ ಅಥವಾ ಹವಾಮಾನದಲ್ಲಾಗುವ ಏರು ಪೇರಿನಿಂದಾಗಿ ಈ ಸಮಸ್ಯೆ ಕಂಡು ಬರುವುದು.

ತುರಿಕೆ ಕಂಡು ಬಂದಾಗ ಉಗುರಿನಿಂದ ಕೆರೆದರೆ ಗಾಯವಾಗಿ, ಕಲೆ ಬೀಳುವುದು, ಆದ್ದರಿಂದ ಮೈಯಲ್ಲಿ ತುರಿಕೆ ಕಂಡು ಬಂದರೆ ಈ ವಿಧಾನಗಳನ್ನು ಅನುಸರಿಸಿ ಕಡಿಮೆಯಾಗುವುದು:

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾವನ್ನು ನೀರಿನಲ್ಲಿ ಕಲೆಸಿ ಪೇಸ್ಟ್ ರೀತಿ ಮಾಡಿ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ.

ಗಮನಿಸಬೇಕಾದ ಅಂಶ: ಗಾಯವಾಗಿದ್ದರೆ ಅದರ ಮೇಲೆ ಅಡುಗೆ ಸೋಡಾವನ್ನು ಹಚ್ಚಬೇಡಿ.

ಓಟ್ಸ್

ಓಟ್ಸ್

ಓಟ್ಸ್ ಪುಡಿ ಮಾಡಿ ನೀರಿನೊಂದಿಗೆ ಮಿಕ್ಸ್ ಮಾಡಿ ಮೈಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಇದು ತುರಿಕೆಯನ್ನು ಕಮ್ಮಿ ಮಾಡುವಲ್ಲಿ ಪರಿಣಾಮಕಾರಿಯಾದ ವಿಧಾನವಾಗಿದೆ.

ಐಸ್

ಐಸ್

ತುರಿಕೆಯ ಮೇಲೆ ಐಸ್ ನಿಂದ ಮಸಾಜ್ ಮಾಡಿ. ಅಥವಾ ತಣ್ಣೀರನ್ನು ಹಾಕಿ , ಇದು ತುರಿಕೆಯನ್ನು ಕಮ್ಮಿ ಮಾಡುತ್ತದೆ.

ನಿಂಬೆ ರಸ

ನಿಂಬೆ ರಸ

ತುರಿಕೆ ಆಗುತ್ತಿರುವ ಜಾಗದ ಮೇಲೆ ನಿಂಬೆ ರಸ ಹಚ್ಚಿದರೂ ತುರಿಕೆ ಕಮ್ಮಿಯಾಗುವುದು. ಇದನ್ನು ಹಚ್ಚಿದರೆ ತ್ವಚೆಗೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಲವಂಗದ ಎಣ್ಣೆಯನ್ನು ತುರಿಕೆ ಇರುವ ಜಾಗದಲ್ಲಿ ಹಚ್ಚಿದರೆ ತಕ್ಷಣ ಕಡಿಮೆಯಾಗುವುದು. ಈ ವಿಧಾನ ಅನುಸರಿಸಿದರೆ ತುರಿಕೆ ತಕ್ಷಣ ನಿಂತು ಹೋಗುವುದು.

 ಲೋಳೆಸರ

ಲೋಳೆಸರ

ತುರಿಕೆ ಹೋಗಲಾಡಿಸುವ ಮತ್ತೊಂದು ಪರಿಣಾಮಕಾರಿಯಾದ ಮದ್ದೆಂದರೆ ಲೋಳೆಸರ. ಇದನ್ನು ಹಚ್ಚಿದರೆ ತುರಿಕೆ ಕಮ್ಮಿಯಾಗುವುದಲ್ಲದೆ, ತ್ವಚೆಯಲ್ಲಿ ಗುಳ್ಳೆಗಳು ಎದ್ದಿದ್ದರೆ ಕಡಿಮೆಯಾಗುವುದು.

English summary

Simple Home Remedies For Itchy Skin

You will be relieved to know that these remedies are easy and readily available in your kitchen cupboard. These simple home remedies for itchy skin are cent percent safe and do not cause any side effects to your skin.
X
Desktop Bottom Promotion