ಮೊಡವೆಯ ಕಲೆ ನಿಮಗೆ ಕಿರಿ ಕಿರಿಯನ್ನುಂಟುಮಾಡುತ್ತಿದೆಯೇ? ಇಲ್ಲಿದೆ ಪರಿಹಾರ

Posted By: Divya Pandith
Subscribe to Boldsky

ಪ್ರತಿಯೊಬ್ಬರೂ ತಮ್ಮ ಮುಖದ ಮೇಲೆ ಯಾವುದೇ ಕಲೆ ಮತ್ತು ಮೊಡವೆಗಳಿಲ್ಲದೆ ಕೋಮಲವಾಗಿರಬೇಕು. ನೋಡಲು ಆಕರ್ಷಕ ಹಾಗೂ ಕಾಂತಿಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಹಾಗೊಮ್ಮೆ ಕಲೆ ಹಾಗೂ ಮೊಡವೆಗಳಿದ್ದರೆ ಅದು ಆಕರ್ಷಣೆಗೆ ಅಡ್ಡಿ ಮಾಡುತ್ತದೆ ಎನ್ನುವ ಭಾವವನ್ನು ತಳೆದಿರುತ್ತಾರೆ. ಹಾಗಾಗಿ ಮುಖದ ಮೇಲೆ ಏನಾದರೂ ಕಲೆಯುಂಟಾದರೆ ಅದರ ನಿವಾರಣೆಗಾಗಿ ಅನೇಕ ಪರಿಹಾರೋಪಾಯಗಳನ್ನು ಮಾಡುತ್ತಾರೆ.

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಕಲುಷಿತ ಗಾಳಿ, ಆಹಾರ ಕ್ರಮ ಮತ್ತು ಹಾರ್ಮೋನ್‍ಗಳ ವ್ಯತ್ಯಾಸದಿಂದ ಮೊಡವೆ ಹಾಗೂ ಅದರಿಂದ ಕಲೆಗಳುಂಟಾಗುವುದು ಸಹಜ. ಆ ಕಲೆಗಳ ನಿವಾರಣೆಗಾಗಿ ದುಬಾರಿ ಬೆಲೆಯ ಚಿಕಿತ್ಸೆಗೆ ಒಳಪಡುವುದು ಅಥವಾ ಪದೇ ಪದೇ ಸೌಂದರ್ಯ ತಜ್ಞರಿಂದ ಆರೈಕೆ ಮಾಡಿಸಿಕೊಳ್ಳುವುದು ಸಹಜ. ಇದರ ಬದಲು ಮನೆಯಲ್ಲಿಯೇ ಕೆಲವು ಆರೈಕೆಗಳನ್ನು ಮಾಡಿಕೊಳ್ಳಬಹುದು. ಅವುಗಳ ಪರಿಚಯ ನಮಗಿರಬೇಕಷ್ಟೆ. ನಿಮ್ಮ ಮುಖದಲ್ಲೂ ಆಗಾಗ ಮೊಡವೆಗಳು ಹುಟ್ಟಿಕೊಂಡು ಕಲೆ ಮಾಡಿ ಹೋಗುತ್ತವೆ ಎಂದಾದರೆ ಈ ಕೆಳಗೆ ವಿವರಿಸಲಾದ ಆರೈಕೆಯನ್ನು ಮಾಡಿ. ನಿಮ್ಮ ತ್ವಚೆಯು ಕೆಲವೇ ದಿನಗಳಲ್ಲಿ ಆಕರ್ಷಣೀಯ ಕಾಂತಿಯನ್ನು ಪಡೆದುಕೊಳ್ಳುತ್ತದೆ.

ನಿಂಬೆ ರಸವನ್ನು ಅನ್ವಯಿಸಿ

ನಿಂಬೆ ರಸವನ್ನು ಅನ್ವಯಿಸಿ

ಮುಖದ ಸೌಂದರ್ಯವನ್ನು ಕೆಡಿಸುವ ಮೊಡವೆಗಳ ಪ್ರಮಾಣವನ್ನು ಕಡಿಮೆಮಾಡುವ ಹಾಗೂ ತ್ವಚೆಯ ಮೇಲಿರುವ ಕಲೆಯನ್ನು ನಿವಾರಿಸಿ ಕಾಂತಿಯಿಂದ ಕೂಡಿರುವಂತೆ ಮಾಡುವ ನೈಸರ್ಗಿಕ ಘಟಕಾಂಶ ಎಂದರೆ ನಿಂಬೆ ರಸ. ಬ್ಯಾಕ್ಟೀರಿಯಾ ವಿರೋಧಿಯಾದ ನಿಂಬೆ ರಸ ತ್ವಚೆಯ ಮೇಲಿರುವ ಸಮಸ್ಯೆಗಳನ್ನು ಬಲು ಸುಲಭವಾಗಿ ನಿವಾರಿಸುತ್ತದೆ. ಒಂದು ಹತ್ತಿ ಚೆಂಡಿನಿಂದ ನಿಂಬೆ ರಸವನ್ನು ಅದ್ದಿ, ಮುಖದ ಮೇಲೆ ಅನ್ವಯಿಸಿ. ಹೀಗೆ ಅನ್ವಯಿಸಿದ ರಸವನ್ನು 5-10 ನಿಮಿಷಗಳಕಾಲ ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ 2-3 ಬಾರಿ ಮಾಡುವುದರಿಂದ ತ್ವಚೆಯು ಹೆಚ್ಚು ಕಾಂತಿಯುತವಾಗಿರುತ್ತದೆ.

ಅಡುಗೆ ಸೋಡವನ್ನು ಅನ್ವಯಿಸಿ

ಅಡುಗೆ ಸೋಡವನ್ನು ಅನ್ವಯಿಸಿ

ಬ್ಯಾಕ್ಟೀರಿಯಗಳ ವಿರೋಧಿಯಾದ ಅಡುಗೆ ಸೋಡ ಮೊಡವೆ ಹಾಗೂ ಅದರ ಕಲೆ ನಿವಾರಣೆ ಮಾಡುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಕಲೆಯಿರುವ ಜಾಗದಲ್ಲಿ ಇದನ್ನು ಅನ್ವಯಿಸುವುದರಿಂದ ಕಲೆಯು ಮಂಕಾಗುತ್ತ ಮಾಯವಾಗುತ್ತದೆ. ಒಂದು ಟೀ ಚಮಚ ಬಿಸಿ ನೀರಿಗೆ ಚಿಟಿಕೆ ಸೋಡವನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಹೀಗೆ ಮಾಡುವುದರಿಂದ ಬಹುಬೇಗ ಉತ್ತಮ ಫಲಿತಾಂಶ ಪಡೆಯುವಿರಿ.

ಡರ್ಮಾ ರೋಲರ್‍ಅನ್ನು ಬಳಸಿ

ಡರ್ಮಾ ರೋಲರ್‍ಅನ್ನು ಬಳಸಿ

ಮೈಕ್ರೋ ನೀಡಲ್ ಎಂದು ಕರೆಯಲ್ಪಡುವ ಡರ್ಮಾ ರೋಲರ್ ಮೊಡವೆ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸೌಂದರ್ಯ ಲಾಭದಾಯಕ ಯಂತ್ರ ಎಂದು ಕರೆಯಲ್ಪಡುವ ಈ ಯಂತ್ರ ಚರ್ಮದ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಮತ್ತು ಮೊಡವೆಯಿಂದ ಉಂಟಾಗುವ ತೊಂದರೆಯನ್ನು ನಿವಾರಿಸುತ್ತದೆ.ನೀವು ಡರ್ಮಾ ರೋಲರ್ ಖರೀದಿಸಿ ಮನೆಯಲ್ಲಿಯೇ ಬಳಸಬಹುದು. ಈ ಚಿಕಿತ್ಸೆ ಪಡೆದುಕೊಳ್ಳುವ ಮೊದಲು ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ನಿಮ್ಮ ತ್ವಚೆಗೆ ಹೊಂದಾಣಿಕೆಯಾಗುವುದೇ ಎನ್ನುವುದನ್ನು ತಿಳಿದುಕೊಳ್ಳಿ.

ರಾಸಾಯನಿಕ ಸಿಪ್ಪೆ ಬಳಸಿ

ರಾಸಾಯನಿಕ ಸಿಪ್ಪೆ ಬಳಸಿ

ರಾಸಾಯನಿಕ ಸಿಪ್ಪೆಯು ಮೊಡವೆಗಳಿಂದ ಉಂಟಾಗುವ ಗುರುತುಗಳ ಪ್ರಾಮುಖ್ಯತೆಯನ್ನು ಕಡಿಮೆಮಾಡಬಲ್ಲ ಪ್ರಸಿದ್ಧ ಚರ್ಮ ಚಿಕಿತ್ಸೆಯಾಗಿದೆ. ತೊಂದರೆ ಉಂಟಾದ ತ್ವಚೆಯಮೇಲೆ ಈ ಸಿಪ್ಪೆಯನ್ನು ಇಡುವ ಮೂಲಕ ಆರೈಕೆ ಮಾಡಬಹುದಾಗಿದೆ. ಇದನ್ನು ಉಪಯೋಗಿಸುವ ಮೊದಲು ನಿಮ್ಮ ತ್ವಚೆಯ ಬಗ್ಗೆ ಹಾಗೂ ಆರೈಕೆಯ ಬಗ್ಗೆ ಚರ್ಮ ತಜ್ಞರ ಬಳಿ ಸಲಹೆ ಪಡೆಯಬೇಕು.

ಅಂಗಡಿಯಲ್ಲಿ ಸಿಗುವ ಕ್ರೀಮ್ ಮತ್ತು ಮಾಸ್ಕ್‌ಗಳನ್ನು ಬಳಸಿ

ಅಂಗಡಿಯಲ್ಲಿ ಸಿಗುವ ಕ್ರೀಮ್ ಮತ್ತು ಮಾಸ್ಕ್‌ಗಳನ್ನು ಬಳಸಿ

ಇಂದು ತ್ವಚೆಯ ಆರೈಕೆಗಾಗಿ ಅನೇಕ ಬಗೆಯ ಕಲೆ ನಿವಾರಕ ಕ್ರೀಮ್ ಮತ್ತು ಮಾಸ್ಕ್‍ಗಳನ್ನು ಬಳಸಿ. ಬಹು ಬೇಗ ಕಲೆಯಿಂದ ಮುಕ್ತಿ ಹೊಂದಬಹುದು. ಅವುಗಳನ್ನು ಬಳಸುವ ಮೊದಲು ನಿಮ್ಮ ತ್ವಚೆಯ ಮೇಲೆ ಅವು ಯಾವ ಬಗೆಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಮೊದಲು ತಿಳಿದು, ನಂತರ ಅನ್ವಯಿಸಿ.

ಸೌತೆಕಾಯಿ ತಿರುಳನ್ನು ಅನ್ವಯಿಸಿ

ಸೌತೆಕಾಯಿ ತಿರುಳನ್ನು ಅನ್ವಯಿಸಿ

ಕಲೆಗಳನ್ನು ತೆಗೆಯಲು ಇರುವ ಇನ್ನೊಂದು ಉಪಯುಕ್ತ ವಿಧಾನವೆಂದರೆ ಸೌತೆಕಾಯಿಯ ಪೇಸ್ಟ್ ಅನ್ವಯಿಸುವುದು. ಸೌತೆಕಾಯಿ ಪೇಸ್ಟ್ ಅಥವಾ ಸೌತೆಕಾಯಿ ಚೂರನ್ನುಪೀಡಿತ ಪ್ರದೇಶದ ಮೇಲೆ ಅನ್ವಯಿಸುವುದರಿಂದ ಕಲೆಗಳು ಬಹು ಬೇಗ ನಿವಾರಣೆಯಾಗುವುದು ಮತ್ತು ತಾಜಾತನದಿಂದ ಕೂಡಿರುತ್ತದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಆಮ್ಲೀಯ ಪ್ರವೃತ್ತಿಯಿಂದ ಉಂಟಾದ ಕಲೆ ಅಥವಾ ಗುರುತನ್ನು ಶಮನಗೊಳಿಸುತ್ತದೆ. ಸೇಬು ಸೈಡರ್ ವೆನಿಗರ್‍ಅನ್ನು ನಿತ್ಯವೂ ಅನ್ವಯಿಸುವುದರಿಂದ ಪರಿಣಾಮಕಾರಿ ಬದಲಾವಣೆಯನ್ನು ವೀಕ್ಷಿಸಬಹುದು. ಅಲ್ಲದೆ ತ್ವಚೆಯನ್ನು ಶುದ್ಧಿಗೊಳಿಸಿ ಮೊಡವೆಯ ಪ್ರಮಾಣವನ್ನು ಕಡಿಮೆಮಾಡುತ್ತದೆ.

ಗುಲಾಬಿ ನೀರಿನೊಂದಿಗೆ ಗಂಧದ ಪುಡಿ

ಗುಲಾಬಿ ನೀರಿನೊಂದಿಗೆ ಗಂಧದ ಪುಡಿ

ಶ್ರೀಗಂಧ ಹಾಗೂ ಗುಲಾಬಿ ನೀರು ತ್ವಚೆಯ ಆರೈಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇವೆರಡರ ಮಿಶ್ರಣದಿಂದ ಮುಖದ ಮಾಸ್ಕ್ ಅವಯಿಸಿದರೆ ತ್ವಚೆಯಮೇಲಿರುವ ಅನೇಕ ಸಮಸ್ಯೆಗಳು ಹಾಗೂ ಕಲೆಗಳು ನಿವಾರಣೆ ಹೊಂದುತ್ತವೆ. 2 ಟೀ ಚಮಚ ಗುಲಾಬಿ ನೀರಿಗೆ 1 ಟೀ ಚಮಚ ಶ್ರೀಗಂಧದ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸಬೇಕು. ನಂತರ ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

English summary

How To Banish Post-Acne Marks

Today at Boldsky, we’re letting you know about few of the most effective ways for diminishing the marks caused by acne breakouts. You are free to give either one of these methods a try to achieve clean and clear skin that is free of spots and marks. Treating this issue is far better than concealing it with makeup items. Continue reading to know more...
Story first published: Wednesday, October 25, 2017, 23:32 [IST]