ಬ್ಯೂಟಿ ಟಿಪ್ಸ್: ಸರಳವಾಗಿ ಮಾಡಬಹುದಾದ ನೈಸರ್ಗಿಕ ಫೇಸ್-ಪ್ಯಾಕ್‌ಗಳು

By: Hemanth
Subscribe to Boldsky

ಇಂದಿನ ದಿನಗಳಲ್ಲಿ ಹೆಚ್ಚಿನವರು ಆಯುರ್ವೇದವನ್ನು ಮೆಚ್ಚಿಕೊಳ್ಳುತ್ತಾ ಇದ್ದಾರೆ. ಅದರಲ್ಲೂ ಮನೆಯಲ್ಲೇ ತಯಾರಿಸುವಂತಹ ಹಲವಾರು ರೀತಿಯ ಮನೆಮದ್ದನ್ನು ತ್ವಚೆಗೆ ಬಳಸಿಕೊಳ್ಳುವರು. ಸೌಂದರ್ಯವನ್ನು ವೃದ್ಧಿಸುವಂತಹ ಮನೆಮದ್ದುಗಳು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಈ ಕಾರಣದಿಂದಾಗಿಯೇ ಹೆಚ್ಚಿನವರು ಮನೆಮದ್ದನ್ನು ನೆಚ್ಚಿಕೊಂಡಿರುವುದು. ಅಡುಗೆ ಮನೆಯಲ್ಲಿ ಸಿಗುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಗೆ ಬೇಕಾಗುವ ಫೇಶಿಯಲ್‌ಗಳನ್ನು ಬಳಸಬಹುದು.

ಮನೆಯಲ್ಲೇ ತಯಾರಿಸುವಂತಹ ಕೆಲವು ಫೇಸ್ ಮಾಸ್ಕ್ ಗಳು ಸೌಂದರ್ಯ ವೃದ್ಧಿ ಮಾಡುವುದಲ್ಲದೆ ತಿನ್ನಲು ಕೂಡ ರುಚಿಕರವಾಗಿದ್ದರೆ ಹೇಗಿರಬೇಡ ಹೇಳಿ. ಇಂತಹ ಫೇಸ್ ಮಾಸ್ಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದುಕೊಂಡು ಫೇಸ್ ಮಾಸ್ಕ್ ಬಳಸಿಕೊಳ್ಳಿ... 

fruits face pack

ಬ್ರೌನ್ ಶುಗರ್ ಮತ್ತು ಹಾಲಿನ ಫೇಸ್ ಮಾಸ್ಕ್

ಇದು ತುಂಬಾ ಸರಳವಾಗಿರುವ ಮತ್ತು ಅಷ್ಟೇ ಪರಿಣಾಮಕಾರಿಯಾಗಿರುವ ಫೇಸ್ ಮಾಸ್ಕ್. ಇದು ಸತ್ತ ಕೋಶಗಳನ್ನು ತೆಗೆದು ಸ್ವಚ್ಛ ತ್ವಚೆ ನೀಡುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಸ್ಕ್ರಬ್ ಗಳಲ್ಲಿ ಸಿಲಿಕಾ ಹೊಂದಿರುತ್ತದೆ. ಮುಖವನ್ನು ಸಿಲಿಕಾದಿಂದ ಉಜ್ಜಿದಾಗ ಚರ್ಮವು ಹಸಿಯಾಗಿಯೇ ಉಳಿದುಬಿಡುವುದು. ಇದಕ್ಕೆ ಬದಲಿಗೆ ಮನೆಯಲ್ಲೇ ಫೇಸ್ ಮಾಸ್ಕ್ ತಯಾರಿಸಿ. ಎರಡು ಚಮಚ ಬ್ರೌನ್ ಶುಗರ್ ಗೆ ಮೂರು ಚಮಚ ಹಾಲು ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು ಸರಿಯಾಗಿ ಉಜ್ಜಿಕೊಳ್ಳಿ. ವೃತ್ತಾಕಾರದಲ್ಲಿ ಸುಮಾರು ಎರಡು ನಿಮಿಷ ಕಾಲ ಮಸಾಜ್ ಮಾಡಿ. 5ರಿಂದ 7 ನಿಮಿಷ ಕಾಲ ಹಾಗೆ ಬಿಡಿ. ಮುಖದಲ್ಲಿ ಉಳಿದಿರುವ ಸಿಹಿಯನ್ನು ತಿನ್ನಬಹುದು. 

Almond face pack

ಜೇನುತುಪ್ಪ ಮತ್ತು ಬಾದಾಮಿ ಫೇಸ್ ಪ್ಯಾಕ್

ನಿಮಗೆ ತುಂಬಾ ಆಯಾಸವಾದ ಭಾವನೆಯಾಗುತ್ತಿದೆಯಾ? ಹಾಗಾದರೆ ನಿಮಗೆ ಮನೆಯಲ್ಲೇ ತಯಾರಿಸಿದ ಫೇಸ್ ಪ್ಯಾಕ್ ಅಗತ್ಯವಾಗಿ ಬೇಕೇಬೇಕು. ಸ್ವಲ್ಪ ಬಾದಾಮಿ(ಸಣ್ಣಗೆ ತುಂಡು ಮಾಡಿರುವುದು) ಮತ್ತು ಎರಡು ಚಮಚ ಜೇನುತುಪ್ಪ, ಒಂದು ಚಮಚ ಮೊಸರು ತೆಗೆದುಕೊಳ್ಳಿ. ಈ ಮೂರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ತ್ವಚೆಗೆ ಪುನಶ್ವೇತನ ನೀಡುವಂತಹ ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿದ ಬಳಿಕ ನೀವು ಕೂಡ ಇದರ ರುಚಿ ನೋಡಬಹುದು. 

ಬಾದಾಮಿ-ಹಾಲಿನ ಫೇಸ್ ಪ್ಯಾಕ್, ಕಡಿಮೆ ಖರ್ಚು ಅಧಿಕ ಲಾಭ!

ಚಾಕಲೇಟ್ ಫೇಸ್ ಪ್ಯಾಕ್

ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ನೀವು ಫೇಸ್ ಪ್ಯಾಕ್ ನ್ನು ತಯಾರಿಸಬಹುದು. ಎರಡು ಚಮಚ ಕಡು ಕೋಕಾ ಹುಡಿ, ಅರ್ಧ ಕಪ್ ನಷ್ಟು ಜೇನುತುಪ್ಪವನ್ನು ಸರಿಯಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚದಷ್ಟು ತಾಜಾ ಹಾಲಿನ ಕೆನೆ ಮತ್ತು ಒಂದು ಚಮಚ ಮೊಸರನ್ನು ಮಿಶ್ರಣ ಮಾಡಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ. 

papaya face pack

ಸೌಂದರ್ಯ ಪ್ರಿಯರಿಗೆ 'ಚಾಕೊಲೇಟ್' ಫೇಸ್ ಪ್ಯಾಕ್!

ಪಪ್ಪಾಯಿ ಮತ್ತು ಲಿಂಬೆಯ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಹೆಚ್ಚಾಗಿ ಬಿಸಿಲಿನಿಂದ ಮುಖದ ಮೇಲೆ ಕಲೆಗಳು ಮೂಡುತ್ತವೆ. ಇದಕ್ಕಾಗಿ ಸ್ವಲ್ಪ ಪಪ್ಪಾಯಿ ತಿರುಳಿನ ಪೇಸ್ಟ್ ಮಾಡಿಕೊಳ್ಳಿ. ಮೂರು ಚಮಚ ಪೇಸ್ಟ್ ಗೆ ಒಂದು ಚಮಚ ಲಿಂಬೆರಸ ಹಾಕಿ. ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಇದನ್ನು ದಪ್ಪ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಿದ ಬಳಿಕ ನೀವು ಇದನ್ನು ತಿನ್ನಬಹುದು. ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡಬಾರದು ಎನ್ನುವ ಕಾರಣಕ್ಕಾಗಿ ಈ ವಿಧಾನಗಳನ್ನು ಹೇಳಲಾಗುತ್ತಿದೆ. ಮನೆಯಲ್ಲೇ ತಯಾರಿಸಿದ ಇಂತಹ ಫೇಸ್ ಪ್ಯಾಕ್ ನ್ನು ನೀವು ಪ್ರಯತ್ನಿಸಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಅದರ ಬಗ್ಗೆ ತಿಳಿಸಿ.

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

English summary

Homemade Face Packs That You Can Eat!

Most of us go for homemade face masks because we think that they are natural and thus cannot have any side effects. More often then not, we are right to trust facial recipes that can be made at home with everyday ingredients. But, when you trust a facial recipe totally? When you can actually lick up after it has worked on your skin.
Subscribe Newsletter