ಬ್ಯೂಟಿ ಟಿಪ್ಸ್: ಮೊಡವೆ ನಿವಾರಣೆಗೊಂದು ಸುಲಭ ಫೇಸ್ ಪ್ಯಾಕ್

By: Divya pandith
Subscribe to Boldsky

ಒಂದು ಪಾರ್ಟಿಗೆ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ನೀವು ಹೋಗುತ್ತಿದ್ದೀರಿ ಎಂದಾದರೆ ಮೊದಲು ವಿಶೇಷ ಉಡುಗೆಯನ್ನು ಆಯ್ಕೆ ಮಾಡುತ್ತೀರಿ. ನಂತರ ಮುಖಕ್ಕೆ ಮೇಕಪ್ ಮಾಡಿಕೊಳ್ಳುತ್ತೀರಿ ಅಲ್ಲವಾ? ಆದರೂ ಮುಖದ ಮೇಲಿರುವ ಮೊಡವೆಗಳು ಚರ್ಮದ ಮೇಲಿರುವ ಅಸಹಜತೆಯಯನ್ನು ತೋರಿಸಿಕೊಡುತ್ತದೆ. ಮೊಡವೆ ಸಾಮಾನ್ಯವಾದದ್ದೇ ಆದರೂ ಅದು ಮುಖದ ತುಂಬ ಆವರಿಸಿಕೊಂಡಾಗ ನೋಡುಗರಿಗೆ ಸ್ವಲ್ಪ ಇರಿಸು ಮುರಿಸು ಉಂಟಾಗಬಹುದು.

ಹಾಗಾಗಿ ತ್ವಚೆಯ ಮೇಲಿರುವ ಮೊಡೆಯ ನಿವಾರಣೆಗಾಗಿ ವಿವಿಧ ಬಗೆಯ ಆಧುನಿಕ ಚಿಕಿತ್ಸೆ, ಮೊಡವೆ ಮರೆಮಾಚುವ ಮೇಕಪ್, ವಿವಿಧ ಬಗೆಯ ವಿಟಮಿನ್ ಮಾತ್ರೆಗಳನ್ನು ಬಳಸುವ ಸಾಹಸಗಳನ್ನು ಮಾಡುತ್ತಾರೆ. ಈ ಸಾಹಸಗಳಿಂದ ಮೊಡವೆಗಳ ಸಂಖ್ಯೆಯೇನು ಕಡಿಮೆಯಾಗುವುದಿಲ್ಲ. ಬದಲಿಗೆ ಇನ್ನಷ್ಟು ಕಲೆಗಳು ಹಾಗೂ ತ್ವಚೆಯ ಮೇಲೆ ಹಾನಿ ಉಂಟಾಗುತ್ತದೆ. ಇದರಿಂದ ನಮಗೂ ಒಂದು ಬಗೆಯ ಮುಜುಗರ ಹಾಗೂ ಕಿರಿಕಿರಿಯ ಭಾವ ಕಾಡುತ್ತಿರುತ್ತದೆ.

ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!

ಒಂದು ವಯಸ್ಸಿನಲ್ಲಿ ಸಾಮಾನ್ಯವಾಗಿ ತೋರುವ ಮೊಡವೆಗಳ ನಿವಾರಣೆಗೆ ಅತಿಯಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಡಿಮೆ ಸಮಯದಲ್ಲಿ ಬಹು ಬೇಗ ನಿಯಂತ್ರಣಕ್ಕೆ ತರಬಹುದು. ಅದಕ್ಕಾಗಿ ಮಾಡುವ ಆರೈಕೆಯ ವಿಚಾರದಲ್ಲಿ ನಿಮಗೆ ಕೊಂಚ ತಾಳ್ಮೆಯಿರಬೇಕು ಅಷ್ಟೇ. ಆ ಒಂದು ಬಗೆಯ ವಿಶೇಷ ಆರೈಕೆ ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಲು ಬಯಸುವುದಾದರೆ ಈ ಕೆಳಗಿರುವ ವಿವರಣೆಯನ್ನು ಓದಿ....ಫೇಸ್ ಪ್ಯಾಕ್ ತಯಾರಿಸುವ ವಿಧಾನ..

pimples

ಬೇಕಾಗುವ ಸಾಮಾಗ್ರಿಗಳು:

ಈರುಳ್ಳಿ ರಸ- 2 ಟೇಬಲ್ ಚಮಚ

ಆಲಿವ್ ಎಣ್ಣೆ -1 ಟೀ ಚಮಚ

ತಯಾರಿಸುವ ವಿಧಾನ

- ಒಂದು ಈರುಳ್ಳಿಯನ್ನು ಕತ್ತರಿಸಿ ಮಿಕ್ಸರ್/ಬ್ಲೆಂಡರ್‍ಗೆ ಹಾಕಿ ರುಬ್ಬಿ.

- ರುಬ್ಬಿದ ಈರುಳ್ಳಿಯನ್ನು ಪಾತ್ರೆ ಒಂದಕ್ಕೆ ವರ್ಗಾಯಿಸಿ. ನಂತರ ಪೇಸ್ಟ್‍ನ್ನು ಹಿಂಡಿ ರಸ ತೆಗೆದುಕೊಳ್ಳಬೇಕು.

- 2 ಟೇಬಲ್ ಚಮಚ ಈರುಳ್ಳಿ ರಸಕ್ಕೆ 1 ಟೀಚಮಚ ಆಲಿವ್ ಎಣ್ಣೆಯನ್ನು ಸೇರಿಸಿ.

- ಎರಡು ಘಟಕಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.

- ಮುಖದ ಮೇಲೆ ಅನ್ವಯಿಸಿ.

- 15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಈ ರೀತಿಯಲ್ಲಿಯೇ ನಿಯಮಿತವಾಗಿ ಮಾಡುತ್ತಾ ಬರುವುದರಿಂದ ಮೊಡವೆಯು ಗುಣಮುಖವಾಗುವುದು. ಜೊತೆಗೆ ತ್ವಚೆಯು ಹೆಚ್ಚು ಕಾಂತಿಯಿಂದ ಕೋಡಿರುವುದು.

methi

ಮೆಂತೆ ಸೊಪ್ಪು

ಮೆಂತೆ ಸೊಪ್ಪನ್ನು ನೆನೆಸಿ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಇದನ್ನು ಒಣಗಲು ಬಿಡಿ ಮತ್ತು ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ. ಸ್ವಲ್ಪ ದಿನಗಳವರೆಗೆ ಇದನ್ನು ಅನುಸರಿಸಿ ಇದರಿಂದ ಮೊಡವೆಗಳು ಮಾಯವಾಗುತ್ತವೆ ಮತ್ತು ಚರ್ಮವನ್ನು ಮೃದುವಾಗಿಸುತ್ತದೆ.

Alovera juice

ಲೋಳೆಸರ ಅಥವಾ ಅಲೋವೆರಾ

ಲೋಳೆಸರ ಬೆಸ್ಟ್ ಮೊಡವೆಯ ಹಠ ಮಾಡುವ ಕಲೆಗಳನ್ನು ಹೋಗಲಾಡಿಸಲು ಲೋಳೆಸರ ಬಳಸುವುದು ಉತ್ತಮ ವಿಧಾನ.ಲ್ಯಾವೆಂಡರ್ ಎಣ್ಣೆ ಮುಂತಾದ ಎಣ್ಣೆಗಳನ್ನು ಕಲೆಗಳಿಗೆ ಹಚ್ಚಿದರೆ ಬೇಗ ಕಡಿಮೆ ಆಗುತ್ತದೆ. ಇದು ತುಂಬಾ ದುಬಾರಿಯೇನಲ್ಲ ಸುಲಭ ದರದಲ್ಲಿ ಸಿಗುತ್ತದೆ ಮತ್ತು ಇದನ್ನು ಪ್ರತಿದಿನ ಉಪಯೋಗಿಸುವುದರಿಂದ ಪರಿಣಾಮವನ್ನು ಕಾಣಬಹುದು. 

ಬೇಕಿಂಗ್ ಪೌಡರ್

ಬೇಕಿಂಗ್ ಪೌಡರ್ ಅನ್ನು ನೀರಿನೊಂದಿಗೆ ಕಲೆಸಿ ಇಟ್ಟುಕೊಳ್ಳಿ ನೊರೆ ಬರಲು ಬಿಡಿ ನಂತರ ಅದನ್ನು ಮುಖದ ಕಲೆಗಳಿಗೆ ಹಚ್ಚಿ ಮತ್ತು ನೀರಿನಿಂದ ತೊಳೆಯಿರಿ. ಮೊಡವೆ ಮತ್ತು ಕಲೆಗಳಿಂದ ಮುಕ್ತಿ ಪಡೆಯಲು ಉತ್ತಮ ವಿಧಾನವೆಂದರೆ ಆರೋಗ್ಯಯುತ ಆಹಾರ ಶೈಲಿ ಅಳವಡಿಸಿಕೊಳ್ಳುವುದು.ಪ್ರತಿದಿನ ವ್ಯಾಯಾಮ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳುವುದು ಇದರಿಂದ ದೇಹದ ತ್ಯಾಜ್ಯಗಳು ಹೊರಹೋಗುತ್ತವೆ. ಆದರೂ ನಿಮ್ಮ ಮುಖದಲ್ಲಿ ಕಲೆಗಳ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆಯಿರಿ.  

papaya fruits

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಲ್ಲಿರುವ (ಪರಂಗಿ ಹಣ್ಣು )ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ, ಹೀಗೆ ತನ್ನ ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಅದರಲ್ಲೂ ಮೊಡವೆಗಳ ನಿವಾರಣೆಯಲ್ಲಿ ಅಂತೂ ಒಳ್ಳೆಯ ಮನೆಮದ್ದು. ನೀವು ಮಾಡಬೇಕಾದದು ಇಷ್ಟೇ ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಮೇಲಿನ ಮೊಡವೆಯ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಳ್ಳಿ. 

ತುಳಸಿ ಎಲೆಗಳ ಪೇಸ್ಟ್

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ. ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.  

turmeric

ಅರಿಶಿನದ ಪೇಸ್ಟ್  

ಟೀಚಮಚ ಮೊಸರಿನ ಜೊತೆಗೆ 1 ಟೀ ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಬೆರೆಸಿ, ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಇದನ್ನು ಮುಖದ ಮೇಲೆ ಲೇಪಿಸಿಕೊಂಡು, ಒಣಗಲು ಬಿಡಿ. ಈ ಮಾಸ್ಕನ್ನು ವಾರಕ್ಕೆ ಎರಡು ಬಾರಿ ಬಳಸಿ. ಆಗ ಮೊಡವೆಗಳು ನಿವಾರಣೆಯಾಗಲು ನೆರವಾಗುತ್ತವೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಅಧಿಕವಾಗಿರುತ್ತದೆ, ಮತ್ತು ಇದು ಒಳ್ಳೆಯ ಎಕ್ಸ್‌ಫೋಲಿಯೇಟರ್ ಆಗಿ ಸಹ ಕೆಲಸ ಮಾಡುತ್ತದೆ. 

ಕೊತ್ತಂಬರಿ ಅಥವಾ ಪುದಿನಾ ರಸ

ಒಂದು ಟೀ ಚಮಚದಷ್ಟು ಕೊತ್ತಂಬರಿ ಅಥವಾ ಪುದಿನಾ ರಸವು ನಿಮ್ಮ ತ್ವಚೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಈ ರಸಕ್ಕೆ ಒಂದು ಚಿಟಿಕೆಯಷ್ಟು ಹಳದಿಯನ್ನು ಬೆರೆಸುವುದರಿಂದ ಮೊಡವೆ ಮತ್ತು ಬ್ಲ್ಯಾಕ್ ಹೆಡ್‍ಗಳನ್ನು ನಿವಾರಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ಮಲಗುವ ಮೊದಲು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ. 

pimples

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಇವುಗಳು ತ್ವಚೆಯನ್ನು ಒಳಗಿನಿಂದ ಗುಣಪಡಿಸುತ್ತವೆ. ಜೊತೆಗೆ ಗ್ರೀನ್ ಟೀಯಲ್ಲಿ ಉರಿಬಾವು ನಿಯಂತ್ರಿಸುವ ಅಂಶಗಳು ಸಹ ಇರುತ್ತವೆ. ಅವುಗಳು ಮೊಡವೆಗಳಿಂದ ತುರಿಕೆಯನ್ನುಂಟು ಮಾಡುವ ತ್ವಚೆಗೆ ಆರಾಮವನ್ನುಂಟು ಮಾಡುತ್ತದೆ. ಈ ಸಿಸ್ಟಿಕ್ ಮೊಡವೆಗಳಿಂದ ಹೊರಬರಲು, ಗ್ರೀನ್ ಟೀಯನ್ನು ಕುಡಿಯಲು ಆರಂಭಿಸಿ, ಬಿಸಿ ನೀರಿನಲ್ಲಿ ಮುಳುಗಿದ ಗ್ರೀನ್ ಟೀ ಬ್ಯಾಗ್‌ಗಳನ್ನು ಸಿಸ್ಟಿಕ್ ಮೊಡವೆಗಳ ಮೇಲೆ ಲೇಪಿಸುವುದರಿಂದ ಸಹ ಈ ಮೊಡವೆಗಳನ್ನು ನಿವಾರಿಸಿಕೊಳ್ಳಬಹುದು.

English summary

Homemade Face Masks for Acne and Scars in one month

Acne is one of the most common skin conditions; and it can make the affected person feel quite dejected, as acne can make us lose a lot of confidence when it comes to our appearance. Having undesirable pimples and marks on our skin is something most of us dread, so you can only imagine what it feels like to deal with acne issues on a daily basis.Apart from making you look unattractive, acne can also be a sign of poor health. It could mean that you haven't been eating right or taking care of your skin properly. If acne is left untreated for a long time, it can worsen and leave deep acne scars on your skin that are hard to get rid of!
Subscribe Newsletter