For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಪ್ರಿಯರಿಗೆ 'ಚಾಕೊಲೇಟ್' ಫೇಸ್ ಪ್ಯಾಕ್!

By Hemanth
|

ಚಾಕೊಲೇಟ್ ಹೆಸರು ಕೇಳಿದರೆ ಸಾಕು ಬಾಯಿಯೊಳಗೆ ನಾಲಗೆ ತನ್ನದೇ ಹಾಡು ಹೇಳಲು ಆರಂಭಿಸುತ್ತದೆ. ಚಾಕೊಲೇಟ್ ರುಚಿಯೇ ಹಾಗೆ. ಅದರಲ್ಲೂ ಈಗ ವಿವಿಧ ಬಗೆಯ ಚಾಕೊಲೇಟ್ ಲಭ್ಯವಿರುವ ಕಾರಣದಿಂದ ಪ್ರತಿಯೊಬ್ಬರಿಗೂ ಚಾಕೊಲೇಟ್ ಇಷ್ಟ. ಕೋಕಾದಿಂದ ಮಾಡಲ್ಪಡುವ ಚಾಕೊಲೇಟ್ ಕೇವಲ ತಿನ್ನಲು ಮಾತ್ರವಲ್ಲದೆ ಅದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವರಿಗೆ ತಿಳಿದಿದ್ದರೂ ಚಾಕೊಲೇಟ್ ಅನ್ನು ಸೌಂದರ್ಯ ವರ್ಧಕವಾಗಿ ಬಳಸುವ ಮೊದಲು ಅದು ಬಾಯಿಯೊಳಗೆ ಹೋಗಿರುತ್ತದೆ.

ಇದರಿಂದ ಚಾಕೊಲೇಟ್ ಅನ್ನು ಸೌಂದರ್ಯವರ್ಧಕವಾಗಿ ಬಳಸುವವರ ಸಂಖ್ಯೆ ಕಡಿಮೆ. ಕೋಕಾ ಕೂಡ ದುಬಾರಿಯಾಗಿರುವುದು ಇದಕ್ಕೆ ಮತ್ತೊಂದು ಕಾರಣವಾಗಿದೆ. ಆದರೆ ತುಂಬಾ ದುಬಾರಿಯಾದರೂ ಚಾಕಲೇಟ್‌ನಲ್ಲಿ ಹಲವಾರು ರೀತಿಯ ಸೌಂದರ್ಯವರ್ಧಕ ಗುಣಗಳು ಇವೆ! ಇದು ಯಾವುದೆಂದು ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ...

ಚಾಕೊಲೇಟ್ ತೆಂಗಿನಕಾಯಿ ಸ್ಕ್ರಬ್

ಚಾಕೊಲೇಟ್ ತೆಂಗಿನಕಾಯಿ ಸ್ಕ್ರಬ್

ಚರ್ಮದ ಸತ್ತ ಕೋಶಗಳನ್ನು ತೆಗೆಯಲು ನಿಮಗೆ ಒಳ್ಳೆಯ ಚಿಕಿತ್ಸೆ ಬೇಕೆಂದರೆ ನೀವು ಕಂದು ಸಕ್ಕರೆಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿಕೊಳ್ಳಿ. ಇದು ಬಿಸಿಯಾಗಿರುವಾಗಲೇ ಇದಕ್ಕೆ ಕೋಕಾ ಹುಡಿ ಹಾಕಿಕೊಳ್ಳಿ. ಓಟ್ ಮೀಲ್ ಪೌಡರ್ ನ್ನು ಈ ಮಿಶ್ರಣಕ್ಕೆ ಹಾಕಿಕೊಂಡರೆ ಒಳ್ಳೆಯ ಸ್ಕ್ರಬ್ ಆಗುವುದು. ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ತಿರುಗಿಸಿ.

ಚಾಕೊಲೇಟ್-ಗ್ರೀನ್ ಟೀ-ಜೇನು ತುಪ್ಪ ಫೇಸ್ ಪ್ಯಾಕ್

ಚಾಕೊಲೇಟ್-ಗ್ರೀನ್ ಟೀ-ಜೇನು ತುಪ್ಪ ಫೇಸ್ ಪ್ಯಾಕ್

ಚಾಕೊಲೇಟ್ ನಲ್ಲಿರುವ ಪ್ರಮುಖ ಲಾಭಗಳೆಂದರೆ ಇದು ಆ್ಯಂಟಿಆಕ್ಸಿಡೆಂಟ್ ಗಳಿಂದ ತುಂಬಿ ಹೋಗಿದೆ. ಆ್ಯಂಟಿ ಆಕ್ಸಿಡೆಂಟ್ ಗಳು ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡುವುದು. ಗ್ರೀನ್ ಟೀ ಕೂಡ ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕಾರಣದಿಂದಾಗಿ ಕೋಕಾವನ್ನು ಇದಕ್ಕೆ ಮಿಶ್ರಣ ಮಾಡಿಕೊಂಡಾಗ ಒಳ್ಳೆಯ ಲಾಭ ಪಡೆಯಬಹುದು. ಕಡು ಕೋಕಾ ಪೌಡರ್ ನ್ನು ಜತೆ ಸೇರಿಸಿ ಜೇನುತುಪ್ಪ ಮತ್ತು ಹಾಲಿನ ಕೆನೆಯನ್ನು ಇದಕ್ಕೆ ಬೆರೆಸಿಕೊಳ್ಳಿ.ಹತ್ತು ನಿಮಿಷ ಕಾಲ ಈ ಫೇಸ್ ಪ್ಯಾಕ್ ನ್ನು ಮುಖದಲ್ಲಿ ಇಟ್ಟುಕೊಂಡು ಬಳಿಕ ಬಿಸಿ ನೀರಿನಿಂದ ತೊಳೆಯಿರಿ. 15 ದಿನಕ್ಕೊಮ್ಮೆ ಇದನ್ನು ಬಳಸಿದರೆ ನೀವು ಯುವಕರಂತೆ ಕಾಣುವುದರಲ್ಲಿ ಸಂಶಯವಿಲ್ಲ.

ಕೋಕಾ ಬೆಣ್ಣೆ ಫೇಶಿಯಲ್

ಕೋಕಾ ಬೆಣ್ಣೆ ಫೇಶಿಯಲ್

ಮಗುವಿನಂತಹ ಚರ್ಮವು ನಿಮಗೆ ಬೇಕಾದರೆ ಬೆಣ್ಣೆ ಮತ್ತು ಚಾಕೊಲೇಟ್‌ನ ಫೇಶಿಯಲ್ ಮಾಡಿಕೊಂಡು ಬಳಸಿ. ಈ ಫೇಶಿಯಲ್‌ನಲ್ಲಿ ಕೋಕಾ ಬೆಣ್ಣೆ, ಜೇನುತುಪ್ಪ, ಗಿಣ್ಣು, ಬಾದಾಮಿ ಎಣ್ಣೆ ಮತ್ತು ಕಡು ಕೋಕಾ ಹುಡಿಯಿದೆ. ಎಲ್ಲವನ್ನು ಜತೆಸೇರಿಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಚರ್ಮಕ್ಕೆ ಮಸಾಜ್ ಮಾಡಿ. ಇದನ್ನು ಚರ್ಮವು ಸರಿಯಾಗಿ ಹೀರಿಕೊಂಡ ಬಳಿಕ ಮೃಧು ಹಾಗೂ ಕಾಂತಿಯುವ ಚರ್ಮವು ನಿಮ್ಮದಾಗುವುದು.

ಚಾಕೊಲೇಟ್ ಮತ್ತು ಮೊಸರಿನ ಫೇಸ್ ಪ್ಯಾಕ್

ಚಾಕೊಲೇಟ್ ಮತ್ತು ಮೊಸರಿನ ಫೇಸ್ ಪ್ಯಾಕ್

ಮೊಡವೆ ಹಾಗೂ ಚರ್ಮದ ತುಂಬಿರುವ ರಂಧ್ರಗಳಿಂದ ಮುಕ್ತಿ ಪಡೆಯಬೇಕೆಂದರೆ ಚಾಕಲೇಟ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಸಿಹಿ ಇಲ್ಲದೆ ಇರುವ ಕೋಕಾ ಹುಡಿಯನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಓಟ್ ಮೀಲ್ ಹುಡಿ ಹಾಕಿ(ಕಡಲೆ ಹಿಟ್ಟನ್ನು ಬಳಸಿಕೊಳ್ಳಬಹುದು). ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ.ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಂಡರೆ ತುಂಬಿದ ರಂಧ್ರಗಳು

ತೆರೆದುಕೊಂಡು ಮೊಡವೆ ಹಾಗೂ ಬೊಕ್ಕೆಗಳಿಂದ ಮುಕ್ತಿ ಸಿಗುವುದು. ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡಲು ಚಾಕೊಲೇಟ್ ತುಂಬಾ ಲಾಭಕಾರಿ.

English summary

Homemade chocolate face packs for all skin types

Did you know chocolate is great for the skin? Chocolate helps get rid of acne and blemishes. The best skin benefit of chocolates is, it tightens the skin and prevents ageing. Chocolate facial is a very popular facial that helps get a glowing and soft skin. You can either go for expensive chocolate facial in a salon or try homemade chocolate facial. However, you cannot do facial every week. So, here are chocolate face packs that can help you look fresh and glowing skin
Story first published: Monday, July 3, 2017, 10:02 [IST]
X
Desktop Bottom Promotion